ಕಾಶಿಯಲ್ಲಿರುವ ಈ ಶಿವನ ದೇವಾಲಯವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಹಾಗೇ, ವಾರಣಾಸಿಯಲ್ಲಿ ಅತಿ ಹೆಚ್ಚು ಜನರು ಭೇಟಿ ನೀಡುವ ದೇವಾಲಯವಾಗಿದೆ. ಕಾಶಿ ವಿಶ್ವನಾಥ ದೇವಾಲಯವು ಮೊಘಲರ ಆಳ್ವಿಕೆಯಲ್ಲಿ ಹಲವಾರು ಬಾರಿ ದಾಳಿಗೊಳಗಾಗಿದೆ. ಅಕ್ಬರ್ ಚಕ್ರವರ್ತಿಯು ರಾಜಾ ಮಾನ್‌ಸಿಂಗ್‌ಗೆ ಈ ದೇವಾಲಯ ಕಟ್ಟಲು ಅನುಮತಿ ನೀಡಿದ್ದ. ಆದರೆ, ಆತನ ಮರಿ ಮಗ ಔರಂಗಜೇಬ್ ತನ್ನ ಆಡಳಿತದ ಅವಧಿಯಲ್ಲಿ ಈ ದೇವಾಲಯವನ್ನು ಉರುಳಿಸಲು ಆದೇಶ ನೀಡಿದ್ದ. ಹಾಗೇ, ಈ ಸ್ಥಳದಲ್ಲಿ ಗ್ಯಾನವಾಪಿ ಮಸೀದಿಯನ್ನೂ ನಿರ್ಮಿಸಿದ.