AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ChatGPT Down: ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ChatGPT ಡೌನ್: ಬಳಕೆದಾರರ ಪರದಾಟ

ಪ್ರಪಂಚದಾದ್ಯಂತದ ಬಳಕೆದಾರರು ChatGPT, Sora ಮತ್ತು GPT API ಬಳಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ತಿಂಗಳಲ್ಲಿ ಇದು ಎರಡನೇ ಬಾರಿ ಈ ರೀತಿ ಸಂಭವಿಸುತ್ತಿರುವುದು. ಇದು ಪ್ಲಾಟ್‌ಫಾರ್ಮ್‌ನ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. OpenAI ಡೌನ್ ಆಗಿದೆ ಎಂದು ಡೌನ್ ಡಿಟೆಕ್ಟರ್ ಸಹ ದೃಢಪಡಿಸಿದೆ.

ChatGPT Down: ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ChatGPT ಡೌನ್: ಬಳಕೆದಾರರ ಪರದಾಟ
Chatgpt Down
ಪ್ರೀತಿ ಭಟ್​, ಗುಣವಂತೆ
| Updated By: Vinay Bhat|

Updated on:Jul 16, 2025 | 9:05 AM

Share

ಬೆಂಗಳೂರು (ಜು. 16): ಓಪನ್‌ಎಐನ ಪ್ರಸಿದ್ಧ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್, ChatGPT ಭಾರತ ಸೇರಿದಂತೆ ಪ್ರಪಂಚದಾದ್ಯಂತ ಡೌನ್ ಆಗಿದೆ. ಚಾಟ್‌ಜಿಪಿಟಿಯ ಸ್ಟೇಟಸ್ ಪುಟದಲ್ಲಿ ಓಪನ್‌ಎಐ, ಚಾಟ್‌ಜಿಪಿಟಿ ಈ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಒಪ್ಪಿಕೊಂಡಿದೆ. ಜನರು ಸಾಮಾಜಿಕ ಮಾಧ್ಯಮದಲ್ಲಿ ಚಾಟ್‌ಜಿಪಿಟಿಯನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡುತ್ತಿದ್ದಾರೆ. ಚಾಟ್‌ಜಿಪಿಟಿ ಡೌನ್ ಆಗುವುದರ ಜೊತೆಗೆ, ಬಳಕೆದಾರರಿಗೆ ಅವರ ಹಳೆಯ ಚಾಟ್‌ಗಳನ್ನು ಸಹ ತೋರಿಸುತ್ತಿಲ್ಲ. ಓಪನ್ ಎಐ ಸ್ಟೇಟಸ್ ಪುಟದಲ್ಲಿ ಇದು ಶೀಘ್ರದಲ್ಲೇ ಸರಿ ಆಗಲಿದೆ ಎಂದು ಹೇಳಿದೆ.

ಪ್ರಪಂಚದಾದ್ಯಂತದ ಬಳಕೆದಾರರು ChatGPT, Sora ಮತ್ತು GPT API ಬಳಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ತಿಂಗಳಲ್ಲಿ ಇದು ಎರಡನೇ ಬಾರಿ ಈ ರೀತಿ ಸಂಭವಿಸುತ್ತಿರುವುದು. ಇದು ಪ್ಲಾಟ್‌ಫಾರ್ಮ್‌ನ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. OpenAI ಡೌನ್ ಆಗಿದೆ ಎಂದು ಡೌನ್ ಡಿಟೆಕ್ಟರ್ ಸಹ ದೃಢಪಡಿಸಿದೆ. ಈ ಸ್ಥಗಿತದ ಪರಿಣಾಮ ಜಾಗತಿಕವಾಗಿ ಕಂಡುಬರುತ್ತಿದೆ. ಭಾರತ ಸೇರಿದಂತೆ ಅಮೆರಿಕ, ಯುರೋಪ್ ಮತ್ತು ಏಷ್ಯಾದ ಬಳಕೆದಾರರು ChatGPT ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ.

ವೆಬ್‌ಸೈಟ್‌ಗಳನ್ನು ಟ್ರ್ಯಾಕ್ ಮಾಡುವ ಕಂಪನಿಯಾದ ಡೌನ್ ಡಿಟೆಕ್ಟರ್ ಪ್ರಕಾರ, 91% ChatGPT ಬಳಕೆದಾರರು OpenAI ಕಾರ್ಯನಿರ್ವಹಿಸುತ್ತಿಲ್ಲದ ಕಾರಣ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಿದ್ದಾರೆ. ಅದೇ ಸಮಯದಲ್ಲಿ, 5% ಬಳಕೆದಾರರು ವೆಬ್‌ಸೈಟ್ ಸಮಸ್ಯೆಗಳ ಬಗ್ಗೆ ಮತ್ತು 4% ಬಳಕೆದಾರರು ಲಾಗಿನ್ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದಾರೆ.

ಇದನ್ನೂ ಓದಿ
Image
200MP ಕ್ಯಾಮೆರಾದ ಈ ಫೋನ್‌ ಮೇಲೆ ಸಾವಿರಾರು ರೂ. ಡಿಸ್ಕೌಂಟ್
Image
ವೈರ್‌ಲೆಸ್ ಪವರ್ ಬ್ಯಾಂಕ್‌ನಿಂದ ಫೋನ್ ಚಾರ್ಜ್ ಮಾಡುವುದು ಒಳ್ಳೆಯದೇ?
Image
Fliplart GOAT ಸೇಲ್- Amazon ಪ್ರೈಮ್: ಯಾವುದರಲ್ಲಿ ಹೆಚ್ಚು ರಿಯಾಯಿತಿ?
Image
ಅಮೆಜಾನ್​ಗೆ ಟಕ್ಕರ್ ಕೊಡಲು ಫ್ಲಿಪ್​ಕಾರ್ಟ್​ನಲ್ಲಿ ಶುರುವಾಯ್ತು GOAT ಸೇಲ್

Flipkart GOAT Sale: 200MP ಕ್ಯಾಮೆರಾದ ಈ ಫೋನ್‌ ಮೇಲೆ ಸಾವಿರಾರು ರೂ. ಡಿಸ್ಕೌಂಟ್: ಆಫರ್ ಮಿಸ್ ಮಾಡ್ಬೇಡಿ

ಪ್ರಸ್ತುತ, ಕಂಪನಿಯು ಡೌನ್ ಆಗಿರುವುದಕ್ಕೆ ನಿಜವಾದ ಕಾರಣವನ್ನು ನೀಡಿಲ್ಲ, ಆದರೆ ಬಹಳಷ್ಟು ಜನರು ಏಕಕಾಲದಲ್ಲಿ ChatGPT ಅನ್ನು ಬಳಸುತ್ತಿರು ಕಾರಣ ಇದು ಸಂಭವಿಸಬಹುದು, ಇದು ಸರ್ವರ್ ಮೇಲೆ ಒತ್ತಡವನ್ನು ಬೀರುತ್ತದೆ. ಇದು ಸಿಸ್ಟಮ್ ನಿಧಾನವಾಗಲು ಅಥವಾ ನಿಲ್ಲಲು ಕಾರಣವಾಗುತ್ತದೆ. ಸಾಫ್ಟ್​ವೇರ್ ಅಪ್ಡೇಟ್​ನಲ್ಲಿನ ಸಮಸ್ಯೆಯಿಂದಲೂ ಇದು ಸಂಭವಿಸಬಹುದು.

AI ಪರಿಕರಗಳ ಜನಪ್ರಿಯತೆ ಹೆಚ್ಚುತ್ತಿರುವ ನಡುವೆ, ಆಗಾಗ್ಗೆ ಕಂಡುಬರುತ್ತಿರುವ ತಾಂತ್ರಿಕ ಸಮಸ್ಯೆಗಳು ಬಳಕೆದಾರರನ್ನು ಚಿಂತೆಗೀಡು ಮಾಡುತ್ತಿವೆ. ಈ ತಿಂಗಳು ಇದು ಎರಡನೇ ಪ್ರಮುಖ ಸ್ಥಗಿತವಾಗಿದ್ದು, OpenAI ನ ಸೇವಾ ಸ್ಥಿರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. OpenAI ಸ್ಥಗಿತವನ್ನು ಒಪ್ಪಿಕೊಂಡಿದೆ ಮತ್ತು ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಸರಿಪಡಿಸಲು ತನ್ನ ತಾಂತ್ರಿಕ ತಂಡವು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ. ಪದೇ ಪದೇ ಲಾಗಿನ್ ಮಾಡಬೇಡಿ ಹಾಗೂ ಬಳಕೆದಾರರು ತಾಳ್ಮೆಯಿಂದಿರಲು ಕಂಪನಿಯು ಮನವಿ ಮಾಡಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:42 am, Wed, 16 July 25

ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್