ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ । ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ॥
ಇದು ಬಹು ಪ್ರಸಿದ್ಧವಾದ ಶ್ಲೋಕ. ಶ್ರೀ ರಾಮನ ಹತ್ತಾರು ಹೆಸರುಗಳು (Naming) ಇದರಲ್ಲಿ ನಿಗೂಢವಾಗಿ ಉಲ್ಲೇಖವಾಗಿವೆ. ಆದರೆ ಆ ಪದ ಪ್ರಯೋಗಗಳ ಹಿಂದಿರುವ ಗೂಢಾರ್ಥ ಮನಸ್ಸಿಗೆ ಮುದವನ್ನುಂಟು ಮಾಡುವಂತಹುದು. ಅದನ್ನು ಅರಿಯುವ ಪ್ರಯತ್ನ ಇಲ್ಲಿ ನಡೆದಿದೆ. ಧಾರ್ಮಿಕ ನಂಬಿಕೆಯ ಪ್ರಕಾರ ದೇವಾನುದೇವತೆಗಳು ಅವತಾರ ತಾಳಿದ ದಿನದಂದು ಭೂಮಿಯ ಮೇಲೆ ಅವರ ದೈವೀ ತತ್ತ್ವ, ಮಹ್ವತ್ವಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀ ರಾಮ ನವಮಿಯಂದು ಶ್ರೀ ರಾಮ ತತ್ತ್ವವು ಎಂದಿಗಿಂತಲೂ ಸಾವಿರಪಟ್ಟು ಹೆಚ್ಚು ಭೂಮಿಯಲ್ಲಿ ಕಾರ್ಯನಿರತವಾಗಿರುತ್ತದೆ. ಹೀಗಾಗಿ ಈ ದಿನ ರಾಮ ನಾಮ ಜಪ, ಶ್ರೀ ರಾಮನ ಉಪಾಸನೆಗಳನ್ನು ಮಾಡುವುದರಿಂದ ಬಹಳ ಪ್ರಯೋಜನ ಪಡೆಯಬಹುದೆಂದು ಹೇಳಲಾಗುತ್ತದೆ. ಶ್ರೀರಾಮ ಜನಿಸಿದ ನವಮಿ ದಿನ ಶ್ರೀ ರಾಮ ನವಮಿ ಹಬ್ಬ ಆಚರಿಸಲಾಗುತ್ತದೆ. ಈ ಬಾರಿ ನಾಳೆ ಭಾನುವಾರ ಏಪ್ರಿಲ್ 10ರಂದು ಆಚರಿಸಲಾಗುವುದು. ಈ ದಿನ ಪುನರ್ವಸು ನಕ್ಷತ್ರದಲ್ಲಿ, ಕಟಕ ರಾಶಿಯಲ್ಲಿ, ಮಧ್ಯಾಹ್ನದ ವೇಳೆಯಲ್ಲಿ ಕರ್ಕಾಟಕ ಲಗ್ನದಲ್ಲಿ (Muhurat) ಅಯೋಧ್ಯೆಯಲ್ಲಿ ರಾಮನು ಜನಿಸಿದನೆಂಬ ನಂಬಿಕೆ ಇದೆ. ಹಿಂದೂ ಧರ್ಮದಲ್ಲಿ ಶ್ರೀ ರಾಮ ನವಮಿ ಎಂದರೆ ಹಬ್ಬದ ಸಂಭ್ರಮ (Spiritual). ಚೈತ್ರ ಮಾಸದ ಒಂಭತ್ತನೇ ದಿನ, ಅಂದರೆ ವರ್ಷದ ಮೊದಲ ತಿಂಗಳಿನಲ್ಲಿ ಬರುವ ಹಬ್ಬ (Ram Navami 2022).