‘ಜೀವನ ತುಂಬಾನೇ ಸಣ್ಣದು’; ‘ಪಂಚಾಯತ್’ ನಟ ಆಸಿಫ್ ಖಾನ್ಗೆ ಹೃದಯಾಘಾತ
Aasif Khan heart attack: ಪಂಚಾಯತ್ ವೆಬ್ ಸರಣಿಯಲ್ಲಿ ಪ್ರಸಿದ್ಧ ನಟ ಆಸಿಫ್ ಖಾನ್ ಅವರಿಗೆ ಇತ್ತೀಚೆಗೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರಿಂದ ಅವರು ಬದುಕುಳಿದಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡ ಅವರು ಜೀವನದ ಮೌಲ್ಯವನ್ನು ಒತ್ತಿಹೇಳಿದ್ದಾರೆ.

‘ಪಂಚಾಯತ್’ (Panchayat) ವೆಬ್ ಸರಣಿಯಲ್ಲಿ ಮೆಹಮಾನ್ (ಅತಿಥಿ) ಆಗಿ ಗಮನ ಸೆಳೆದವರು ನಟ ಆಸಿಫ್ ಖಾನ್. ಅವರಿಗೆ ಇತ್ತೀಚೆಗೆ ಹೃದಯಾಘಾತ ಆಗಿದೆ ಎಂದು ತಿಳಿದು ಬಂದಿದೆ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಅವರು ಬದುಕುಳಿದಿದ್ದಾರೆ. ಈಗ ಅವರ ಆರೋಗ್ಯ ಸುಧಾರಿಸುತ್ತಿದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ‘ಜೀವನ ತುಂಬಾನೇ ಸಣ್ಣದು’ ಎಂಬುದನ್ನು ಒತ್ತಿ ಹೇಳಿದ್ದಾರೆ.
ಆಸಿಫ್ ಖಾನ್ ಅವರು ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಆರೋಗ್ಯದ ಬಗ್ಗೆ ಹಾಗೂ ಏನಾಯಿತು ಎಂಬುದರ ಮಾಹಿತಿ ನಿಡಿದ್ದಾರೆ. ಮೊದಲ ಸ್ಟೇಟಸ್ನಲ್ಲಿ ಅವರು ಆಸ್ಪತ್ರೆಯ ಛಾವಣಿ ಫೋಟೋ ಹಾಕಿದ್ದಾರೆ. ಜೀವನ ತುಂಬಾನೇ ಸಣ್ಣದು ಎಂದು ಹೇಳಿದ್ದಾರೆ.
‘ಕಳೆದ 36 ಗಂಟೆಗಳ ಕಾಲ ಇದನ್ನು ನೋಡಿದ ಬಳಿಕ ನನಗೆ ಜೀವನ ಚಿಕ್ಕದು ಎಂಬುದು ಅರಿವಾಗಿದೆ. ಒಂದು ದಿನವನ್ನೂ ಹಗುರವಾಗಿ ಪರಿಗಣಿಸಬೇಡಿ. ಎಲ್ಲವೂ ಒಂದು ಕ್ಷಣದಲ್ಲಿ ಬದಲಾಗಬಹುದು. ನಿಮಗೆ ಸಿಕ್ಕಿರುವ ವಿಚಾರಕ್ಕೆ ಕೃತಜ್ಞರಾಗಿರಿ. ನಿಮಗೆ ಯಾರು ಅತ್ಯಂತ ಮುಖ್ಯ ಎಂಬುದನ್ನು ನೆನಪಿಡಿ ಮತ್ತು ಅವರನ್ನು ಯಾವಾಗಲೂ ಪ್ರೀತಿಸಿ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ‘ಪಂಚಾಯತ್’ ವೆಬ್ ಸೀರಿಸ್ಗೆ ಕಥೆ ಬರೆದಿದ್ದಕ್ಕೆ ಸಿಕ್ಕಿದ್ದು ಬರೋಬ್ಬರಿ 5 ಕೋಟಿ ರೂಪಾಯಿ?
ಮತ್ತೊಂದು ಪೋಸ್ಟ್ನಲ್ಲಿ, ‘ನಾನು ರಿಕವರಿ ಹಂತದಲ್ಲಿ ಇದ್ದೇನೆ. ನಿಮ್ಮ ಹಾರೈಕೆ ಹಾಗೂ ಪ್ರೀತಿಗೆ ಧನ್ಯವಾದ. ನಿಮ್ಮ ಬೆಂಬಲಕ್ಕೆ ಧನ್ಯವಾದ’ ಎಂದು ಹೇಳಿದ್ದಾರೆ.
ಆಸಿಫ್ ಸಿನಿ ಜರ್ನಿ..
2018ರ ‘ಮಿರ್ಜಾಪುರ್’ ವೆಬ್ ಸರಣಿ ಮೂಲಕ ಆಸಿಫ್ ಖಾನ್ ಅವರು ಬಣ್ಣದ ಬದುಕು ಆರಂಭಿಸಿದರು. ಅವರು ಬಾಬರ್ ಪಾತ್ರದಲ್ಲಿ ನಟಿಸಿದರು. ‘ಪಂಚಾಯತ್’ ಸರಣಿಯಲ್ಲಿ ಅವರು ಮಾಡಿದ ಪಾತ್ರ ಸೂಪರ್ ಹಿಟ್ ಆಯಿತು. ಇದರಿಂದ ಅವರಿಗೆ ಜನಪ್ರಿಯತೆ ದೊರೆಯಿತು. ಅವರು ‘ಪಂಚಾಯತ್ ಸೀಸನ್ 3’ನಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರಿಗೆ ಹಲವು ಆಫರ್ಗಳು ಬಂದವು. ಹೃದಯಾಘಾತದಿಂದ ಅವರ ಸಿನಿಮಾ ಕೆಲಸಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








