Superstition: ಹಾವು ಮನೆಗೆ ಬರುವುದು ಸಾಮಾನ್ಯವೇ? ಶಕುನ ಶಾಸ್ತ್ರ ಹೇಳುವುದೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 16, 2024 | 6:22 PM

ಹಾವು ಮನೆಯೊಳಗೆ ಬರುವುದು ಸಾಮಾನ್ಯ ವಿಷಯವಲ್ಲ. ಶಕುನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಹಾವು ಬರುವುದಕ್ಕೆ ಮತ್ತು ಮನೆಗೆ ಬರುವುದಕ್ಕೆ ಕೆಲವು ಕಾರಣಗಳಿರುತ್ತವೆ. ಇದು ಅನೇಕ ರೀತಿಯ ಸೂಚನೆಗಳನ್ನು ನೀಡುತ್ತದೆ ಎನ್ನಲಾಗುತ್ತದೆ. ಅದರಲ್ಲಿಯೂ ಹಾವುಗಳಲ್ಲಿ ನಾನಾ ರೀತಿಯ ವಿಧಗಳಿರುವುದರಿಂದ ಅವು ಮನೆಗೆ ಬರುವುದಕ್ಕೆ ನಾನಾ ರೀತಿಯ ಅರ್ಥಗಳು ಇರುತ್ತವೆ. ಹಾಗಾದರೆ ಮನೆಗೆ ಹಾವು ಬರುವುದು ಸಾಮಾನ್ಯವೇ? ಇದರ ಅರ್ಥವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Superstition: ಹಾವು ಮನೆಗೆ ಬರುವುದು ಸಾಮಾನ್ಯವೇ? ಶಕುನ ಶಾಸ್ತ್ರ ಹೇಳುವುದೇನು?
Follow us on

ಮನೆಗೆ ಹಾವು ಅಥವಾ ಹಾವಿನ ಮರಿ ಬಂದರೆ ಯಾರಿಗೆ ಭಯವಾಗುವುದಿಲ್ಲ ಹೇಳಿ? ಹಾವನ್ನು ಕಂಡರೆ ಯಾರೇ ಆಗಲಿ ಅಂಜುವುದು ಸಹಜ. ಅದಕ್ಕಿಂತ ಹೆಚ್ಚು ಆಘಾತದ ವಿಷಯ ಏನೆಂದರೆ ಅದು ಹೇಗೆ ಬಂದಿತು ಎಂಬುದು? ಕೆಲವರ ಮನೆಯಲ್ಲಿ ಹಾವು ಬಂದು ಹೋಗುತ್ತದೆ. ಆದರೆ ಕೆಲವರ ಮನೆಯಲ್ಲಿ ತುಂಬಾ ಅಪರೂಪಕ್ಕೆ ಕಾಣಿಸಿಕೊಳ್ಳುತ್ತದೆ. ಆದರೆ ಹಾವು ಮನೆಯೊಳಗೆ ಬರುವುದು ಸಾಮಾನ್ಯ ವಿಷಯವಲ್ಲ. ಶಕುನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಹಾವು ಬರುವುದಕ್ಕೆ ಮತ್ತು ಮನೆಗೆ ಬರುವುದಕ್ಕೆ ಕೆಲವು ಕಾರಣಗಳಿರುತ್ತವೆ. ಇದು ಅನೇಕ ರೀತಿಯ ಸೂಚನೆಗಳನ್ನು ನೀಡುತ್ತದೆ ಎನ್ನಲಾಗುತ್ತದೆ. ಅದರಲ್ಲಿಯೂ ಹಾವುಗಳಲ್ಲಿ ನಾನಾ ರೀತಿಯ ವಿಧಗಳಿರುವುದರಿಂದ ಅವು ಮನೆಗೆ ಬರುವುದಕ್ಕೆ ನಾನಾ ರೀತಿಯ ಅರ್ಥಗಳು ಇರುತ್ತವೆ. ಹಾಗಾದರೆ ಮನೆಗೆ ಹಾವು ಬರುವುದು ಸಾಮಾನ್ಯವೇ? ಇದರ ಅರ್ಥವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ನಾಗರ ಹಾವು ಕಾಣಿಸಿಕೊಂಡರೆ ಏನರ್ಥ?

ದಕ್ಷಿಣ ಭಾರತದಲ್ಲಿ ನಾಗನ ಆರಾಧನೆಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ ಹಾಗಾಗಿ ನಾಗರಹಾವು ಮನೆಗೆ ಬಂದರೆ ಕೆಲವು ಭಾಗಗಳಲ್ಲಿ ಒಳ್ಳೆಯದು ಇನ್ನು ಕೆಲವು ಭಾಗಗಳಲ್ಲಿ ಇದು ಹರಕೆಯನ್ನು ನೆನೆಪಿಸಲು ಬರುತ್ತದೆ ಎಂಬ ಭಾವನೆ ಇದೆ. ಜೊತೆಗೆ ನಾಗರ ಹಾವು ಸಾಮಾನ್ಯವಾಗಿ ಎಲ್ಲರ ಕಣ್ಣಿಗೂ ಬೀಳುವುದಿಲ್ಲ ಹಾಗಾಗಿ ಅದು ಮನೆಗೆ ಬಂದಲ್ಲಿ ಅದರ ಸಾನಿಧ್ಯದಲ್ಲಿ ತೊಂದರೆ ಆಗಿದೆ ಎನ್ನಲಾಗುತ್ತದೆ. ಇನ್ನು ಕೆಲವು ಭಾಗದಲ್ಲಿ ನಾಗ ದೇವರಿಗೆ ಹರಕೆ ಹೇಳಿಕೊಂಡು ಅದನ್ನು ತೀರಿಸದಿದ್ದರೆ ಅದು ಕಣ್ಣಿಗೆ ಕಾಣುತ್ತದೆ ಎಂಬ ನಂಬಿಕೆ ಇದೆ. ಇನ್ನು ಶಕುನ ಶಾಸ್ತ್ರದ ಪ್ರಕಾರ ನಾಗನ ಆರಾಧನೆ ಮಾಡುವ ಮನೆಗಳಲ್ಲಿ ತೊಂದರೆ ಇದ್ದಾಗ ಹಾವು ಕಾಣಿಸಿಕೊಳ್ಳುತ್ತದೆ. ತಾನು ಇದ್ದೇನೆ ಎಂಬ ಅಭಯ ನೀಡಲು ಅದು ಕಾಣಿಸಿಕೊಳ್ಳುತ್ತದೆ ಎನ್ನುವ ನಂಬಿಕೆಯೂ ಇದೆ.

ಕಪ್ಪು ಹಾವು ಕಾಣಿಸಿಕೊಂಡರೆ ಏನರ್ಥ?

ನಿಮಗೆ ನಿಮ್ಮ ಮನೆಯ ಭಾಗದಲ್ಲಿ ಕಪ್ಪು ಹಾವು ಕಾಣಿಸಿಕೊಂಡರೆ ಕೆಲವು ಈಡೇರದ ಬಯಕೆಯ ನೆರವೇರಿಕೆಯನ್ನು ಇದು ಸೂಚಿಸುತ್ತದೆ. ಅಲ್ಲದೆ ಕಪ್ಪು ಹಾವು ಗಂಡ ಹೆಂಡತಿಯ ಭಾಂದವ್ಯವನ್ನು ಸೂಚಿಸುತ್ತದೆ. ಅಥವಾ ಮನೆಯಲ್ಲಿ ದಂಪತಿ ಮಧ್ಯೆ ಕಲಹವಿದ್ದಲ್ಲಿ ಅದು ಬಗೆಹರಿಯುವ ಸೂಚನೆಯಾಗಿರಬಹುದು. ಇನ್ನು ಕೆಲವು ಭಾಗಗಳಲ್ಲಿ ಕಪ್ಪು ಹಾವು ಕಾಣಿಸಿಕೊಂಡರೆ ಆದಷ್ಟು ಬೇಗ ಮನೆಯಲ್ಲಿ ತೊಟ್ಟಿಲು ತೂಗುವ ಭಾಗ್ಯವಿದೆ ಎಂದು ಸಂತೋಷ ಪಡುತ್ತಾರೆ. ಇನ್ನು ಕಪ್ಪು ಹಾವಿನ ಮರಿ ಕಂಡರೆ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ಹೇಳಲಾಗುತ್ತದೆ.

ಹಸಿರು ಹಾವು ಕಂಡರೆ ಒಳ್ಳೆಯದೋ ಅಥವಾ ಕೆಟ್ಟದ್ದೋ?

ಮನೆಯಲ್ಲಿ ಹಸಿರು ಹಾವು ಕಂಡರೆ ಜೀವನದಲ್ಲಿ ಇದ್ದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುವ ಸಮಯ ಬಂದಿದೆ ಎಂಬುದನ್ನು ಸೂಚಿಸುತ್ತದೆ. ಅವು ಹಣ, ಪ್ರೀತಿ, ವೃತ್ತಿ ಅಥವಾ ಯಾವುದೇ ವಿಷಯಕ್ಕೆ ಸಂಬಂಧಿಸಿಯೂ ಇರಬಹುದು.

ಇದನ್ನೂ ಓದಿ: ನಿಮ್ಮ ಕುಟುಂಬ ಆರೋಗ್ಯವಾಗಿರಲು ಈ ವಾಸ್ತು ಸಲಹೆಯನ್ನು ಅಳವಡಿಸಿಕೊಳ್ಳಿ

ಇದೆಲ್ಲದರ ಹೊರತಾಗಿ ಕೆಲವು ಭಾಗದಲ್ಲಿ ನಾಗರ ಹಾವಿನ ಹೊರತಾಗಿ ಎಲ್ಲಾ ವಿಷಕಾರಿ ಹಾವು ಮನೆಗೆ ಬಂದರೆ ಅವು ಮುಂದೆ ಬರುವ ಸಮಸ್ಯೆಗಳ ಮೂನ್ಸೂಚನೆ ಎನ್ನಲಾಗುತ್ತದೆ. ಹಾವಿಗೆ ಗ್ರಹಣ ಶಕ್ತಿ ಹೆಚ್ಚಾಗಿರುತ್ತದೆ ಹಾಗಾಗಿ ಅವು ಎಲ್ಲವನ್ನೂ ಗ್ರಹಿಸುತ್ತವೆ. ಎನ್ನುವ ನಂಬಿಕೆ ಇದೆ. ಶಕುನ ಶಾಸ್ತ್ರದ ಹೊರತಾಗಿ ಕೆಲವು ನಂಬಿಕೆಗಳಿವೆ. ಅವುಗಳನ್ನು ಕೆಲವರು ನಂಬುತ್ತಾರೆ ಕೆಲವರು ನಂಬುವುದಿಲ್ಲ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ