AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಕರ್ಣದಲ್ಲಿ ನಡೆಯಿತು ಆಶ್ಚರ್ಯಕರ ಘಟನೆ ? ಇಲ್ಲಿ ಬೆಳೆದು ನಿಂತ ರುದ್ರಾಕ್ಷಿ ಮರ

Special Report : ಗೋಕರ್ಣದಲ್ಲಿ ಬೆಳೆದು ನಿಂತ ಈ ರುದ್ರಾಕ್ಷಿ ಮರ. ಸಾಮಾನ್ಯವಾಗಿ ಶೀತ ಪ್ರದೇಶಗಳಲ್ಲಿ ಬೆಳೆಯುವ ಗಿಡ- ಮರಗಳನ್ನು ಉಷ್ಣತೆ ಇರುವ ಕರಾವಳಿ ಪ್ರದೇಶದಲ್ಲಿ ಬೆಳೆಯುವುದು ಕಷ್ಟವೇ ಸರಿ. ಆದರೆ, ಪ್ರಕೃತಿ ಮಾತ್ರ ಸಪ್ರೈಸ್.

ಗೋಕರ್ಣದಲ್ಲಿ ನಡೆಯಿತು ಆಶ್ಚರ್ಯಕರ ಘಟನೆ ? ಇಲ್ಲಿ ಬೆಳೆದು ನಿಂತ ರುದ್ರಾಕ್ಷಿ ಮರ
ರುದ್ರಾಕ್ಷಿ ಮರ
TV9 Web
| Edited By: |

Updated on: Apr 10, 2022 | 7:30 AM

Share

ನಮ್ಮ ಪ್ರಕೃತಿ ಹಲವು ವಿಸ್ಮಯಗಳ ಆಗರ, ಮನುಷ್ಯ ಯಾವುದು ಅಸಾಧ್ಯ ಎನ್ನುತ್ತಾವೆ. ಅದನ್ನ ಸಾಧ್ಯ ಮಾಡಿ ತೋರಿಸುವ ಶಕ್ತಿ ಪ್ರಕೃತಿಗೆ ಇದೆ. ಇಂತಹ ದಿವ್ಯ ಶಕ್ತಿಯನ್ನು ಭಗವಂತ ಈ ಪ್ರಕೃತಿಗೆ ಕರುಣಿಸಿದ್ಧಾನೆ.. ಇದಕ್ಕೆ ಉತ್ತಮ ಉದಾಹರಣೆ ಎಂಬುವಂತೆ, ಗೋಕರ್ಣದಲ್ಲಿ ಒಂದು ಆಶ್ಚರ್ಯಕರ ಘಟನೆ ನಡೆದಿದೆ. ಅರೆ ಅದೇನು ಅಂತೀರಾ..? ಇಲ್ಲಿದೆ ನೋಡಿ.

ಗೋಕರ್ಣದಲ್ಲಿ ಬೆಳೆದು ನಿಂತ ಈ ರುದ್ರಾಕ್ಷಿ ಮರ. ಸಾಮಾನ್ಯವಾಗಿ ಶೀತ ಪ್ರದೇಶಗಳಲ್ಲಿ ಬೆಳೆಯುವ ಗಿಡ- ಮರಗಳನ್ನು ಉಷ್ಣತೆ ಇರುವ ಕರಾವಳಿ ಪ್ರದೇಶದಲ್ಲಿ ಬೆಳೆಯುವುದು ಕಷ್ಟವೇ ಸರಿ. ಆದರೆ, ಪ್ರಕೃತಿ ಮಾತ್ರ ಸಪ್ರೈಸ್. ಎನ್ನುವಂತೆ ರುದ್ರಾಕ್ಷಿ ಮರ ಬೆಳೆದು ಪಂಚಮುಖಿ ರುದ್ರಾಕ್ಷಿಯನ್ನ ನೀಡುತ್ತಿದೆ. ಇನ್ನು ಇದನ್ನು ಕಂಡ ಗೋಕರ್ಣದ ಜನ ಅಚ್ಚರಿಗೆ ಒಳಗಾಗಿದ್ದಾರೆ. ಸಾಮಾನ್ಯವಾಗಿ ನೇಪಾಳ, ಹಿಮಾಚಲ ಪ್ರದೇಶ, ಅಸ್ಸಾಂ ಮುಂತಾದ ಶೀತ ಪ್ರದೇಶದಲ್ಲಿ ಬೆಳೆಯುವ ರುದ್ರಾಕ್ಷಿ ಮರ, ಕರಾವಳಿ ಪ್ರದೇಶವಾಗಿರುವ ಗೋಕರ್ಣದಲ್ಲೂ ಬೆಳೆದು ನಿಂತಿದೆ. ಗೋಕರ್ಣದ ಕವಳೆ ಮಠದಲ್ಲಿ ಈ ರುದ್ರಾಕ್ಷಿ ಮರ ಬೆಳೆದು ನಿಂತಿದ್ದು, ಶಿವನ  ಪವಾಡದಿಂದಲೇ ಈ ಗಿಡ ಬೆಳೆಯಲು ಸಾಧ್ಯವಾಗಿದೆ ಅನ್ನೋದು ಭಕ್ತರು ಅಭಿಪ್ರಾಯ. ಇನ್ನೂ ಸಾಮಾನ್ಯವಾಗಿ ರುದ್ರಾಕ್ಷಿ ಮರಗಳನ್ನು ಗೋಕರ್ಣದಲ್ಲಿ ಬೆಳೆದರು ರುದ್ರಾಕ್ಷಿ ಬಿಡುವುದು ಮಾತ್ರ ಕಷ್ಟ. ಆದರೆ ಕವಳೆ ಮಠದ ಶ್ರೀ ಚಕ್ರೇಶ್ವರನ ಸನ್ನಿಧಿಯಲ್ಲಿ ರುದ್ರಾಕ್ಷಿ ಮರ ಸೊಂಪಾಗಿ ಬೆಳೆಯುವುದಲ್ಲದೆ. ನೂರಾರು ಪಂಚಮುಖಿ ರುದ್ರಾಕ್ಷಿಯನ್ನ ಶಿವ ಆಶೀರ್ವಾದದಂತೆ ನೀಡುತ್ತಿದೆ ಎನ್ನುತ್ತಾರೆ ಭಕ್ತರು.

ಇನ್ನು ಇದೇ ಗಿಡದಲ್ಲಾದ ರುದ್ರಾಕ್ಷಿಯಿಂದ ತಯಾರಿಸಿದ ಹಾರವನ್ನು ವಿಶೇಷವಾಗಿ ಸಾರ್ವಭೌಮ ಗೋಕರ್ಣ ಮಹಾಬಲೇಶ್ವರನ ಉತ್ಸವ ಮೂರ್ತಿಗೆ ಸಮರ್ಪಣೆ ಮಾಡಲಾಗಿದೆ. ಸ್ಥಳೀಯ ಕವಳೆ ಮಠದಲ್ಲಿ ಹುಲುಸಾಗಿ ಬೆಳೆದ ಈ ಗಿಡ ರುದ್ರಾಕ್ಷಿ ಫಲವನ್ನು ನೀಡುತ್ತಿರುವುದು ಶಿವನ ಕೃಪೆಯಿಂದಲೇ ಎನ್ನಲಾಗುತ್ತಿದೆ, ಮಠದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಅವರು ವಿಶೇಷ ಆಸಕ್ತಿಯಿಂದ ಬೆಳೆಸಿದ ಈ ಗಿಡವು ಸುಮಾರು 10 ವರ್ಷದಲ್ಲಿ ಫಲ ನೀಡಿದೆ. ಇಲ್ಲಿನ ಮತ್ತೊಂದು ಅಚ್ಚರಿಯೆಂದರೆ, ಈಗಾಗಲೇ ಕೆಲವರು ಗಿಡ ನೆಟ್ಟು ರುದ್ರಾಕ್ಷಿ ಬೆಳೆಯಲು ಪ್ರಯತ್ನಿಸಿ ವಿಫಲವಾಗಿದ್ದು, ಕವಳೆ ಮಠದಲ್ಲಿ ಮಾತ್ರ ಸೊಂಪಾಗಿ ಬೆಳೆದಿದೆ.‌ ಕರಾವಳಿ ಭಾಗದಲ್ಲಿ ವರ್ಷದ 6ರಿಂದ 8 ತಿಂಗಳು ವಿಪರೀತ ಸೆಖೆ ಇರುವ ಕಾರಣ ಇಲ್ಲಿ ರುದ್ರಾಕ್ಷಿ ಬೆಳೆಯದು ಕಷ್ಟ ಎಂದು ತೀರ್ಮಾನಿಸಲಾಗಿತ್ತು‌. ಆದರೆ, ಗೋಕರ್ಣ ಕ್ಷೇತ್ರದಲ್ಲಿ ಶಿವನ ಸಂಕೇತವಾದ ರುದ್ರಾಕ್ಷಿ ಬೆಳೆದಿದೆ ಅನ್ನೋದು ಭಕ್ತರ ವಿಶ್ಲೇಷಣೆ. ಇನ್ನು ಶಿವರಾತ್ರಿಯಂದು ಮರದಿಂದ ತೆಗೆದ ರುದ್ರಾಕ್ಷಿಯನ್ನು ಮಠದ ಶ್ರೀಗಳು ಆತ್ಮಲಿಂಗಕ್ಕೆ ಪೂಜಾ ಸಮಯದಲ್ಲಿ ಸಮರ್ಪಣೆ ಮಾಡಿದ್ದರು. ನಂತರ ಶ್ರೀಗಳು ಬೆಳ್ಳಿಯಲ್ಲಿ ಕಟ್ಟಿ ರುದ್ರಾಕ್ಷಿ ಮಾಲೆಯನ್ನು ನಿರ್ಮಿಸಿದ್ದಾರೆ. ಈ ಹಾರದಲ್ಲಿ ಪಂಚಮುಖಿಯ 54 ರುದ್ರಾಕ್ಷಿಗಳಿದ್ದು, ಸುಂದರ ಹಾರ ನಿರ್ಮಿಸಲಾಗಿದೆ. ಈ ವಿಶೇಷ ಮಾಲೆಯನ್ನ ಶ್ರೀ ಮಹಾಬಲೇಶ್ವರನ ಉತ್ಸವ ಮೂರ್ತಿಗೆ ಸಮರ್ಪಿಸಲಾಗಿದೆ. ಇನ್ನು ಶ್ರೀ ಮಠದ ವತಿಯಿಂದ ಶ್ರೀ ಮಹಾಬಲೇಶ್ವರ ದೇವಾಲಯದ ಆವರಣದಲ್ಲಿ ರುದ್ರಾಕ್ಷಿ ಗಿಡಗಳನ್ನು ಬೆಳೆಸಲು ಸಂಕಲ್ಪಿಸಲಾಗಿದೆ. ಈ ಭಾರೀ ಸೆಖೆಯ ನಡುವೆಯೂ ಶ್ರೀ ಮಹಾಬಲೇಶ್ವರನ ಸನ್ನಿಧಿಯಲ್ಲಿ ರುದ್ರಾಕ್ಷಿ ಬೆಳೆದಿರುವುದು ಭಕ್ತರಲ್ಲಂತೂ ಹರ್ಷ ಇಮ್ಮಡಿಗೊಳಿಸಿದೆ.

ವಿಲಿಯಂ ಬೆಂಟಿಂಗ್ ಗೂ ಕಾಡಿತ್ತು ಈ ಶಿವಲಿಂಗ

ಇನ್ನೂ ಕವಳೆ ಮಠದ ಶ್ರೀ ಚಕ್ರೇಶ್ವರನ ಇತಿಹಾಸವನ್ನ ಕೊಂಚ ಮೆಲಕು ಹಾಕುವುದಾದರೆ. 1919 ರಲ್ಲಿ ವಿಲಿಯಂ ಬೆಂಟಿಂಗ್‌ನ ಬ್ರಿಟಿಷ್ ಆಡಳಿತವಿದ್ದ ಕಾಲದಲ್ಲಿ. ನುಣುಪಾದ ಈ ಶಿವಲಿಂಗವನ್ನ ನೋಡಿ ಆಕರ್ಷಣೆಗೊಂಡ ವಿಲಿಯಂ ಬೆಂಟಿಗ್ ಶಿವಲಿಂಗವನ್ನು ಲಂಡನ್‌ಗೆ ತೆಗೆದುಕೊಂಡು ಹೋಗಿ ಅಲ್ಲಿ ಮ್ಯೂಸಿಯಂ ನಲ್ಲಿ ಇಡುತ್ತಾನೆ. ಆದರೆ ಅಲ್ಲಿ ಶಿವಲಿಂಗ ಒಂದು ವರ್ಷ ಕಳೆಯುತ್ತಿದ್ದಂತೆ ವಿಲಿಯಂ ಬೆಂಟಿಂಗ್‌ನಿಗೆ ಹಲವು ರೀತಿ ತೊಂದರೆಗಳನ್ನ ಕೊಡಲು ಪ್ರಾರಂಭಿಸುತ್ತಾನೆ ನಂತರದಲ್ಲಿ, ವಿಚಲಿತಗೊಂಡ ಬೆಂಟಿಂಗ್ ಎಲ್ಲರ ಬಳಿ ಕೇಳಲು ಶುರುಮಾಡುತ್ತಾನೆ. ಆ ನಂತರವೇ ಅವನಿಗೆ ಗೊತ್ತಾಗಿದ್ದು ಶಿವಲಿಂಗವನ್ನು ಮೂಲಸ್ಥಾನದಿಂದ ತಂದಿರುವುದು ಈ ಸಮಸ್ಯೆಗಳಿಗೆ ಕಾರಣ ಅಂತಾ. ನಂತರ ತಡ ಮಾಡದೆ ಶಿವಲಿಂಗವನ್ನು 1920 ರಲ್ಲಿ ಮರಳಿ ಗೋಕರ್ಣದ ಕವಳೆ ಮಠಕ್ಕೆ ತಂದು ಪುನಃ ಪ್ರತಿ ಪೂರ್ಣಾನಂದ ಸರಸ್ವತಿ ಸ್ವಾಮೀಜಿ ಸ್ವಾಮೀಜಿಗಳಿಂದ ಪ್ರತಿಷ್ಠಾಪನೆ ಮಾಡಿಸುತ್ತಾನೆ. ಆ ನಂತರದಲ್ಲಿ ಅವನಿಗರ ತೊಂದರೆಗಳು ಕಡಿಮೆ ಆದವು ಎನ್ನುವುದನ್ನ ಇಲ್ಲಿನ ಭಕ್ತರು ನೆನಪಿಸುತ್ತಾರೆ..

ಒಟ್ಟಾರೆಯಾಗಿ ಶೀತ ಪ್ರದೇಶದಲ್ಲಿ ಬೆಳೆಯುತ್ತಿದ್ದ ರುದ್ರಾಕ್ಷಿ ಮರ, ಉಷ್ಣ ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಲುಸಾಗಿ ಬೆಳೆದು ಅದರಲ್ಲೂ ರುದ್ರಾಕ್ಷಿ ನೀಡುತ್ತಿದೆ ಎಂದರೆ ಆಶ್ಚರ್ಯವೇ ಸರಿ.. ಹಲವು ಬಾರಿ ಈ ಭಾಗ ಜನ ರುದ್ರಾಕ್ಷಿ ಬೆಳೆದರು ರುದ್ರಾಕ್ಷಿ ಮಾತ್ರ ಕಂಡಿರಲಿಲ್ಲ.. ಶಿವನ ಪವಾಡ ಎನ್ನುವಂತೆ ಕವಳೆ ಮಠದಲ್ಲಿ ಪಂಚಮುಖಿ ರುದ್ರಾಕ್ಷಿ ಮರ ಬೆಳೆ ಶಿವನ ಆಶೀರ್ವಾದ ರೂಪದಲ್ಲಿ ರುದ್ರಾಕ್ಷಿ ನೀಡುತ್ತಿದೆ…

ವಿಶೇಷ ವರದಿ :- ವಿನಾಯಕ ಬಡಿಗೇರ ಟಿವಿ 9 ಕಾರವಾರ.

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು