Kannada News Spiritual Spiritual Sri Vishnu Sahasranama Strotra panacea for all ailements that makes human to struggle in life time
ಕೋಟಿ ಅಪಾಯಗಳೇ ಎದುರಾಗಲಿ, ಈ ಸರಳ ಉಪಾಯ ಒಂದು ಸಾಕು! ಯಾವುದದು?
Miracles of Sri Vishnu Sahasranama Strotra: ದಂಪತಿಗಳ ಅನೋನ್ಯತೆಗೆ, ಮಕ್ಕಳ ಯಶಸ್ಸಿಗಾಗಿ, ಸುಖ ಪ್ರಸವಕ್ಕೆ, ಕೊನೆಯ ದಿನಗಳಲ್ಲಿ.. ಸದ್ಗತಿಗಾಗಿ ಹೀಗೆ ನಾನಾ ಸಂಕಷ್ಟ ಸಂದರ್ಭಗಳಲ್ಲಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಕೈಹಿಡಿದು ಸಂತೈಸುತ್ತದೆ
ಕೋಟಿ ಅಪಾಯಗಳೇ ಎದುರಾಗಲಿ ಈ ಸರಳ ಉಪಾಯ ಒಂದು ಸಾಕು! ಯಾವುದದು?
ಮಾನವ ಕುಲವನ್ನು ಆಗಾಗ್ಗೆ ಅನೇಕಾನೇಕ ಅಪಾಯಗಳು-ಸಂಕಟಗಳು ಕಾಡುತ್ತಾ ಇರುತ್ತವೆ. ಆದರೆ ಸನಾತನ ಧರ್ಮದಲ್ಲಿ (Spiritual) ಅದಕ್ಕೆ ಸರಳ ಪರಿಹಾರೋಪಾಯಗ ಇವೆ. ಇಷ್ಟಾರ್ಥ ಸಿದ್ಧಿಗಾಗಿ ಈ ಮಂತ್ರಗಳನ್ನು ಜಪಿಸಿದರೆ/ ಪಠಿಸಿದರೆ ಸಾಕು. ಈ ಕೆಳಗಿನವು ಕೆಲವು ಉದಾಹರಣೆ ಮಾತ್ರ. ಪ್ರತಿನಿತ್ಯವೂ, ಕುಟುಂಬದಲ್ಲಿನ ಎಲ್ಲರೂ ದಿನಕ್ಕೆ ಒಮ್ಮೆಯಾದರೂ ಒಟ್ಟಾಗಿ, ಶುಚಿರ್ಭೂತರಾಗಿ ದೇವರ ಮುಂದೆ ಕುಳಿತು ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರವನ್ನು ಪಠಣಮಾಡುವುದರಿಂದ ಬಹಳ ಒಳಿತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ (Miracles of Sri Vishnu Sahasranama Strotra).
ದಂಪತಿಗಳ ಅನೋನ್ಯತೆಗೆ, ಮಕ್ಕಳ ಯಶಸ್ಸಿಗಾಗಿ, ಸುಖ ಪ್ರಸವಕ್ಕೆ, ಕೊನೆಯ ದಿನಗಳಲ್ಲಿ.. ಸದ್ಗತಿಗಾಗಿ ಹೀಗೆ ನಾನಾ ಸಂಕಷ್ಟ ಸಂದರ್ಭಗಳಲ್ಲಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಕೈಹಿಡಿದು ಸಂತೈಸುತ್ತದೆ:
ಸಂಸ್ಕೃತಿ ಸಂವರ್ಧನ ಸ್ತೋತ್ರ – ಮಕ್ಕಳ ಯಶಸ್ಸಿಗಾಗಿ:
ಸರ್ವಗಃ ಸರ್ವವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ |
ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್ ಕವಿಃ || 14 ||