Guru Purnima 2022: ಗುರು ಪೂರ್ಣಿಮಾದಂದು ಅಂಧಕಾರದಿಂದ ಬೆಳಕಿನ ದಾರಿ ತೋರಿಸಿದ ಗುರುವನ್ನು ಸ್ಮರಿಸಬೇಕು

ವಿದ್ಯಾದಾನ ಮಾಡುವವನು ಉಪಾದ್ಯಾಯ, ಶಿಕ್ಷಕ ಉಪದೇಶಿಸುವವನು ಎಂದರ್ಥ ಗುರು ಎಂಬ ಪದದಲ್ಲಿನ ಗು ಎಂಬ ಅಕ್ಷರಕ್ಕೆ ಅಂಧಕಾರವೆಂದು ರು, ಎಂಬುದಕ್ಕೆ ಬೆಳಕು ಎಂದು ಅಂಧಕಾರವನ್ನು ಹೋಗಲಾಡಿಸಿ ಬೆಳಕನ್ನು ತರುವವನೇ ಗುರುವೆಂದು ಅರ್ಥೈಸುತ್ತಾರೆ.

Guru Purnima 2022: ಗುರು ಪೂರ್ಣಿಮಾದಂದು ಅಂಧಕಾರದಿಂದ ಬೆಳಕಿನ ದಾರಿ ತೋರಿಸಿದ ಗುರುವನ್ನು ಸ್ಮರಿಸಬೇಕು
ಗುರು ಪೂರ್ಣಿಮಾ
Follow us
TV9 Web
| Updated By: ಆಯೇಷಾ ಬಾನು

Updated on: Jul 13, 2022 | 6:40 AM

ಆಷಾಢ ಮಾಸದ(Ashada Masa) ಶುಕ್ಲ ಪಕ್ಷದ ಹುಣ್ಣಿಮೆಗೆ ಗುರು ಪೂರ್ಣಿಮಾ(Guru Purnima) ಅಥವಾ ವ್ಯಾಸ ಪೂರ್ಣಿಮೆ ಆಚರಣೆ ಮಾಡಲಾಗುತ್ತೆ. ವ್ಯಾಸರನ್ನು ನಾವು ಆದಿ ಗುರು ಎಂದೂ ಪೂಜಿಸುತ್ತೇವೆ. ಜುಲೈ 13 ಅಂದ್ರೆ ಬುಧವಾರ ಗುರು ಸ್ಮರಣೆ ಪೂಜೆಮಾಡಬೇಕು. ಈ ದಿನ ಗುರು ಪಾದ ಪೂಜೆ ಮಾಡಿ ಅವರಿಗೆ ಗುರು ದಕ್ಷಿಣೆ ಸಮರ್ಪಿಸಬೇಕು. ವ್ಯಾಸ ಮಹರ್ಷಿಗಳು ಪುನಃ ಶಂಕರಾಚಾರ್ಯರ ರೂಪದಲ್ಲಿ ಅವತರಿಸಿದರೆಂದು ಭಾವುಕ ಭಕ್ತರ ಶ್ರದ್ದೆ ಇದೆ. ನಿಜವಾದ ಗುರು ಯಾರು? ಇಂದು ಗುರು ಶಿಷ್ಯ ಸಂಬಂಧ ಹೇಗಿದೆ? ಹಿಂದೆ ಹೇಗಿತ್ತು? ಈಗ ಹೀಗೇಕಾಗಿದೆ. ಇದನ್ನು ಸರಿ ಪಡಿಸಲು ಏನು ಮಾಡಬೇಕು? ಎಂಬ ವಿಚಾರಗಳನ್ನು ಮಂಥನ ಮಾಡಿ ಗುರು ಸೇವಾ ತತ್ಪರರಾಗಬೇಕೆಂಬುದೇ ಈ ಲೇಖನ ಉದ್ದೇಶ.

ಗುರು ಎಂದರೆ ಯಾರು? ವಿದ್ಯಾದಾನ ಮಾಡುವವನು ಉಪಾದ್ಯಾಯ, ಶಿಕ್ಷಕ ಉಪದೇಶಿಸುವವನು ಎಂದರ್ಥ ಗುರು ಎಂಬ ಪದದಲ್ಲಿನ ಗು ಎಂಬ ಅಕ್ಷರಕ್ಕೆ ಅಂಧಕಾರವೆಂದು ರು, ಎಂಬುದಕ್ಕೆ ಬೆಳಕು ಎಂದು ಅಂಧಕಾರವನ್ನು ಹೋಗಲಾಡಿಸಿ ಬೆಳಕನ್ನು ತರುವವನೇ ಗುರುವೆಂದು ಅರ್ಥೈಸುತ್ತಾರೆ. ಗುರು ಪೂಜೆ ಮಾಡದೇ ಯಾವ ಕಾರ್ಯವನ್ನು ಆರಂಭಿಸಬಾರದು. ತಂದೆಯನ್ನು, ಉಪನಯನ ಮಾಡಿದವರನ್ನು, ವಿದ್ಯಾದಾನ ಮಾಡಿದವರನ್ನು, ಅನ್ನದಾತರನ್ನು, ಭಯದಲ್ಲಿ ರಕ್ಷಿಸಿದವರನ್ನು ಈ ಐವರನ್ನು ಗುರುಗಳೆಂದು ಪರಿಗಣಿಸುತ್ತಾರೆ. ಪ್ರಾಚೀನ ಭಾರತದ ಶಿಕ್ಷಣ ಪದ್ಧತಿಯಲ್ಲಿ ಶಿಷ್ಯರನ್ನು ಗುರು ತನ್ನಾಶ್ರಮಕ್ಕೆ ಬರಮಾಡಿಕೊಂಡು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಗಳೆರಡನ್ನು ನೀಡುತ್ತಿದ್ದರು. ಶಿಷ್ಯರು ತಮ್ಮ ಗುರುವಿನ ಬಗ್ಗೆ ಅನನ್ಯ ಭಕ್ತಿಯಿಂದ ಇದ್ದು ವಿದ್ಯಾರ್ಜನೆ ಮಾಡುತ್ತಿದ್ದರು. ಆ ಗುರುಗಳ ಆಶ್ರಮದಲ್ಲಿದ್ದು ಅವರ ಸೇವೆ ಮಾಡಿ ಅವರ ಮನೆಯ ಎಲ್ಲ ಕೆಲಸಗಳನ್ನು ಭಕ್ತಿಯಿಂದ ಶ್ರದ್ದೆಯಿಂದ ಶುದ್ಧ ಮನಸ್ಸಿನಿಂದ ಸ್ವಾರ್ಥರಹಿತನಾಗಿ ಮಾಡಿ ಗುರುಕೃಪೆಗೆ ಪಾತ್ರನಾಗುತ್ತಿದ್ದರು. ಅಂಥ ಶಿಷ್ಯನಿಗೆ ಗುರು ಅನುಗ್ರಹ ಮಾಡುತ್ತಿದ್ದರು. ಗುರು ಪೀಠ ಪರಂಪರೆಯ ಮಹತ್ವ ಇಂದಿಗೂ ಇದೆ. ಕಾಲ ಬದಲಾಗಿದೆ. ಹಿಂದಿನ ಗುರು ಶಿಷ್ಯ ಸಂಬಂಧ ಈಗ ಉಳಿದಿಲ್ಲ ಇದಕ್ಕೆ ಕಾರಣ ಧನ ಅಧಿಖಾರಗಳೆರಡೇ ಕಾರಣ. ಆದರ್ಶ ಗುರು ಆದರ್ಶ ಶಿಷ್ಯ ಇಂದು ದುರ್ಲಭವಾಗಿದೆ.

ಗುರುವಿನ ಅವಶ್ಯಕತೆ ಎಲ್ಲ ಧಾರ್ಮಿಕ ಪಂಥಗಳಿಗೂ ಒಬ್ಬ ಗುರು ಇದ್ದಾನೆ. ಸತ್ಯಸ್ವರೂಪದ ಮೂಲತತ್ವಗಳು ಧ್ಯಾನ ಅಥವಾ ಗ್ರಂತಾವಲೋಕನದಿಂದಲೇ ಲಭಿಸಲಾರವೆಂಬುದು, ದೈವ ಪ್ರೇರಣೆಯ ಪರಂಪರೆಯ ಗುರು ಅಗತ್ಯವೆಂಬ ಭಾವನೆಯೂ ಇದಕ್ಕೆ ಮುಖ್ಯಕಾರಣ. ಆದಿ ಗುರುವಿನಿಂದ ಪರಂಪರಾನುಗತವಾಗಿ ಮುಂದಿನ ಗುರುಗಳಿಗೆ ಹಸ್ತಗತವಾಗುತ್ತ ಬಂದಿರುವ ಆ ಸತ್ಯದರ್ಶನ ಕೇವಲ ಮಂತ್ರ ಪಠಣದಿಂದ ಲಭ್ಯವಾಗುತ್ತಿಲ್ಲ. ಅದು ಗುರು ಮುಖೇನ ಲಭಿಸಬೇಕು. ಗುರು ಅನುಗ್ರಹಿಸುವ ದೀಕ್ಷೆಯಿಂದ ಮಾತ್ರ ಸಾಧ್ಯ ಧ್ಯಾನಮಾರ್ಗವು ಕಠಿಣವು ಮತ್ತು ದುರ್ಗಮವೂ ಆಗಿದೆ. ಅದಕ್ಕೆ ಪೂರ್ವಭಾಗಿಯಾಗಿ ಸಾಧಿಸಬೇಕಾದ ಶಾಂತಿ ಸಂಯಮಗಳು ಬೇಕು. ಅವುಗಳನ್ನು ಅನುಷ್ಠಾನಕ್ಕೆ ತರಲು ಸಮರ್ಥ ಗುರುವಿನ ನಿರ್ದೇಶನ ಬೇಕು. ಆದ್ದರಿಮದ ಯಾವುದೇ ಧರ್ಮದ ಅನುಷ್ಠಾನಕ್ಕೆ ಯೋಗ್ಯ ಆದರ್ಶ ಸತ್ಪರಂಪರೆ ರಕ್ಷಿಸಿ ಪೋಷಿಸಿಕೊಂಡು ಹೋಗಲು ಒಬ್ಬ ಗುರುಬೇಕು.

ಗುರು ಪೂಜಾ ಕ್ರಮ ಇಂದು ನಮ್ಮ ಮನೆಯಲ್ಲಿ ಸಹ ಗುರು ಪೂಜಾ ಮಾಡಬೇಕು. ಮೊದಲು ನಿತ್ಯ ಕರ್ಮಾದಿಗಳನ್ನು ಮುಗಿಸಿ ಗುರು ಪರಂಪರಾ ಸಿದ್ದಯರ್ಥಂ ವ್ಯಾಸ ಪೂಜಾಂ ಕರಿಷ್ಯೇ ಎಂದು ಒಂದು ಶುಭ್ರ ವಸ್ತ್ತ್ರವನ್ನು ಹಾಸಿ ಅದರ ಮೇಲೆ ಪೂರ್ವದಿಂದ ಪಶ್ಚಿಮದ ಕಡೆಗೆ ಮತ್ತು ಉತ್ತರದಿಂದ ದಕ್ಷಿಣದ ಕಡೆಗೆ ಗಂಧದಿಂದ ಹನ್ನೆರಡು ರೇಖೆಗಳನ್ನು ಎಳೆಯುತ್ತಾರೆ. ಇದುವೇ ವ್ಯಾಸಪೀಠ ನಂತರ ಬ್ರಹ್ಮ ಪರಾತ್ತರ ಶಕ್ತಿ, ವ್ಯಾಸ, ಶುಕದೇವ, ಶಂಕರಾಚಾರ್ಯ, ಯಾಜ್ಞವಲ್ಕ್ಯ ಚಿದಂಬರಂ ಶೇಷಾಚಲ, ಮೃತ್ಯುಂಜೇಶ್ವರ ಮತ್ತು ಅಭಿಷ್ಟ ಗುರು ಸಾಧು ಸಂತರನ್ನು ಆ ಪೀಠದ ಮೇಲೆ ಆವಾಹನ ಮಾಡಿ ಅವರಿಗೆ ಷೋಡಶೋಪಚಾರಗಳಿಂದ ಪೂಜಿಸಿ ಧ್ಯಾನ ಮಾಡುತ್ತಾರೆ. ಈ ದಿನ ದೀಕ್ಷಾಗುರು ಮತ್ತು ತಂದೆ ತಾಯಿಯವರ ಪೂಜಾ ಮಾಡುವ ಪದ್ದತಿಯೂ ಇದೆ. ಗುರುಪೂರ್ಣಿಮೆ ದಿನ ಗುರುತತ್ವವು ಬೇರೆ ಯಾವುದೇ ದಿನಕ್ಕಿಂತ ಒಂದು ಸಾವಿರ ಪಟ್ಟು ಅಧಿಕ ಕಾರ್ಯ ನಿತವಾಗಿರುತ್ತದೆ. ಆದ್ದರಿಂದ ಈ ದಿನ ಗುರುಗಳಿಗೆ ಸಲ್ಲಿಸಿದ ಸೇವೆ ಮಹತ್ವಪೂರ್ಣ ಹಾಗೂ ವಿಶಿಷ್ಟ, ಇದರಿಂದ ಗುರುಕೃಪಾಪಾತ್ರರಾಗುತ್ತೇವೆ.

ಗುರು ಪೂಜಾ ಕ್ರಮದಲ್ಲಿ ಇನ್ನೊಂದು ರೀತಿ ಇದೆ. ಕೆಲವು ಸಂದರ್ಭಗಳಲ್ಲಿ ಪ್ರತ್ಯಕ್ಷ ಮಾನವರೂಪಿ ಸಜೀವ ಗುರುವನ್ನೇ ಕೂರಿಸಿ ಪೂಜಿಸುವುದುಂಟು ಅವರನ್ನು ಒಂದು ವಿಶಾಲವಾದ ಪೀಠದಲ್ಲಿ ಕೂಡಿಸಿ ಪಾದ ಪೂಜೆ ಮಾಡಿ, ಅವರಿಗೆ ಆರತಿ ಮಾಡುವುದು, ಧೂಪ ಹಾಕುವುದು, ಮಂತ್ರ ಹೇಳುವುದು, ಶಿರ ಸಾಷ್ಟಾಂಗ ನಮಸ್ಕಾರ ಮಾಡುವುದು, ಮಂತ್ರ ಪುಷ್ಪ ಮಾಡುವುದು, ಅವರಿಂದ ಫಲ ಮಂತ್ರಾಕ್ಷತೆ ಪಡೆಯುವುದು ಪಾದ ತೊಳೆದ ನೀರನ್ನು ಭಕ್ತ ವೃಂದದವರು ತೀರ್ಥ ಎಂದು ಸೇವಿಸುವುದು. 8-10 ವರ್ಷಗಳ ಹಿಂದೆ ಹುಬ್ಬಳ್ಳಿಯ ಶಾಂಡಿಲ್ಯಾಶ್ರಮ ಪೂಜ್ಯ ಲಿಂಗೈಕ್ಯ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಒಮ್ಮೆ ಒಬ್ಬ ಭಕ್ತನಮನೆಗೆ ಬಂದಾಗ ಅವರು ಅಗಿಯುತ್ತಿದ್ದ ತಾಂಬೂಲವನ್ನು ಪಡೆಯಲು ಪಾಳಿ ಹಚ್ಚಿ ನಿಂತ ಭಕ್ತರನ್ನು ನೋಡಿದ್ದೇವೆ. ಭಾರತದಲ್ಲಿ ಇಂದಿಗೂ ಗುರುವೇ ದೇವರೆಂದು ಪೂಜಿಸುತ್ತಿರುವ ಅನೇಕ ಪಂಥಗಳಿವೆ. ಆದ್ದರಿಂದಲೇ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂಬುದು ಇಂದಿಗೂ ಸತ್ಯ.

ಈ ದಿನದ ಮಹತ್ವ ( ವೈಶಿಷ್ಟ್ಯ) ನಮ್ಮ ಜೀವನವನ್ನು ಸಾರ್ಥಕಗೊಳಿಸಿದ ಗುರುವನ್ನು ಸ್ಮರಿಸುವ ದಿನ. ನಮ್ಮ ವೇದಗಳು ಆಚಾರ್ಯ ದೇವೋಭವ ಎಂದು ಗುರುಗಳನ್ನು ಮನಸಾ ಗೌರವಿಸಿದ್ದಲ್ಲದೆ ಅವರಿಗೆ ತಂದೆ ತಾಯಿಗಳಿಗಿಂತ ಮಿಗಿಲಾದ ಸ್ಥಾನವನ್ನೂ ನೀಡಿದೆ. ಗುರು ಹೇಗಿರುವನು ಎಂಬ ತತ್ವ ಸಾರುವ ಒಂದು ಸುಭಾಷಿತ ಹೀಗಿದೆ.

||ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ| ಚಕ್ಷುರುನ್ಮೀಲಿತಂ ದೇವ ತಸ್ಮೈ ಶ್ರೀ ಗುರುವೇ ನಮಃ||

ಇದರ ಅರ್ಥ ನಾನು ಅಜ್ಞಾನವೆಂಬ ಅಂಧಕಾರದಲ್ಲಿ ಜನಿಸಿದ್ದೆ, ಗುರುಗಳು ಜ್ಞಾನದ ದೀವಟಿಗೆಯಿಂದ ನನ್ನ ಕಣ್ಣು ತೆರೆಸಿದರು. ಅವರಿಗೆ ನನ್ನ ಗೌರವಪೂರ್ವಕ ನಮಸ್ಕಾರಗಳನ್ನು ಸಲ್ಲಿಸುತ್ತೇನೆ’ ಇಂಥ ಗುರುವಿಗೆ ವಂದಿಸಿ ನಾವು ಕಾರ್ಯೋನ್ಮುಖರಾದಾಗ ಬಾಳಿನಲ್ಲಿ ಸುಖ ಸಂಪತ್ತು ಖಚಿತ. ಹಿಂದೆ ಗುರು ಮುಂದೆ ಗುರಿ ಇದ್ದಾಗ ಮಾತ್ರ ಕಾರ್ಯಗಳಲ್ಲಿ ಯಶಸ್ಸು ನಿಶ್ಚಿತ ದೇವರಿಗಿಂತ ಗುರು, ಗುರುವಿಗಿಂತ ಗುರುಕೃಪೆ ದೊಡ್ಡದು. ರಾಮ, ಕೃಷ್ಣರೂ ಸಹ ವಿಶಿಷ್ಠ ವಿಶ್ವಾಮಿತ್ರ ಸಾಂದೀಪನಿಗಳಂಥ ಗುರುಗಳ ಸೇವೆ ಮಾಡಿ ಫಲ ಪಡೆದವರು.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ