Yash: ಚಿತ್ರರಂಗ ಬೇಡ ಎಂದು ಹೊರಟಿದ್ದ ಚಿಕ್ಕಣ್ಣ; ಇದನ್ನು ತಡೆದಿದ್ದು ಯಶ್

ಚಿಕ್ಕಣ್ಣ ಅವರು ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರು ನಾಟಕಗಳನ್ನು ಮಾಡಿದ್ದರು. ಚಿಕ್ಕಣ್ಣ ನಟನೆಯನ್ನು ಯಶ್ ನೋಡಿದ್ದರು. ‘ಕಿರಾತಕ’ ಮಾಡುವಾಗ ಯಶ್ ಅವರೇ ಕರೆದು ಚಿಕ್ಕಣ್ಣಗೆ ಆಫರ್ ಕೊಟ್ಟರು. ಚಿಕ್ಕಣ್ಣ ಒಪ್ಪಿ ನಟಿಸಿದರು. ಯಶ್ ಗೆಳೆಯನ ಪಾತ್ರ ಮಾಡಿದರು ಚಿಕ್ಕಣ್ಣ. 

Yash: ಚಿತ್ರರಂಗ ಬೇಡ ಎಂದು ಹೊರಟಿದ್ದ ಚಿಕ್ಕಣ್ಣ; ಇದನ್ನು ತಡೆದಿದ್ದು ಯಶ್
ಯಶ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jun 06, 2024 | 11:12 AM

ಯಶ್ (Yash) ಅವರ ಖ್ಯಾತಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಬ್ಬಿದೆ. ಅವರ ಅಭಿಮಾನಿ ಬಳಗ ತುಂಬಾನೇ ಹಿರಿದಾಗಿದೆ. ಅವರು ತಮ್ಮ ಸ್ವಂತ ಬಲದಿಂದ ಇಷ್ಟು ಎತ್ತರಕ್ಕೆ ಬಂದಿದ್ದಾರೆ. ಆರಂಭದಲ್ಲಿ ಅವರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಈಗ ಅವರನ್ನು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಯಶ್ ತಾವು ಬೆಳೆಯುವುದರ ಜೊತೆಗೆ ಒಂದಷ್ಟು ಜನರನ್ನು ಬೆಳೆಸಿದ್ದಾರೆ. ಅದರಲ್ಲಿ ಚಿಕ್ಕಣ್ಣ ಕೂಡ ಒಬ್ಬರು. ಈ ಬಗ್ಗೆ ಚಿಕ್ಕಣ್ಣ ಅವರು ಕಲಾಮಾಧ್ಯಮ ಯೂಟ್ಯೂಬ್ ಚಾಲೆನ್​ಗೆ ನೀಡಿದಸ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ಚಿಕ್ಕಣ್ಣ ಅವರು ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರು ನಾಟಕಗಳನ್ನು ಮಾಡಿದ್ದರು. ಚಿಕ್ಕಣ್ಣ ನಟನೆಯನ್ನು ಯಶ್ ನೋಡಿದ್ದರು. ‘ಕಿರಾತಕ’ ಮಾಡುವಾಗ ಯಶ್ ಅವರೇ ಕರೆದು ಚಿಕ್ಕಣ್ಣಗೆ ಆಫರ್ ಕೊಟ್ಟರು. ಚಿಕ್ಕಣ್ಣ ಒಪ್ಪಿ ನಟಿಸಿದರು. ಯಶ್ ಗೆಳೆಯನ ಪಾತ್ರ ಮಾಡಿದರು ಚಿಕ್ಕಣ್ಣ.

ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತು. ಆ ಬಳಿಕ ಅವರಿಗೆ ಸಿನಿಮಾ ಬರಬಹುದು ಎಂದುಕೊಂಡಿದ್ದರು. ಆದರೆ, ಆ ರೀತಿ ಆಗಲಿಲ್ಲ. ಈ ಮಧ್ಯೆ ಉದಯ ಕಾಮಿಡಿಯ ಕೆಲವು ಶೋಗಳನ್ನು ನಡೆಸಿಕೊಡುತ್ತಿದ್ದರು ಚಿಕ್ಕಣ್ಣ. ಸಿನಿಮಾ ಬೇಡವೇ ಬೇಡ ಎಂದು ನಿರ್ಧಾರಕ್ಕೆ ಬಂದ ಅವರು ಶೋನಲ್ಲಿ ಮುಂದುವರಿಯಲು ನಿರ್ಧರಿಸಿದರು.

ಆ ಬಳಿಕ ‘ರಾಜಾಹುಲಿ’ ಸಿನಿಮಾದ ಆಫರ್ ಬಂತು. ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಚಿಕ್ಕಣ್ಣ ನಟನೆ ನಿರ್ದೇಶಕರಿಗೆ ಇಷ್ಟ ಆಗಿರಲಿಲ್ಲ. ಆಗ ಅವರು ಈ ಚಿತ್ರದಿಂದ ಹೊರ ಹೋಗಲು ನಿರ್ಧರಿಸಿದರು. ಆದರೆ, ಯಶ್ ಅವರು ಚಿಕ್ಕಣ್ಣ ಅವರ ಮನ ಒಲಿಸಿದರು. ಆ ಬಳಿಕ ಅವರ ಶಾಟ್ ಓಕೆ ಆಯಿತು. ಈ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಸರಿಯಾಗಿ ಶೋಗೆ ಹೋಗೋಕೆ ಆಗಿಲ್ಲ. ಈ ಸಿನಿಮಾ ಗೆಲುವು ಕಾಣುತ್ತಿದ್ದಂತೆ ಅವರನ್ನು ಉದಯ ಕಾಮಿಡಿ ಶೋನಿಂದ ತೆಗೆದರು. ಆ ಬಳಿಕ ಚಿಕ್ಕಣ್ಣ ಚಿಂತೆಗೆ ಒಳಗಾದರು. ಆದರೆ, ಆ ಬಳಿಕ ಬಂದ ಆಫರ್​ಗಳು ಚಿಕ್ಕಣ್ಣ ಜೀವನವನ್ನೇ ಬದಲಾಯಿಸಿತು.

ಇದನ್ನೂ ಓದಿ: ‘ಫಾರೆಸ್ಟ್’ ಹೊಕ್ಕ ಚಿಕ್ಕಣ್ಣ, ಅನೀಶ್, ಗುರುನಂದನ್, ರಂಗಾಯಣ ರಘು; ‘ಬ್ರಹ್ಮಚಾರಿ’ಯ ಹೊಸ ಸಿನಿಮಾ

ಶರಣ್ ಜೊತೆ ‘ಅಧ್ಯಕ್ಷ’ ಸಿನಿಮಾ ಮಾಡಿದರು. ಈ ಚಿತ್ರ ಚಿಕ್ಕಣ್ಣ ವೃತ್ತಿ ಜೀವನವನ್ನು ಬದಲಿಸಿತು. ಈಗ ಚಿಕ್ಕಣ್ಣ ಹೀರೋ ಆಗಿದ್ದಾರೆ. ‘ಉಪಾಧ್ಯಕ್ಷ’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಈಗ ಅವರು ಹೀರೋ ಆಗಿ ನಟಿಸುತ್ತಿರುವ ಎರಡನೇ ಸಿನಿಮಾ ಸೆಟ್ಟೇರುವ ಹಂತದಲ್ಲಿ ಇದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್