Goddess Parvati: ಲೋಕಕಲ್ಯಾಣಕ್ಕಾಗಿ ಅವತಾರ ತಾಳಿದ ಮಾತಾ ಪಾರ್ವತಿ, ಗಿರಿಜಾ ಕಲ್ಯಾಣದಿಂದ ಲೋಕಕಲ್ಯಾಣವಾಗಿದ್ದು ಹೇಗೆ?

ಪಾರ್ವತಿಯು ಗಂಗಾನದಿಯಿಂದ ನೀರನ್ನು ತಂದು ಶಿವನಪಾದ ತೊಳೆದು ಭಕ್ತಿಯಿಂದ ಪೂಜಿಸುತ್ತಿದ್ದಳು. ಪಾರ್ವತಿಯು ಜಗತ್ಪ್ರಸಿದ್ಧ ಸುಂದರಿಯಾದರೂ ಶಿವನು ಅವಳಿಗೆ ಮನ ಸೋಲಲಿಲ್ಲ. ಸ್ವರ್ಗಲೋಕದಲ್ಲಿ "ತಾರಕಾಸುರ" ಹಾಗೂ ರಾಕ್ಷಸರ ಉಪಟಳ ಹೆಚ್ಚಾಯಿತು.

Goddess Parvati: ಲೋಕಕಲ್ಯಾಣಕ್ಕಾಗಿ ಅವತಾರ ತಾಳಿದ ಮಾತಾ ಪಾರ್ವತಿ, ಗಿರಿಜಾ ಕಲ್ಯಾಣದಿಂದ ಲೋಕಕಲ್ಯಾಣವಾಗಿದ್ದು ಹೇಗೆ?
ಶಿವ ಪಾರ್ವತಿ ಲೋಕಕಲ್ಯಾಣ
Follow us
TV9 Web
| Updated By: ಆಯೇಷಾ ಬಾನು

Updated on: Jul 15, 2022 | 6:40 AM

ಹಿಮಾಲಯವು(Himalaya Parvat) ಅತ್ಯಂತ ಪ್ರಸಿದ್ಧವಾದ ಪರ್ವತವಾಗಿದೆ. ಇಲ್ಲಿ “ಗಂಗಾ ನದಿಯ” ಎರಡೂ ದಡಗಳಲ್ಲಿ ಋಷಿ-ಮುನಿಗಳು ಆಶ್ರಮಗಳನ್ನು ಕಟ್ಟಿಕೊಂಡು ಯಜ್ಞ ಯಾಗಾದಿಗಳನ್ನು ಮಾಡುತ್ತಿದ್ದರು. ಇದರ ಸಮೀಪದಲ್ಲಿ ‘ಔಷಧ ಪ್ರಸ್ಥ’ ಎಂಬ ಪಟ್ಟಣವಿದ್ದು, ಇದನ್ನು ಪರ್ವತರಾಜ ಆಳುತ್ತಿದ್ದನು. ಇದು ಪರ್ವತ ಪ್ರದೇಶವಾದ್ದರಿಂದ ಹಿಮವಂತ ಎಂಬ ಇನ್ನೊಂದು ಹೆಸರಿನಿಂದಲೂ ಕರೆಯುತ್ತಿದ್ದರು. “ಹಿಮವಂತನು” ಶಿವನ ಪರಮ ಭಕ್ತನಾಗಿದ್ದನು.

ಶಿವಭಕ್ತರು, ಸಾಧು ಸನ್ಯಾಸಿಗಳು ಬಂದರೆ, ಅತಿತ್ಯ ಸತ್ಕಾರಮಾಡಿ, ಯಥೇಚ್ಛವಾಗಿ ದಾನಧರ್ಮಗಳನ್ನು ಮಾಡುತ್ತಿದ್ದ. ಶಿವನಂತೆ ಇರುವ ಶಿವ ಭಕ್ತರನ್ನು ಕಂಡರೆ ತಾನೇ ವಿಶೇಷ ಕಾಳಜಿ ವಹಿಸುತ್ತಿದ್ದನು. ಇವನನ್ನು “ಗಿರಿರಾಜ”, “ಶೈಲರಾಜ” ಎಂದೂ ಕರೆಯುತ್ತಾರೆ. ಹಿಮವಂತನು ದೇವತೆಗಳ ಕಾರ್ಯ ಸಿದ್ದಿಗಾಗಿ “ಪಿತೃ ದೇವತೆ”ಗಳ ಜೇಷ್ಠ ಪುತ್ರಿಯಾದ “ಮೀನಾ ದೇವಿ”ಯನ್ನು ಮದುವೆಯಾದನು. ದೇವತೆಗಳು ಪ್ರಸನ್ನರಾಗಿ ಹರಸಿ ಹಾರೈಸಿದರು.

ಹಿಮವಂತ ಹಾಗೂ ಮೇನಾ ದೇವಿಯ ಗರ್ಭದಲ್ಲಿ ಜನಿಸಿದ ಪಾರ್ವತಿ ಹಿಮವಂತನು ಪರಮಜ್ಞಾನಿ. ಹಿಂದೆ ಜಗನ್ಮಾತೆಯಾದ “ಅಂಬೆ”ಯು ದಕ್ಷಪುತ್ರಿಯಾಗಿ ಸತಿ ರೂಪದಿಂದ ಜನ್ಮವೆತ್ತಿ ಪತಿಗಾದ ಅವಮಾನದಿಂದ “ದಕ್ಷ” ಮಾಡುತ್ತಿದ್ದ ಯಜ್ಞದಲ್ಲಿ ಅಗ್ನಿ ಪ್ರವೇಶ ಮಾಡಿದ್ದು ಗೊತ್ತಿರುವ ವಿಚಾರ. ಆ ದೇವಿಯೇ ಹಿಮವಂತ ಹಾಗೂ ಮೇನಾ ದೇವಿಯರ ಗರ್ಭದಲ್ಲಿ ಜನಿಸಿದರೆ, ತಾರಕಾಸುರನೆಂಬ ದೈತ್ಯನ ಕಾಟದಿಂದ ಪಾರಾಗಲು ಸಾಧ್ಯವೆಂದು ತಿಳಿದ ದೇವತೆಗಳು ಗೌರಿ ದೇವಿಯನ್ನು ಭಕ್ತಿಯಿಂದ ಸ್ತುತಿಸಿದರು.

ಪಾರ್ವತಿಯೇ ಇವರಿಗೆ ಮಗಳಾಗಿ ಹುಟ್ಟುತ್ತಾಳೆ ಎಂಬುದು ಹಿಮವಂತನಿಗೆ ಗೊತ್ತಿರಲಿಲ್ಲ. ಮುದ್ದಾದ ಹೆಣ್ಣು ಮಗಳು ಬೇಕು ಎಂಬ ಆಸೆ ದಂಪತಿಗಳಿಗೆ ಇತ್ತು. ಜೊತೆಗೆ ಮಗಳೇ ಆದರೆ ಅವಳನ್ನು ಶಿವನಿಗೆ ಕೊಟ್ಟು ಮದುವೆ ಮಾಡಿಕೊಡಬೇಕು ಎಂಬ ಆಸೆಯನ್ನು ಹೊಂದಿದ್ದರು. ಈ ಕಾರಣದಿಂದ ಮೇನಾ ದೇವಿಯು, ಶಿವನ ಪತ್ನಿ “ಗೌರಿದೇವಿ” ಕುರಿತು ತಪಸ್ಸು ಮಾಡುತ್ತಾಳೆ. ದೇವತೆಗಳ ಪ್ರಾರ್ಥನೆಯಂತೆ ಗೌರಿ ದೇವಿ ತನ್ನ ದಿವ್ಯ ರೂಪದಿಂದ ಕಾಣಿಸಿಕೊಂಡು ನಿನ್ನ ಗರ್ಭದಲ್ಲಿ ನಾನು ಪಾರ್ವತಿಯಾಗಿ ಅವತರಿಸುವೆ ಎಂದು ಭರವಸೆ ನೀಡಿದಳು.

ಮೇನಾದೇವಿ ಮತ್ತು ಹಿಮವಂತನು ಭಕ್ತಿಯಿಂದ ಜಗದಂಬೆಯನ್ನು ಪರಿಪರಿಯಾಗಿ ಸ್ತುತಿಸಿದರು. ದೇವಿಯು ದಂಪತಿಗಳ ಭಕ್ತಿಗೆ ಮೆಚ್ಚಿ ನೂರು ಪುತ್ರರು ಹಾಗೂ ಪುತ್ರಿಯಾಗುವ ಭಾಗ್ಯವನ್ನು ಕರುಣಿಸಿದಳು. ಹೀಗೆ ದಂಪತಿಗಳಿಬ್ಬರು ಬಹಳ ವರ್ಷಗಳ ತಪಸ್ಸು ಮಾಡಿದ ಫಲವಾಗಿ, ಮೇನಾ ದೇವಿಯು ಗರ್ಭ ತಾಳಿ ಮೈನಾಕನೇ, ಮೊದಲಾದ ನೂರು ಪುತ್ರರನ್ನು ಪಡೆದಳು. ನಂತರ ಪಾರ್ವತಿಯು ಅವರಿಗೆ ಮಗಳಾಗಿ ಅವತರಿಸಿದಳು. ಇಬ್ಬರ ಬಯಕೆಯಂತೆ ಹೆಣ್ಣು ಮಗು ಹುಟ್ಟಿದೆ ಎಂದು ಸಂತೋಷ ಪಡುವಂತೆ ಇರಲಿಲ್ಲ.

ಏಕೆಂದರೆ ಮಗು ಎರಡು ಮೂರು ದಿನಗಳಾದರೂ ಕಣ್ಣು ಬಿಡಲಿಲ್ಲ, ತಾಯಿಯ ಹಾಲು ಕುಡಿಯಲಿಲ್ಲ ಇದರಿಂದ ತುಂಬಾ ಬೇಸರವಾಯಿತು. ಹೀಗೆ ಏಕೆ ಸಂಭವಿಸಿತು ಎಂದು ‘ಗರ್ಗ’ ಮುನಿಗಳನ್ನು ಕೇಳಿದಾಗ, ಅವರು ಕೂಡಲೇ ಮಗುವನ್ನು ಶಿವನ ಮೂರ್ತಿಯ ಮುಂದೆ ತಂದಿಡುತ್ತಾರೆ. ಇಡುತ್ತಿದ್ದಂತೆಯೇ ಮಗು ಅಳಲು ಶುರು ಮಾಡಿ ಹಾಲು ಕುಡಿಯುತ್ತದೆ. ಅಲ್ಲಿದ್ದವರೆಲ್ಲ ಇದನ್ನು ಕಂಡು ಆಶ್ಚರ್ಯಚಕಿತರಾಗಿ ಕೈಮುಗಿದು “ಹರಹರಮಹಾದೇವ” ಎಂದು ಭಕ್ತಿಯಿಂದ ಶಿವನಿಗೆ ವಂದಿಸಿದರು.

ಈ ಮಗು ಮುಂದೆ ಬೆಳೆದು ದೊಡ್ಡವಳಾಗಿ ಶಿವನಿಗೆ ಪತ್ನಿಯಾಗುವಳು. ಎಂಬುದು ಎಲ್ಲರಿಗೂ ಖಚಿತವಾಯಿತು. ನವಜಾತ ಶಿಶುವಿಗೆ ನಾಮಕರಣ ವಿದ್ಯಾಭ್ಯಾಸಗಳಾದವು. ಸ್ವಯಂ ವಿದ್ಯಾ ರೂಪಿಣಿಯಾದ ಆಕೆಗೆ ಎಲ್ಲಾ ವಿದ್ಯೆಗಳು ಕರಗತವಾದವು. ಪಾರ್ವತಿಯು ಪ್ರಾಪ್ತವಯಸ್ಕಳಾಗಲು ಹಿಮವಂತನಿಗೆ ಮಗಳ ಮದುವೆಯದೇ ಚಿಂತೆಯಾಯಿತು.

ಯೋಗ ಮಗ್ನನಾದ ಶಿವನನ್ನು ಒಲಿಸುವುದು ಹೇಗೆ? ಯೋಗ ಮಗ್ನನಾದ ಶಿವನನ್ನು ಒಲಿಸುವುದು ಹೇಗೆ? ಎಂದುಕೊಂಡ ಮೇನಾದೇವಿ ಹಾಗೂ ಹಿಮವಂತನು, ಮದುವೆಯ ಕುರಿತು ಶಿವನಲ್ಲಿಗೆ ಹೋಗಿ ಬರಬೇಕೆಂದು ಯೋಚಿಸಿದರು. ಆ ಸಮಯದಲ್ಲಿ ಶಿವನು ತಪಸ್ಸಿನಲ್ಲಿ ನಿರತನಾಗಿದ್ದನು. ಸತಿಯು ದೇಹತ್ಯಾಗ ಮಾಡಿದ ಮೇಲೆ ಶಿವನು ವೈರಾಗ್ಯ ತಾಳಿ ತಪಸ್ಸಿನಲ್ಲಿ ನಿರತನಾಗಿದ್ದನು. ಅದೇ ಸಮಯಕ್ಕೆ ನಾರದರು “ಔಷಧ ಪ್ರಸ್ಥ” ಸ್ಥಳಕ್ಕೆ ಬರುತ್ತಾರೆ. ಹಿಮವಂತನು ತನ್ನ ಮಗಳನ್ನು ಶಿವನಿಗೆ ಕೊಟ್ಟು ವಿವಾಹ ಮಾಡುವ ಪ್ರಸ್ಥಾಪವನ್ನು ಮುಂದಿಡುತ್ತಾನೆ.

ನಾರದರು ನಮಗೆಲ್ಲ ತಿಳಿದಿದೆ. ಪೂರ್ವಜನ್ಮದಲ್ಲಿ ಪತಿ ಪರಾಯಣಿ ದಾಕ್ಷಾಯಿಣಿ ಪತಿಗಾದ ಅವಮಾನ ತಾಳಲಾಗದೆ ನೊಂದು ಮುಂದಿನ ಜನ್ಮದಲ್ಲಿ ಶಿವನೇ ತನ್ನ ಪತಿಯಾಗಿ ಬರಲಿ ಎಂದು ಪ್ರಾರ್ಥಿಸುತ್ತ ಯೋಗಾಗ್ನಿಯಲ್ಲಿ ದಹಿಸಿದ್ದಳು. ನಾವು ಶಿವನೊಡನೆ ಆಕೆಯ ವಿವಾಹವನ್ನು ಮಾಡಿಸುತ್ತೇವೆ. ನೀನು ಚಿಂತಿಸುವುದು ಬೇಡ ಎಂದು ಹೊರಟರು. ನಂತರ ಪರ್ವತರಾಜನು ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಶಿವನು ಕಣ್ಣು ತೆರೆದು ಏನು ಬೇಕೆಂದು ಕೇಳಿದನು.

ನನ್ನ ಮಗಳು ಪಾರ್ವತಿಯು ನಿನಗಾಗಿ ಜನ್ಮ ತಾಳಿದ್ದಾಳೆ. ಅವಳನ್ನು ವಿವಾಹವಾಗಬೇಕೆಂದನು. ಆದರೆ ಶಿವನು ಎಷ್ಟು ವರ್ಷಗಳಾದರೂ ಒಪ್ಪಲಿಲ್ಲ ಕೊನೆಗೆ ದೇವಾನು ದೇವತೆಗಳು ಶಿವನನ್ನು ಪ್ರಾರ್ಥಿಸುತ್ತಾರೆ ಎಲ್ಲರೂ ಮಹಾದೇವ ಪಾರ್ವತಿಯನ್ನು ವಿವಾಹ ಆಗಬೇಕೆಂದು ಬೇಡಿಕೊಂಡರು. ಕಡೆಗೂ ದೇವಾನು ದೇವತೆಗಳ ಮಾತಿಗೆ ಒಪ್ಪಿದನು. ಆದರೆ ಈಗಲ್ಲ ಎಂದನು.

ಶಿವನನ್ನು ಪ್ರಾರ್ಥಿಸಿದ ಹಿಮವಂತನು ಪರಮೇಶ್ವರ ನನ್ನ ಮಗಳನ್ನು ಅಲ್ಲಿಯತನಕ ನಿನ್ನ ಸೇವೆ ಮಾಡಲು ಕಳುಹಿಸುತ್ತೇನೆ ಎಂದು ವಿನಂತಿಸಿಕೊಂಡಾಗ, ಶಿವನು, ನಿನ್ನ ಮಗಳು ಪಾರ್ವತಿಯನ್ನು ಇಲ್ಲಿಗೆ ಕರೆದುಕೊಂಡು ಬಾ ಆದರೆ ನನ್ನ ಮುಂದೆ ಬೇಡ ನಾನು ತಪಸ್ಸಿನಲ್ಲಿ ನಿರತನಾಗಿರುವೆ. ನನ್ನ ತಪಸ್ಸಿಗೆ ಯಾವುದೇ ಕಾರಣಕ್ಕೂ ಭಂಗ ಬರುವಂತಿಲ್ಲ ಎಂದು ತಿಳಿಸಿದನು. ನಂತರ ಪ್ರತಿನಿತ್ಯವೂ ಮುಂಜಾನೆಯೆ ಎದ್ದು ಗಂಗಾವತರಣ ಸ್ಥಳಕ್ಕೆ ಬಂದು, ಭಕ್ತಿಯಿಂದ ಶಿವನ ಸೇವೆ ಮಾಡುತ್ತಿದ್ದಳು.

ಪಾರ್ವತಿಯು ಗಂಗಾನದಿಯಿಂದ ನೀರನ್ನು ತಂದು ಶಿವನಪಾದ ತೊಳೆದು ಭಕ್ತಿಯಿಂದ ಪೂಜಿಸುತ್ತಿದ್ದಳು. ಪಾರ್ವತಿಯು ಜಗತ್ಪ್ರಸಿದ್ಧ ಸುಂದರಿಯಾದರೂ ಶಿವನು ಅವಳಿಗೆ ಮನ ಸೋಲಲಿಲ್ಲ. ಸ್ವರ್ಗಲೋಕದಲ್ಲಿ “ತಾರಕಾಸುರ” ಹಾಗೂ ರಾಕ್ಷಸರ ಉಪಟಳ ಹೆಚ್ಚಾಯಿತು. ಶಿವನ ಮದುವೆ ಬೇಗನೆ ಪಾರ್ವತಿಯ ಜೊತೆ ನಡೆಯಬೇಕು ಅವರಿಬ್ಬರಿಗೆ ಜನಿಸುವ ಪುತ್ರನಿಂದ ಮಾತ್ರ ತಾರಕಾಸುರನ ಸಂಹಾರವಿದ್ದುದರಿಂದ, ಈಗ ಏನು ಮಾಡಬೇಕೆಂದು ದೇವತೆಗಳಿಗೆ ತಿಳಿಯಲಿಲ್ಲ. ಪಾರ್ವತಿಯು ನಿತ್ಯವೂ ಬಂದು ಶಿವನ ಸೇವೆ ಮಾಡಿ ಹಿಂತಿರುಗುತ್ತಿದ್ದಳು.

ಶಿವನ ಮೂರನೆಯ ಕಣ್ಣಿನ ಅಗ್ನಿಯಿಂದ ಸುಟ್ಟು ಬೂದಿಯಾದ ಮನ್ಮಥ ಈ ಸಮಯ ಸಾಧಿಸಿ ದೇವತೆಗಳು ವಸಂತ ಮನ್ಮಥರನ್ನು ಅಲ್ಲಿಗೆ ಕಳುಹಿಸಿ ಶಿವನಿಗೆ ಚಿತ್ತವಿಕಾರವನ್ನುಂಟು ಮಾಡಿಸಿದರು. ಶಿವನ ಮೂರನೆಯ ಕಣ್ಣಿನ ಅಗ್ನಿಯಿಂದ ಮನ್ಮಥನು ಸುಟ್ಟು ಬೂದಿಯಾದನು. ಪಾರ್ವತಿಯು ಉಗ್ರ ತಪಸ್ಸು ಮಾಡಿ ಶಿವನೇ ಪತಿಯಾಗಬೇಕೆಂದು ಹಠ ಹಿಡಿದಳು. ದೇವತೆಗಳ ಪ್ರಾರ್ಥನೆ, ಪಾರ್ವತಿಯ ಅಚಲ ಪ್ರೇಮಗಳಿಗೊಲಿದ ಶಿವನು ಆಕೆಯನ್ನು ಒಪ್ಪಿದನು. ನಂತರ ಬಗೆ ಬಗೆಯಿಂದ ಶಿವನು ಪಾರ್ವತಿಯನ್ನು ಪರೀಕ್ಷಿಸಿದನು. ಪಾರ್ವತಿಯು ಶಿವನ ಎಲ್ಲಾ ಪರೀಕ್ಷೆಗಳಲ್ಲೂ ಅವನ ಮನ ಗೆದ್ದಳು.

ಶಿವ ಪಾರ್ವತಿಯರ ಕಲ್ಯಾಣ ಮಹೋತ್ಸವವು ಎಲ್ಲಾ ದೇವತೆಗಳ ಸಮ್ಮುಖದಲ್ಲಿ ವೈಭವದಿಂದ ನಡೆಯಿತು. ದೇವಸೇನಾನಿಯಾದ “ಷಣ್ಮುಖನ” ಜನನಕ್ಕಾಗಿ ದೇವತೆಗಳು ಮತ್ತೆ ಶಿವನನ್ನು ಪ್ರಾರ್ಥಿಸಿದರು. ಶಿವನು ತೇಜಸ್ಸನ್ನು ಧರಿಸಲು ಎಲ್ಲರೂ ಹೆದರಿದರು. ಗಂಗೆಯು ಅದನ್ನು ತನ್ನಲ್ಲಿ ಇಟ್ಟು ಬೆಳೆಸಿದಳು. ನವಜಾತ ಶಿಶುವಿಗೆ ಕೃತ್ತಿಕೆಯರು ಹಾಲು ಕೊಟ್ಟು ಸಲಹಿದರು. ಪಾರ್ವತಿಯು ಕುಮಾರನನ್ನು ಮುದ್ದಿಸಿದಳು.

ಮುಂದೆ ಆತನೇ ದೇವಸೇನಾಪತಿಯಾಗಿ ತಾರಕಾಸುರನ ವಧೆಯನ್ನು ಮಾಡಿದನು. ಹೀಗೆ ಗಿರಿಜಾ ಕಲ್ಯಾಣದಿಂದ ಲೋಕಕಲ್ಯಾಣವಾಯಿತು. ಯಾರು ಶ್ರದ್ಧಾ ಭಕ್ತಿಗಳಿಂದ ಪಾರ್ವತಿ ಕಲ್ಯಾಣ ಪ್ರಸಂಗವನ್ನು ಪಠಿಸುವರೋ ಅವರಿಗೆ ದೇವಿಯ ದಿವ್ಯ ಕೃಪೆ ದೊರೆತು ಮಂಗಳವಾಗುತ್ತದೆ. “ನಮೋ ಪಾರ್ವತಿ ಪತಯೇ ಹರ ಹರ ಮಹಾದೇವ”

ಲೇಖನ: ವೇ!!ಶ್ರೀ! ಕುಮಾರಸ್ವಾಮಿ, (ಶ್ರೀ ಜ್ಯೋತಿಷ್ಯ ಸಲಹಾ ಕೇಂದ್ರ)

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು