Spiritual: ಮನುಷ್ಯನ ಅವನತಿಗೆ ಕಾರಣಗಳಾಗುವ ಐದು ಕಲಿಸ್ಥಾನಗಳು ಯಾವುವು?

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 16, 2022 | 6:05 AM

ಶರಣಾದವನ ರಕ್ಷಣೆ ರಾಜನ ಕರ್ತವ್ಯ ಎಂಬ ರಾಜನೀತಿಗನುಗುಣವಾಗಿ ನಾನು ನಿನಗೆ ಅಭಯ ನೀಡುವೆನು. ನೀನು ಈ ಕಾಲಮಾನದಲ್ಲಿ ಇರಬಹುದು ಎಂದು ಹೇಳಿ ಅವನಿಗಾಗಿ ಐದು ಸ್ಥಾನಗಳನ್ನು ನಿರ್ದೇಶಿಸುತ್ತಾನೆ . ಅದುವೇ ವರ್ತಮಾನಯುಗದ ಕಲಿಸ್ಥಾನವಾಗಿದೆ.

Spiritual: ಮನುಷ್ಯನ ಅವನತಿಗೆ ಕಾರಣಗಳಾಗುವ ಐದು ಕಲಿಸ್ಥಾನಗಳು ಯಾವುವು?
Kalisthanas
Follow us on

ಭಾಗವತ ಮಹಾಪುರಾಣದ ಬಗ್ಗೆ ಎಲ್ಲರೂ ಕೇಳಿರುತ್ತೀರಿ. ದ್ವಾಪರಾಯುಗ ಮುಗಿಯುತ್ತಾ ಬಂದು ಕಲಿಯುಗದ ಆರಂಭವಾಗುವ ಸಮಯ. ಪಾಂಡವರು ಸ್ವರ್ಗಾರೋಹಣ ಮಾಡಿದ ನಂತರ ಭಾಗವತೋತ್ತಮ ಮಹಾರಾಜ ಪರೀಕ್ಷಿತನು ದಿಗ್ವಿಜಯವನ್ನು ಮುಗಿಸಿ ಸರಸ್ವತೀ ನದಿಯ ರ್ಪೂರ್ವದಂಡೆಗೆ ಬರುತ್ತಾನೆ.
ಆಗ ರಾಜಾಪರೀಕ್ಷಿತನು ಒಂದು ಘಟನೆಯನ್ನು ಗಮನಿಸುತ್ತಾನೆ. ಒಂದು ಬಡಕಲು ಹಸು ತನ್ನ ಕೂಸಾದ ಎತ್ತಿಗೆ ಹಾಲುಣಿಸಲಾಗದೆ ಅಳುತ್ತಿರುತ್ತದೆ. ಆ ಎತ್ತಿಗೋ ಒಬ್ಬ ರಾಜವೇಷಧಾರಿಯಾದವನು ವಿಪರೀತವಾಗಿ ಹೊಡೆಯುತ್ತಿರುತ್ತಾನೆ. ಆ ಹೊಡೆತದ ಫಲವಾಗಿ ಅದರ ಮೂರು ಕಾಲುಗಳು ಮುರಿದು ಒಂದು ಕಾಲಿನಲ್ಲಿ ಅತ್ಯಂತ ಕಷ್ಟಕರವಾದ ಸ್ಥಿತಿಯಲ್ಲಿ ನಿಂತಿತ್ತು. ಹೃದಯವಿದ್ರಾವಕ ಘಟನೆಯನ್ನು ಗಮನಿಸಿದ ರಾಜನು ಅವನನ್ನು ಗದರಿಸುತ್ತಾ ಕೇಳುತ್ತಾನೆ.. ಯಾರು ನೀನು ? ಯಾಕೀ ಹಿಂಸೆ ? ಭಗವಂತನ ಆಜ್ಞೆಯಂತೆ ಧರ್ಮಪಾಲಕನಾದ ನನ್ನ ರಾಜ್ಯದಲ್ಲಿ ಯಾವಧೈರ್ಯದಿಂದ ಹೀಗೆ ಮಾಡುತ್ತಿರುವೆ ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಲೇ ಅವನ ಗಮನವು ಕಮಲದ ನಾಳದಂತಿರುವ ಎತ್ತಿನ ಕೋಮಲ ಕಾಲುಗಳ ಕಡೆ ಸಾಗಿತು. ವಾಸ್ತವವಾಗಿ ಈ ದನವು ಪೃಥಿವೀ (ಭೂಮಿತಾಯಿಯಾಗಿದ್ದು) . ಎತ್ತು ಧರ್ಮವಾಗಿತ್ತು (ಧರ್ಮಪುರುಷನಾಗಿತ್ತು).

ಪರೀಕ್ಷಿತನು ಕೇಳುವ ಪ್ರಶ್ನೆಗೆ ಉತ್ತರವಾಗಿ ಎತ್ತಿನ ರೂಪದಲ್ಲಿರುವ ಧರ್ಮವು ಹೇಳುತ್ತದೆ. ಯಾವ ತಾನು ಅಧರ್ಮ ಮಾಡುವವನ ಹೆಸರನ್ನು ಅಥವಾ ಅವನ ಕಾರ್ಯಗಳ ಬಗ್ಗೆ ಉಲ್ಲೇಖವನ್ನು ಮಾಡುವನೋ ಅವನಿಗೆ ಆ ಅಧರ್ಮ ಅಂಟಿಕೊಳ್ಳುತ್ತದೆ (ಅರ್ಥಾತ್ ಆ ಪಾಪ ಬರುತ್ತದೆ) ಎಂದು.  ಈ ಮಾತನ್ನು ಕೇಳಿದ ಪರೀಕ್ಷಿತನಿಗೆ ಇಲ್ಲಿರುವ ಧರ್ಮಸ್ವರೂಪ ಅರಿಯತೊಡಗುತ್ತದೆ.

ಇಂತಹ ಪ್ರಮಾಣ ಸದೃಶ ಮಾತನ್ನು ಆಡುವ ನೀನು ಸಾಮಾನ್ಯವಾದ ಒಂದು ಪ್ರಾಣಿಯಲ್ಲ ಯಾರು ಎಂದು ಮತ್ತೆ ಮತ್ತೆ ಕೇಳಿದಾಗ ತಮ್ಮ ಸತ್ಯರೂಪವನ್ನು ಆ ಭೂಮಿ ಮತ್ತು ಧರ್ಮ ತೋರಿಸುತ್ತದೆ. ಅವುಗಳಿಗೆ ಮಾಡಿದ ಹಿಂಸೆಯನ್ನು ಸಹಿಸದ ಪರೀಕ್ಷಿತನು ನಿನ್ನ ಈ ಕೃತ್ಯಕ್ಕೆ ಮರಣದಂಡನೆಯೇ ಸರಿ ಎಂದು ಕತ್ತಿ ಎತ್ತುತ್ತಾನೆ. ಆಗ ಆ ರಾಜನ ವೇಷದಲ್ಲಿದ್ದ ವ್ಯಕ್ತಿ ತನ್ನ ನಿಜವಾದ “ಕಲಿ” ಯ ಸ್ವರೂಪದೊಂದಿಗೆ ಪರೀಕ್ಷಿತ ಕಾಲಿಗೆರಗುತ್ತಾನೆ.

ಇದನ್ನೂ ಓದಿ
Goddess Parvati: ಲೋಕಕಲ್ಯಾಣಕ್ಕಾಗಿ ಅವತಾರ ತಾಳಿದ ಮಾತಾ ಪಾರ್ವತಿ, ಗಿರಿಜಾ ಕಲ್ಯಾಣದಿಂದ ಲೋಕಕಲ್ಯಾಣವಾಗಿದ್ದು ಹೇಗೆ?
Kashi Vishwanath Temple: ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಬಗೆಗಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ
Spiritual: ಪ್ರಾರ್ಥನೆ ಎಂದರೇನು? ಅಷ್ಟಕ್ಕೂ ಪ್ರಾರ್ಥನೆ ಹೇಗಿರಬೇಕು ಗೊತ್ತಾ..!
Guru Purnima 2022: ಗುರು ಪೂರ್ಣಿಮೆಯನ್ನು ಯಾಕೆ ಆಚರಿಸುತ್ತೇವೆ?; ಈ ದಿನದ ಮಹತ್ವವೇನು?

ಶರಣಾದವನ ರಕ್ಷಣೆ ರಾಜನ ಕರ್ತವ್ಯ ಎಂಬ ರಾಜನೀತಿಗನುಗುಣವಾಗಿ ನಾನು ನಿನಗೆ ಅಭಯ ನೀಡುವೆನು. ನೀನು ಈ ಕಾಲಮಾನದಲ್ಲಿ ಇರಬಹುದು ಎಂದು ಹೇಳಿ ಅವನಿಗಾಗಿ ಐದು ಸ್ಥಾನಗಳನ್ನು ನಿರ್ದೇಶಿಸುತ್ತಾನೆ . ಅದುವೇ ವರ್ತಮಾನಯುಗದ ಕಲಿಸ್ಥಾನವಾಗಿದೆ. ಆ ಸ್ಥಾನಗಳ ಸಹಯೋಗದಿಂದ ಅನರ್ಥ ಕಟ್ಟಿಟ್ಟಬುತ್ತಿ. ಮನುಷ್ಯನ ಎಲ್ಲಾ ಅನರ್ಥಗಳಿಗೂ ಕಲಿ ವಾಸವಾಗಿರುವ ಪಂಚಸ್ಥಾನಗಳೇ ಮುಖ್ಯಕಾರಣಗಳು. ಅವೇ – “ದ್ಯೂತಂ ಪಾನಂ ಸ್ತ್ರಿಯಃಸೂನಾ ಯತ್ರಾಧರ್ಮಶ್ಚತುರ್ವಿಧಃ” ರಜೋವೈರಂಚ ಪಂಚಮಮ್” ಕ್ರಮವಾಗಿ ಜೂಜು, ಅತೀಮದ್ಯಪಾನ, ಅಧಾರ್ಮಿಕವಾದ ಸ್ತ್ರೀಸಂಗ, ಅಧರ್ಮ/ಹಿಂಸೆ ಮತ್ತು ರಜೋಗುಣ ಭರಿತವಾದ ವೈರ ಇವೈದು ಕಲಿಯಸ್ಥಾನಗಳು. ಈ ಸ್ಥಾನಗಳ ಸ್ವರೂಪ ಹೀಗಿದೆ – ಜೂಜು = ಅಸತ್ಯ , ಮದ್ಯಪಾನ= ಮದ, ದುಷ್ಟಸ್ತ್ರೀಸಂಗ = ಅತ್ಯಾಸಕ್ತಿ , ಹಿಂಸೆ = ನಿರ್ದಯೆ ಮತ್ತು ವೈರ ಎಂಬುದಾಗಿ.

ಅಂದರೆ ನಾವು ಕಲಿಪುರುಷನ ಸ್ಥಾನವಾದ ಅಸತ್ಯ/ಅಧರ್ಮ,ಮದ,ಕಾಮ,ಹಿಂಸೆ,ವೈರ ಮತ್ತು ರಜೋಗುಣದಿಂದ ದೂರವಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯವೆಂದಾಯಿತು ಅಲ್ಲವೇ?
ಅದನ್ನೇ ಭಾಗವತ ಪುರಾಣದಲ್ಲಿ ಹೇಳಿದ್ದು ಆತ್ಮಕಲ್ಯಾಣ ಬಯಸುವವನು,ಧರ್ಮಶೀಲನಾದ ರಾಜನು, ಪ್ರಜಾನಾಯಕನು,ಧರ್ಮೋಪದೇಶಮಾಡುವ ಗುರುಜನರು ತುಂಬಾ ಎಚ್ಚರಿಕೆಯಿಂದ ಇವುಗಳನ್ನು ತ್ಯಜಿಸಬೇಕು. ಇಲ್ಲಿ ಮತ್ತೊಂದು ಅಂಶವೆಂದರೆ ಏನು ಅಸತ್ಯಾದಿ ಕಲಿಸ್ಥಾನಗಳಿವೆ ಅವು ಕೇವಲ ಜೂಜು ಇತ್ಯಾದಿಗಳಿಂದಲ್ಲದೇ ವರ್ತಮಾನದಲ್ಲಿ (ಪ್ರಕೃತ ಕಾಲದಲ್ಲಿ) ತತ್ಸ್ವರೂಪವಾದ ಬೇರೆ ಕಾರಣಗಳಿಂದಲೂ ಬರಬಹುದು . ಆದ್ದರಿಂದ ಒಳ್ಳೆಯ ಸ್ಥಿತಿ,ಒಳ್ಳೆಯ ಜೀವನ, ಗೌರವದ ಬದುಕು ಬೇಕಾದವರು ಅಂತಹ ಸ್ಥಾನಗಳನ್ನು ಸೂಕ್ಷ್ಮವಾಗಿ ಅರಿತು ಅದರ ಹೊರತಾಗಿ ಬಾಳುವುದು ಒಳಿತು ಅಲ್ಲವೇ…. ?

ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು

S.R.B.S.S College ಹೊನ್ನಾವರ
kkmanasvi@gamail.com