Ear Piercing: ಕಿವಿ ಚುಚ್ಚುವುದರ ಹಿಂದಿರುವ ಧಾರ್ಮಿಕ ಮಹತ್ವ ಏನು? ಇದರ ಹಿಂದಿದೆ ಅನೇಕ ಕಾರಣ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 15, 2024 | 9:41 AM

ಹೆಣ್ಣು ಮತ್ತು ಗಂಡು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಕಿವಿ ಚುಚ್ಚಿ ವಿವಿಧ ರೀತಿಯ ಕಿವಿ ಓಲೆಗಳನ್ನು ಹಾಕಲಾಗುತ್ತದೆ. ಕಿವಿ ಚುಚ್ಚಿಕೊಳ್ಳದಿದ್ದಲ್ಲಿ ಅಥವಾ ಹೆಣ್ಣು ಮಕ್ಕಳು ಓಲೆಗಳನ್ನು ಹಾಕಿಕೊಳ್ಳದಿದ್ದಲ್ಲಿ ಅವರ ಅಂದ ಅಪೂರ್ಣವೆನಿಸುತ್ತದೆ. ಇದನ್ನು ಹಾಕಿಕೊಳ್ಳುವುದರಿಂದ ಮಹಿಳೆಯರ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ, ಆದರೆ ಕಿವಿ ಚುಚ್ಚುವ ಸಂಪ್ರದಾಯದ ಹಿಂದೆ ಅನೇಕ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ ಎಂದು ನಿಮಗೆ ತಿಳಿದಿದೆಯೇ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Ear Piercing: ಕಿವಿ ಚುಚ್ಚುವುದರ ಹಿಂದಿರುವ ಧಾರ್ಮಿಕ ಮಹತ್ವ ಏನು? ಇದರ ಹಿಂದಿದೆ ಅನೇಕ ಕಾರಣ
ಸಾಂದರ್ಭಿಕ ಚಿತ್ರ
Follow us on

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಕಿವಿ ಚುಚ್ಚುವ ಸಂಪ್ರದಾಯವಿದೆ. ಹುಡುಗರಾಗಲಿ ಅಥವಾ ಹುಡುಗಿಯರಿಗಾಗಲಿ ಚಿಕ್ಕ ವಯಸ್ಸಿನಲ್ಲಿಯೇ ಕಿವಿ ಚುಚ್ಚುತ್ತಿದ್ದರು. ಕ್ರಮೇಣ ಹುಡುಗರಲ್ಲಿ ಕಿವಿ ಚುಚ್ಚುವ ಸಂಪ್ರದಾಯ ಕಡಿಮೆಯಾಯಿತು, ಆದರೆ ಇಂದಿಗೂ ಹೆಣ್ಣು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಕಿವಿ ಚುಚ್ಚಿ ವಿವಿಧ ರೀತಿಯ ಕಿವಿ ಓಲೆಗಳನ್ನು ಹಾಕಲಾಗುತ್ತದೆ. ಕಿವಿ ಚುಚ್ಚಿಕೊಳ್ಳದಿದ್ದಲ್ಲಿ ಅಥವಾ ಹೆಣ್ಣು ಮಕ್ಕಳು ಓಲೆಗಳನ್ನು ಹಾಕಿಕೊಳ್ಳದಿದ್ದಲ್ಲಿ ಅವರ ಅಂದ ಅಪೂರ್ಣವೆನಿಸುತ್ತದೆ. ಇದನ್ನು ಹಾಕಿಕೊಳ್ಳುವುದರಿಂದ ಮಹಿಳೆಯರ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ, ಆದರೆ ಕಿವಿ ಚುಚ್ಚುವ ಸಂಪ್ರದಾಯದ ಹಿಂದೆ ಅನೇಕ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ ಎಂದು ನಿಮಗೆ ತಿಳಿದಿದೆಯೇ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಿವಿ ಚುಚ್ಚುವುದರ ಹಿಂದಿರುವ ಧಾರ್ಮಿಕ ಕಾರಣಗಳು?

ಹಿಂದೂ ಧರ್ಮದಲ್ಲಿ, ಒಬ್ಬ ವ್ಯಕ್ತಿಯ ಜನನದಿಂದ ಸಾವಿನ ವರೆಗೆ 16 ಆಚರಣೆಗಳನ್ನು ನಡೆಸಲಾಗುತ್ತದೆ. ಈ 16 ಸಂಸ್ಕಾರಗಳಲ್ಲಿ ಕರ್ಣವೇದ ಸಂಸ್ಕಾರವೂ ಒಂದು. ಬಾಲಕ ಮತ್ತು ಬಾಲಕಿಯರಿಬ್ಬರಿಗೂ ಕರ್ಣವೇದ ಸಂಸ್ಕಾರವನ್ನು ನಡೆಸಲಾಗುತ್ತದೆ. ಕರ್ಣವೇದ/ ಕಿವಿ ಚುಚ್ಚುವುದು 9ನೇ ಸಂಸ್ಕಾರದಲ್ಲಿರುವ ವಿಧಿಯಾಗಿದೆ. ಇದನ್ನು ಮಗುವಿಗೆ ಅನ್ನ ಪ್ರಾಶನ ಮಾಡಿದ ನಂತರ ಮಾಡಬೇಕು. ಪ್ರಾಚೀನ ಕಾಲದಲ್ಲಿ, ಶುಭ ಸಮಯದಲ್ಲಿ ಮಕ್ಕಳ ಕಿವಿಗಳಲ್ಲಿ ಮಂತ್ರಗಳನ್ನು ಪಠಿಸುವ ಮೂಲಕ ಕರ್ಣವೇದ ಸಂಸ್ಕಾರವನ್ನು ನಡೆಸಲಾಗುತ್ತಿತ್ತು. ಬಳಿಕ ಮೊದಲು ಹುಡುಗರ ಬಲ ಕಿವಿಯನ್ನು ಮತ್ತು ನಂತರ ಎಡ ಕಿವಿಯನ್ನು ಚುಚ್ಚಲಾಗುತ್ತದೆ . ಹುಡುಗಿಯರಿಗೆ ಇದಕ್ಕೆ ವಿರುದ್ಧವಾಗಿ ಮಾಡಲಾಗುತ್ತದೆ. ಅಂದರೆ ಹುಡುಗಿಯರ ಎಡ ಕಿವಿಯನ್ನು ಮೊದಲು ಮತ್ತು ನಂತರ ಬಲ ಕಿವಿಯನ್ನು ಚುಚ್ಚಲಾಗುತ್ತದೆ. ಬಳಿಕ ಇದಕ್ಕೆ ಚಿನ್ನದ ಆಭರಣಗಳನ್ನು ಹಾಕಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಕಿವಿ ಚುಚ್ಚುವುದು ರಾಹು ಮತ್ತು ಕೇತು ಗ್ರಹಗಳಿಗೆ ಸಂಬಂಧಿಸಿದ ದೋಷಗಳನ್ನು ನಿವಾರಿಸುತ್ತದೆ. ಹೀಗೆ ಮಾಡುವುದರಿಂದ ಮಗು ಆರೋಗ್ಯವಾಗಿ ಮತ್ತು ಸದೃಢವಾಗಿರುತ್ತದೆ ಎಂದು ನಂಬಲಾಗಿದೆ.

ಕಿವಿ ಚುಚ್ಚುವುದರ ಹಿಂದಿದೆ ವೈಜ್ಞಾನಿಕ ಕಾರಣಗಳು;

ಕಿವಿ ಮತ್ತು ಮೆದುಳಿನ ಮೂಲಕ ಹಾದುಹೋಗುವ ನರಗಳ ನಡುವೆ ಸರಿಯಾದ ರಕ್ತ ಪರಿಚಲನೆ ಇರುತ್ತದೆ. ಇದು ಆಧುನಿಕ ಆಕ್ಯುಪ್ರಶರ್ ವಿಧಾನಕ್ಕೆ ಅನುಗುಣವಾಗಿ ಪ್ರಬಲವಾದ ಚಿಕಿತ್ಸೆ ಎಂದೂ ಕರೆಯಲಾಗುತ್ತದೆ. ಕಿವಿಗಳ ಮೇಲಿನ ಒತ್ತಡದಿಂದಾಗಿ ರಕ್ತ ಪರಿಚಲನೆ ಮತ್ತು ಕೇಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ರೀತಿ ಮಾಡುವುದರಿಂದ ಅನೇಕ ರೀತಿಯ ಮಾನಸಿಕ ಕಾಯಿಲೆಗಳು ಸಹ ಗುಣವಾಗುತ್ತವೆ ಎಂದು ಹೇಳಲಾಗುತ್ತದೆ. ಕಿವಿಗಳನ್ನು ಚುಚ್ಚುವುದರಿಂದ ನಮ್ಮ ಕಣ್ಣುಗಳ ಆರೋಗ್ಯ ಸುಧಾರಿಸುತ್ತದೆ ಎಂದು ನಂಬಲಾಗಿದೆ, ಏಕೆಂದರೆ ಕಿವಿಯ ಕೆಳಭಾಗದಲ್ಲಿ ಒಂದು ಬಿಂದುವಿದೆ, ಅದರ ಮೇಲೆ ಒತ್ತಡಬಿದ್ದಾಗ, ಈ ಒತ್ತಡದ ಪರಿಣಾಮದಿಂದಾಗಿ ಕಣ್ಣಿನ ದೃಷ್ಟಿ ಚೆನ್ನಾಗಿರುತ್ತದೆ.

ಇದನ್ನೂ ಓದಿ: ಈ ಉಪವಾಸ ಮಾಡುವುದರಿಂದ 1000 ಹಸುಗಳನ್ನು ದಾನ ಮಾಡಿದ ಪುಣ್ಯ ಸಿಗುತ್ತೆ

ಆಯುರ್ವೇದದ ಪ್ರಕಾರ, ಕಿವಿ ಚುಚ್ಚುವುದು ಅನೇಕ ರೀತಿಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕಿವಿಯ ಕೆಳಭಾಗದಲ್ಲಿ ಚುಚ್ಚಿದಾಗ, ಅದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ಮೆದುಳಿನ ಅನೇಕ ಭಾಗಗಳು ಸಕ್ರಿಯಗೊಳ್ಳುತ್ತವೆ. ಅದಕ್ಕಾಗಿಯೇ ಚಿಕ್ಕ ವಯಸ್ಸಿನಲ್ಲಿಯೇ ಕಿವಿಗಳನ್ನು ಚುಚ್ಚುವ ಸಂಪ್ರದಾಯವಿತ್ತು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ