ರಿವೀಲ್ ಆಯ್ತು ‘ಪಂಚಾಯತ್ 3’ ಲುಕ್; ಜಿತೇಂದ್ರ ಕುಮಾರ್ ಸಂಭಾವನೆ ಎಷ್ಟು?

ಇತ್ತೀಚೆಗೆ ಅಮೇಜಾನ್ ಪ್ರೈಮ್ ವಿಡಿಯೋ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಿತ್ತು. ಇದರಲ್ಲಿ ‘ಪಂಚಾಯತ್ 3’ನ ಮೊದಲ ನೋಟ ಅನಾವರಣ ಮಾಡಲಾಗಿದೆ. ಈ ವರ್ಷವೇ ಹೊಸ ಸೀಸನ್ ಆರಂಭ ಆಗೋ ನಿರೀಕ್ಷೆ ಇದೆ. ಜಿತೇಂದ್ರ ಕುಮಾರ್ ಜೊತೆ ನೀನಾ ಗುಪ್ತಾ, ರಘುವೀರ್ ಯಾದವ್ ಮೊದಲಾದವರು ನಟಸಿದ್ದಾರೆ.

ರಿವೀಲ್ ಆಯ್ತು ‘ಪಂಚಾಯತ್ 3’ ಲುಕ್; ಜಿತೇಂದ್ರ ಕುಮಾರ್ ಸಂಭಾವನೆ ಎಷ್ಟು?
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 20, 2024 | 9:27 AM

‘ಪಂಚಾಯತ್ ಸೀಸನ್ 3’ (Panchayat Season 3) ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈಗಾಗಲೇ ಪ್ರಸಾರ ಕಂಡಿರುವ ಎರಡು ಸೀಸನ್​ಗಳು ಗಮನ ಸೆಳೆದಿವೆ. ಜಿತೇಂದ್ರ ಕುಮಾರ್ ಅವರು ಪಂಚಾಯತ್​ನ ಕಾರ್ಯದರ್ಶಿ ಆಗಿ ಗಮನ ಸೆಳೆದಿದ್ದಾರೆ. ಹಳ್ಳಿ ಜೀವನ, ಅಲ್ಲಿನ ಸೊಗಡು ವೀಕ್ಷಕರಿಗೆ ಸಖತ್ ಇಷ್ಟ ಆಗಿದೆ. ಮೂರನೇ ಸೀಸನ್ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಜಿತೇಂದ್ರ ಅವರ ಸಂಭಾವನೆ ಹಾಗೂ ಇದಕ್ಕೆ ಅವರ ನೆಟ್​​ವರ್ತ್​ ಬಗ್ಗೆ ಇಲ್ಲಿದೆ ಮಾಹಿತಿ.

ಇತ್ತೀಚೆಗೆ ಅಮೇಜಾನ್ ಪ್ರೈಮ್ ವಿಡಿಯೋ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಿತ್ತು. ಇದರಲ್ಲಿ ‘ಪಂಚಾಯತ್ 3’ನ ಮೊದಲ ನೋಟ ಅನಾವರಣ ಮಾಡಲಾಗಿದೆ. ಈ ವರ್ಷವೇ ಹೊಸ ಸೀಸನ್ ಆರಂಭ ಆಗೋ ನಿರೀಕ್ಷೆ ಇದೆ. ಜಿತೇಂದ್ರ ಕುಮಾರ್ ಜೊತೆ ನೀನಾ ಗುಪ್ತಾ, ರಘುವೀರ್ ಯಾದವ್ ಮೊದಲಾದವರು ನಟಸಿದ್ದಾರೆ.

ಜಿತೇಂದ್ರ ಕುಮಾರ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 10 ವರ್ಷಗಳು ಕಳೆದಿವೆ. ‘ಶುರಾವತ್​ ಕಾ ಇಂಟರ್​ವಲ್’ ಅವರ ನಟನೆಯ ಮೊದಲ ಸಿನಿಮಾ. ಇದಲ್ಲದೆ ಅವರು ವೆಬ್ ಸೀರಿಸ್ ಮೂಲಕವೂ ಗಮನ ಸೆಳೆದಿದ್ದಾರೆ. ‘ಪಂಚಾಯತ್’ ಮೂಲಕ ಅವರ ಅಭಿಮಾನಿ ಬಳಗ ಹಿರಿದಾಯಿತು.

‘ಪಂಚಾಯತ್’ ಮೊದಲ ಸೀಸನ್​ನಲ್ಲಿ ಅವರು ಪ್ರತಿ ದಿನದ ಕಾಲ್​ಶೀಟ್​ಗೆ 20 ಸಾವಿರ ರೂಪಾಯಿ ಪಡೆದಿದ್ದಾರೆ. ಎರಡನೇ ಸೀಸನ್​​ಗೆ ಈ ಮೊತ್ತವನ್ನು ಅವರು 50 ಸಾವಿರ ರೂಪಾಯಿಗೆ ಏರಿಸಿಕೊಂಡರು. ಈಗ ಮೂರನೇ ಎಪಿಸೋಡ್ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಇದಕ್ಕಾಗಿ ಅವರು ಸಂಭಾವನೆ ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

ಜಿತೇಂದ್ರ ಅವರ ನೆಟ್​ವರ್ತ್​ 7 ಕೋಟಿ ರೂಪಾಯಿಗೂ ಅಧಿಕವಾಗಿದೆ. ವಿಶೇಷ ಎಂದರೆ ಅವರು ಐಐಟಿ ಖಾರಗ್​ಪುರ್​ನಲ್ಲಿ ಸಿವಿಲ್ ಇಂಜಿನಿಯರ್ ಓದುವಾಗಲೇ ನಟನೆ ಶುರು ಮಾಡಿದರು. ಈಗ ಅವರು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಜಿತೇಂದ್ರ ಕುಮಾರ್ ಅವರು ರಂಗಭೂಮಿ ಹಿನ್ನೆಲೆ ಹೊಂದಿದ್ದಾರೆ. ಅವರು ಹಲವು ನಾಟಕಗಳನ್ನು ಮಾಡಿದ್ದಾರೆ. ಐಐಟಿಯ ಹಿಂದಿ ಟೆಕ್ನಾಲಜಿ ಡ್ರಾಮೆಟಿಕ್ಸ್ ಸೊಸೈಟಿಯಲ್ಲಿ ಅವರು ನಾಟಕಗಳಲ್ಲಿ ನಟಿಸುತ್ತಿದ್ದರು.

ಇದನ್ನೂ ಓದಿ: ವೆಬ್ ಸೀರಿಸ್ ಆರಂಭಕ್ಕೂ ಮೊದಲೇ ಬಂತು 120 ಕೋಟಿ ರೂಪಾಯಿ ಡೀಲ್; ಆರ್ಯನ್ ಖಾನ್ ನಿರ್ಧಾರವೇ ಬೇರೆ

ಜಿತೇಂದ್ರ ಕುಮಾರ್ ಅವರು ಟಿವಿಗಿಂತ ಹೆಚ್ಚು ವೆಬ್ ಸೀರಿಸ್​ಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅವರು ಎಲ್ಲಾ ಕಲಾವಿದರಂತೆ ಹಣಕ್ಕಾಗಿ ಸಿನಿಮಾ ಮಾಡುವುದಿಲ್ಲ. ಅಳೆದು ತೂಗಿ ಅವರು ಚಿತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ಅವರ ನಟನೆಯ ‘ಕೋಟಾ ಫ್ಯಾಕ್ಟರಿ..’ ಸೀರಿಸ್ ಕೂಡ ಗಮನ ಸೆಳೆದಿದೆ.

ಪಂಚಾಯತ್ ಕಥೆ

ಅಭಿಷೇಕ್ ತ್ರಿಪಾಠಿ (ಜಿತೇಂದ್ರ ಕುಮಾರ್) ಇಂಜಿನಿಯರಿಂಗ್ ಪದವೀಧರ. ಆದರೆ, ಆತನಿಗೆ ಜಾಬ್ ಸಿಗೋದಿಲ್ಲ. ಈ ಕಾರಣಕ್ಕೆ ಪಂಚಾಯತ್ ಫುಲೆರಾ ಹೆಸರಿನ ಗ್ರಾಮಕ್ಕೆ ಪಂಚಾಯತ್ ಕಾರ್ಯದರ್ಶಿ ಆಗಿ ಸೇರಿಕೊಳ್ಳುತ್ತಾನೆ. ಅಲ್ಲಿಯೇ ಉನ್ನತ ಶಿಕ್ಷಣಕ್ಕೆ ತಯಾರಿ ನಡೆಸುತ್ತಾ ಪಂಚಾಯ್ತಿ ಕೆಲಸವನ್ನು ನಿರ್ವಹಿಸಿಕೊಂಡು ಹೋಗುತ್ತಾ ಇರುತ್ತಾರೆ. ಆದರೆ, ಅಲ್ಲಿನ ಹಳ್ಳಿಯ ಪರಿಸ್ಥಿತಿ ನೋಡಿ ಆತನಿಗೆ ಅಲ್ಲಿರಲು ಸಾಧ್ಯವೇ ಇಲ್ಲ ಎಂದೆನೆಸುತ್ತದೆ. ದಿನ ಕಳೆದಂತೆ ಹಳ್ಳಿಯ ಮೇಲೆ ಲವ್ ಆಗುತ್ತದೆ. ಹಳ್ಳಿಯ ಪಂಚಾಯ್ತಿ ಅಧ್ಯಕ್ಷೆಯ ಮಗಳ ಜೊತೆಗೂ ಪ್ರೀತಿ ಮೂಡುತ್ತದೆ. ಮೂರನೇ ಸೀಸನ್ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ