Daily Devotional: ಕಾಡಿಗೆ ಹಚ್ಚುವುದರ ಹಿಂದಿನ ರಹಸ್ಯ ಹಾಗೂ ಅದರ ಪ್ರಯೋಜನ

ಕಾಡಿಗೆ ಹಚ್ಚುವುದು ಒಂದು ಹಳೆಯ ಸಂಪ್ರದಾಯ. ಇದನ್ನು ಮಕ್ಕಳಿಗೆ ದೃಷ್ಟಿದೋಷಗಳಿಂದ ರಕ್ಷಿಸಲು ಬಳಸಲಾಗುತ್ತದೆ. ತಿರುಪತಿಯ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳಲ್ಲಿ ಕಾಡಿಗೆಯನ್ನು ಬಳಸುವುದನ್ನು ಕಾಣಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಕಾಡಿಗೆಯ ಉಲ್ಲೇಖವಿದೆ ಎಂದು ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕಾಡಿಗೆ ಹಚ್ಚುವುದರ ಮಹತ್ವವನ್ನು ವಿವರಿಸಿದ್ದಾರೆ.

Daily Devotional: ಕಾಡಿಗೆ ಹಚ್ಚುವುದರ ಹಿಂದಿನ ರಹಸ್ಯ ಹಾಗೂ ಅದರ ಪ್ರಯೋಜನ
ಕಾಡಿಗೆ

Updated on: Aug 07, 2025 | 9:36 AM

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕಾಡಿಗೆ ಹಚ್ಚುವುದರ ಮಹತ್ವವನ್ನು ವಿವರಿಸಿದ್ದಾರೆ. ಕಾಡಿಗೆ ಹಚ್ಚುವುದು ಒಂದು ಪ್ರಾಚೀನ ಸಂಪ್ರದಾಯ. ಇದನ್ನು ದೃಷ್ಟಿ ದೋಷವನ್ನು ತಪ್ಪಿಸಲು ಬಳಸಲಾಗುತ್ತದೆ. ಹಿಂದೆ ತಾಯಂದಿರು ತಮ್ಮ ಮಕ್ಕಳಿಗೆ ಕೊಬ್ಬರಿ ಚಿಪ್ಪಿನಿಂದ ತಯಾರಿಸಿದ ಕಾಡಿಗೆಯನ್ನು ಹಚ್ಚುತ್ತಿದ್ದರು. ಆದರೆ ಇದೀಗ ಕಾಲ ಬದಲಾಗಿದೆ ಸಾಕಷ್ಟು ಕಂಪೆನಿಗಳ ಕಾಡಿಗೆಗಳು ಮಾರಕಟ್ಟೆಗೆ ಲಗ್ಗೆ ಇಟ್ಟಿದೆ ಎಂದು ಗುರೂಜಿ ವಿವರಿಸಿದ್ದಾರೆ.

ಕಾಡಿಗೆಯ ಬಳಕೆಯು ಕೇವಲ ಸಾಂಪ್ರದಾಯಿಕ ಅಭ್ಯಾಸಕ್ಕೆ ಸೀಮಿತವಾಗಿಲ್ಲ. ತಿರುಪತಿಯ ವೆಂಕಟೇಶ್ವರ ಸೇರಿದಂತೆ ಹಲವಾರು ಪ್ರಸಿದ್ಧ ದೇವಾಲಯಗಳಲ್ಲಿಯೂ ಕೂಡ ದೇವರ ವಿಗ್ರಹಗಳಿಗೆ ಕಾಡಿಗೆಯನ್ನು ಅಲಂಕಾರವಾಗಿ ಇಡುವುದನ್ನು ಕಾಣಬಹುದು. ಅನೇಕ ಆರ್ಚಕರು ಮತ್ತು ವಿಪ್ರರು ಕಾಡಿಗೆಯ ಮಹತ್ವವನ್ನು ಒಪ್ಪುತ್ತಾರೆ. ಕೆಲವು ಶಕ್ತಿಪೀಠಗಳಲ್ಲಿಯೂ ಸಹ ಕಾಡಿಗೆಯನ್ನು ಬಳಸುತ್ತಾರೆ ಎಂದು ಗುರೂಜಿ ಮಾಹಿತಿ ನೀಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ದೇವರಿಗೆ ಆರತಿ ಮಾಡುವಾಗ ಕಣ್ಣು ಮುಚ್ಚಬಾರದು ಎಂದು ಹೇಳುವುದೇಕೆ? ಕಾರಣ ಇಲ್ಲಿದೆ

ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಕಾಡಿಗೆಯ ಉಲ್ಲೇಖವಿದೆ. ಇದನ್ನು ಸರ್ಪದೋಷ, ಕುಜದೋಷ ಮತ್ತು ಶನಿದೋಷಗಳನ್ನು ನಿವಾರಿಸಲು ಬಳಸಬಹುದು ಎಂದು ನಂಬಲಾಗುತ್ತದೆ. ಶನಿಯು ಕಪ್ಪು ಬಣ್ಣವನ್ನು ಇಷ್ಟಪಡುತ್ತಾನೆ ಎಂಬ ನಂಬಿಕೆಯಿಂದ ಶನಿದೋಷಕ್ಕೆ ಕಾಡಿಗೆ ಉಪಯೋಗವಾಗುತ್ತದೆ ಎನ್ನಲಾಗುತ್ತದೆ. ಅಲ್ಲದೆ, ಅನೇಕ ಸಂದರ್ಭಗಳಲ್ಲಿ ಮಕ್ಕಳು ಅತಿಯಾಗಿ ಅಳುವುದು, ಹಟ ಮಾಡುವುದು ಮುಂತಾದ ಸಮಸ್ಯೆಗಳಿಗೆ ಕಾಡಿಗೆ ಪರಿಹಾರ ಎಂದು ಕೆಲವರು ನಂಬುತ್ತಾರೆ. ಕೆಲವರು ಮಂತ್ರಗಳನ್ನು ಬರೆದ ಪೇಪರ್ ಅನ್ನು ಕಟ್ಟಿ ಮಕ್ಕಳಿಗೆ ಕಟ್ಟುವುದರಿಂದಲೂ ಶುಭವಾಗುತ್ತದೆ ಎಂದು ನಂಬುತ್ತಾರೆ. ಇದು ಕೈಗುಣದ ಪ್ರಭಾವಕ್ಕೆ ಸಂಬಂಧಿಸಿದ ನಂಬಿಕೆ. ಆದರೆ, ಕಾಡಿಗೆಯ ಪರಿಣಾಮಕಾರಿತ್ವದ ಬಗ್ಗೆ ವೈಜ್ಞಾನಿಕ ಪುರಾವೆಗಳಿಲ್ಲ. ಇದು ಸಂಪೂರ್ಣವಾಗಿ ನಂಬಿಕೆ ಆಧಾರಿತ ಅಭ್ಯಾಸ ಎಂದು ಗುರೂಜಿ ಹೇಳಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ