ದೈನಂದಿನ ಜೀವನದಲ್ಲಿ ಈ ತಪ್ಪುಗಳನ್ನು ಮಾಡದಿರಿ, ಇದು ಉದಾತ್ತ ಸಲಹೆಯಷ್ಟೆ!
Image Credit source: canstockphoto.com
ಜಾತ್ರೆ ಮಹೋತ್ಸವದಲ್ಲಿ ಖರೀದಿಸಿದ ಅಥವಾ ಉಡುಗೊರೆ ಕೊಟ್ಟ ದೇವತಾ ಮೂರ್ತಿಗಳನ್ನು ಪೂಜಾ ಮಂದಿರದಲ್ಲಿ ಇಡದಿರಿ. ಅದಷ್ಟು ಲೋಹದ ಮೂರ್ತಿಗಳನ್ನು ಮನೆಯಲ್ಲಿ ಹೊಸದಾಗಿ ಪೂಜೆ ಮಾಡದಿರಿ (mistake). ಅನಿವಾರ್ಯವೇ ಆದರೆ ಸೂಕ್ತವಾದ ಮಾಹಿತಿ ಪಡೆದು (peace) ಅದರಂತೆ ನಡೆದುಕೊಳ್ಳಿ (Spiritual).
- ಸಂಬಂಧಪಡದವರ ಉತ್ತರ ಕ್ರಿಯೆ ಅಥವಾ ಸಮಾರಾಧನೆಯ ಊಟವನ್ನು ಅದಷ್ಟು ತಪ್ಪಿಸಿ. ಇದಕ್ಕೆ ಸೂತಕದ ಅನ್ನ… ಎನ್ನುತ್ತಾರೆ. ಇದು ನಮ್ಮಲ್ಲಿ ಋಣಾತ್ಮಕವಾದ ಶಕ್ತಿ ಸಂಚಯ ಮಾಡುವಲ್ಲಿ ಪಾತ್ರ ವಹಿಸುತ್ತದೆ.
- ಹೇರ್ ಕಟ್ಟಿಂಗ್ ಮಾಡಿಸಿಕೊಳ್ಳುವಾಗ… ಒಂದೇ ಮನೆಯವರು ಒಂದೇ ದಿನ ಮಾಡದಿರಿ. ಅಂದರೆ ತಂದೆ, ಮಗ ಅಥವಾ ಅಣ್ಣ-ತಮ್ಮ ಒಂದೇ ದಿನ ತಲೆಗೂದಲ ಕತ್ತರಿಸದಿರಿ… ಸಂಪ್ರದಾಯದ ಪ್ರಕಾರ ಇದು ನಿಷಿದ್ಧ.
- ದೇವರ ಪ್ರಸಾದಗಳನ್ನು ಪ್ರಾಣಿ ಪಕ್ಷಿಗಳಿಗೆ ಹಾಕದಿರಿ.
- ದೇವಸ್ಥಾನಕ್ಕೆ ಕೊಡುವ ಹೂವು, ಫಲವಸ್ತುಗಳು ತಮ್ಮದೆ ತೋಟದಲ್ಲಿ ಬೆಳೆದ ವಸ್ತುಗಳನ್ನೇ ಕೊಡಿ… ಸಾಧ್ಯವಾದರೆ ಕೈಯಾರೆ ಹೂವನ್ನು ಕಟ್ಟಿ ಶ್ರೀ ದೇವರಿಗೆ ಸಮರ್ಪಿಸಿ.
- ಮನೆಯ ದ್ವಾರದಲ್ಲಿ ಕಟ್ಟಿದ ತಳಿರು ತೋರಣಗಳನ್ನು ಒಣಗುವ ಮುಂಚೆಯೇ ತೆಗೆಯಿರಿ.
- ಜಾತ್ರೆ ಮಹೋತ್ಸವದಲ್ಲಿ ಖರೀದಿಸಿದ ಅಥವಾ ಉಡುಗೊರೆ ಕೊಟ್ಟ ದೇವತಾ ಮೂರ್ತಿಗಳನ್ನು ಪೂಜಾ ಮಂದಿರದಲ್ಲಿ ಇಡದಿರಿ. ಅದಷ್ಟು ಲೋಹದ ಮೂರ್ತಿಗಳನ್ನು ಮನೆಯಲ್ಲಿ ಹೊಸದಾಗಿ ಪೂಜೆ ಮಾಡದಿರಿ. ಅನಿವಾರ್ಯವೇ ಆದರೆ ಸೂಕ್ತವಾದ ಮಾಹಿತಿ ಪಡೆದು ಅದರಂತೆ ನಡೆದುಕೊಳ್ಳಿ.
- ರುದ್ರಾಕ್ಷಿ ತುಳಸಿಮಾಲೆ ಧರಿಸಿ ಮದ್ಯ, ಮಾಂಸ ಸೇವಿಸದಿರಿ.
- ಸೂರ್ಯ ಮುಳುಗುವ ಹೊತ್ತಿನಲ್ಲಿ ಮನೆಯಲ್ಲಿ ದೀಪ ಹಚ್ಚಿ… ಪ್ರತಿಬಾರಿ ದೀಪ ಹಚ್ಚುವಾಗ ಹಳೆಯ ಬತ್ತಿ ಹಾಗೂ ದೀಪ ಸಾಮಾಗ್ರಿಯನ್ನು ಶುದ್ಧವಾದ ನೀರಿನಲ್ಲಿ ಶುಚಿಗೊಳಿಸಿ. ಶುದ್ಧವಾದ ಎಳ್ಳೆಣ್ಣೆ ಅಥವಾ ತುಪ್ಪವನ್ನು ಬಳಸಿ.
- ಹಣೆಯಲ್ಲಿ ತಿಲಕ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಿ. ಹಣೆಯಲ್ಲಿ ತಿಲಕವಿಲ್ಲದೆ ಯಾವುದೇ ಪೂಜಾ ಕಾರ್ಯಗಳನ್ನು ಮಾಡದಿರಿ. ಹಣೆಯಲ್ಲಿ ತಿಲಕವಿಲ್ಲದ, ಸೊಂಟಕ್ಕೆ ಬಟ್ಟೆ ಕಟ್ಟಿದ ಅಥವಾ ಬಿಳಿ ಬಟ್ಟೆಯನ್ನು ತಲೆಗೆ ಮುಸುಕು ಹಾಕಿದವರನ್ನು ಮಾತನಾಡಿಸಬಾರದು ಎಂಬ ಮಾತಿದೆ…. ಅಂದರೆ ಸೂತಕದಲ್ಲಿ ಇದ್ದಾಗ ಮಾತ್ರ ಈ ರೀತಿಯ ವ್ಯವಸ್ಥೆ ಇರುತ್ತದೆ.
- ಕೊನೆಯ ಮಾತು: ಜೀವನದುದ್ದಕ್ಕೂ ಕೇವಲ ಪಾಪ ಮತ್ತು ನರಕದ ಜ್ವಾಲೆ ಇವುಗಳ ಬಗ್ಗೆಯೇ ಮಾತನಾಡುವುದೇಕೆ? ಭಗವಂತನ ನಾಮವನ್ನು ಜಪಿಸಿ. ಒಮ್ಮೆ ಹೇಳಿಬಿಡಿ ಓ ಭಗವಂತ, ನಾನು ಮಾಡಬಾರದ್ದನ್ನೆಲ್ಲ ಮಾಡಿದ್ದೇನೆ ಮತ್ತು ಮಾಡಬೇಕಾದ್ದನ್ನೆಲ್ಲ ಮಾಡದೆ ಬಿಟ್ಟಿದ್ದೇನೆ. ಹೇ ದೇವಾ, ನನ್ನನ್ನು ಕ್ಷಮಿಸು… ಹೀಗೆ ಒಮ್ಮೆಯಾದರೂ ಹೇಳಿ, ಹೀಗೆ ಹೇಳುತ್ತಾ ಅವನಲ್ಲಿ ಶ್ರದ್ಧೆ ಇಡಿ. ಎಲ್ಲ ಪಾಪಗಳಿಂದ ನೀವು ಮುಕ್ತರಾಗುತ್ತಿರಿ. (ಬರಹ: ಎನ್. ಜಗದೀಶ್)