‘ಕೋಟಿ’ ಸಿನಿಮಾ ಟ್ರೇಲರ್​ ಮೂಲಕ ಕೌತುಕ ಹೆಚ್ಚಿಸಿದ ಡಾಲಿ, ಪರಮ್​

‘ಕೋಟಿ’ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ಸಿನಿಮಾದ ಟ್ರೇಲರ್​ನಲ್ಲಿ ಮೇಕಿಂಗ್​ ಗುಣಮಟ್ಟ ಕಂಡು ಸಿನಿಪ್ರಿಯರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಟ್ರೇಲರ್​ನಲ್ಲಿ ಡೈಲಾಗ್​ ಸಹ ಗಮನ ಸೆಳೆದಿದೆ. ಡಾಲಿ ಧನಂಜಯ್​, ರಂಗಾಯಣ ರಘು, ರಮೇಶ್​ ಇಂದಿರಾ, ಮೋಕ್ಷಾ ಕುಶಾಲ್​, ತಾರಾ ಅನುರಾಧಾ, ಪೃಥ್ವಿ ಶ್ಯಾಮನೂರ್​ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

‘ಕೋಟಿ’ ಸಿನಿಮಾ ಟ್ರೇಲರ್​ ಮೂಲಕ ಕೌತುಕ ಹೆಚ್ಚಿಸಿದ ಡಾಲಿ, ಪರಮ್​
ಡಾಲಿ ಧನಂಜಯ್​
Follow us
|

Updated on: Jun 05, 2024 | 9:48 PM

ನಟ ಡಾಲಿ ಧನಂಜಯ (Daali Dhananjaya) ಅವರು ‘ಕೋಟಿ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರ ಡಿಫರೆಂಟ್​ ಆಗಿರಲಿದೆ. ಪರಮ್​ (Param) ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಹಾಡು, ಟೀಸರ್​ ಮೂಲಕ ಜನರಲ್ಲಿ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟ್ರೇಲರ್​ ಇಂದು (ಜೂನ್​ 5) ಬಿಡುಗಡೆ ಆಗಿದೆ. ‘ಕೋಟಿ’ ಟ್ರೇಲರ್​ (Kotee Trailer) ನೋಡಿ ಸಿನಿಪ್ರಿಯರಲ್ಲಿ ಕೌತುಕ ಹೆಚ್ಚಿದೆ. ಕಥೆಯ ಬಗ್ಗೆ ಒಂದಷ್ಟು ಸುಳಿವು ಬಿಟ್ಟುಕೊಡಲಾಗಿದೆ. ಜೂನ್​ 14ರಂದು ‘ಕೋಟಿ’ ತೆರೆಕಾಣಲಿದ್ದು, ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ.

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ನಟ ರಮೇಶ್​ ಇಂದಿರಾ ಅವರು ವಿಲನ್​ ಪಾತ್ರ ಮಾಡಿ ಜನರ ಚಪ್ಪಾಳೆ ಗಿಟ್ಟಿಸಿದ್ದರು. ಈಗ ಅವರು ‘ಕೋಟಿ’ ಸಿನಿಮಾದಲ್ಲೂ ವಿಲನ್​ ಆಗಿದ್ದಾರೆ. ದೀನು ಸಾಹುಕಾರ್ ಎಂಬ ಪಾತ್ರವನ್ನು ಅವರು ಮಾಡಿದ್ದಾರೆ. ಇಡೀ ಸಿನಿಮಾದಲ್ಲಿ ಡಾಲಿ ಧನಂಜಯ್​ ವರ್ಸಸ್​ ರಮೇಶ್​ ಇಂದಿರಾ ಅವರ ಮುಖಾಮುಖಿ ದೃಶ್ಯಗಳು ಇರಲಿವೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ.

ಇದನ್ನೂ ಓದಿ: ಡಾಲಿ ಧನಂಜಯ ನಟನೆಯ ‘ಕೋಟಿ’ ಸಿನಿಮಾ ಬಿಡುಗಡೆ ಮಾಡಲಿರುವ ‘ಕೆಆರ್​ಜಿ’

‘ಕೋಟಿ’ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ. ಟ್ರೇಲರ್​ನಲ್ಲಿ ಮೇಕಿಂಗ್​ ಗುಣಮಟ್ಟವನ್ನು ಕಂಡು ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಟ್ರೇಲರ್​ನಲ್ಲಿ ಡೈಲಾಗ್​ ಕೂಡ ಗಮನ ಸೆಳೆದಿದೆ. ‘ವ್ಯವಹಾರ ಯಾರ ಜೊತೆ ಬೇಕಾದರೂ ಆಗಬಹುದು. ಆದರೆ ಎರಡು ಮುಖ ಇರುವವರ ಜೊತೆ ಮಾತ್ರ ಮಾಡಬಾರದು. ಯಾಕೆಂದರೆ, ಅವರಿಂದ ಮೋಸ ಆದಾಗ ಯಾವ ಮುಖಕ್ಕೆ ಬಾರಿಸೋದು ಅನ್ನೋ ಕನ್ಫ್ಯೂಷನ್​ನಲ್ಲೇ ಟೈಮ್ ವೇಸ್ಟ್​ ಆಗಿಬಿಡುತ್ತೆ’ ಎಂದು ಡಾಲಿ ಡೈಲಾಗ್​ ಹೊಡೆದಿದ್ದಾರೆ.

‘ಕೋಟಿ’ ಟ್ರೇಲರ್:

ಡಾಲಿ ಧನಂಜಯ್​, ರಮೇಶ್​ ಇಂದಿರಾ ಅವರ ಜೊತೆಗೆ ರಂಗಾಯಣ ರಘು, ತಾರಾ ಅನುರಾಧಾ, ಮೋಕ್ಷಾ ಕುಶಾಲ್​, ತನುಶಾ ವೆಂಕಟೇಶ್​, ಪೃಥ್ವಿ ಶ್ಯಾಮನೂರ್​, ಅಭಿಷೇಕ್​ ಶ್ರೀಕಾಂತ್​ ಮುಂತಾದವರು ‘ಕೋಟಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಜಿಯೋ ಸ್ಟುಡಿಯೋಸ್​ ಮೂಲಕ ಜ್ಯೋತಿ ದೇಶಪಾಂಡೆ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ವಾಸುಕಿ ವೈಭವ್​ ಅವರ ಸಂಗೀತ, ನೋಬಿನ್​ ಪೌಲ್​ ಅವರ ಹಿನ್ನೆಲೆ ಸಂಗೀತ ಈ ಸಿನಿಮಾಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ
ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ
ಮೈ ತುಂಬಿ ಹರಿಯುತ್ತಿದೆ ಧನುಷ್ ಕೋಟಿ; ಚುಂಚನಕಟ್ಟೆ ಫಾಲ್ಸ್ ವಿಡಿಯೋ ನೋಡಿ
ಮೈ ತುಂಬಿ ಹರಿಯುತ್ತಿದೆ ಧನುಷ್ ಕೋಟಿ; ಚುಂಚನಕಟ್ಟೆ ಫಾಲ್ಸ್ ವಿಡಿಯೋ ನೋಡಿ
10 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿ ದಾಖಲೆ ಬರೆದ ಮಾರ್ನಸ್ ಲಾಬುಶೇನ್
10 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿ ದಾಖಲೆ ಬರೆದ ಮಾರ್ನಸ್ ಲಾಬುಶೇನ್
Hardik Pandya: ಏನಾಗ್ತಿದೆ ಹಾರ್ದಿಕ್ ಪಾಂಡ್ಯಾ ಲೈಫ್​ನಲ್ಲಿ?
Hardik Pandya: ಏನಾಗ್ತಿದೆ ಹಾರ್ದಿಕ್ ಪಾಂಡ್ಯಾ ಲೈಫ್​ನಲ್ಲಿ?