Ram Navami 2022 Quiz: ಶ್ರೀ ರಾಮನವಮಿ ಪ್ರಯುಕ್ತ ಒಂದು ಚಿಕ್ಕ- ಚೊಕ್ಕ ಕ್ವಿಜ್ ಇಲ್ಲಿದೆ

ರಾಮ ನವಮಿ ಸಂದರ್ಭದಲ್ಲಿ ಒಂದು ಚುಟುಕು ಕ್ವಿಜ್ ಇಲ್ಲಿದೆ. ಉದಾಹರಣೆಗೆ ರಾವಣನ ಸೋದರ ವಿಭೀಷಣನು ಬ್ರಹ್ಮದೇವನಲ್ಲಿ ಕೇಳಿದ ವರವೇನು? ಅದರ ಜೊತೆಗೆ ಇನ್ನೂ ಒಂದಿರಲಿ ಎಂದು, ಬ್ರಹ್ಮದೇವರು ವಿಭೀಷಣನಿಗೆ ಕೊಟ್ಟ ವರವೇನು? ಹನುಮ ಅಶೋಕ ವನವನ್ನು ಧ್ವಂಸ ಮಾಡಿದ್ದು ಏಕೆ? ಸೀತಾ ಸ್ವಯಂವರದಲ್ಲಿ ರಾಮನು ಮುರಿದಿದ್ದು ಯಾವ ಧನಸ್ಸು? ಚಿರಂಜೀವಿಗಳು ಎಷ್ಟು ಮಂದಿ? ದಶರಥನ ಅಂತ್ಯ ಪುತ್ರ ವಿರಹದಿಂದ ಆಗುತ್ತದೆ. ಇಂತಹ ಮಾಹಿತಿಗಳ ಆಧಾರದ ಮೇಲೆ ಕ್ವಿಜ್ ಪ್ರಶ್ನಾವಳಿ ಇಲ್ಲಿದೆ:

Ram Navami 2022 Quiz: ಶ್ರೀ ರಾಮನವಮಿ ಪ್ರಯುಕ್ತ ಒಂದು ಚಿಕ್ಕ- ಚೊಕ್ಕ ಕ್ವಿಜ್ ಇಲ್ಲಿದೆ
Ram Navami 2022 Quiz: ಶ್ರೀ ರಾಮ ನವಮಿ ಪ್ರಯುಕ್ತ ಒಂದು ಚಿಕ್ಕ-ಚೊಕ್ಕ ಕ್ವಿಜ್ ಇಲ್ಲಿದೆ
Follow us
| Updated By: ಸಾಧು ಶ್ರೀನಾಥ್​

Updated on: Apr 10, 2022 | 6:06 AM

ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಕುರಿತು ರಾಮ ನವಮಿ ಸಂದರ್ಭದಲ್ಲಿ ಒಂದು ಚುಟುಕು ಕ್ವಿಜ್ ಇಲ್ಲಿದೆ. ಉದಾಹರಣೆಗೆ ರಾವಣನ ಸೋದರ ವಿಭೀಷಣನು ಬ್ರಹ್ಮದೇವನಲ್ಲಿ ಕೇಳಿದ ವರವೇನು? ಅದರ ಜೊತೆಗೆ ಇನ್ನೂ ಒಂದಿರಲಿ ಎಂದು, ಬ್ರಹ್ಮದೇವರು ವಿಭೀಷಣನಿಗೆ ಕೊಟ್ಟ ವರವೇನು? ಹನುಮ ಅಶೋಕ ವನವನ್ನು ಧ್ವಂಸ ಮಾಡಿದ್ದು ಏಕೆ? ಸೀತಾ ಸ್ವಯಂವರದಲ್ಲಿ ರಾಮನು ಮುರಿದಿದ್ದು ಯಾವ ಧನಸ್ಸು? ಚಿರಂಜೀವಿಗಳು ಎಷ್ಟು ಮಂದಿ? ದಶರಥನ ಅಂತ್ಯ ಪುತ್ರ ವಿರಹದಿಂದ ಆಗುತ್ತದೆ. ಇಂತಹ ಮಾಹಿತಿಗಳ ಆಧಾರದ ಮೇಲೆ ಕ್ವಿಜ್ ಪ್ರಶ್ನಾವಳಿ ಇಲ್ಲಿದೆ. ಈ ಪ್ರಶ್ನೋತ್ತರದ ಆಶಯವೇನೆಂದರೆ ಇಲ್ಲಿರುವ ಕ್ವಿಜ್​ ಪ್ರಶ್ನೆಗಳಿಗೆ ಉತ್ತರಿಸುತ್ತಾ ಉತ್ತರಿಸುತ್ತಾ ರಾಮನ ಬಗ್ಗೆ, ರಾಮಾಯಣದ ಬಗ್ಗೆ ಆಸಕ್ತಿ ಮೂಡಿ, ರಾಮಾಯಣವನ್ನು ಪೂರ್ತಿ ಅರಿಯಬೇಕು ಎಂಬ ಸದಿಚ್ಛೆ ನಿಮ್ಮಲ್ಲಿ ಮೊಳಕೆಯೊಡೆಯಲಿ ಎಂಬುದಾಗಿದೆ. (Ram Navami 2022 Quiz):

ಅಂದಹಾಗೆ ಶ್ರೀರಾಮ ಜನಿಸಿದ ನವಮಿ ದಿನ ಶ್ರೀ ರಾಮ ನವಮಿ ಹಬ್ಬ ಆಚರಿಸಲಾಗುತ್ತದೆ. ಈ ಬಾರಿ ಭಾನುವಾರವಾದ ಇಂದು ಏಪ್ರಿಲ್ 10 ಆಚರಿಸಲಾಗುವುದು. ಈ ದಿನ ಪುನರ್ವಸು ನಕ್ಷತ್ರದಲ್ಲಿ, ಕಟಕ ರಾಶಿಯಲ್ಲಿ, ಮಧ್ಯಾಹ್ನದ ವೇಳೆಯಲ್ಲಿ ಕರ್ಕಾಟಕ ಲಗ್ನದಲ್ಲಿ (Muhurat) ಅಯೋಧ್ಯೆಯಲ್ಲಿ ರಾಮನು ಜನಿಸಿದನೆಂಬ ನಂಬಿಕೆ ಇದೆ. ಹಿಂದೂ ಧರ್ಮದಲ್ಲಿ ಶ್ರೀ ರಾಮ ನವಮಿ ಎಂದರೆ ಹಬ್ಬದ ಸಂಭ್ರಮ (Spiritual). ಚೈತ್ರ ಮಾಸದ ಒಂಬತ್ತನೇ ದಿನ, ಅಂದರೆ ವರ್ಷದ ಮೊದಲ ತಿಂಗಳಿನಲ್ಲಿ ಬರುವ ಹಬ್ಬ (Ram Navami 2022).

  1. ರಾಮಾಯಣ ರಚಿಸಿದವರು ಯಾರು? ಉತ್ತರ: ವಾಲ್ಮೀಕಿ ಮಹರ್ಷಿಗಳು
  2. ವಾಲ್ಮಿಕಿ ಯಾವ ವಂಶಜರು? ಉತ್ತರ: ಭೃಗುವಂಶ
  3. ವಾಲ್ಮಿಕಿಯ ತಂದೆಯ ಹೆಸರೇನು? ಉತ್ತರ: ಪುಚೇತನ ಮಹರ್ಷಿಗಳು
  4. ಸಂಸ್ಕೃದಲ್ಲಿ ವಲ್ಮಿಕಿ ಎಂದರೇನು? ಉತ್ತರ: ಹುತ್ತ
  5. ರಾಮಾಯಣದ ಒಟ್ಟು ಎಷ್ಟು ಕಾಂಡಗಳು? ಉತ್ತರ: 08
  6. ರಾಮಾಯಣದ ಕಾಂಡಗಳು ಯಾವುವು? ಉತ್ತರ: ಬಾಲಾಕಾಂಡ, ಆಯೋಧ್ಯಕಾಂಡ, ಅರಣ್ಯಕಾಂಡ,ಕಿಷ್ಕಿಂಧಾಕಾಂಡ, ಸುಂದರಕಾಂಡ, ಲಂಕಾಕಾಂಡ, ಉತ್ತರಕಾಂಡ, ಲವ-ಕುಶ ಕಾಂಡ
  7. ಕನ್ನಡದಲ್ಲಿ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ರಚಿಸಿದವರು ಯಾರು? ಉತ್ತರ : ರಾಷ್ಟ್ರಕವಿ ಕುವೆಂಪು
  8. ತಮಿಳಿನಲ್ಲಿ ರಾಮಾಯಣವನ್ನು ರಚಿಸಿದವರು ಯಾರು ? ಉತ್ತರ : ಕಂಬನ್
  9. ಲಂಕಾಕಂದಕ್ಕಿರುವ ಮತ್ತೊಂದು ಹೆಸರೇನು? ಉತ್ತರ : ಯುದ್ದಕಾಂಡ
  10. ರಾಮಾಯಣ ಯಾವ ಯುಗಕ್ಕೆ ಸೇರಿದ್ದು? ಉತ್ತರ : ತ್ರೇತಾಯುಗ
  11. ರಾಮನ ವಂಶ ಯಾವುದು ? ಉತ್ತರ : ಸೂರ್ಯವಂಶ
  12. ಸೂರ್ಯವಂಶದ ಮೊದಲ ರಾಜನ ಹೆಸರು ? ಉತ್ತರ : ಇಕ್ಷ್ವಾಕು
  13. ಇಕ್ಷ್ವಾಕುವಿನ ತಂದೆ ಯಾರು ? ಉತ್ತರ : ಸೂರ್ಯದೇವ
  14. ಸೂರ್ಯವಂಶಕ್ಕಿರುವ ಮತ್ತೊಂದು ಹೆಸರೇನು ? ಉತ್ತರ : ರಘುವಂಶ
  15. ಸೂರ್ಯವಂಶದ ಮತ್ತೊಬ್ಬ ಕಿರ್ತಿವಂತ ರಾಜ ಯಾರು ? ಉತ್ತರ : ಸತ್ಯ ಹರಿಶ್ಚಂದ್ರ
  16. ದಶರಥನ ಮೂವರು ಪಟ್ಟ ಮಹಿಷಿಯರು ಯಾರು ? ಉತ್ತರ : ಕೌಸಲ್ಯಾ, ಸುಮಿತ್ರೆ, ಕೈಕೇಯಿ
  17. ದಶರಥ ಮಹಾರಜನ ತಂದೆ ಯಾರು ? ಉತ್ತರ : ಅಜ ಮಹಾರಾಜ
  18. ಕೌಸಲ್ಯೆಯ ತಂದೆ ಯಾರು ? ಉತ್ತರ : ಭಾನುವಂತ
  19. ಸುಮಿತ್ರೆಯ ತಂದೆ ಯಾರು ? ಉತ್ತರ: ಶೂರರಾಜ
  20. ಕೈಕೇಯಿಯ ತಂದೆ ಯಾರು? ಉತ್ತರ : ಅಶ್ವಪತಿ ರಾಜ
  21. ದಶರಥನು ಪ್ರಾಣಿಯನ್ನು ಕೊಲ್ಲಲೆಂದು ಹುಡಿದ್ದ ಬಾಣ ಯಾರಿಗೆ ನಾಟಿತು ? ಉತ್ತರ : ಶ್ರವಣಕುಮಾರ
  22. ದಶರಥನಿಗೆ ಪುತ್ರವಿರಹದಿಂದ ಸಾಯುವಂತೆ ಶಾಪ ನಿಡಿದ್ದು ಯಾರು ? ಉತ್ತರ : ಶ್ರವಣಕುಮಾರನ ವೃದ್ದ ತಂದೆ ತಾಯಿ
  23. ದಶರಥನು ಸಂತಾನದ ಅಪೆಕ್ಷಯಿಂದ ಮಾಡಿದ ಯಾಗ ಯಾವುದು ? ಉತ್ತರ : ಪುತ್ರಕಾಮೇಷ್ಟಿ ಯಾಗ
  24. ಪುತ್ರ ಕಾಮೇಷ್ಟಿ ಯಾಗವನ್ನು ಯಾರು ನೆರವೇರಿಸಿದರು? ಉತ್ತರ : ಶೃಂಗಿ ಋಷಿಗಳು
  25. ಪುತ್ರಕಾಮೇಷ್ಟಿ ಯಾಗದ ಕೊನೆಯಲ್ಲಿ ಸಶರೀರವಾಗಿ ದರ್ಶನ ಕೊಟ್ಟಿದ್ದು ಯಾರು? ಉತ್ತರ : ಅಗ್ನಿದೇವ
  26. ರಾಮನು ಜನಿಸಿದ್ದು ಯಾವಾಗ ? ಉತ್ತರ: ಚೈತ್ರಮಾಸದ 9ನೇ ದಿನ
  27. ಶ್ರೀರಾಮಚಂದ್ರನ ನಕ್ಷತ್ರ ಯಾವುದು? ಉತ್ತರ : ಪುನರ್ವಸು
  28. ಲಕ್ಷ್ಮಣನು ಯಾವ ನಕ್ಷತ್ರದಲ್ಲಿ ಜನಿಸಿದನು? ಉತ್ತರ : ಆಶ್ಲೇಷ ( ಚೈತ್ರ ಶುದ್ಧ ದಶಮಿ)
  29. ದಶರಥ ಮಹಾರಾಜನ ರಾಜಗುರು ಯಾರು ? ಉತ್ತರ : ವಶಿಷ್ಠ ಮಹರ್ಷಿಗಳು
  30. ದಶರಥ ಮಹಾರಾಜನ ರಾಜ ಮಂತ್ರಿ ಯಾರು ? ಉತ್ತರ : ಸುಮಂತ
  31. ವಿಶ್ವಾಮಿತ್ರರ ಯಜ್ಞಕ್ಕೆ ಉಪದ್ರವವನ್ನು ಕೊಡುತ್ತಿದ್ದ ರಕ್ಕಸರು ಯಾರು? ಉತ್ತರ : ತಾಟಕಿ, ಸುಭಾಹು ಹಾಗೂ ಮಾರೀಚ
  32. ವಿಶ್ವಾಮಿತ್ರರು ಶ್ರೀರಾಮನಿಗೆ ಉಪದೇಶಿಸಿದ ಎರಡು ವಿದ್ಯೆಗಳು ಯಾವುವು? ಉತ್ತರ : ಬಲ ಹಾಗೂ ಅತಿಬಲಾ
  33. ತಾಟಕಿಯನ್ನು ಕೊಂದಿದ್ದು ಯಾರು? ಉತ್ತರ : ಶ್ರೀರಾಮ
  34. ಸುಬಾಹುವನ್ನು ಕೊಂದಿದ್ದು ಯಾರು? ಉತ್ತರ : ಲಕ್ಷ್ಮಣ
  35. ಸುಮಿತ್ರೆಯ ಅವಳಿ ಮಕ್ಕಳು ಯಾರು? ಉತ್ತರ : ಲಕ್ಷ್ಮಣ, ಶತ್ರುಘ್ನ
  36. ದಶರಥನ ಮಕ್ಕಳಿಗೆ ಶಾಸ್ತ್ರ ವಿದ್ಯೆಯನ್ನು ಕಲಿಸಿದ ಗುರುಗಳು ಯಾರು ? ಉತ್ತರ : ಮಹರ್ಷಿ ವಸಿಷ್ಠರು
  37. ಕೈಕೆಯಿ ಯಾರ ಮಗಳು? ಉತ್ತರ : ಕೈಕಯ ರಾಜನ‌ ಮಗಳು
  38. ಕೌಶಲ್ಯ ಯಾವ ದೇಶದವಳು ? ಉತ್ತರ : ಕೋಸಲ ದೇಶ
  39. ವಿದೇಹದ ರಾಜಧಾನಿ ಯಾವುದು? ಉತ್ತರ : ಮಿಥಿಲೆ
  40. ಸೀತಾ ಸ್ವಯಂವರದಲ್ಲಿ ರಾಮನು ಮುರಿದದ್ದು ಯಾವ ಧನಸ್ಸು? ಉತ್ತರ : ಶಿವ ಧನಸ್ಸು
  41. ಭರತನ ಹೆಂಡತಿ ಯಾರು? ಉತ್ತರ : ಮಾಂಡವಿ
  42. ಶತ್ರುಘ್ನನ ಹೆಂಡತಿ ಯಾರು? ಉತ್ತರ : ಶೃತಕೀರ್ತಿ
  43. ಮಾಂಡವಿ ಮತ್ತು ಶ್ರುತಕೀರ್ತಿ ಯಾರ ಮಕ್ಕಳು? ಉತ್ತರ : ಕ್ಕುಷದ್ವಜನ ಮಕ್ಕಳು
  44. ಪರಶುರಾಮರು ಯಾವ ವಂಶದವರು? ಉತ್ತರ : ಭೃಗು ವಂಶ
  45. ಜನಕ ಮಹಾರಾಜನ ಪತ್ನಿ ಯಾರು ? ಉತ್ತರ : ಸುನಯನಾ ದೇವಿ
  46. ಜನಕ ಮಹಾರಾಜ ಆಳುತ್ತಿದ್ದ ದೇಶ ಯಾವುದು ? ಉತ್ತರ : ವಿದೇಹ
  47. ವೈದೇಹಿ ಯಾರು ? ಉತ್ತರ : ಸೀತಾಮಾತೆ
  48. ಜನಕ ಮಹಾರಾಜನ ಮತ್ತೊಬ್ಬಳ ಮಗಳ ಹೆಸರೇನು ? ಉತ್ತರ : ಊರ್ಮಿಳಾ
  49. ಸೀತೆಯು ಜನಕ ರಾಜನಿಗೆ ಎಲ್ಲಿ ಸಿಕ್ಕಿದ್ದು ? ಉತ್ತರ : ಭೂಮಿಯಲ್ಲಿ
  50. ಅಹಲ್ಯಗೆ ಕಲ್ಲಾಗುವಂತೆ ಶಾಪ ನೀಡಿದ್ದು ಯಾರು ? ಉತ್ತರ : ಗೌತಮ ಮಹರ್ಷಿಗಳು
  51. ಅಹಲ್ಯಯ ಶಾಪ ವಿಮೋಚನೆ ಯಾರಿಂದ ಆಯಿತು? ಉತ್ತರ: ಶ್ರೀರಾಮನಿಂದ
  52. ಅಹಲ್ಯ ಹಾಗೂ ಗೌತಮರ ಮಗನ ಹೆಸರೇನು? ಉತ್ತರ : ಶತಾನಂದ
  53. ಪರಶುರಾಮರು ಏಷ್ಟು ಬಾರಿ ಭುಪ್ರದಕ್ಷಿನೆ ಮಾಡಿ ರಕ್ಕಾಸಗುಣದ ಕ್ಷತ್ರಿಯರನ್ನು ಕೊಂದಿದ್ದರು? ಉತ್ತರ : 21 ಬಾರಿ
  54. ಚಿರಂಜೀವಿಗಳು ಎಷ್ಟು ಮಂದಿ? ಉತ್ತರ : 7 ಜನ
  55.  ಅಯೋಧ್ಯ ಕಾಂಡ ರಾಮಾಯಣ ಎಷ್ಟನೇ ಭಾಗ? ಉತ್ತರ : ಎರಡನೆಯ ಭಾಗ
  56. ರಾಮಾಯಣದ ಮೊದಲ ಭಾಗದ ಹೆಸರೇನು ? ಉತ್ತರ : ಬಾಲಕಾಂಡ
  57. ದಶರಥನು ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವ ಇಚ್ಛೆಯನ್ನು ಮೊದಲು ಹೇಳಿದ್ದು ಯಾರಿಗೆ? ಉತ್ತರ : ರಾಜಗುರುಗಳಾದ ವಶಿಷ್ಠರಿಗೆ
  58. ದೇವೇಂದ್ರನ ಜೊತೆ ಯುದ್ಧ ಮಾಡಿದ ರಾಕ್ಷಸ ಯಾರು ? ಉತ್ತರ : ಶಂಬರಾಸುರ
  59. ಶಂಬಕಾಸುರ ಹಾಗೂ ದೇವೇಂದ್ರನ ನಡುವೆ ಯುದ್ಧವಾದಾಗ ದೇವೇಂದ್ರನ ಪರವಾಗಿ ಯುದ್ದ ಮಾಡಿದ್ದು ಯಾರು? ಉತ್ತರ : ದಶರಥ ಮಹಾರಾಜ
  60. ದೇವೇಂದ್ರ ಹಾಗೂ ಶಂಬರಾಸುರನ ನಡುವಿನ ಯುದ್ಧದಲ್ಲಿ ಗೆದ್ದದ್ದು ಯಾರು ? ಉತ್ತರ : ದೇವೇಂದ್ರ
  61. ಯುದ್ಧದಲ್ಲಿ ಗೆದ್ದ ಖುಷಿಗೆ ಕೈಕೆಯಿಗೆ ದಶರಥನು ಎಸ್ಟು ವರಗಳನ್ನು ಕೊಟ್ಟಿದ್ದನು ? ಉತ್ತರ: 2
  62. ಸುಮಿತ್ರೆಯ ಮಗನಾದ್ದರಿಂದ ಲಕ್ಷ್ಮಣನಿಗೆ ಇದ್ದ ಮತ್ತೊಂದು ಹೆಸರೇನು? ಉತ್ತರ : ಸೌಮಿತ್ರಿ
  63. ಅಯೋಧ್ಯೆ ಸರಹದ್ದನ್ನು ದಾಟಲು ರಾಮನಿಗಿದ್ದ ಕಾಲಾವಕಾಶ ಎಷ್ಟು? ಉತ್ತರ : ಅಂದಿನ ಸೂರ್ಯಾಸ್ತ
  64. ಅಯೋಧ್ಯವನ್ನು ದಾಟಿದ ನಂತರ ಮೂವರು ತಲುಪಿದ್ದು ಎಲ್ಲಿ? ಉತ್ತರ : ಶೃಂಗವೇರಪುರ
  65. ಶೃಂಗವೆರಪುರ ಎಲ್ಲಿದೆ ? ಉತ್ತರ: ಗಂಗಾನದಿಯ ತಟದಲ್ಲಿ
  66. ನಿಷಾದದ ರಾಜನ ಹೆಸರೇನು ? ಉತ್ತರ : ಗುಹ
  67. ಗುಹನ ವೃತ್ತಿ ಏನು? ಉತ್ತರ: ಅವನೊಬ್ಬ ಬೇಡ
  68. ರಾಮನೊಂದಿಗೆ ಗುಹನ ಬೇಟಿ ಎಲ್ಲಿ ಆಯಿತು? ಉತ್ತರ : ಗಂಗಾನದಿಯ ತಟದಲ್ಲಿ ಇಂಗುದಿ ವೃಕ್ಷದ ಕೆಳಗೆ ಕುಳಿತಿದ್ದಾಗ
  69. ಗುಹನಲ್ಲಿ ರಾಮ ಕೇಳಿದ ಸಹಾಯವೇನು ? ಉತ್ತರ : ಗಂಗೆಯನ್ನು ದಾಟಲು ದೋಣಿ ವ್ಯವಸ್ಥೆ ಮಾಡು ಎಂದು
  70. ಬೃಹಸ್ಪತಿಯ ಮಗ ಯಾರು? ಉತ್ತರ : ಭಾರದ್ವಾಜ ಋಷಿಗಳು
  71. ಭಾರದ್ವಾಜ ಋಷಿಗಳ ಆಶ್ರಮ ಎಲ್ಲಿತ್ತು? ಉತ್ತರ : ಗಂಗೆ ಹಾಗೂ ಯಮುನೆಯರ ಸಂಗಮದ ಬಳಿ
  72. ಭಾರದ್ವಾಜರು ರಾಮನಿಗೆ ಎಲ್ಲಿ ತಂಗಲು ಹೇಳಿದರು? ಉತ್ತರ : ಚಿತ್ರಕೂಟ ಪರ್ವತದ ಬಳಿ
  73. ದಶರಥನ ಅಂತ್ಯ ಹೇಗಾಯಿತು? ಉತ್ತರ : ಪುತ್ರ ವಿರಹದಿಂದ
  74. ದಶರಥನಿಗೆ ಪುತ್ರ ವಿರಹದಿಂದ ಸಾವು ಬರಲಿ ಎಂದು ಹಿಂದೆ ಶಪೀಸಿದ್ದು ಯಾರು? ಉತ್ತರ : ಶ್ರವಣಕುಮಾರನ ವೃದ್ಧ ಮಾತಾಪಿತರು
  75. ದೋಣಿ ನಡೆಸುವ ಅಂಬಿಗನ ಹೆಸರೇನು ? ಉತ್ತರ : ಕೇವತ
  76. ಕೇವತನು ರಾಮನನ್ನು ದೋಣಿ ಹತ್ತಿಸಿಕೊಳ್ಳಲು ನಿರಾಕರಿಸಿದ್ದು ಏಕೆ ? ಉತ್ತರ : ರಾಮ ಕಾಲಿಟ್ಟ ಕೂಡಲೇ ಅವನ‌ಪಾದದೂಳಿಯಿಂದ ತನ್ನ ದೋಣಿಯೂ ಅಹಲ್ಯೆಯಂತೆ ಹೆಣ್ಣಾಗಿ ಬಿಟ್ಟರೆ ಭಯದಿಂದ
  77. ಕೇವತನ ಭಯ ನಿಜವಾದುದೇ? ಉತ್ತರ : ಇಲ್ಲ
  78. ಕೇವತಾ ಭಯಗೊಂಡಂತೆ ನಟಿಸಿದ್ದು ಏಕೆ? ಉತ್ತರ : ಭಕ್ತಿಯಿಂದ ಪ್ರಭು ರಾಮನ ಪಾದಗಳನ್ನು ತೊಳೆತಯವ ಉದ್ದೇಶದಿಂದ
  79. ದೋಣಿಯಲ್ಲಿ ಹತ್ತಿಸಿಕೊಳ್ಳುವ ಮೊದಲು ಕೇವತನು ಮಾಡಿದ್ದೇನು ಉತ್ತರ : ಪಾದಗಳನ್ನು ಯೊಳೆದದ್ದು
  80. ದಶರಥನ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದು ಯಾರು ? ಉತ್ತರ : ಭಾರತ
  81. ದಶರಥನ ಅಂತ್ಯದ ನಂತರ ಯಾರಿಗೆ ಪಟ್ಟಾಭಿಷೇಕವಾಯಿತು? ಉತ್ತರ : ಅಧಿಕೃತವಾಗಿ ಯಾರಿಗೂ ಪಟ್ಟಾಭಿಷೇಕ ವಾಗಲಿಲ್ಲ
  82. ಭರತ ಶ್ರೀರಾಮನ ಯಾವ ಸಂಕೇತವನ್ನು ಇಟ್ಟುಕೊಂಡು ರಾಜ್ಯಭಾರ ಮಾಡಿದ? ಉತ್ತರ : ರಾಮನ ಪಾದುಕೆಗಳು
  83. ರಾಮನ ಪಾದುಕೆಗಳನ್ನು ತೆಗೆದುಕೊಂಡು ರಾಜ್ಯಭಾರ ಮಾಡು ಎಂದು ಭರತನಿಗೆ ಸೂಚಿಸಿದ್ದು ಯಾರು? ಉತ್ತರ : ರಾಜಗುರು ವಶಿಷ್ಠರು
  84. ಭರತನು ರಾಜ್ಯದ ಆಡಳಿತವನ್ನು ಎಲ್ಲಿದ್ದು ಕೊಂಡೆ ಮಾಡುತ್ತಿದ್ದ? ಉತ್ತರ: ನಂದಿಗ್ರಾಮ
  85. ಪಂಚವಟಿಯು ಯಾವ ನದಿ ತಿರದಲ್ಲಿ ಇತ್ತು? ಉತ್ತರ : ಗೋದಾವರಿ
  86. ಸಂಪಾತಿ ಎಲ್ಲಿ ವಾಸಿಸುತ್ತಿತ್ತು? ಉತ್ತರ: ದಕ್ಷಿಣದ ತುದಿಯಲ್ಲಿರುವ ಸರೋವರದ ಬಳಿ
  87. ಜಟಾಯು ಶ್ರೀರಾಮನಿಗೆ ತಾನು ಯಾರು ಎಂದು ಪರಿಚಯಿಸಿ ಕೊಂಡಿತು? ಉತ್ತರ : ದಶರಥನ ಸ್ನೇಹಿತ ಎಂದು
  88. ಪುಲಸ್ತ್ಯರು ಯಾರ ಮಗ? ಉತ್ತರ : ಬ್ರಹ್ಮದೇವರ ಮಾನಸಪುತ್ರರು
  89. ಪುಲಸ್ತ್ಯರ ಮಗ ಯಾರು ? ಉತ್ತರ : ವಿಶ್ರವಸು
  90. ವಿಶ್ರವಸುವಿನ ಪತ್ನಿ ಯಾರು? ಉತ್ತರ : ಭಾರದ್ವಾಜ ಮಹರ್ಷಿಗಳ ಮಗಳಾದ ದೇವವರ್ಣಿನಿ
  91. ವೀಶ್ರವಸುವಿನ ಮಗ ಯಾರು? ಉತ್ತರ : ವೈಶ್ರವನ
  92. ವೈಶ್ರವಣ ಯಾವ ಹೆಸರಿನಿಂದ ಪರಿಚಿತ? ಉತ್ತರ : ಕುಬೇರ
  93. ಕುಬೇರನ ಬಳಿಯಿದ್ದ ವಾಯುವೇಗದ ವಾಹನ ಯಾವುದು? ಉತ್ತರ : ಪುಷ್ಪಕ ವಿಮಾನ
  94. ಕುಬೇರನಿಗೆ ಬ್ರಹ್ಮನ ವರದಿಂದ ಯಾವ ದಿಕ್ಕಿನ ಅಧಿಪತ್ಯ ದೊರಕಿತು? ಉತ್ತರ : ಉತ್ತರ ದಿಕ್ಕಿನ ಅಧಿಪತ್ಯ
  95. ರಾಣನಿಗಿಂತಲು ಮೊದಲು ಲಂಕೆಯನ್ನು ಆಳುತ್ತಿದ್ದ ರಾಜ ಯಾರು? ಉತ್ತರ : ಕುಬೇರ
  96. ವಿಶ್ರವಸು ಹಾಗು ಕೈಕಸಿಯ ಮಗ ಯಾರು? ಉತ್ತರ : ರಾವಣ
  97. ಕೈಕಸಿ ಯಾರ ಮಗಳು? ಉತ್ತರ : ಸುಮಾಲಿ ಎಂಬ ರಾಕ್ಷಸನ ಮಗಳು
  98. ಸುಮಾಲಿಯ ಸೋದರರು ಎಷ್ಟು ಮಂದಿ? ಉತ್ತರ : ಇಬ್ಬರು ( ಮಾಲಿ, ಮಾಲ್ಯವಂತ)
  99. ಸುಮಾಲಿ, ಮಾಲಿ, ಹಾಗು ಮಾಲ್ಯವಂತರ ತಂದೆ ಯಾರು? ಉತ್ತರ: ಸುಖೇಶನೆಂಬ ರಾಕ್ಷಸ
  100. ರಾವಣನ ಮೂಲ ಹೆಸರೇನು? ಉತ್ತರ : ದಶಕಂಠ/ ದಶಾನನ
  101. ಬ್ರಹ್ಮದೇವನಲ್ಲಿ ರಾವಣನು ಕೇಳಿದ ವರವೇನು? ಉತ್ತರ: ತನಗೆ ಸಾವು ಬರಬಾರದು ಎಂದು
  102. ಸಾವೇ ಬರಬಾರದೆಂಬ ವರವನ್ನು ಕೇಳು ಎಂದು ರಾವಣನಿಗೆ ಹೇಳಿಕೊಟ್ಟಿದ್ದು ಯಾರು? ಉತ್ತರ: ಅವನ ತಾಯಿ ಕೈಕಸಿ ಹಾಗೂ ಅಜ್ಜ ಸುಮಾಲಿ
  103. ರಾವಣ ಕೇಳಿದ ವರ ದೊರೆಯಿತೇ? ಉತ್ತರ : ಇಲ್ಲ
  104. ರಾವಣನು ಬದಲಿಯಾಗಿ ಕೇಳಿದ ವರ ಯಾವುದು? ಉತ್ತರ : ದೇವತೆಗಳು ರಾಕ್ಷಸರು ಯಕ್ಷರು ಗಂಧರ್ವರು ಪ್ರಾಣಿ-ಪಕ್ಷಿಗಳಿಂದ ನನಗೆ ಸಾವು ಬರಬಾರದೆಂದು ಕೇಳಿದ
  105. ರಾವಣನು ತನ್ನ ಬೇಡಿಕೆಯಿಂದ ಯಾರನ್ನು ಹೊರಗಿಟ್ಟಿದ್ದ? ಉತ್ತರ : ಮನುಷ್ಯ
  106. ರಾವಣನು ಮನುಷ್ಯರಿಂದ ಸಾವು ಬರಬಾರದೆಂದು ಏಕೆ ಕೇಳಲಿಲ್ಲ? ಉತ್ತರ : ಮನುಷ್ಯರಿಗೆ ನನ್ನನ್ನು ಸಂಹರಿಸುವಸ್ಟು ಶಕ್ತಿ ಇರುವುದಿಲ್ಲವೆಂದು ಮನುಷ್ಯರನ್ನು ಕಡೆಗಣಿಸಿದ
  107. ಕುಂಭ ಕರ್ಣ ಬ್ರಹ್ಮದೇವನಲ್ಲಿ ಕೇಳಿದ ವರವೇನು? ಉತ್ತರ : ಚೆನ್ನಾಗಿ ನಿದ್ರೆ ಬೇಕು ತುಂಬಾ ನಿದ್ರೆ ಬೇಕು ಎಂದು
  108. ಕುಂಭ ಕರ್ಣನಿಗೆ ನಿದ್ರಾ ವರವನ್ನು ಅವನ ನಾಲಿಗೆಯಲ್ಲಿ ಕುಳಿತು ಕೇಳಿಸಿದ್ದು ಯಾರು ? ಉತ್ತರ : ಸರಸ್ವತಿ ದೇವಿ
  109. ವಿಭೀಷಣನು ಬ್ರಹ್ಮದೇವನಲ್ಲಿ ಕೇಳಿದ ವರವೇನು? ಉತ್ತರ : ತನ್ನ ಮನಸ್ಸು ಧರ್ಮದಿಂದ ಎಂದಿಗೂ ವಿಚಲಿತವಾಗದ ಇರಲಿ ಎಂದು ಕೇಳಿದ
  110. ವಿಭೀಷಣನಿಗೆ ಬ್ರಹ್ಮದೇವರು ಕೊಟ್ಟ ವರವೇನು? ಉತ್ತರ : ಧರ್ಮಾತ್ಮ ನಾಗಿರು ಜೊತೆಗೆ ಅಮರತ್ವವನ್ನು ( ಚಿರಂಜೀವಿ) ದಯಪಾಲಿಸಿದ
  111. ರಾವಣನಿಗೆ ಕುಬೇರನು ಏನಾಗಬೇಕು? ಉತ್ತರ : ಅಣ್ಣ
  112. ಬ್ರಹ್ಮನಿಂದ ವರ ಪಡೆದ ರಾವಣನು ಮೊದಲು ಆಕ್ರಮಣ ಮಾಡಿದ್ದು ಯಾರ ಮೇಲೆ ? ಉತ್ತರ : ಕುಬೇರನ ಮೇಲೆ
  113. ಕುಬೇರನ ಮೇಲೆ ಆಕ್ರಮಿಸಲು ಹೇಳಿದ್ದು ಯಾರು ? ಉತ್ತರ : ಕೈಕಸಿ
  114.  ಕೈಕಸಿಗೆ ಕುಬೇರನ ಮೇಲೆ ಹೊಟ್ಟೆಯುರಿ ಏಕೆ ? ಉತ್ತರ : ಸವತಿಯ ಮಗನ ಸಂಪತ್ತನ್ನು ನೋಡಿ
  115. ಕುಬೇರನಿಂದ ರಾವಣ ವಶಪಡಿಸಿಕೊಂಡಿದ್ದು ಏನನ್ನು ಉತ್ತರ : ಲಂಕೆ ಮತ್ತು ಪುಷ್ಪಕ ವಿಮಾನ
  116. ಮಂಡೋದರಿ ಯಾರ ಮಗಳು ? ಉತ್ತರ : ಮಯ ಎಂಬ ರಾಕ್ಷಸನ ಮಗಳು
  117. ಮಂಡೋದರಿಯ ತಾಯಿ ಯಾರು? ಉತ್ತರ : ಹೇಮಾ ಎಂಬ ಅಪ್ಸರೆ
  118. ಕುಂಭಕರ್ಣನ ಹೆಂಡತಿ ಯಾರು? ಉತ್ತರ : ವಿದ್ಯುಜ್ಜಿಹ್ವೆ
  119. ವಿಭೀಷಣನ ಪತ್ನಿ ಯಾರು? ಉತ್ತರ : ಸುರಮೆ ಎಂಬ ಗಂಧರ್ವ ಕನ್ಯೆ
  120. ವಿಭೀಷಣನ ಮಾವ ಯಾರು ? ಉತ್ತರ : ಶೈಲೂಷ
  121. ಯಾರ ಮಾತಿಗೆ ಬೆಲೆಕೊಟ್ಟು ಲಂಕೆಯನ್ನು ರಾವಣನಿಗೆ ಬಿಟ್ಟುಕೊಟ್ಟನು? ಉತ್ತರ : ತಂದೆ ವಿಶ್ರವಸುವಿನ ಮಾತಿಗೆ
  122. ಕುಬೇರನು ಲಂಕೆಯನ್ನು ಬಿಟ್ಟ ನಂತರ ಎಲ್ಲಿ ನೆಲೆಸಿದನು? ಉತ್ತರ : ಅಲ್ಕ ನಗರಿಯಲ್ಲಿ
  123. ಅಲಕಾ ನಗರಿಯು ಯಾವ ನದಿಯ ತೀರದಲ್ಲಿ ಇತ್ತು ? ಉತ್ತರ : ಮಂದಾಕಿನಿ
  124. ರಾವಣನಿಗೆ ವಾನರರಿಂದ ಸೋಲಾಗಲಿ ಎಂದು ಶಪಿಸಿದ್ದರು ಯಾರು ? ಉತ್ತರ : ನಂದಿಕೇಶ್ವರ
  125. ದಶಾನನಿಗೆ ರಾವಣ ಎಂಬ ಹೆಸರು ಬಂದಿದ್ದು ಯಾರಿಂದ ? ಉತ್ತರ : ಶಿವನಿಂದ
  126. ಕುಬೇರನ ಮಗ ಯಾರು? ಉತ್ತರ : ನಳಕೂಬರ
  127. ಹಿಮ ಪರ್ವತದಲ್ಲಿ ತಪಸ್ಸು ಮಾಡುತ್ತಿದ್ದ ಕುಶಧ್ವಜನ ಮಗಳು ಯಾರು? ಉತ್ತರ : ವೇದವತಿ
  128. ವೇದವತಿ ಯಾರ ಅವತಾರ ? ಉತ್ತರ : ಲಕ್ಷ್ಮೀದೇವಿ
  129. ವೇದವತಿಯು ಯಾವ ಅಪೇಕ್ಷೆಯಿಂದ ತಪಸ್ಸು ಮಾಡುತ್ತಿದ್ದಳು ? ಉತ್ತರ : ಶ್ರೀಹರಿಯನ್ನು ಮದುವೆಯಾಗುವ ಇಚ್ಛೆಯಿಂದ
  130. ವೇದವತಿಯನ್ನು ಕಂಡು ಮೋಹಿತನಾದ ರಾಕ್ಷಸ ಯಾರು ? ಉತ್ತರ : ರಾವಣ
  131. ಶೂರ್ಪಣಕಿಯ ದೊಡ್ಡಮ್ಮನ‌ ಮಕ್ಕಳು ಯಾರು? ಉತ್ತರ : ಖರ ದೂಷಣರೆಂಬ ರಾಕ್ಷಸರು
  132. ಖರ ದೂಷಣರ ಸಂಹರಿಸಿದ್ದು ಯಾರು ? ಉತ್ತರ‌: ಶ್ರೀರಾಮ‌
  133. ಖರ ದೂಷಣರು ರಾಮ ಲಕ್ಷ್ಮಣರ ಮೇಲೆ ಯುದ್ದಕ್ಕೆ ಬಂದಾಗ ಅವರ ಸಂತತಿ ಎಷ್ಟಿತ್ತು? ಉತ್ತರ : 14,000
  134. 14,000 ರಕ್ಕಸರನ್ನು ಸಂಹರಿಸಿದ್ದು ಯಾರು ? ಉತ್ತರ : ಶ್ರೀರಾಮ ಒಬ್ಬನೆ
  135. ಖರ ದೂಷಣರ ಸಂಹಾರದ ವಿಷಯವನ್ನು ರಾವಣನಿಗೆ ಮೊದಲು ಹೆಳಿದ್ದು ಯಾರು ? ಉತ್ತರ : ಅಕಂಪನ ಎಂಬ ರಾಕ್ಷಸ
  136. ವೇದವತಿ ರಾವಣನಿಗೆ ಕೊಟ್ಟ ಶಾಪವೇನು? ಉತ್ತರ : ಬಲತ್ಕಾರದಿಂದ ಯಾವುದಾದರೂ ಹೆಣ್ಣನ್ನು ಪಡೆಯಲು ಪರ್ಯತ್ನಿಸಿದ ಮರುಕ್ಷಣವೇ ನಿನಗೆ ಸಾವು ಬರಲಿ ಎಂದು ಶಪಿಸಿದ್ದಳು
  137. ವೇದವತಿಯು ಮುಂದಿನ ಜನ್ಮದಲ್ಲಿ ಯಾರಾಗಿ ಹುಟ್ಟಿದ್ದಳು ? ಉತ್ತರ : ಸೀತೆಯಾಗಿ
  138. ಶೂರ್ಪನಕಿಯ ಪತಿ ಯಾರು? ಉತ್ತರ : ಕಾಲಕೇಯನೆಂಬ ರಾಕ್ಷಸ‌
  139. ಕಾಲಕೇಯನನ್ನು ಕೊಂದಿದ್ದು ಯಾರು ? ಉತ್ತರ : ರಾವಣ
  140. ರಾವಣ ಕಾಲಕೇಯನನ್ನು ಕೊಂದಿದ್ದು ಏಕೆ? ಉತ್ತರ : ಯುದ್ದ ಮಾಡುವಾಗ ತಪ್ಪಿ ಕಾಲಕೇಯನ‌ ಮೇಲೆ ಅಸ್ತ್ರ ಪ್ರಯೋಗಿಸಿಬಿಟ್ಟಿದ್ದ
  141. ಮಾರಿಚ ಯಾರು ? ಉತ್ತರ : ರಾವಣನ ಸೋದರ ಮಾವ
  142. ಮಾರಿಚನಿಗೆ ಯಾವ ರೂಪ ಧರಿಸಿ ಸೀತೆಯ ಮುಂದೆ ಸುಳಿದಾಡಲು ರಾವಣ ಹೆಳಿದ? ಉತ್ತರ : ಮಾಯಾಮೃಗದ ರೂಪ
  143. ಸೀತೆ ಮಾಯಾಮೃಗವನ್ನು ನೋಡಿ ಏನು ಹೇಳಿದಳು ? ಉತ್ತರ : ತನಗೆ ಈಗಿಂದೀಗಲೇ ಮಾಯಾಮೃಗ ಬೇಕೆಂದು ಕೇಳಿದಳು
  144. ಮಾರಿಚ ಸಾಯುವ ಮೊದಲು ಏನೆಂದು ಉದ್ಗರಿಸಿದ ? ಉತ್ತರ : ಹಾ ಲಕ್ಷ್ಮಣ ಹಾ ಸೀತಾ
  145. ಸೀತೆಯನ್ನು ರಾವಣ ಅಪಹರಿಸಿಕೊಂಡು ಹೊಗುವಾಗ ಋಷ್ಯಮೂಕ ಪರ್ವತದ ಮೇಲೆ ಕಂಡದ್ದು ಯಾರನ್ನ? ಉತ್ತರ : ವಾನರ‌ ಸೈನ್ಯ
  146. ಸೀತೆ ತನ್ನ ಆಭರಣಗಳ ಪುಟ್ಟ ಗಂಟನ್ನು ಎಲ್ಲಿ ಎಸೆದಳು? ಉತ್ತರ : ಋಷ್ಯಮೂಕ ಪರ್ವತದಲ್ಲಿ ಇದ್ದ ವಾನರರ ಕಡೆಗೆ
  147. ಯೋಜನಗಳಷ್ಟು ದೂರದವರೆಗೆ ಕೈಗಳಿದ್ದ ರಾಕ್ಷಸ ಯಾರು ? ಉತ್ತರ: ಕಬಂಧ
  148. ಕಬಂಧನ ತಲೆಯು ಎಲ್ಲಿತ್ತು? ಉತ್ತರ : ಹೊಟ್ಟೆಯಲ್ಲಿ
  149. ಕಬಂಧನ ತಲೆಯು ಹೊಟ್ಟೆಯಲ್ಲಿ ಹೋಗಿ ಸಿಕ್ಕಿಕೊಂಡಿದ್ದಕ್ಕೆ ಕಾರಣವೇನ? ಉತ್ತರ : ಇಂದ್ರನ ವಜ್ರಾಯುಧದಿಂದ ಹೊಡೆದ ಕಾರಣ
  150. ಕಬಂಧನನ್ನು ಸಂಹರಿಸಿದ್ದು ಯಾರು? ಉತ್ತರ : ಶ್ರೀರಾಮ
  151. ಪಂಪಾ ಸರೋವರದಲ್ಲಿ ಆಶ್ರಮದಲ್ಲಿ ರಾಮನಿಗಾಗಿ ಕಾಯುತ್ತಿದ್ದ ವೃದ್ಧ ಭಕ್ತೆ ಯಾರು ? ಉತ್ತರ : ಶಬರಿ
  152. ಶಬರಿ ಯಾವ ಆಶ್ರಮದಲ್ಲಿ ರಾಮನಿಗಾಗಿ ಎದಿರು ನೋಡುತ್ತಿದ್ದಳು ? ಉತ್ತರ : ಮತಂಗ ಮುನಿಯ ಆಶ್ರಮದಲ್ಲಿ
  153. ಶಬರಿ ರಾಮನಿಗೆ ಏನನ್ನು ತಿನ್ನಲು ನೀಡಿದಳು? ಉತ್ತರ : ಬಾರಿ ಅಥವಾ ಬೋರೆಹಣ್ಣು
  154. ಶಬರಿ ಆ ಹಣ್ಣನ್ನು ಕಚ್ಚಿ ತಿಂದು ರುಚಿ ನೋಡಿ ರಾಮನಿಗೆ ಕೊಟ್ಟಿದ್ದು ಏಕೆ ? ಉತ್ತರ : ಸಿಹಿಯಾದ ಹಣ್ಣುಗಳನ್ನು ಮಾತ್ರವೇ ಅರ್ಪಿಸಬೇಕು ಎಂದು
  155. ಸೀತೆಯನ್ನು ಹುಡುಕಲು ಶಬರಿ ಹೇಳಿದ ಉಪಾಯವೇನು? ಉತ್ತರ : ಸುಗ್ರೀವನನ್ನು ಬೇಟಿಯಾಗುವ ಸಲಹೆ ನೀಡಿದಳು
  156. ಸುಗ್ರಿವ ಎಲ್ಲಿದ್ದ? ಉತ್ತರ : ಋಷ್ಯಮೂಕ ಪರ್ವತದಲ್ಲಿ
  157. ಸುಗ್ರೀವನ ಬಳಿ‌ ಇದ್ದ ರಾಮನ ಪರಮ ಭಕ್ತ ಯಾರು? ಉತ್ತರ : ಹನುಮಂತ
  158. ಹನುಮಂತನ ಇನ್ನಿತರ ಹೆಸರುಗಳೇನು ? ಉತ್ತರ : ರಾಮಬಂಟ, ಆಂಜನೇಯ, ಮಾರುತಿ, ವಾಯುಪುತ್ರ, ಅಂಜನಿಪುತ್ರ, ಹನುಮಾನ, ಪವನಪುತ್ರ, ಬಜರಂಗಿ, ಕೇಸರಿ ನಂದನ
  159. ರಾಮನ ದರ್ಶನ ಆದನಂತರ ಶಬರಿಯು ದೇಹತ್ಯಾಗ ಮಾಡಿದ್ದು ಹೇಗೆ? ಉತ್ತರ : ಅಗ್ನಿ ಪ್ರವೇಶದ ಮೂಲಕ
  160. ಕಿಷ್ಕಿಂದಾ ಕಾಂಡದ ಹಿಂದಿನ ಭಾಗ ಯಾವುದು? ಉತ್ತರ : ಅರಣ್ಯಕಾಂಡ
  161. ಹನುಮಂತನ ತಂದೆ ಯಾರು? ಉತ್ತರ : ಕೇಸರಿ
  162. ಆಂಜನೇಯ ಯಾರ ವರದಿಂದ ಜನ್ಮ ತಾಳಿದನು? ಉತ್ತರ : ವಾಯುದೇವನ ವರದಿಂದ
  163. ಹಸಿವೆಯಿಂದ ಹನುಮಂತ ತಿನ್ನಲು ಹೊದ ಹಣ್ಣು‌ ಯಾವುದು? ಉತ್ತರ : ಕೆಂಪಗಿರುವ ಸೂರ್ಯನನ್ನೇ ಹಣ್ಣೆಂದು ತಿನ್ನಲು ಹೊಗಿದ್ದ
  164. ಹನುಮಂತನಿಗೆ ವಜ್ರಾಯುಧದಲ್ಲಿ ಪೆಟ್ಟು ಕೊಟ್ಟಿದ್ದು ಯಾರು? ಉತ್ತರ: ಇಂದ್ರ
  165.  ಹನು ಎಂದರೆ ಅರ್ಥ ಏನು? ಉತ್ತರ : ದವಡೆ
  166. ರಾಮ ಲಕ್ಷ್ಮಣರು ಸುಗ್ರೀವನನ್ನು ಕಾಣಲು ಎಲ್ಲಿಗೆ ಬಂದರು? ಉತ್ತರ : ಋಷ್ಯಮೂಕ ಪರ್ವತ
  167. ಸುಗ್ರೀವನ ಅಣ್ಣ ಯಾರು? ಉತ್ತರ : ವಾಲಿ
  168. ರಾಮ ಲಕ್ಷ್ಮಣರನ್ನು ಋಷ್ಯಮೂಕ ಪರ್ವತದಲ್ಲಿ ಬರ ಮಾಡಿಕೊಂಡಿದ್ದು ಯಾರು ? ಉತ್ತರ: ಬ್ರಾಹ್ಮಣ ರೂಪದಲ್ಲಿದ್ದ ಹನುಮಂತ
  169. ವಾಲಿ-ಸುಗ್ರೀವರ ತಂದೆ ಯಾರು? ಉತ್ತರ: ವೃಕ್ಷ ಶಿರಸು
  170. ವಾಲಿಗೆ ಋಷ್ಯಮೂಕ ಪರ್ವತಕ್ಕೆ ಕಾಲಿಟ್ಟೊಡನೆ ಮೃತ್ಯು ಬರಲಿ ಎಂದು ಶಪಿಸಿದ್ದು ಯಾರ ಉತ್ತರ : ಮಾತಂಗ ಮುನಿಗಳು
  171. ಸುಗ್ರೀವನ ಪತ್ನಿ ಯಾರು? ಉತ್ತರ: ರುಮೆ
  172. ವಾಲಿಯ ಪತ್ನಿ ಯಾರು? ಉತ್ತರ : ತಾರಾ
  173. ಸುಗ್ರೀವನು ಸೀತೆಯನ್ನು ಗುರುತಿಸುವುದಕ್ಕಾಗಿ ರಾಮಚಂದ್ರನಿಗೆ ಏನನ್ನು ನೀಡಿದ? ಉತ್ತರ : ಆಭರಣದ ಪುಟ್ಟ ಗಂಟನ್ನು ನೀಡಿದ
  174. ಮಾಯಾವಿಯ ಕಳೆಬರವು ಎಲ್ಲಿತ್ತು? ಉತ್ತರ: ಋಷ್ಯಮೂಕ ಪರ್ವತದ ಎತ್ತರದ ಒಂದು ಮರದ ಮೇಲೆ ಎಷ್ಟು
  175. ಮಾಯಾವಿಯ ಕಳೇಬರವನ್ನು ಕಾಲಿನಿಂದ ಒದ್ದು ಯೋಜನೆಗಳಷ್ಟು ದೂರ ಎಸೆದದ್ದು ಯಾರು? ಉತ್ತರ: ರಾಮ
  176.  ವಾಲಿ-ಸುಗ್ರೀವರ ಯುದ್ಧದಲ್ಲಿ ಮೊದಲ ದಿನ ಗೆದ್ದದ್ದು ಯಾರು? ಉತ್ತರ : ವಾಲಿ
  177. ರಾಮನಿಗೆ ವಾಲಿಯನ್ನು ಮೊದಲ ಯುದ್ಧದಲ್ಲಿ ಕೊಲ್ಲಲು ಏಕೆ ಸಾಧ್ಯವಾಗಲಿಲ್ಲ? ಉತ್ತರ : ವಾಲಿ ಹಾಗೂ ಸುಗ್ರೀವರು ನೋಡಲು ಒಂದೇ ರೀತಿ ಇದ್ದರು ಎಂಬ ಕಾರಣಕ್ಕೆ!
  178. ಸುಗ್ರೀವನಿಗೆ ರಾಮನು ಯುದ್ಧದ ಸಮಯದಲ್ಲಿ ಏನನ್ನು ಧರಿಸಲು ಕೊಟ್ಟ ? ಉತ್ತರ: ತನ್ನ ಕುರರ ಹಾರವನ್ನು ಧರಿಸಲು ಕೊಟ್ಟ
  179. ಲಕ್ಷ್ಮಣನು ಗುರುತಿಸಿದ ಸೀತೆಯ ಆಭರಣ ಯಾವುದು? ಉತ್ತರ : ಸೀತಾಮಾತೆಯ ಕಾಲುಂಗುರದಿಂದ
  180. ಸುಗ್ರೀವನು ವಾಲಿಯನ್ನು ಯಾವ ಸ್ಥಳದಲ್ಲಿ ಯುದ್ಧ ಮಾಡು ಬಾ ಎಂದು ಕರೆದ ? ಉತ್ತರ : ಋಷಿ ಮುಖ ಪರ್ವತದ ದಟ್ಟ ಕಾನನದಲ್ಲಿ
  181. ಕಾಡಿನಲ್ಲಿ ಯುದ್ಧ ಮಾಡಲು ಕರೆದಿದ್ದು ಏಕೆ? ಉತ್ತರ : ರಾಮನು ವನವಾಸದಲ್ಲಿ ಇರುವುದರಿಂದ ಅವನು ನಗರ ಪ್ರವೇಶ ಮಾಡುವಂತಿರಲಿಲ್ಲ ಹೀಗಾಗಿ ವಾಲಿಯನ್ನು ಕಾಡಿಗೆ ತರಬೇಕಿತ್ತು
  182. ವಾಲಿಯು ಯಾವ ರಾಕ್ಷಸ ನೊಂದಿಗೆ ಒಂದಿಡೀ ವರ್ಷ ಗುಹೆಯಲ್ಲಿ ಕಾದಾಡಿದ್ದ ? ಉತ್ತರ: ಮಾಯಾವಿ
  183. ವಾಲಿ ಹಾಗೂ ಮಾಯಾವಿ ಯುದ್ದದ್ದಲ್ಲಿ ಗೆದ್ದದ್ದು ಯಾರು? ಉತ್ತರ : ವಾಲಿ
  184. ರಾಮನ ಹಾರವನ್ನು ಸುಗ್ರೀವನು ಧರಿಸುವುದರಿಂದ ಆಗುತ್ತಿದ್ದ ಪ್ರಯೋಜನವೇನು? ಉತ್ತರ: ಹಾರ ದರಿಸಿದವನು ಸುಗ್ರೀವನೆಂದೂ. ಹಾರವಿಲ್ಲದವನು ವಾಲಿ ಎಂದು ರಾಮನಿಗೆ ತಿಳಿಯುತ್ತಿತ್ತು
  185. ವಾಲಿಯ ಮಗ ಯಾರು? ಉತ್ತರ: ಅಂಗದ
  186. ಶ್ರವಣದಿಂದ ಕಾರ್ತಿಕ ಮಾಸದ ವರೆಗೂ ರಾಮ ಲಕ್ಷ್ಮಣರು ಯಾವ ಪರ್ವತದಲ್ಲಿ ವಾಸವಿದ್ದರು? ಉತ್ತರ : ಮಾಲ್ಯವಂತ ಪರ್ವತದಲ್ಲಿ ( ಈಗಿನ ಆನೆಗುಂದಿ ಹತ್ತಿರ ಬರುತ್ತದೆ ಅಂದರೆ ಹಂಪಿಯ ಕ್ಷೇತ್ರ)
  187. ವಾಲಿ ಹತನಾದ ನಂತರ ಕಿಷ್ಕಿಂದೆಯ ರಾಜನಾಗಿದ್ದು ಯಾರು? ಉತ್ತರ: ಸುಗ್ರೀವ
  188. ಅಂಗದ ನಿಗೆ ಯಾವ ಪಟ್ಟ ಸಿಕ್ಕಿತು? ಉತ್ತರ: ಯುವರಾಜನ ಪಟ್ಟ
  189. ರಾಮನು ಹನುಮಂತನಿಗೆ, ಸೀತೆಗೆ ತಲುಪಿಸಲು ಕೊಟ್ಟ ವಸ್ತು ಯಾವುದು? ಉತ್ತರ : ತನ್ನ ಉಂಗುರ
  190. ರಾಮನಿಗೆ ಯಾವ ವಾನರ ಮೇಲೆ ಅಪಾರವಾದ ನಂಬಿಕೆ ಇತ್ತು ? ಉತ್ತರ : ಆಂಜನೆಯ
  191. ಜಾಂಬವಂತ ಯಾರ ತಂಡದಲ್ಲಿ ಇದ್ದ? ಉತ್ತರ : ಆಂಜನೆಯ
  192. ವಾಲಿಯ ಮಗ ಯಾವ ತಂಡದಲ್ಲಿದ್ದ? ಉತ್ತರ : ಆಂಜನೆಯ
  193. ವಿಂದ್ಯ ಪರ್ವತದ ತಪ್ಪಲಿನ ಗುಹೆಯಲ್ಲಿದ್ದ ಅಪರೂಪದ ಸರೋವರ ಯಾರಿಗೆ ಸೇರಿತ್ತು? ಉತ್ತರ : ಮಯನೆಂಬ ರಾಕ್ಷಕನಿಗೆ ಸೇರಿತ್ತು
  194. ಸೀತೆಯನ್ನು ಹುಡುಕಲು ಎಷ್ಟು ದಿಕ್ಕುಗಳಿಗೆ ವಾನರರನ್ನು ಸುಗ್ರೀವನು ಕಳುಹಿಸಿದನು? ಉತ್ತರ : ನಾಲ್ಕು ದಿಕ್ಕುಗಳಿಗೆ
  195. ಪೂರ್ವದಿಕ್ಕಿಗೆ ಹೋದದ್ದು ಯಾರು? ಉತ್ತರ : ವಾನರರ ಮುಖ್ಯಸ್ಥ ವಿನತ
  196. ಪಶ್ಚಿಮ ದಿಕ್ಕಿಗೆ ಹೋದದ್ದು ಯಾರು? ಉತ್ತರ : ತಾರಾಳ ತಂದೆ ಸುಷೇಣ
  197. ಉತ್ತರ ದಿಕ್ಕಿಗೆ ಹೋದದ್ದು ಯಾರು? ಉತ್ತರ : ಶತಬಲಿ ಎಂಬ ವಾನರ ಮುಖ್ಯಸ್ಥ
  198. ದಕ್ಷಿಣ ದಿಕ್ಕೆಗೆ ಹೋದದ್ದು ಯಾರು? ಉತ್ತರ : ಆಂಜನೇಯ
  199. ಮಯನು ಅತ್ಯಂತ ರಮಣೀಯ ಸರೋವರವನ್ನು ಹಾಗು ಉದ್ಯಾನವನ್ನು ಯಾರಿಗಾಗಿ ನಿರ್ಮಿಸಿದ್ದ? ಉತ್ತರ: ಹೇಮಾ ಎಂಬ ಅಪ್ಸರೆ ಗಾಗಿ ( ಮಂಡೋದರಿಯ ತಾಯಿ)
  200. ಇದೀಗ ಮಯನ ಸರೋವರನ್ನು ನೋಡಿಕೊಳ್ಳುತ್ತದ್ದ ಯೋಗಿನ ಯಾರು? ಉತ್ತರ : ಅಪ್ಸರೆ ಹೇಮಾಳ ಸಖಿಯಾದ ಸ್ವಯಂಪ್ರಭೆ
  201. ಮಾಹೇಂದ್ರ ಪರ್ವತದ ಗುಹೆಯಲ್ಲಿ ವಾನರರು ಸಂಧಿಸಿದ ವೃದ್ದ ಹದ್ದುಗಳ ರಾಜ ಯರು? ಉತ್ತರ: ಸಂಪಾತಿ
  202. ಸಂಪಾತಿ ಯಾರ ಅಣ್ಣ ? ಉತ್ತರ : ಜಟಾಯು
  203. ಜಟಾಯು ಹಾಗು ಸಂಪಾತಿಯು ಯಾರ ಮಕ್ಕಳು ? ಉತ್ತರ : ಅರುಣನ ಮಕ್ಕಳು
  204. ಸುಂದರಕಾಂಡ ಅವಧಿ ಎಷ್ಟು? ಉತ್ತರ: ಒಂದು ರಾತ್ರಿಯ ಕಥೆಯಾಗಿದೆ
  205. ಆಂಜನೇಯನಿಗೆ ಸಿದ್ದಸಿದ್ದ ಅಷ್ಟ ಮಹಾವಿದ್ಯೆಗಳು ಯಾವುವು? ಉತ್ತರ: ಅನಿಮಾ, ಗರಿಮಾ, ಲಘಿಮಾ, ಮಹಿಮಾ, ಪ್ರಾಪ್ತಿ, ಪ್ರಕಾಮ್ಯ, ಈಶತ್ವ, ಮತ್ತು ವಶತ್ವ
  206. ಮೈನಾಕನು ಯಾರ ಮಗ? ಉತ್ತರ: ಹಿಮವಂತನ ಮಗ
  207. ಅರುಣ ಯಾರು? ಉತ್ತರ : ಸೂರ್ಯನ ಸಾರಥಿ
  208. ವೃದ್ಧ ಸಂಪಾತಿಯ ಮಗ ಯಾರು? ಉತ್ತರ: ಸುಪಾರ್ಶ್ವ
  209. ಸೂಪರ್ಶ್ವನು ತಂದೆಗೆ ಹೇಳಿದ್ದ ರಹಸ್ಯ ವಿಷಯವೇನು? ಉತ್ತರ : ಸೀತೆಯನ್ನು ರಾವಣನು ಅಶೋಕವನದಲ್ಲಿ ಕೂಡಿಟ್ಟಿದ್ದನಂಬ ವಿಷಯ ಹೇಳಿದ
  210. ಸೀತೆಯ ವಿಷಯ ಸುಪಾರ್ಶ್ವವನಿಗೆ ತಿಳಿದುದ್ದು ಹೇಗೆ ? ಉತ್ತರ : ಆಹಾರ ತರಲು ರಾವಣನ ನಗರಿಗೆ ಹೋದಾಗ, ಬಲು ದೂರದಿಂದಲೇ ಅವನ ತೀಕ್ಷ್ಣ ದೃಷ್ಟಿಗೆ ಸೀತೆ ಕಂಡಿದ್ದಳು
  211. ಮಾಹೇಂದ್ರ ಪರ್ವತದಿಂದ ಲಂಕೆಗೆ ಎಷ್ಟು ದೂರವಿತ್ತು ? ಉತ್ತರ : 100 ಯೋಜನೆಗಳಷ್ಟು
  212. ಹಿಮವಂತನ ಮಗಳಾಗಿ ಜನಿಸಿದ್ದು ಯಾರು? ಉತ್ತರ : ಪಾರ್ವತಿದೇವಿಯು ಹೈಮವತಿ ಎಂಬ ಹೆಸರಿನಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿದ್ದಳು
  213. ಲಂಕೆಗೆ ಹಾರುವಾಗ ಸಾಗರದ ಮಧ್ಯೆ ಹನುಮಂತನಿಗೆ ಎದುರಾಗಿದ್ದು ಯಾರು? ಉತ್ತರ : ಸಾಗರದೊಳಗೆ ಹುದುಗಿದ್ದ ಮೈನಾಕ ( ಪರ್ವತ)
  214. ಸರ್ಪಗಳ ತಾಯಿ ಯಾರು? ಉತ್ತರ : ಸುರಸೆ
  215. ದೇವತೆಗಳು ರಾಮಭಕ್ತ ಹನುಮನನ್ನು ಪರೀಕ್ಷಿಸಲು ಕೇಳಿಕೊಂಡಿದ್ದು ಯಾರನ್ನು? ಉತ್ತರ : ಸುರಸೆ
  216. ಸುರಸೆಯು ಹನುಮಂತನ ಮುಂದೆ ಯಾವ ರೂಪದಲ್ಲಿ ಪ್ರತ್ಯಕ್ಷಳಾದಳು? ಉತ್ತರ : ರಾಕ್ಷಸಿಯ ರೂಪದಲ್ಲಿ
  217. ಸುರಸೆಯು ಹನುಮನಿಗೆ ಏನು ಹೇಳಿದಳು? ಉತ್ತರ : ನನ್ನ ಬಾಯಿಯೊಳಗೆ ನೀನು ಬಂದು ಬಿಳಬೇಕು ಎಂದಳು
  218. ಸುರಸೆಯಿಂದ ತಪ್ಪಿಸಿಕೊಳ್ಳಲು ಹನುಮ ಮಾಡಿದ ಉಪಾಯವೇನು? ಉತ್ತರ : ನನ್ನ ಬಾಯಿಯೊಳಗೆ ನೀನು ಬಂದು ಬೀಳಬೇಕು ಎಂದಳು
  219. ರಾಹುವಿನ ತಾಯಿ ಯಾರು? ಉತ್ತರ : ಸಿಂಹಿಕೆ
  220. ರಾವಣನು ಸಮುದ್ರದಲ್ಲಿ ಯಾರನ್ನು ಕಾವಲು ನಿಲ್ಲಿಸಿದ್ದನು? ಉತ್ತರ ‌: ಸಿಂಹಿಕೆಯನ್ನು
  221. ಸಿಂಹಿಕೆಯ ಕೆಲಸವೇನು? ಉತ್ತರ: ಸಮುದ್ರದ ಮೇಲೆ ಹಾರುವ ಯಾವ ವಸ್ತುವಿನ ನೆರಳನ್ನೇ ಆಗಲಿ ತಿಂದು ಬಿಡುವುದು!
  222. ನೆರಳನ್ನು ತಿಂದಾಗ ಏನಾಗುತ್ತದೆ? ಉತ್ತರ: ನೆರಳಿನೊಂದಿಗೆ ಆ ವ್ಯಕ್ತಿಯೂ/ ವಸ್ತುವೂ ಸಿಂಹಿಕೆಯ ಬಾಯಿಯೊಳಗೆ ಬಂದು ಬೀಳುತ್ತದೆ
  223. ಸಿಂಹಿಕೆ ಹನುಮಾನ ನೆರಳನ್ನು ನುಂಗಿದಳೇ? ಉತ್ತರ : ಹೌದು. ನೆರಳಿನ ಜೊತೆಗೆ ಹನುಮನು ಅವಳ ಬಾಯಿಗೆ ಬಿದ್ದ
  224. ಹನುಮನ ನುಂಗಿದ ಸಿಂಹಿಕೆಯ ಗತಿ ಏನಾಯಿತು? ಉತ್ತರ : ಸಿಂಹಿಕೆಯ ಬಾಯಿಗೆ ಬಿದ್ದ ಹನುಮ ತೋಳ ಹೊಟ್ಟೆಯನ್ನು ಸೇರಿ ಬಲು ದೊಡ್ಡದಾಗಿ ಬೆಳೆದು ಹೊಟ್ಟೆಯನ್ನು ಸೀಳಿ ಹೊರಬಂದ
  225. ಲಂಕೆಗೆ ಬಂದ ಹನುಮ ತನ್ನ ಪಾದಗಳನ್ನು ಮೊದಲ ಬಾರಿಗೆ ಎಲ್ಲಿ ಉರಿದ? ಉತ್ತರ : ತ್ರೀಕೂಟದ ಗಿರಿಶಿಖರದಲ್ಲಿ
  226. ಲಂಕೆಯ ಪುರ ದೇವತೆ ಯಾರು ? ಉತ್ತರ : ಲಂಕಿಣಿ
  227. ಹನುಮನನ್ನು ಕಂಡ ಲಂಕಿಣಿ ಯಾವ ಪ್ರಶ್ನೆ ಕೇಳಿದಳು? ಉತ್ತರ: ಅಪ್ಪಣೆಯಿಲ್ಲದೆ ರಾತ್ರಿಯ ವೇಳೆ ಲಂಕೆಗೆ ನುಸುಳುತ್ತಿರುವ ನೀನು ಯಾರು ಎಂದಳು
  228. ಹನುಮಾನ್ ಲಂಕಿಣಿಯನ್ನು ಹೇಗೆ ಶಿಕ್ಷಿಸಿದ? ಉತ್ತರ : ಅವಳನ್ನು ಸ್ಪರ್ಶಿಸಿದನಷ್ಟೇ ಅಷ್ಟಕ್ಕೇ ಲಂಕಿಣಿಯ ಬೆನ್ನು ಮೂಳೆ ಮುರಿದಂತಾಯಿತು
  229. ಲಂಕಿಣಿಗೆ ಬ್ರಹ್ಮದೇವನು ಏನೆಂದು ಎಚ್ಚರಿಸಿದ್ದ? ಉತ್ತರ: ಲಂಕೆಗೆ ವಾನರನೊಬ್ಬ ಕಾಲಿಟ್ಟ ಕ್ಷಣದಿಂದ ಲಂಕೆಯ ಅವನತಿ ಆರಂಭವಾಗುತ್ತದೆ ಎಂದು
  230. ಲಂಕೆಯಲ್ಲಿ ಹರಿನಾಮ ಸ್ಮರಣೆ ಮಾಡುತ್ತಿದ್ದ ಏಕೈಕ ವ್ಯಕ್ತಿ ಯಾರು? ಉತ್ತರ : ವಿಭೀಷಣ
  231. ರಾವಣನ ಅರಮನೆಯಲ್ಲಿ ಯಾರನ್ನು ಕಂಡ ಹನುಮಂತನು ಸೀತಾದೇವಿಯನ್ನು ತಪ್ಪಾಗಿ ತಿಳಿದು? ಉತ್ತರ : ಮಂಡೋದರಿ
  232. ಸೀತೆಯು ರಾವಣನೊಡನೆ ಮಾತನಾಡುವಾಗ ಹೇಗೆ ಮಾತನಾಡುತ್ತಿದ್ದಳು? ಉತ್ತರ : ಒಂದು ಹುಲ್ಲುಕಡ್ಡಿಯನ್ನು ಮುಂದಿಟ್ಟುಕೊಂಡು ಅದರೊಂದಿಗೆ ಮಾತನಾಡುತ್ತಿದ್ದಳು
  233. ಭೂಮಿಯ ಮೇಲಿನ ಅತ್ಯಂತ ಸುಂದರವಾದ ಉದ್ಯಾನವನ ಯಾವುದಾಗಿತ್ತು? ಉತ್ತರ : ರಾವಣನ ಅಶೋಕವನ
  234. ದೇವಲೋಕದ ಅತ್ಯಂತ ಸುಂದರವಾದ ಯಾವುದು? ಉತ್ತರ : ನಂದನವನ
  235. ನಂದನವನ ಯಾರಿಗೆ ಸೇರಿದ್ದು? ಉತ್ತರ : ದೇವೇಂದ್ರನಿಗೆ
  236. ಅಶೋಕವನದಲ್ಲಿ ಯಾವೆಲ್ಲ ಮರಗಳು ಇದ್ದವು? ಉತ್ತರ : ಭೂಮಿಯ ಮೇಲಿನ ಅತ್ಯಂತ ರಮಣೀಯ ಮರಾಗಿಡಗಳೆಲ್ಲವೂ ಅಶೋಕವನದಲ್ಲಿತ್ತು
  237. ಆಂಜನೇಯನ ಅಶೋಕವನಕ್ಕೆ ಕಾಲಿಟ್ಟಾಗ ಆ ಪರಿಸರದ ತುಂಬೆಲ್ಲ ಯಾವ ಬಣ್ಣದ ಹೂವುಗಳು ಅರಳಿದ್ಧವು? ಉತ್ತರ : ಬಿಳಿಯ ಬಣ್ಣದ ಹೂಗಳು
  238. ಆಂಜನೇಯನಿಗೆ ಬಿಳಿಯ ಬಣ್ಣದ ಹೂಗಳು ಹೇಗೆ ಕಂಡವು? ಉತ್ತರ : ಬಿಳಿಯ ಬಣ್ಣದ ಹೂಗಳು ಕೆಂಪಗೆ ಕಂಡವು
  239. ಬಿಳಿಯ ಹೂಗಳು ಕೆಂಪಗೆ ಕಂಡುದು ಹೇಗೆ? ಉತ್ತರ : ರಾವಣನ ಮೇಲೆ ಕೆಂಡದಂಥಾ ಕೋಪದಿಂದ ಆಂಜನೆಯನಿಗೆ ಬಿಳಿಯ ಹೂಗಳೆಲ್ಲವೂ ಕೆಂಪಗೆ ಕಂಡಿದ್ದವು
  240. ಸೀತಾಮಾತೆ ಅಶೋಕ ವನದಲ್ಲಿ ಏನನ್ನು ಸೇವಿಸುತ್ತಿದ್ದಳು ? ಉತ್ತರ : ಕೇವಲ ಹಾಲನ್ನವನ್ನು
  241. ಹಾಲನ್ನವನ್ನು ಯಾರು ಕಳಿಸುತ್ತಿದ್ದರು? ಉತ್ತರ‌: ಸ್ವತಃ ದೇವೆಂದ್ರ
  242. ಸೀತೆಯು ಹಾಲನ್ನವನ್ನು ಎಷ್ಟು ಭಾಗ ಮಾಡಿ ಸೇವಿಸುತ್ತಿದ್ದಳು? ಉತ್ತರ : ರಾಮ ಹಾಗೂ ಲಕ್ಷ್ಮಣರಿಗೆ ಎರಡು ಭಾಗ ಮಾಡಿ, ಅದರಲ್ಲಿ ರಾಮನ ಪಾಲಿನ ಅರ್ಧ ಹಾಲನ್ನವನ್ನು ಮಾತ್ರ ಸೇವಿಸುತ್ತಿದ್ದಳು
  243. ಸೀತೆಯ ಹಾಲನ್ನವನ್ನು ಭಾಗ ಮಾಡಿ ಸೇವಿಸುವುದನ್ನು ಕಂಡ ಪಕ್ಷಿ ಯಾವುದು ? ಉತ್ತರ: ಹದ್ದುಗಳ ರಾಜ ಸಂಪಾತಿಯ ಮಗ ಸುಪಾರ್ಶ್ವ
  244. ದುಃಖತಪ್ತ ಸೀತೆ ಇದ್ದದ್ದು ಎಲ್ಲಿ ? ಉತ್ತರ: ಅಶೋಕವನದಲ್ಲಿ
  245. ಅಶೋಕವನ ಎಂದರೇನು? ಉತ್ತರ: ಶೋಕವೇ ಇಲ್ಲದ ಅತ್ಯಂತ ಸುಂದರ ಉದ್ಯಾನವನವೇ ಅಶೋಕವನ
  246. ಅಶೋಕ ವೃಕ್ಷಕ್ಕಿರುವ ಇಮ್ನೊಂದು ಹೆಸರೇನು? ಉತ್ತರ : ಶಿಂಶಪಾವೃಕ್ಷ
  247. ಸೀತಾಮಾತೆಯ ಸುತ್ತಲಿದ್ದ ರಾಕ್ಷಸಿಯರು ಯಾರು ಯಾರು? ಉತ್ತರ : ತ್ರಿಜಟೆ, ಭೂರಿಜಟೆ, ಜಟೆ, ವಿಘಸೆ, ಅಯೋಮುಖಿ, ವಿಕಟೆ, ಚಂಡೊದರಿ, ವಿನತೆ, ಅಶ್ವಮುಖಿ
  248. ರಕ್ಕಸಿಯರಲೆಲ್ಲಾ ಸಾಧು ಸ್ವಭಾವದ ರಕ್ಕಸಿ ಯಾರು? ಉತ್ತರ : ತ್ರಿಜಟೆ ಎಂಬ ವೃದ್ದೆ
  249. ಆಂಜನೇಯನು ಅಶೋಕ ವನವನ್ನು ಪ್ರವೇಶಿಸಿದ ಕೂಡಲೇ ಸೀತೆಯೊಂದಿಗೆ ಯಾಕೆ ಮಾತನಾಡಲಿಲ್ಲ? ಉತ್ತರ : ಅವನಿಗೆ ಯಾರೋ ಬರುತ್ತಿರುವ ಸುಳಿವು ಸಿಕ್ಕಿತು
  250. ಅಶೋಕವನಕ್ಕೆ ಆ ವೇಳೆ ಹೊತ್ತಿನಲ್ಲಿ ಪ್ರವೇಶಿಸಿದ್ದು ಯಾರು? ಉತ್ತರ: ರಾವಣನು ಪತ್ನಿ ಸಮೇತ ಪ್ರವೇಶಿಸಿದ್ದ
  251. ರಾವಣನನ್ನು ಕಂಡ ಆಂಜನೇಯ ಮಾಡಿದ್ದೇನು? ಉತ್ತರ: ಅಶೋಕ ವೃಕ್ಷದ ಮೇಲೆ ಸದ್ದಿಲ್ಲದೇ ಕುಳಿತುಕೊಂಡ
  252. ರಾವಣನು ಸೀತೆಯನ್ನು ಕಂಡು ಹೇಳಿದ್ದೆನು? ಉತ್ತರ: ಇನ್ನೊಂದು ತಿಂಗಳೊಳಗೆ ನನ್ನವಳಾಗದಿದ್ದರೆ ನಿನ್ನನ್ನು ಕೊಲ್ಲುವೆ ಎಂದ
  253. ಅಚ್ಚರಿಯಿಂದ ಮರದ ಮೇಲೆ ನೋಡಿದ ಸೀತಾಮಾತೆಯ ಕಣ್ಣಿಗೆ ಕಂಡದ್ದು ಯಾರು? ಉತ್ತರ: ಕೈಜೋಡಿಸಿ ಕುಳಿತಿದ್ದ ಗೇಣುದ್ದದ ಆಂಜನೇಯ
  254. ಸೀತಾಮಾತೆಯು ಆಂಜನೆಯನನ್ನು ಯಾರೆಂದು ತಿಳಿದಳು? ಉತ್ತರ: ಮಾಯಾವಿ ರಾವಣನೇ ಈ ರೂಪದಲ್ಲಿ ಬಂದಿದ್ದಾನೆ ಎಂದು ತಿಳಿದಳು
  255. ಹನುಮನು ತನ್ನೊಂದಿಗೆ ಸೀತಾಮಾತೆಯನ್ನು ಕರೆದೊಯ್ಯುವೆ ಎಂದಾಗ ಸೀತೆ ಏನು ಹೇಳಿದಳು ? ಉತ್ತರ: ಶ್ರೀರಾಮನು ಲಂಕಾಧೀಶನನ್ನು ಸದೆಬಡಿದೇ ನನ್ನನ್ನು ಕೊಂಡೊಯ್ಯುವುದು ಧರ್ಮ ಎಂದಳು
  256. ಸೀತಾಮಾತೆಗೆ ಹನುಮನು ಕೊಟ್ಟ ಆಭರಣ ಯಾವುದು? ಉತ್ತರ: ಶ್ರೀರಾಮಚಂದ್ರನ ಮುದ್ರಾ ಉಂಗುರ
  257. ಸೀತಾಮಾತೆ ರಾಮಚಂದ್ರನಿಗೆ ಕೊಡು ಎಂದು ಹೇಳಿ ಕೊಟ್ಟ ಆಭರಣ ಯಾವುದು ? ಉತ್ತರ: ತನ್ನ ನೆತ್ತಿಯ ಮೆಲಿದ್ದ ಚೂಡಾಮಣಿ
  258. ರಾವಣನಿಗೆ ಸೀತೆಯು ಯಾವ ಉತ್ತರವನ್ನು ಕೊಟ್ಟಳು? ಉತ್ತರ: ನನ್ನ ರಾಮಪ್ರಭು ಬಂದೇ ಬರುತ್ತಾನೆ. ನಿನ್ನನ್ನು ಕೊಂದು ನನ್ನನ್ನು ಕರೆದೊಯ್ಯುತ್ತಾನೆ ಎಂದಳು
  259. ಕುಪಿತ ರಾವಣನು ನಿರ್ಗಮಿಸಿದ ನಂತರ ರಕ್ಕಸಿಯರೆಲ್ಲ ನಿದ್ರೆಗೆ ಶರಣಾದದ್ದು ಹೇಗೆ ? ಉತ್ತರ: ನಿದ್ರಾದೇವಿಯ ಉಪಕಾರದಿಂದ ರಕ್ಕಸಿಯರಿಗೆಲ್ಲಾ ನಿದ್ರೆ ಆವರಿಸಿತು
  260. ಆಂಜನೆಯನು ಅಶೋಕವನಕ್ಕೆ ಬಂದಾಗ ಅವನ ಗಾತ್ರ ಎಷ್ಟಿತ್ತು? ಉತ್ತರ: ಗೇಣುದ್ದ ಮಾತ್ರ
  261. ಸೀತಾಮಾತೆಯ ಕಿವಿಗೆ ಆಂಜನೆಯನ ಯಾವ ನುಡಿಗಳು ಬಿದ್ದವು? ಉತ್ತರ: ರಾಮನ ಬಗ್ಗೆ ಭಕ್ತಿಯಿಂದ ಯಾರೋ ಗುನುಗುತ್ತಿರುವುದು ಸೀತಾಮಾತೆಯ ಕಿವಿಗೆ ಬಿದ್ದವು
  262. ಹೊರಡುತ್ತೆನೆಂದು ಹೊರಟ ಹನುಮ ಅಶೋಕವನವನ್ನು ಏಕೆ ಧ್ವಂಸ ಮಾಡಿದ ? ಉತ್ತರ: ತನ್ನ ಪರಾಕ್ರಮ ರಾವಣನಿಗೆ ತಿಳಿಯಲಿ ಎಂದು!
  263. ರಾವಣನು ಅಂಕೆಯಿಲ್ಲದ ಕಪಿಯನ್ನು ಸೆರೆಹಿಡಿದು ತಾ ಎಂದು ಯಾರನ್ನು ಕಳುಹಿಸಿದ? ಉತ್ತರ: ತನ್ನ ಕಿರಿಯ ಪುತ್ರ ಅಕ್ಷಕುಮಾರನನ್ನು ಕಳಿಸಿದ
  264. ರಾವಣನ ಮತ್ತೊಬ್ಬ ಮಗನ ಹೆಸರೇನು? ಉತ್ತರ: ಇಂದ್ರಜಿತ್
  265. ಇಂದ್ರಜಿತ್ ಎಂಬ ಹೆಸರು ಅವನಿಗೆ ಏಕೆ ಬಂತು? ಉತ್ತರ: ಇಂದ್ರನನ್ನೇ ಸೋಲಿಸಿದ ಕೀರ್ತಿಯಿಂದ ಅವನಿಗೆ ಆ ಹೆಸರು ಬಂತು

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ