Hindu Tradition: ಅಂತ್ಯಸಂಸ್ಕಾರದ ವೇಳೆ ಜನರು ಬಿಳಿ ಬಣ್ಣದ ವಸ್ತ್ರವನ್ನು ಧರಿಸುವುದು ಏಕೆ ಗೊತ್ತಾ?

ಹಿಂದೂ ಸಂಪ್ರದಾಯದಲ್ಲಿ, ಮರಣದ ಮನೆಯಲ್ಲಿ ಬಿಳಿ ವಸ್ತ್ರ ಧರಿಸುವುದು ಶಾಂತಿ, ಶುದ್ಧತೆ ಮತ್ತು ಮೌನದ ಸಂಕೇತ. ಇದು ಮೃತರ ಆತ್ಮಕ್ಕೆ ಶಾಂತಿ ಹಾಗೂ ಮೋಕ್ಷ ಒದಗಿಸಲು ಸಹಕಾರಿ. ಬಿಳಿಯ ಬಣ್ಣವು ಶೋಕದಲ್ಲಿ ಕುಟುಂಬದವರಿಗೆ ಸಮಾಧಾನವನ್ನು ತರಲು ಮತ್ತು ವಾತಾವರಣವನ್ನು ಶುದ್ಧವಾಗಿಡಲು ಸಹಕಾರಿಯಾಗುತ್ತದೆ ಎಂದು ನಂಬಲಾಗಿದೆ.

Hindu Tradition: ಅಂತ್ಯಸಂಸ್ಕಾರದ ವೇಳೆ ಜನರು ಬಿಳಿ ಬಣ್ಣದ ವಸ್ತ್ರವನ್ನು ಧರಿಸುವುದು ಏಕೆ ಗೊತ್ತಾ?
ಬಿಳಿ ಬಣ್ಣದ ಬಟ್ಟೆ

Updated on: Jan 22, 2026 | 10:09 AM

ಸಾವಿನ ಮನೆಯಲ್ಲಿ ಬಿಳಿ ಬಣ್ಣದ ವಸ್ತ್ರವನ್ನು ಧರಿಸುವುದರ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಬಿಳಿಯ ಬಣ್ಣವು ಏಳು ಬಣ್ಣಗಳಲ್ಲಿ ವಿಶೇಷವಾಗಿದ್ದು, ಇದನ್ನು ಶಾಂತಿಯ ಸಂಕೇತ, ಶುದ್ಧತೆಯ ಸಂಕೇತ, ಮೌನದ ಸಂಕೇತ ಮತ್ತು ಸಮೃದ್ಧಿಯ ಸಂಕೇತವಾಗಿ ಉಪಯೋಗಿಸಲಾಗುತ್ತದೆ. “ಜಾತಸ್ಯ ಮರಣಂ ಧ್ರುವಂ” ಎಂಬಂತೆ, ಜನಿಸಿದ ಪ್ರತಿಯೊಬ್ಬರೂ ಒಂದು ದಿನ ಮರಣವನ್ನಪ್ಪುವುದು ನಿಶ್ಚಿತ. ಭಗವದ್ಗೀತೆಯಲ್ಲಿ ಸಹ ಜನನ ಮತ್ತು ಮರಣಗಳು ಜೀವನದ ಅವಿಭಾಜ್ಯ ಅಂಗಗಳೆಂದು ಹೇಳಲಾಗಿದೆ. ಹೀಗಾಗಿ ಮರಣವೆಂಬುದು ಪ್ರಕೃತಿಯ ಸಹಜ ಪ್ರಕ್ರಿಯೆ. ಅಂತಹ ಮರಣಕಾಲದಲ್ಲಿ, ಆ ದುಃಖದ ಸಂದರ್ಭದಲ್ಲಿ ನಾವು ಆ ಕಾರ್ಯದಲ್ಲಿ ಭಾಗವಹಿಸಿದಾಗ, ಬಿಳಿಯ ವಸ್ತ್ರಗಳನ್ನು ಧರಿಸುವುದು ಹೆಚ್ಚು ಸೂಕ್ತ.

ಒಡವೆಗಳನ್ನು ಹಾಕಿಕೊಂಡು, ವಿಚಿತ್ರವಾದ ಅಥವಾ ಆಡಂಬರದ ಬಟ್ಟೆಗಳನ್ನು ಧರಿಸಿಕೊಂಡು ಹೋಗುವುದಕ್ಕಿಂತ ಬಿಳಿಯ ವಸ್ತ್ರವನ್ನು ಧರಿಸಿ ಸ್ವಲ್ಪ ಹೊತ್ತು ಮೌನವನ್ನು ಪಾಲಿಸಿದಾಗ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇದು ಮೃತರ ಆತ್ಮಕ್ಕೆ ಮೋಕ್ಷವನ್ನು ಕರುಣಿಸಲು ಸಹಾಯಕವಾಗುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲದೆ, ಇದು ಕುಟುಂಬದಲ್ಲಿ ಶಾಂತಿಯನ್ನು ನೆಲೆಸಲು ಸಹಕಾರಿಯಾಗುತ್ತದೆ. ಹಿಂದೂ ಸಮಾಜದಲ್ಲಿ ಮತ್ತು ಹಿಂದೂ ಧರ್ಮದಲ್ಲಿ ಜ್ಞಾನ ಮತ್ತು ಸದ್ಭಾವನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಬಿಳಿ ಬಣ್ಣವು ಇದೇ ಜ್ಞಾನ ಮತ್ತು ಸದ್ಭಾವನೆಗೆ ಪ್ರತೀಕವಾಗಿದೆ.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ಸಾವಿನ ಸಮಯದಲ್ಲಿ ಮೃತರ ಆತ್ಮಕ್ಕೆ ಮೋಕ್ಷವನ್ನು ಕೊಡಿಸಲು, ಸಾಮಾನ್ಯವಾಗಿ ಬಿಳಿಯ ವಸ್ತ್ರವನ್ನು ಪ್ರತಿಯೊಬ್ಬರೂ ಧರಿಸಲು ಪ್ರಯತ್ನಿಸಬೇಕು. ಒಂದು ವೇಳೆ ಸಂಪೂರ್ಣ ಬಿಳಿಯ ವಸ್ತ್ರ ಧರಿಸಲು ಸಾಧ್ಯವಾಗದಿದ್ದರೂ, ಕನಿಷ್ಠ ಒಂದು ಬಿಳಿಯ ಟವಲ್ ಅಥವಾ ಬಿಳಿಯ ಶಾಲು ಧರಿಸಿಕೊಂಡು ಹೋಗುವುದು ಉತ್ತಮ. ಇದರಿಂದ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಬಿಳಿ ವಸ್ತ್ರದಿಂದಾಗಿ ಆ ಸ್ಥಳದ ವಾತಾವರಣವೂ ಶುದ್ಧವಾಗಿ ಭಾವಿಸಲಾಗುತ್ತದೆ ಮತ್ತು ಅಲ್ಲಿಗೆ ಹೋದವರಿಗೂ ಕೂಡ ತುಂಬಾ ಒಳ್ಳೆಯದಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ