ಸೂರ್ಯ ಬೆಳಕನ್ನು ಮಾತ್ರ ಕೊಡುವುದಿಲ್ಲ! ಮತ್ತೇನನ್ನು ಕೊಡುವುದು? ಇಲ್ಲಿದೆ ಮಾಹಿತಿ

|

Updated on: Apr 23, 2023 | 7:00 AM

ಸೂರ್ಯ ಭೂಮಿಯನ್ನು ಬೆಳಗುವ ಗ್ರಹ; ಎಲ್ಲ ಜೀವಿಗಳಿಗೂ ಚೈತನ್ಯವನ್ನು ಕೊಡುವವ; ಸಸ್ಯಸಮೃದ್ಧಿಗೆ ಸಹಕಾರಿ; ಬಿಸಿಲಿನಿಂದ ಶಕ್ತಿಯನ್ನು ಪಡೆಯಬಹುದು ಎಂಬ ಸಾಂಪ್ರದಾಯಿಕ, ವೈಜ್ಞಾನಿಕ ಸಂಗತಿಗಳನ್ನು ತಿಳಿದಿದ್ದೇವೆ.

ಸೂರ್ಯ ಬೆಳಕನ್ನು ಮಾತ್ರ ಕೊಡುವುದಿಲ್ಲ! ಮತ್ತೇನನ್ನು ಕೊಡುವುದು? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us on

ಸೂರ್ಯ ಭೂಮಿ (Earth) ಯನ್ನು ಬೆಳಗುವ ಗ್ರಹ (planet); ಎಲ್ಲ ಜೀವಿಗಳಿಗೂ ಚೈತನ್ಯವನ್ನು ಕೊಡುವವ; ಸಸ್ಯಸಮೃದ್ಧಿಗೆ ಸಹಕಾರಿ; ಬಿಸಿಲಿನಿಂದ ಶಕ್ತಿಯನ್ನು ಪಡೆಯಬಹುದು ಎಂಬ ಸಾಂಪ್ರದಾಯಿಕ, ವೈಜ್ಞಾನಿಕ ಸಂಗತಿಗಳನ್ನು ತಿಳಿದಿದ್ದೇವೆ. ಆದರೆ ಸೂರ್ಯ (sun) ಅಷ್ಟು ಮಾತ್ರವಲ್ಲ‌. ಅದಕ್ಕಿಂತಲೂ ವಿಭಿನ್ನರೂಪದಲ್ಲಿ, ವಿಶೇಷ ರೀತಿ ಸೂರ್ಯನನ್ನು ಕಂಡಿದ್ದಾರೆ ಭಾರತೀಯರು. ಸೂರ್ಯನ ಮೂಲಕ ಸೃಷ್ಟಿಯ ಸಮೃದ್ಧಿಯನ್ನೂ ವಿನಾಶವನ್ನೂ ಹೇಳಬಹುದಾಗಿದೆ ಎಂಬುದನ್ನು ತಿಳಿಸಿದ್ದಾರೆ ಪ್ರಾಚೀನರು. ಸೂರ್ಯನಿಂದ ಅನೇಕ ವಿಚಾರಗಳನ್ನು ಹಿಂದಿನ ಕಾಲದಲ್ಲಿ ಅರಿತಿದ್ದರು. ರಾಜ್ಯ ಹಾಗೂ ದೇಶಕ್ಕೆ ಉಂಟಾಗುವ ಆಪತ್ತುಗಳನ್ನು ಸೂರ್ಯನ ಮೂಲಕ ತಿಳಿತ್ತಿದ್ದರು ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ಯಾವ ಸ್ಥಳದಲ್ಲಿ ಕೇತುಗ್ರಸ್ಥ ಸೂರ್ಯಗ್ರಹಣವು ಸಂಭವಿಸುವುದೋ ಆ ಪ್ರದೇಶದ ರಾಜರುಗಳಿಗೆ ತೊಂದರೆ, ಋಷಿಗಳು ಸಜ್ಜನರು ಹಸಿವನ್ನು ನೀಗಿದವರು, ಧರ್ಮದಲ್ಲಿ ನಡತೆಯುಳ್ಳವರು, ಬಾಲರು ದುರ್ಬಲರಾಗುವರು, ಅವರಿಗೆ ಅನ್ನಾಹಾರದಲ್ಲಿ ಕೊರತೆಯಾಗಲಿದೆ. ಸಜ್ಜನರ ಸಂಪತ್ತು ಕಳ್ಳರಿಂದ ಅಪಹೃತವಾಗಲಿದೆ. ದೀರ್ಘವಾದ ಉಸಿರಾಟ ನಡೆಸುವವರು ಅಧಿಕವಾಗುವರು. ಕಣ್ಣುಗಳು ಸಣ್ಣಾಗಲಿವೆ. ಕೃಶರು, ನಿಂದಿತರಾದ ಮನುಷ್ಯರು, ತನ್ನ ರಾಜರಿಂದಲೂ, ಅನ್ಯರಾಜರಿಂದೂ ಪೀಡಿತರಾಗುವರು, ಮೋಡಗಳು ನೀರಿಂದ ತುಂಬಿದ್ದರೂ ನೀರನ್ನು ಸುರಿಸಲಾರರು. ನದಿಗಳೂ ಸೊರಗುವುವು. ಅಲ್ಲಲ್ಲು ಸಸ್ಯಸಮೃದ್ಧಿ ಇರುತ್ತದೆ. ಅದೇ ರೀತಿ ಸೂರ್ಯಮಂಡಲದಲ್ಲಿ ಕೇತುವು ದಂಡಾಕಾರವಾಗಿ ಕಂಡರೆ ರಾಜನಿಗೆ ಮೃತ್ಯು, ಶಿರಸ್ಸು ಇಲ್ಲದೇ ಕಬಂಧಶರೀರದಂತೆ ಕಂಡರೆ ರೋಗಭಯ, ಕೇತುವು ಕಾಗೆಯ ಆಕಾರದಂತೆ ಕಂಡರೆ ಕಳ್ಳರ ಭಯ, ಕೇತುವಿನ ರೂಪದಲ್ಲಿ ಕಂಡರೆ ದುರ್ಭಿಕ್ಷೆ ಉಂಟಾಗುವುದು.

ಇದನ್ನೂ ಓದಿ: Black Thread: ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ ಏನಾಗುತ್ತೆ ಗೊತ್ತಾ? ಯಾವ ಕಾಲಿಗೆ ಕಟ್ಟಿದರೆ ಒಳ್ಳೆಯದು?

ಸೂರ್ಯಮಂಡಲವು ಗ್ರಹಣದ ಕಾಲದಲ್ಲಿ ರಾಜನ ಛತ್ರ, ಚಾಮರ, ದಂಡದಂತೆ ಕಂಡರೆ ರಾಜನು ಬದಲಾಗುತ್ತಾನೆ, ಅಗ್ನಿ ಅಥವಾ ಧೂಮವು ಕಂಡರೆ ಪ್ರಜೆಗಳ ನಾಶವೆಂದು ತಿಳಿಯಬೇಕು.

ಸೂರ್ಯಕಿರಣಗಳ ಆಧಾರದ ಮೇಲೆ ರಾಜ್ಯದ ಇನ್ನಿತರ ಮಾಹಿತಿಗಳನ್ನು ತಿಳಿಯುತ್ತಿದ್ದರು.

ಊರ್ಧ್ವಕರೋ ದಿವಸಕರಃ ತಾಮ್ರಃ ಸೇನಾಪತಿಂ ವಿನಾಶಯತಿ |
ಸೂರ್ಯಕಿರಣವು ಕಳೆ ಭಾಗದಲ್ಲಿ ಕಾಣಿಸದೇ ಕೇವಲ ಊರ್ಧಭಾಗ ಮಾತ್ರ ಕಂಡರೆ, ತಾಮ್ರವರ್ಣವನ್ನು ಹೋಲುತ್ತಿದ್ದರೆ ರಾಜ್ಯದ ಸೇನಾಧಿಪತಿಯ ನಾಶವಾಗುತ್ತದೆ.

ಪೀತೋ ನರೇಂದ್ರಪುತ್ರಂ ಶ್ವೇತಸ್ತು ಪುರೋಹಿತಂ ಹಂತಿ ||
ಹಳದಿ ವರ್ಣದಲ್ಲಿ ಸೂರ್ಯಕಿರಣವು ಕಂಡರೆ ರಾಜನ ಮಗನ ಮೃತ್ಯುವಾಗುವುದು, ಬಿಳಿಯ ವರ್ಣದಲ್ಲಿ ಗೋಚರವಾದರೆ ರಾಜ್ಯದ ಪುರೋಹಿತನಿಗೆ ಸಂಕಷ್ಟವೆಂದು ತಿಳಿಯುವುದು.

ಸೂರ್ಯರಶ್ಮಿಯು ಹೊಗೆಯ ಬಣ್ಣ ಅಥವಾ ನಾನಾವರ್ಣಗಳಿಂದ ಇದ್ದರೆ ತಾಜ್ಯದ ಜನರು ಶತ್ರುಗಳಿಂದ ಹತರಾಗುತ್ತಾರೆ.

ಇದನ್ನೂ ಓದಿ: Chandra Grahan 2023: ಈ ವರ್ಷದ ಮೊದಲ ಚಂದ್ರಗ್ರಹಣದ ದಿನವೇ ಬುದ್ಧ ಪೂರ್ಣಿಮೆ! ಬುದ್ಧ ಪೂರ್ಣಿಮೆಯ ಮಹತ್ವ ಇಲ್ಲಿದೆ

ಸೂರ್ಯನು ಶಿಶಿರ ಋತುವಿನಲ್ಲಿ ತಾಮ್ರ ಬಣ್ಣ ಅಥವಾ ಹಳದಿ ಬಣ್ಣದಿಂದ ಕಂಡರೆ, ವಸಂತ ಋತುವಿನಲ್ಲಿ ಕುಂಕುಮ ವರ್ಣದಲ್ಲಿ ಶೋಭಿಸಿದರೆ, ಗ್ರೀಷ್ಮ ಋತುವಿನಲ್ಲಿ ಬಿಳಿ ಬಂಗಾರದಿಂದ ಮಿಶ್ರಿತವಾಗಿದ್ದರೆ, ವರ್ಷ ಋತುವಿನಲ್ಲಿ ಶಯಭ್ರವಾಗಿದ್ದರೆ, ಶರದೃತುವಿನಲ್ಲಿ ಕಮಲದ ಕೇಸರಭಾಗದಂತೆ ಜ್ವಲಿಸುತ್ತಿದ್ದರೆ, ಹೇಮಂತದಲ್ಲಿ ರಕ್ತದಂತೆ ಕೆಂಪಗೆ ಹೊಳೆದರೆ ಆಯಾ ಋತುಗಳು ಸರಿಯಾಗಿದೆ ಎಂದರ್ಥ. ಅಂದರೆ ಸಕಾಲಕ್ಕೆ ಸರಿಯಾಗಿ ಮಳೆ, ಬೆಳೆಗಳು ಆಗುವುದು‌.

ಅದೇ ರೀತಿ ಶ್ವೇತವರ್ಣದಲ್ಲಿದ್ದು ಸೂರ್ಯಕಿರಣವು ಅತ್ಯಂತ ತೀಕ್ಷ್ಣವಾಗಿದ್ದರೆ ಬ್ರಾಹ್ಮಣರನ್ನು, ಕೆಂಪಾಗಿದ್ದು ಸುಡುವಂತೆ ಕಿರಣಗಳಿದ್ದರೆ ಕ್ಷತ್ರಿಯನನ್ನು ಹಳದಿ ವರ್ಣದಿಂದ ಕೂಡಿ ಬಿಸಿಯನ್ನು ಹೆಚ್ಚಿಸಿದರೆ ವೈಶ್ಯರನ್ನು, ಕಪ್ಪು ಬಣ್ಣದಲ್ಲಿ ಇದ್ದು ತಾಪ ಹೆಚ್ಚಾದರೆ ಶೂದ್ರರ ನಾಶವಾಗುವುದು ಎಂದು ತಿಳಿಯಬೇಕು.

ಸೂರ್ಯಮಂಡಲವು ಗ್ರೀಷ್ಮ ಋತುವಿನಲ್ಲಿ ಕೆಂಪಗಾಗಿ ಕಂಡರೆ ಭಯವುಂಟಾಗುವದು, ವರ್ಷೃತುವಿನಲ್ಲಿ ಕಪ್ಪಾದ ಸೂರ್ಯಮಂಡಲವಿದ್ದರೆ ಮಳೆಯಾಗದು. ಹೇಮಂತ ಋತುವಿನಲ್ಲಿ ಸೂರ್ಯ ಮಂಡಲವು ಹಳದಿಯಾಗಿ‌ ಕಂಡರೆ ರೋಗಭಯವಿರಲಿದೆ. ಸೂರ್ಯಮಂಡಲವು ಶಿರೀಷಪುಷ್ಪವರ್ಣದಂತ ಬಣ್ಣವಿದ್ದರೆ ಅಂದೇ ಮಳೆಯಾಗುವುದು. ನವಿಲಿನ ಗರಿಯ ಬಣ್ಣವಿದ್ದರೆ ಹನ್ನೆರಡು ವರ್ಷಗಳ ಕಾಲ‌ಮಳೆಯಾಗದು ಎಂದು ತಿಳಿಯಬೇಕು.‌ ಇದನ್ನು ನೋಡುತ್ತಿದ್ದರೆ ಹಿಂದಿನ ಕಾಲದಲ್ಲಿ ಸೃಷ್ಟಿಯ ಬಗ್ಗೆ ಎಂತಹ ಅದ್ಭುತವಾದ ಜ್ಞಾನವನ್ನು ಇಟ್ಟುಕೊಂಡಿದ್ದರು ಎನ್ನುವುದು ಗೊತ್ತಾಗುತ್ತದೆ.

ಹೀಗೆ ಒಬ್ಬ ಸೂರ್ಯ ಸೃಷ್ಟಿಯ ಜ್ಞಾನವನ್ನು ತಿಳಿಯಲು ಅವಕಾಶ ಮಾಡಿಕೊಡುತ್ತಿದ್ದ. ಇನ್ನೂ ಅನೇಕ ಸೂಕ್ಷ್ಮ ವಿಚಾರಗಳನ್ನು ಸೂರ್ಯನಿಂದ‌ ಇನ್ನುಳಿದ ಗ್ರಹಗಳಿಂದ ತಿಳಯಬಹುದಾಗಿದೆ. ಸೃಷ್ಟಿಯೇ ಸೃಷ್ಟಿಯ ಆಗುಹೋಗುಗಳನ್ನು ತಿಳಿಸುವ ಅದ್ಭುತ ವ್ಯವಸ್ಥೆಯನ್ನು ಸೃಷ್ಟಿಕರ್ತ ಮಾಡಿದ್ದಾನೆಂದರೆ ಇದರ ಕುರಿತ ತಿಲಕಿದುಕೊಳ್ಳಬೇಕಾದ ಸಾವಿರಾರು ಅಂಶಗಳು ಇಲ್ಲಿವೆ. ಆದ್ದರಿಂದ ಸೂರ್ಯನನ್ನು ಬೆಳಕು ಕೊಡುವವನು, ಪ್ರಪಂಚಕ್ಕೆ ಜೀವವನ್ನು ತುಂಬುವವನು ಮಾತ್ರವಲ್ಲ, ಜಗತ್ತಿನ ಪರಿವರ್ತನೆಯ ಅನೇಕ‌ ವಿಚಾರಗಳನ್ನು ತಿಳಿಸುವವನೂ ಆಗಿದ್ದಾನೆ.

ಲೋಹಿತಾಶರ್ಮಾ

ಮತ್ತಷ್ಟು ಆಧ್ಯಾತ್ಮ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.