Ram Navami 2022: ರಾಮ ನವಮಿ ಆಚರಣೆ ಹೇಗಿರಬೇಕು? ಇಲ್ಲಿದೆ ಮಾಹಿತಿ
Ram Navami: ರಾಮ ನವಮಿ ಏಪ್ರಿಲ್ 10 ರಂದು 1:32 ಕ್ಕೆ ಪ್ರಾರಂಭವಾಗಿ ಏಪ್ರಿಲ್ 11 ರಂದು 3:15 ಕ್ಕೆ ರಾಮ ನವಮಿ ಮುಕ್ತಾಯಗೊಳ್ಳಲಿದೆ. ರಾಮನವಮಿ ಆಚರಣೆ ಹೇಗಿರಬೇಕು? ಇಲ್ಲಿದೆ ಮಾಹಿತಿ.
ದುರ್ಗಾ ದೇವಿಯ ಭಕ್ತಿ ಚೈತ್ರ ನವರಾತ್ರಿಯನ್ನು ಈ ಬಾರಿ ಏಪ್ರಿಲ್ 2ರಿಂದ- ಏಪ್ರಿಲ್ 11ರವರೆಗೆ ಆಚರಿಸಲಾಗುತ್ತದೆ. ಒಂಬತ್ತು ದಿನಗಳ ಉಪವಾಸ ಮತ್ತು ಭಕ್ತಿ ಚೈತ್ರ ನವರಾತ್ರಿಯು ಮುಕ್ತಾಯಗೊಳ್ಳುವ 9ನೇ ದಿನವನ್ನು ರಾಮ ನವಮಿ (Sri Rama Navami) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನವರಾತ್ರಿ ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ. ಇದು ಚೈತ್ರ ನವರಾತ್ರಿಯಾದರೆ, ಅಕ್ಟೋಬರ್- ನವೆಂಬರ್ ಸಂದರ್ಭದಲ್ಲಿ ಶಾರದೀಯ ನವರಾತ್ರಿಯನ್ನು ಆಚರಿಸಲಾಗುತ್ತದೆ. ಶಾರದೀಯ ನವರಾಥ್ರಿಯು ವಿಜಯದಶಮಿಯೊಂದಿಗೆ ಮುಕ್ತಾಯವಾದರೆ, ಚೈತ್ರ ನವರಾತ್ರಿಯು ರಾಮ ನವಮಿಯೊಂದಿಗೆ ಮುಕ್ತಾಯವಾಗುತ್ತದೆ. ನಮ್ಮಲ್ಲಿ ಚೈತ್ರ ನವರಾತ್ರಿಗಿಂತ ರಾಮ ನವಮಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಏಪ್ರಿಲ್ 10 ರಂದು 1:32 ಕ್ಕೆ ಪ್ರಾರಂಭವಾಗಿ ಏಪ್ರಿಲ್ 11 ರಂದು 3:15 ಕ್ಕೆ ರಾಮ ನವಮಿ ಮುಕ್ತಾಯಗೊಳ್ಳಲಿದೆ. ರಾಮ ನವಮಿ ಆಚರಣೆ ಹೇಗಿರಬೇಕು? ಇಲ್ಲಿದೆ ಮಾಹಿತಿ.
ರಾಮನವಮಿ ಆಚರಣೆ ಹೀಗಿರಲಿ:
- ದಶಮಿಯವರೆಗೆ ಎಲ್ಲಾ ನವರಾತ್ರಿ ದಿನಗಳಲ್ಲಿ ಅಖಂಡ ದೀಪವನ್ನು ಬೆಳಗಿಸಿ. ಇದು ನಿಮ್ಮಿಂದ ಸಾಧ್ಯವಾಗದಿದ್ದರೆ, ಹಬ್ಬ ಮುಗಿಯುವವರೆಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಆರತಿಯನ್ನು ನಡೆಸಬಹುದು.
- ಎಲ್ಲಾ ನವರಾತ್ರಿ ದಿನಗಳಲ್ಲಿ ದುರ್ಗಾ ಚಾಲೀಸಾ ಮತ್ತು ದುರ್ಗಾ ಸಪ್ತಶತಿ ಪಠಿಸಬಹುದು.
- ಉಪವಾಸ ಮಾಡುವಾಗ ದೇಹವನ್ನು ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಬೇಕು. ಇದಕ್ಕೆ ನಿಂಬೆ ರಸ, ಎಳನೀರು, ಮಜ್ಜಿಗೆ ಮತ್ತು ಗ್ರೀನ್ ಟೀ ಉತ್ತಮ ಆಯ್ಕೆ.
- ನೀವು ಕೆಲಸ ಮಾಡುತ್ತಿದ್ದರೆ, ಬಾದಾಮಿ, ವಾಲ್‌ನಟ್ಸ್ ಮತ್ತು ಪಿಸ್ತಾಗಳಂತಹ ಡ್ರೈಫ್ರೂಟ್ಸ್ ತಿನ್ನಬಹುದು.
- ತಪ್ಪಾದ ನಡೆನುಡಿಗಳನ್ನು ಮಾಡದೇ ಆದಷ್ಟು ಶ್ರದ್ಧೆಯಿಂದ, ಭಕ್ತಿಯಿಂದ ನಡೆದುಕೊಳ್ಳಿ.
ಆಚರಣೆಯಲ್ಲಿ ಹೀಗೆ ಮಾಡಬೇಡಿ:
- ತಾಮಸ ಆಹಾರ ಮತ್ತು ದುಶ್ಚಟಗಳಿಂದ ದೂರವಿರಿ.
- ಈರುಳ್ಳಿ ಮತ್ತು ಬೆಳ್ಳುಳ್ಳಿ ಹಬ್ಬದ ಸಂದರ್ಭಗಳಲ್ಲಿ ತಿನ್ನದೇ ಇರುವುದು ದೀರ್ಘಕಾಲದಿಂದ ನಡೆದುಕೊಂಡ ಬಂದ ನಂಬಿಕೆ. ಅದನ್ನು ಅನುಸರಿಸಲು ಯತ್ನಿಸಿ.
- ಸಾಮಾನ್ಯವಾಗಿ ಹಬ್ಬದ ಸಂದರ್ಭಗಳಲ್ಲಿ ಕೂದಲು ಕತ್ತರಿಸುವುದು, ಶೇವ್ ಮಾಡುವುದು, ಟ್ರಿಮ್ ಮಾಡುವುದನ್ನು ಮಾಡುವುದಿಲ್ಲ. ಈ ನವರಾತ್ರಿಯಲ್ಲೂ ಇದನ್ನು ಅನುಸರಿಸಿ.
- ಸಾತ್ವಿಕ ಜೀವನಶೈಲಿಯನ್ನು ರೂಢಿಸಿಕೊಳ್ಳಿ. ಇತರರ ಟೀಕೆ, ನಿಂದನೆ ಮೊದಲಾದವುಗಳಿಂದ ದೂರವಿದ್ದು, ನಿಮ್ಮ ಪೂಜೆಯಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಿ.
(ವಿ.ಸೂ.: ಸಾಮಾನ್ಯ ನಂಬಿಕೆಗಳು ಹಾಗೂ ರೂಡಿಯಲ್ಲಿರುವ ವಿಚಾರಗಳನ್ನು ಆಧರಿಸಿ ಈ ಮಾಹಿತಿ ನೀಡಲಾಗಿದೆ)
ಇದನ್ನೂ ಓದಿ: Ram Navami 2022: ಶ್ರೀ ರಾಮ ನವಮಿಯ ಆಧ್ಯಾತ್ಮಿಕ ಮಹತ್ವ, ಪೂಜಾ ಮುಹೂರ್ತ, ಆಯೋಧ್ಯೆಯ ಅರ್ಥವೂ ವಿವರಿಸಲಾಗಿದೆ
Chanakya Niti: ನಾವು ಬಯಸಿದರೆ ನಾಯಿಯಿಂದಲೂ ಬಹಳಷ್ಟು ಕಲಿಯಬಹುದು, ನಾಯಿಯ 4 ವಿಶೇಷ ಗುಣಗಳಿವು- ಚಾಣಕ್ಯ ನೀತಿ