ಡಾಲಿ ಮದುವೆ ಯಾವಾಗ? ‘ಕೋಟಿ’ ಸಿನಿಮಾ ವೇದಿಕೆಯಲ್ಲಿ ಉತ್ತರ ನೀಡಿದ ನಟ

ಡಾಲಿ ಮದುವೆ ಯಾವಾಗ? ‘ಕೋಟಿ’ ಸಿನಿಮಾ ವೇದಿಕೆಯಲ್ಲಿ ಉತ್ತರ ನೀಡಿದ ನಟ

ಮದನ್​ ಕುಮಾರ್​
|

Updated on: Jun 05, 2024 | 11:00 PM

ಸ್ಯಾಂಡಲ್​ವುಡ್​ ನಟ ಡಾಲಿ ಧನಂಜಯ್​ ಅವರು ಯಾವಾಗ ಮದುವೆ ಆಗಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಇದೆ. ಇದೇ ಪ್ರಶ್ನೆಯನ್ನು ‘ಕೋಟಿ’ ಸಿನಿಮಾದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮದಲ್ಲೂ ಕೇಳಲಾಯಿತು. ಅದಕ್ಕೆ ಅವರು ಉತ್ತರ ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..

ಟ್ರೇಲರ್​ ಮೂಲಕ ‘ಕೋಟಿ’ ಸಿನಿಮಾ (Kotee Kannada Movie) ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಈ ವೇಳೆ ನಟ ಡಾಲಿ ಧನಂಜಯ್​ ಅವರು ಖಾಸಗಿ ಬದುಕಿನ ಕುರಿತು ಪ್ರಶ್ನೆಗೆ ಉತ್ತರಿಸಿದ್ದಾರೆ. ‘ವರ್ಷಗಳು ಹೋಗುತ್ತಾ ಇರುತ್ತದೆ. ಅದು ಗೊತ್ತಾಗುವುದೇ ಇಲ್ಲ. ಸಿನಿಮಾದವರಿಗೆ ವಯಸ್ಸಾಗುವುದು ಗೊತ್ತಾಗಲ್ಲ, ಸತ್ತು ಹೋಗುವುದೂ ಗೊತ್ತಾಗಲ್ಲ. ಒಂದು ಸಿನಿಮಾ ಮಾಡೋದ್ರೋಳಗೆ ಎರಡು ವರ್ಷ ಕಳೆದು ಹೋಗಿರುತ್ತದೆ. ರೋಡಲ್ಲಿ ಫೋಟೋ ತೆಗೆಸಿಕೊಳ್ಳುವವರು ಕೂಡ ಮದುವೆ ಯಾವಾಗ ಅಂತ ಕೇಳುವ ಹಾಗೆ ಆಗಿದೆ. ಪ್ರಮಾಣ ಮಾಡಿದ್ದೀನಿ. ‘ಕೋಟಿ’ ಸಿನಿಮಾ ಚೆನ್ನಾಗಿ ಆದರೆ ಪಕ್ಕಾ ಮದುವೆ. ಚೆನ್ನಾಗಿ ಆಗಿಲ್ಲ ಅಂದರೂ ಬಿಡಲ್ಲ, ತಾರಮ್ಮನೇ ಮದುವೆ ಮಾಡಿಸಿಬಿಡುತ್ತಾರೆ. ಕೋಟಿ ಸಿನಿಮಾ ಹಿಟ್​ ಆಗುತ್ತದೆ. ಯಾಕೆಂದರೆ ಈ ಸಿನಿಮಾ ತುಂಬ ಚೆನ್ನಾಗಿದೆ’ ಎಂದು ಡಾಲಿ ಧನಂಜಯ (Daali Dhananjaya) ಹೇಳಿದ್ದಾರೆ. ಪರಮ್​ ನಿರ್ದೇಶನ ಮಾಡಿದ ಈ ಸಿನಿಮಾದಲ್ಲಿ ರಂಗಾಯಣ ರಘು, ತಾರಾ ಅನುರಾಧಾ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.