‘ಪಂಚಾಯತ್​’ ವೆಬ್​ ಸೀರಿಸ್​ಗೆ ಕಥೆ ಬರೆದಿದ್ದಕ್ಕೆ ಸಿಕ್ಕಿದ್ದು ಬರೋಬ್ಬರಿ 5 ಕೋಟಿ ರೂಪಾಯಿ?

‘ಪಂಚಾಯತ್ 3’ ಸೀರಿಸ್ ಧನಾತ್ಮಕ ಪ್ರತಿಕ್ರಿಯೆ ಪಡೆದಿದೆ. ಇದಕ್ಕೆ ನಾಲ್ಕನೇ ಸೀಸನ್ ಬರಲಿದೆ ಎಂದು ಘೋಷಿಸಲಾಗಿದೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈಗ ಚಂದನ್ ಕುಮಾರ್ ಅವರು ಈ ಸರಣಿ ಬಗ್ಗೆ, ತಮಗೆ ಸಿಕ್ಕ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ.

‘ಪಂಚಾಯತ್​’ ವೆಬ್​ ಸೀರಿಸ್​ಗೆ ಕಥೆ ಬರೆದಿದ್ದಕ್ಕೆ ಸಿಕ್ಕಿದ್ದು ಬರೋಬ್ಬರಿ 5 ಕೋಟಿ ರೂಪಾಯಿ?
ಪಂಚಾಯತ್
Follow us
|

Updated on: Jun 06, 2024 | 7:35 AM

‘ಪಂಚಾಯತ್’ ಸರಣಿಯ (Panchayat) ಮೂರನೇ ಸೀಸನ್ ಇತ್ತೀಚೆಗೆ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಕಂಡಿದೆ. ಈ ಸೀರಿಸ್​ ಮೂಲಕ ನಟ ಜಿತೇಂದ್ರ ಕುಮಾರ್, ನೀನಾ ಗುಪ್ತಾ, ರಘುಬೀರ್ ಯಾದವ್ ಮೊದಲಾದ ಕಲಾವಿದರು ಅಭಿಮಾನಿಗಳಿಂದ ಸಾಕಷ್ಟು ಪ್ರೀತಿ ಪಡೆದಿದ್ದಾರೆ. ಒಂದು ಹಳ್ಳಿಯಲ್ಲಿ ನಡೆಯುವ ಕಥೆಯ ಸುತ್ತ ಈ ಸರಣಿ ಸಾಗುತ್ತದೆ. ಈ ಸರಣಿಗೆ ಕಥೆ ಬರೆದಿದ್ದು ಚಂದನ್ ಕುಮಾರ್ ಅವರು. ಅವರು ಇದಕ್ಕೆ ಬರೋಬ್ಬರಿ 5 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ.

‘ಪಂಚಾಯತ್ 3’ ಸೀರಿಸ್ ಧನಾತ್ಮಕ ಪ್ರತಿಕ್ರಿಯೆ ಪಡೆದಿದೆ. ಇದಕ್ಕೆ ನಾಲ್ಕನೇ ಸೀಸನ್ ಬರಲಿದೆ ಎಂದು ಘೋಷಿಸಲಾಗಿದೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈಗ ಚಂದನ್ ಕುಮಾರ್ ಅವರು ಈ ಸರಣಿ ಬಗ್ಗೆ, ತಮಗೆ ಸಿಕ್ಕ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ವೆಬ್ ಸೀರಿಸ್​ಗೆ ಕಥೆ ಬರೆದಿದ್ದಕ್ಕೆ ಅಷ್ಟೊಂದು ಹಣ ಸಿಕ್ಕಿಲ್ಲ ಎಂದಿದ್ದಾರೆ.

‘ನಾನು ಪಂಚಾಯತ್​ಗೆ ಕಥೆ ಬರೆದಿದ್ದಕ್ಕೆ 5 ಕೋಟಿ ರೂಪಾಯಿ ಪಡೆದಿದ್ದೇನೆ ಎಂಬುದರಲ್ಲಿ ಸತ್ಯವಿಲ್ಲ. ಅವುಗಳು ಕೇವಲ ಥಿಯರಿಗಳಷ್ಟೇ. ಇದೆಲ್ಲ ನಿಜವಾಗಲಿ ಎಂದು ದೇವರ ಬಳಿ ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ ಚಂದನ್ ಕುಮಾರ್.

ಚಂದನ್ ಕುಮಾರ್ ಅವರಿಗೆ ಯಶ್ ರಾಜ್ ಸ್ಟುಡಿಯೋ ಹಾಗೂ ಆಮಿರ್ ಖಾನ್ ಅವರಿಗೆ ದೂರವಾಣಿ ಕರೆಗಳು ಬಂದಿದ್ದವು ಎನ್ನುವ ಸುದ್ದಿ ಇದೆ. ಇದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಆಮಿರ್ ಖಾನ್ ಅವರಿಂದ ನೇರವಾಗಿ ಕರೆ ಬಂದಿಲ್ಲ. ಪ್ರೊಡಕ್ಷನ್ ಸಂಸ್ಥೆಯಿಂದ ಕರೆ ಬಂದಿತ್ತು. ಭೇಟಿ ಹಾಗೂ ಚರ್ಚೆಗಳು ನಡೆಯುತ್ತಿರುತ್ತವೆ. ಯಾವುದೇ ನಿರ್ಮಾಣ ಸಂಸ್ಥೆಯಿಂದ ಕರೆ ಬಂದರೂ ನಾನು ನನ್ನ ಐಡಿಯಾ ಶೇರ್ ಮಾಡುತ್ತೇನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ರಿವೀಲ್ ಆಯ್ತು ‘ಪಂಚಾಯತ್ 3’ ಲುಕ್; ಜಿತೇಂದ್ರ ಕುಮಾರ್ ಸಂಭಾವನೆ ಎಷ್ಟು?

ಎಂಬಿಎ ಓದುವ ಕನಸು ಕಾಣುವ ಅಭಿಷೇಕ್ ತ್ರಿಪಾಠಿ (ಜಿತೇಂದ್ರ ಕುಮಾರ್) ಉತ್ತರ ಪ್ರದೇಶದ ಫುಲೇರಾ ಎಂಬ ಗ್ರಾಮ ಪಂಚಾಯತ್​ಗೆ ಕಾರ್ಯದರ್ಶಿಯಾಗಿ ಸೇರ್ಪಡೆ ಆಗುತ್ತಾರೆ. ಆರಂಭದಲ್ಲಿ ಹಳ್ಳಿಯನ್ನು ದ್ವೇಷಿಸುವ ಆತ, ನಂತರ ಹಳ್ಳಿಯ ಜೊತೆ ಪ್ರೀತಿ ಬೆಳೆಸಿಕೊಳ್ಳುತ್ತಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ