Amalaki Ekadashi 2024: ಈ ಉಪವಾಸ ಮಾಡುವುದರಿಂದ 1000 ಹಸುಗಳನ್ನು ದಾನ ಮಾಡಿದ ಪುಣ್ಯ ಸಿಗುತ್ತೆ
ಅಮಲಕಿ ಏಕಾದಶಿ ಉಪವಾಸ ಮಾಡುವವರು ಜನನ ಮತ್ತು ಮರಣದ ಬಂಧನದಿಂದ ಮುಕ್ತನಾಗುತ್ತಾರೆ, ವಿಷ್ಣುವಿನ ಆಶೀರ್ವಾದ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಇನ್ನು ಪುರಾಣಗಳ ಪ್ರಕಾರ, ಈ ಉಪವಾಸ ಮಾಡುವುದರಿಂದ, ಒಬ್ಬ ವ್ಯಕ್ತಿಯು ಒಂದು ಸಾವಿರ ಹಸುಗಳನ್ನು ದಾನ ಮಾಡಿದ ಪುಣ್ಯ ಫಲಗಳನ್ನು ಪಡೆಯುತ್ತಾನೆ ಎನ್ನುವ ನಂಬಿಕೆ ಇದೆ. ಇದೆಲ್ಲದರ ಜೊತೆಗೆ ಆತನಿಗೆ ತಾಯಿ ಲಕ್ಷ್ಮೀ ದೇವಿಯ ಆಶೀರ್ವಾದವೂ ಸಿಗುತ್ತದೆ.
ಫಾಲ್ಗುಣ ಮಾಸದ ಶುಕ್ಲ ಪಕ್ಷದ ಅಮಲಕಿ ಏಕಾದಶಿಯನ್ನು ಮಾ. 20 ರಂದು ಆಚರಿಸಲಾಗುವುದು. ಈ ಉಪವಾಸವನ್ನು ವಿಷ್ಣುವಿಗೆ ಅರ್ಪಿಸಲಾಗಿದ್ದರೂ ಕೂಡ ಈ ದಿನದಂದು ಆಮ್ಲಾ ಮರವನ್ನು ಪೂಜಿಸುವ ಸಂಪ್ರದಾಯವಿದೆ. ಅಮಲಕಿ ಏಕಾದಶಿ ಉಪವಾಸ ಮಾಡುವವರು ಜನನ ಮತ್ತು ಮರಣದ ಬಂಧನದಿಂದ ಮುಕ್ತವಾಗುತ್ತಾರೆ, ವಿಷ್ಣುವಿನ ಆಶೀರ್ವಾದ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಇನ್ನು ಪುರಾಣಗಳ ಪ್ರಕಾರ, ಈ ಉಪವಾಸ ಮಾಡುವುದರಿಂದ, ಒಬ್ಬ ವ್ಯಕ್ತಿಯು ಒಂದು ಸಾವಿರ ಹಸುಗಳನ್ನು ದಾನ ಮಾಡಿದ ಪುಣ್ಯ ಫಲಗಳನ್ನು ಪಡೆಯುತ್ತಾನೆ ಎನ್ನುವ ನಂಬಿಕೆ ಇದೆ. ಇದೆಲ್ಲದರ ಜೊತೆಗೆ ಆತನಿಗೆ ತಾಯಿ ಲಕ್ಷ್ಮೀ ದೇವಿಯ ಆಶೀರ್ವಾದವೂ ಸಿಗುತ್ತದೆ.
ಅಮಲಕಿ ಏಕಾದಶಿ ಕಥೆ
ಪ್ರಾಚೀನ ಕಾಲದಲ್ಲಿ ವೈದಿಕ ಎಂಬ ನಗರವಿತ್ತು. ಚೈತ್ರರಥ ಎಂಬ ಚಂದ್ರವಂಶದ ರಾಜನು ಇಲ್ಲಿ ಆಳ್ವಿಕೆ ನಡೆಸುತ್ತಿದ್ದನು. ಇಲ್ಲಿನ ಎಲ್ಲಾ ಜನರು ಸಂತೋಷದಿಂದ ವಾಸಿಸುತ್ತಿದ್ದರು. ಈ ನಗರದಲ್ಲಿ ವೇದ, ಮಂತ್ರಗಳ ಪಠಣೆ`ಯಾವಾಗಲೂ ಪ್ರತಿಧ್ವನಿಸುತ್ತಿತ್ತು. ಇಲ್ಲಿರುವ ಪ್ರತಿಯೊಬ್ಬರೂ ಕೂಡ ವಿಷ್ಣುವಿನ ಭಕ್ತರಾಗಿದ್ದರು ಮತ್ತು ಏಕಾದಶಿಯಂದು ತಪ್ಪದೇ ಉಪವಾಸವನ್ನು ಆಚರಿಸುತ್ತಿದ್ದರು. ಹಾಗೆಯೇ ಫಾಲ್ಗುಣ ಶುಕ್ಲ ಏಕಾದಶಿಯಂದು ಕೂಡ ಎಲ್ಲರೂ ಪೂಜೆ ಮಾಡುತ್ತಾ ಏಕಾದಶಿ ವ್ರತದ ಕಥೆಯನ್ನು ಕೇಳುತ್ತಾ ರಾತ್ರಿ ಪೂರ್ತಿ ಜಾಗರಣೆ ಮಾಡುತ್ತಿದ್ದರು ಆ ಸಮಯದಲ್ಲಿ ಒಬ್ಬ ಕಳ್ಳ ಅಲ್ಲಿಗೆ ಬಂದನು, ಅವನು ಅನೇಕ ಅಪರಾಧಗಳನ್ನು ಮಾಡಿದ್ದರಿಂದ ಪಾಪಿ ಎಂಬ ಪಟ್ಟ ಬಂದಿತ್ತು. ಆದರೆ ಆ ಊರಿಗೆ ಬಂದಾಗ ಅಲ್ಲಿನ ಜನರು ಉಪವಾಸ ಆಚರಣೆ ಮಾಡುವುದನ್ನು ನೋಡಿ, ವಿಷ್ಣುವಿನ ಕಥೆ ಮತ್ತು ಏಕಾದಶಿಯ ಶ್ರೇಷ್ಠತೆಯನ್ನು ಕೇಳಲು ಪ್ರಾರಂಭಿಸಿದನು. ಈ ರೀತಿಯಾಗಿ ಇತರ ಜನರೊಂದಿಗೆ ಇಡೀ ರಾತ್ರಿ ಕಥೆ ಕೇಳುತ್ತಾ ಕಳೆದನು. ಕೆಲವು ತಿಂಗಳುಗಳ ನಂತರ ಅವನು ನಿಧನನಾದನು. ಆ ಕಳ್ಳ ಮಾಡಿದ್ದ ಅನೇಕ ಪಾಪಗಳಿಂದಾಗಿ, ನರಕಕ್ಕೆ ಹೋಗಬೇಕಿತ್ತು ಆದರೆ ಅವನು ತಿಳಿಯದೆಯೇ ಆಚರಿಸಿದ ಅಮಲಕಿ ಏಕಾದಶಿ ಉಪವಾಸದ ಪರಿಣಾಮವಾಗಿ, ಅವನು ತನ್ನ ಮುಂದಿನ ಜನ್ಮದಲ್ಲಿ ರಾಜ ವಿದುರಥನ ಮನೆಯಲ್ಲಿ ಹುಟ್ಟಿದನು. ಅವನಿಗೆ ವಸುರತ ಎಂದು ಹೆಸರಿಟ್ಟರು.
ಬಳಿಕ ಒಂದು ದಿನ ವಸುರತ ಕಾಡಿನಲ್ಲಿ ದಾರಿ ತಪ್ಪಿದನು. ಆಯಾಸದಿಂದ ಬಳಲಿದ್ದ ಅವನು ಅಲ್ಲಿಯೇ ಒಂದು ಮರದ ಕೆಳಗೆ ಮಲಗಿದನು. ಸ್ವಲ್ಪ ಸಮಯದಲ್ಲಿ ಅವನ ಮೇಲೆ ಕೆಲವು ದರೋಡೆಕೋರರು ದಾಳಿ ಮಾಡಿದರು ಆದರೆ ಈ ದುಷ್ಕರ್ಮಿಗಳ ಆಯುಧಗಳು ರಾಜನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಬಳಿಕ, ರಾಜ ವಸುರತನ ದೇಹದಿಂದ ದೇವತೆ ಕಾಣಿಸಿಕೊಂಡು ಎಲ್ಲಾ ದರೋಡೆಕೋರರನ್ನು ಸದೆಬಡಿದಳು. ರಾಜನನ್ನು ರಕ್ಷಿಸಿದಳು.
ಇದನ್ನೂ ಓದಿ: ರಾಮನವಮಿಯ ದಿನ ಈ ಕೆಲಸವನ್ನು ತಪ್ಪದೇ ಮಾಡಿ
ರಾಜನು ನಿದ್ರೆಯಿಂದ ಎಚ್ಚರಗೊಂಡಾಗ,ತುಂಬಾ ಜನರು ಸತ್ತಿರುವುದನ್ನು ನೋಡಿದನು, ನಂತರ ಆಕಾಶದಿಂದ ಒಂದು ಧ್ವನಿ “ವಿಷ್ಣು ನಿನ್ನನ್ನು ರಕ್ಷಿಸಿದ್ದಾನೆ” ಎಂದು ಹೇಳುತ್ತದೆ. ಈ ಕಥೆಯ ಪ್ರಕಾರ, ಇದೆಲ್ಲವೂ ಅಮಲಕಿ ಏಕಾದಶಿಯ ಉಪವಾಸದ ಪರಿಣಾಮವಾಗಿದೆ, ಒಂದು ಅಮಲಕಿ ಏಕಾದಶಿಯಂದು ಉಪವಾಸ ಮಾಡುವ ವ್ಯಕ್ತಿ, ಪ್ರತಿಯೊಂದು ಕಾರ್ಯದಲ್ಲೂ ಯಶಸ್ವಿಯಾಗುತ್ತಾನೆ ಮತ್ತು ಅಂತಿಮವಾಗಿ ವೈಕುಂಠವನ್ನು ಸೇರುತ್ತಾನೆ. ಲಕ್ಷ್ಮೀ ದೇವಿಯು ಸಹ ಈ ಉಪವಾಸದಿಂದ ಸಂತೋಷಪಡುತ್ತಾಳೆ ಮತ್ತು ಈ ದಿನವನ್ನು ಆಚರಿಸಿದ ವ್ಯಕ್ತಿಗೆ ಸಮೃದ್ಧಿ, ಸಂಪತ್ತು ಹಾಗೂ ಸಂತೋಷ ಎಲ್ಲವನ್ನೂ ನೀಡುತ್ತಾಳೆ ಎಂದು ಹೇಳಲಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:10 pm, Thu, 14 March 24