Sign In

By signing in or creating an account, you agree with Associated Broadcasting Company's Terms & Conditions and Privacy Policy.

Spiritual: ಪ್ರಾರ್ಥನೆ ಎಂದರೇನು? ಅಷ್ಟಕ್ಕೂ ಪ್ರಾರ್ಥನೆ ಹೇಗಿರಬೇಕು ಗೊತ್ತಾ..!

ಪ್ರಾರ್ಥನೆಯೆಂಬ ಶಬ್ದದ ಶಾಸ್ತ್ರೀಯ ರೂಪ ಪ್ರಕರ್ಷೇಣ ಯಾಚನಂ ಎಂದು. ಅಂದರೆ ಒಳ್ಳೆಯ ರೀತಿಯಲ್ಲಿ, ಒಳ್ಳೆಯ ಶಕ್ತಿ/ವ್ಯಕ್ತಿಯಲ್ಲಿ ಯಾಚಿಸುವುದು, ಬೇಡುವುದು ಎಂದರ್ಥ.

Spiritual: ಪ್ರಾರ್ಥನೆ ಎಂದರೇನು? ಅಷ್ಟಕ್ಕೂ ಪ್ರಾರ್ಥನೆ ಹೇಗಿರಬೇಕು ಗೊತ್ತಾ..!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 14, 2022 | 9:42 AM

ಪ್ರತಿಯೊಬ್ಬರೂ ತಮ್ಮ ಅರಿವಿಗೆ ಬಂದ ರೀತಿಯಲ್ಲಿ ಪ್ರಾರ್ಥನೆ (Prayer) ಯನ್ನು ಮಾಡುತ್ತಾರೆ. ಪ್ರಾರ್ಥನೆಯೆಂಬ ಶಬ್ದದ ಶಾಸ್ತ್ರೀಯ ರೂಪ ಪ್ರಕರ್ಷೇಣ ಯಾಚನಂ ಎಂದು. ಅಂದರೆ ಒಳ್ಳೆಯ ರೀತಿಯಲ್ಲಿ, ಒಳ್ಳೆಯ ಶಕ್ತಿ/ವ್ಯಕ್ತಿಯಲ್ಲಿ ಯಾಚಿಸುವುದು, ಬೇಡುವುದು ಎಂದರ್ಥ. ಈ ಯಾಚಕರಲ್ಲಿ ಮೇಲ್ನೋಟಕ್ಕೆ ಎರಡು ವಿಧ. ದೇವಾಲಯ ಮೊದಲಾದ ಸ್ಥಳಗಳಿಗೆ ಹೋಗಿ ಅಲ್ಲಿ ಭಗವಂತನ ಮುಂದೆ ನಿಂತು ಉಚಿತವಲ್ಲದ ಯೋಚನೆಗಳನ್ನು ಮಾಡುವವರು ಮೊದಲನೇಯವರು. ಉದಾಹರಣೆಗೆ ಹೊರಗಡೆ ಇಟ್ಟ ಪಾದರಕ್ಷೆಯಿಂದ ಆರಂಭಿಸಿ, ಮನೆಯ ಸುತ್ತ ಇರುವ ಹೂವಿನ ಗಿಡದವರೆಗೆ, ಹೊರಗಡೆ ಬಿಟ್ಟ ಮೋಟಾರು ವಾಹನದಿಂದ ಆರಂಭಿಸಿ ಮನೆಯಲ್ಲಿನ ಫ್ಯಾನಿನವರೆಗೆ, ಮೈಮೇಲಿನ ಬಟ್ಟೆಗೆ ಯಾರಾದರು ಕುಂಕುಮ ಮೊದಲಾದುದನ್ನು ತಾಗಿಸುವರೇ ಎಂಬಲ್ಲಿಂದ ವಸ್ತ್ರ/ಸೀರೆಗಳನ್ನು ಯಾರಾದರು ಗಮನಿಸುವರೇ ಎಂಬಲ್ಲಿವರೆಗೆ ಈ ಮೊದಲ ವಿಭಾಗದ ವ್ಯಾಪ್ತಿಯನ್ನು ಹೇಳಬಹುದು. ಇದರಿಂದ ಕೇವಲ ಯಾಂತ್ರಿಕವಾಗಿ ದೇವಸ್ಥಾನಕ್ಕೆ ಹೋದ ಫಲವಷ್ಟೇ. (ಯಾಂತ್ರಿಕವಾಗಿ ಅಂದರೆ ನಾವು ಬಳಸುವ ಮೊಬೈಲ್ ಮೊದಲಾದ ಉಪಕರಣ ದೇವಾಲಯಕ್ಕೆ ಹೋದರೆ ಹೇಗೋ ಹಾಗೆ).

ಇದನ್ನೂ ಓದಿ: Spiritual: ಪ್ರೀತಿಯಿಂದ ಶುದ್ಧಭಾವದಿಂದ ಕೆಲಸ ಕಾರ್ಯವನ್ನು ಮಾಡಬೇಕು ಯಾಕೆ? ಭಾವಕ್ಕೆ ತಕ್ಕಂತೆ ಫಲ

ಎರಡನೇಯವರು ದೇವಾಲಯಕ್ಕೆ ಹೋಗುವುದೇ ವ್ಯವಹಾರ ಮನೋಭಾವ ಉಳ್ಳವರಾಗಿ. ಇವರ ಚಿತ್ತದಲ್ಲಿ ನಾನು ಯಾವ ದೇವರಲ್ಲಿ ಪ್ರಾರ್ಥಿಸಿದರೆ ನನಗೆ ಲಾಭವಾಗಬಹುದು? ಈ ದೇವಾಲಯ ಒಳ್ಳೆಯದೇ ಅಥವಾ ಅದು ಒಳ್ಳೆಯದೇ? ಅಲ್ಲಿ ಪ್ರಸಾದ ಚೆನ್ನಾಗಿದೆ, ಇಲ್ಲಿ ತೀರ್ಥ ಮಾತ್ರ. ಎಂಬಿತ್ಯಾದಿ ಯೋಚನೆಯೊಡಗೂಡಿ ಮತ್ತು ನಾನು ಈ ಪೂಜೆ ಈ ಪ್ರಾರ್ಥನೆ ಮಾಡಿದರೆ ನನಗೆ ಫಲ ಸಿಗುವುದೇ ಎಂಬ ಸಂಶಯವನ್ನು ಮಾಡುತ್ತಾ ಅಸಮತೋಲನ ಮನಸ್ಕರಾಗಿ ಭಗವಂತನಲ್ಲಿ ಯಾಚಿಸುತ್ತಾರೆ. ಇವರ ಸಮಯ ವ್ಯರ್ಥ ಅಷ್ಟೇ ಬಿಟ್ಟರೆ ಸಾರ್ಥಕ ಫಲ ಶೂನ್ಯ. ಹಾಗಾದರೆ ವಾಸ್ತವವಾಗಿ ದೇವಸ್ಥಾನಕ್ಕೆ ಹೇಗೆ ಹೋಗಬೇಕು? ಪ್ರಾರ್ಥನೆ ಹೇಗೆ ಮಾಡಬೇಕು ಎಂದರೇ, ಸುಧಾಮ(ಕುಚೇಲ) ಕೃಷ್ಣನಲ್ಲಿಗೆ ಹೋದ ರೀತಿಯಲ್ಲಿ ದೇವಾಲಯಕ್ಕೆ ಹೋಗಬೇಕು. ಅಲ್ಲಿ ತನ್ನ ಎಲ್ಲಾ ದುಃಖವನ್ನು ಮರೆತು ಸುಧಾಮ ಹೋಗುತ್ತಾನೆ. ಭಗವಂತ ಅವನ ಅಂತರಂಗ ಬಲ್ಲವನಾದ್ದರಿಂದ ಸುಧಾಮನಿಗೇ ತಿಳಿಯದಂತೆ ಅವನ ಕಷ್ಟಸಂಕುಲವನ್ನು ಶಮನ ಮಾಡುತ್ತಾನೆ. ಅದೇರೀತಿ ನಾವು ಭಗವಂತನ ಮುಂದೆ ಅದೂ ಇದೂ ಎಂದು ಕೇಳುವ ಬದಲು ಸಂಪೂರ್ಣ ಶರಣಾದರೆ ಅವನೇ ನಮ್ಮ ರಕ್ಷಕನಾಗುವನು. ಅದು ಹೇಗೆ ಎನ್ನುವುದಕ್ಕೆ ಮಹಾಭಾರತದ ಒಂದು ಘಟನೆ ಹೀಗಿದೆ ನೋಡಿ.

ಇದನ್ನೂ ಓದಿ: Guru Purnima 2022: ಗುರು ಪೂರ್ಣಿಮೆಯನ್ನು ಯಾಕೆ ಆಚರಿಸುತ್ತೇವೆ?; ಈ ದಿನದ ಮಹತ್ವವೇನು?

ಪಾಂಡವರು ದ್ಯೂತದಲ್ಲಿ ದ್ರೌಪದಿಯನ್ನು ಪಣದಲ್ಲಿಟ್ಟು ಸೋತರು. ಆಗ ದುರ್ಯೋಧನ ತನ್ನ ತಮ್ಮನಾದ ದುಶ್ಶಾಸನನ ಬಳಿ ಹೇಳುತ್ತಾನೆ ಅವಳನ್ನು ಎಳೆದು ತರಲು. ಸಾಮ್ರಾಜ್ಞಿಯಾದ ಅವಳನ್ನು ಎಳೆ ಎಳೆದು ತರುತ್ತಿರುವಾಗ ಅತಿರಥ ಮಹಾರಥರಾದ ಪಾಂಡವರು ನಿಯಮಕ್ಕೆ ಕಟ್ಟುಬಿದ್ದು ಮುಖತಗ್ಗಿಸುತ್ತಾರೆ. ಭೀಷ್ಮ, ದ್ರೋಣ, ಕೃಪರು ಆ ಸಮಯದಲ್ಲಿ ಧೃತರಾಷ್ಟ್ರನ ಋಣದಲ್ಲಿರುವವರಾದ್ದರಿಂದ ಮೌನಿಗಳಾದರು. ಆಗ ದ್ರೌಪದಿಯ ಆರ್ತ ಸ್ಥಿತಿಗೆ ಯಾರೂ ಸಹಾಯಕ್ಕೆ ಬರುವುದಿಲ್ಲ. ಆ ಕ್ಷಣ ಅವಳು ತನ್ನ ಸೆರಗನ್ನು ಎಳೆಯುತ್ತಿರುವ ದುಶ್ಶಾಸನನಿಗೆ ಪ್ರತಿರೋಧ ಮಾಡುತ್ತಾ ಕೃಷ್ಣನನ್ನು ಕರೆಯುತ್ತಾಳೆ. ಫಲ ಶೂನ್ಯ. ಎರಡನೇ ಸಲ ಮಥುರಾವಾಸಿ ಎಂದು ಕರೆಯುತ್ತಾಳೆ ಆಗಲೂ ಕೃಷ್ಣ ಕಾಣುವುದಿಲ್ಲ. ಕೊನೆಗೆ ದಾರಿ ಕಾಣದೆ ಪೃಕೃತ ಸ್ಥಿತಿಯನ್ನೇ ಮರೆತು ಎರಡೂ ಕೈ ಮೆಲೇತ್ತಿ ಹೇ ಹೃದಯವಾಸಿನ್ ಎಂದು ತನ್ನನ್ನು ತಾನು ಮರೆತು ಭಗವಂತನಿಂದಲೇ ಈ ಸ್ಥಿತಿಯ ರಕ್ಷಣೆ ಸಾಧ್ಯ ಎಂಬ ಭಾವದಿಂದ ಅವನನ್ನು ಕರೆಯುತ್ತಾಳೆ. ಆ ಭಗವಂತ ತತ್ಕ್ಷಣದಲ್ಲಿ ಅಕ್ಷಯವಾದ ಸೆರಗನ್ನಿತ್ತು ಅವಳ ಪ್ರಾರ್ಥನೆಯನ್ನು ಸತ್ಯವಾಗಿಸಿ ಭಕ್ತೆಯ ಮಾನವನ್ನು ಸಂರಕ್ಷಿಸಿದ.

ಮೇಲಿನ ಕಥೆಯಲ್ಲಿ ಮೂರು ಅಂಶ ನಾವು ಗಮನಿಸಬೇಕು. ಮೊದಲನೇಯದ್ದು, ದ್ರೌಪದಿ ತನ್ನನ್ನು ಯಾರಾದರೂ ಅಥವಾ ತಾನೇ ರಕ್ಷಿಸುವೆ ಕೃಷ್ಣನ ಅನುಗ್ರಹ ಸಾಕು ಎಂಬ ಭಾವವಿತ್ತು. ಆ ಭಾವಕ್ಕೆ ಭಗವಂತ ಕರಗಲಿಲ್ಲ. ಎರಡನೇ ಸಲ ಮಥುರಾವಾಸಿ ಎಂದು ಪ್ರಾರ್ಥಿಸುತ್ತಾಳೆ ಆಗ ಕೃಷ್ಣ ಕಾಣಲಿಲ್ಲ. ಅದು ಏಕೆ ಎಂದು ದ್ರೌಪದಿ ಕೇಳಿದಾಗ ಕೃಷ್ಣ ದೂರದ ಮಥುರೆಯಿಂದ ಹಸ್ತಿನಾವತಿಗೆ ಬರಲು ಬೇಕಾದ ಸಮಯ ತುಂಬಾ ಎಂಬ ಉತ್ತರ ನೀಡುತ್ತಾನೆ. ಕೊನೆಗೆ ತನ್ನನ್ನು ತಾನು ಮರೆತು ಹೃದಯವಾಸಿ ಎಂದಾಗ ನಿನ್ನ ಹೃತ್ಕಮಲದಿಂದ ಹೊರಗೆ ಬಂದು ನಿನ್ನನ್ನು ರಕ್ಷಿಸುವುದು ನನ್ನ ಕರ್ತವ್ಯ ತಾಯಿ ಎಂದು ಹೇಳುತ್ತಾನೆ. ಅಂದರೆ ತಾನೆಂಬುದ ಮರೆತು ಭಗವಂತನೇ ಎಲ್ಲ ಎನ್ನುವ ಮನಸ್ಸಿಂದ ಯಾಚುಸಿದರೆ ಅದು ನಿಜವಾದ ಪ್ರಾರ್ಥನೆ ಆಗುವುದು. ಪೂರ್ಣ ಫಲ ದೊರೆಯುವುದು.

ಲೇಖನ: ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು

Published On - 7:08 am, Thu, 14 July 22

ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಹಿಂದಿನಿಂದ ಗುದ್ದಿದ ಮಿನಿಬಸ್ ಚಾಲಕ
ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಹಿಂದಿನಿಂದ ಗುದ್ದಿದ ಮಿನಿಬಸ್ ಚಾಲಕ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ