AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Navami 2024: ರಾಮನವಮಿಯ ದಿನ ಈ ಕೆಲಸವನ್ನು ತಪ್ಪದೇ ಮಾಡಿ

ರಾಮನವಮಿಯ ದಿನ ಅಭಿಜಿತ್ ಮುಹೂರ್ತದಲ್ಲಿ ಭಗವಾನ್ ರಾಮನನ್ನು ಪೂಜಿಸುವುದರಿಂದ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅದೂ ಅಲ್ಲದೆ ಈ ವರ್ಷ, ಅಯೋಧ್ಯೆಯಲ್ಲಿ ರಾಮ ಲಲ್ಲಾನ ಪ್ರಾಣಪ್ರತಿಷ್ಠಾಪನೆ ನಡೆದಿರುವುದರಿಂದ ರಾಮನವಮಿಯ ವೈಭವವು ವಿಶೇಷವಾಗಿರುತ್ತದೆ. ಹಾಗಾದರೆ 2024 ರಲ್ಲಿ ರಾಮನವಮಿ ಹಬ್ಬವನ್ನು ಯಾವಾಗ ಆಚರಿಸಲಾಗುತ್ತದೆ? ಪೂಜಾ ಸಮಯ ಮತ್ತು ಈ ಬಾರಿ ಏನು ವಿಶೇಷತೆ ಇದೆ ಎಂದು ತಿಳಿದುಕೊಳ್ಳಿ.

Ram Navami 2024: ರಾಮನವಮಿಯ ದಿನ ಈ ಕೆಲಸವನ್ನು ತಪ್ಪದೇ ಮಾಡಿ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Mar 14, 2024 | 4:56 PM

Share

ವಾಲ್ಮೀಕಿ ರಾಮಾಯಣದ ಪ್ರಕಾರ, ವಿಷ್ಣುವಿನ ಏಳನೇ ಅವತಾರವಾದ ಶ್ರೀ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನದಂದು ಜನಿಸಿದನು. ರಾಮ ಲಲ್ಲಾ ಮಧ್ಯಾಹ್ನ ಸಮಯದಲ್ಲಿ ಜನಿಸಿದನು ಎನ್ನಲಾಗುತ್ತದೆ, ಆದ್ದರಿಂದ ರಾಮನವಮಿಯ ದಿನ ಅಭಿಜಿತ್ ಮುಹೂರ್ತದಲ್ಲಿ ಭಗವಾನ್ ರಾಮನನ್ನು ಪೂಜಿಸುವುದರಿಂದ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅದೂ ಅಲ್ಲದೆ ಈ ವರ್ಷ, ಅಯೋಧ್ಯೆಯಲ್ಲಿ ರಾಮ ಲಲ್ಲಾನ ಪ್ರಾಣಪ್ರತಿಷ್ಠಾಪನೆ ನಡೆದಿರುವುದರಿಂದ ರಾಮನವಮಿಯ ವೈಭವವು ವಿಶೇಷವಾಗಿರುತ್ತದೆ. ಹಾಗಾದರೆ 2024 ರಲ್ಲಿ ರಾಮನವಮಿ ಹಬ್ಬವನ್ನು ಯಾವಾಗ ಆಚರಿಸಲಾಗುತ್ತದೆ? ಪೂಜಾ ಸಮಯ ಮತ್ತು ಈ ಬಾರಿ ಏನು ವಿಶೇಷತೆ ಇದೆ ಎಂದು ತಿಳಿದುಕೊಳ್ಳಿ.

2024ರ ರಾಮನವಮಿಯ ಶುಭ ಮುಹೂರ್ತ;

ಈ ವರ್ಷ ರಾಮನವಮಿಯನ್ನು ಎ. 17 ರಂದು ಆಚರಣೆ ಮಾಡಲಾಗುತ್ತದೆ. ಪಂಚಾಂಗದ ಪ್ರಕಾರ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯು ಎ. 16 ರಂದು ಮಧ್ಯಾಹ್ನ 01.23 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಎ. 17ರಂದು ಮಧ್ಯಾಹ್ನ 03.14 ಕ್ಕೆ ಕೊನೆಗೊಳ್ಳುತ್ತದೆ. ರಾಮ ನವಮಿಯಂದು ಅಭಿಜಿತ್ ಮುಹೂರ್ತವು ಬೆಳಿಗ್ಗೆ 11.08 ರಿಂದ ಮಧ್ಯಾಹ್ನ 01:36 ರ (ಅವಧಿ – 2 ಗಂಟೆ 28 ನಿಮಿಷಗಳು) ವರೆಗೆ ಇರುತ್ತದೆ.

ರಾಮ ನವಮಿಯಂದು ರವಿ ಯೋಗ

ಈ ವರ್ಷದ ರಾಮನವಮಿಯಂದು ಇಡೀ ದಿನ ರವಿ ಯೋಗವಿದ್ದು ಇದು ತುಂಬಾ ಮಂಗಳಕರ ಎನ್ನಲಾಗುತ್ತದೆ, ಇದರಲ್ಲಿ ಸೂರ್ಯನ ಪ್ರಭಾವವಿದ್ದು ಎಲ್ಲಾ ರೀತಿಯ ದೋಷಗಳು ಕೂಡ ನಿವಾರಣೆಯಾಗುತ್ತದೆ ಜೊತೆಗೆ ಈ ಅವಧಿಯಲ್ಲಿ ಮಾಡುವ ಪೂಜೆಗಳು ವೃತ್ತಿ ಜೀವನದಲ್ಲಿ ಗೌರವ ಮತ್ತು ಯಶಸ್ಸನ್ನು ನೀಡುತ್ತವೆ ಎನ್ನುವ ನಂಬಿಕೆ ಇದೆ.

ಇದನ್ನೂ ಓದಿ: ಕುಂಭ ರಾಶಿಯಲ್ಲಿ ಅಪರೂಪದ ತ್ರಿಗ್ರಾಹಿ ಯೋಗ ಸೃಷ್ಟಿ.. ಈ 3 ರಾಶಿಗಳು ಸಂಪದ್ಭರಿತವಾಗಲಿವೆ!

ಅಯೋಧ್ಯೆಯಲ್ಲಿ ರಾಮನವಮಿ

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಲಲ್ಲಾನ ಭವ್ಯ ಪ್ರತಿಷ್ಠಾಪನೆಯ ನಂತರ ಇದೇ ಮೊದಲ ಬಾರಿಗೆ ಹೊಸ ಮಂದಿರದಲ್ಲಿ ರಾಮನವಮಿಯನ್ನು ಆಚರಿಸಲಾಗುವುದು. ಹಾಗಾಗಿ ಇಲ್ಲಿಯ ಆಚರಣೆ ಅನೇಕ ಪಟ್ಟು ಹೆಚ್ಚಾಗಲಿದ್ದು ದಿನವಿಡೀ ರಾಮನಾಮ ಪಠಿಸಲಾಗುತ್ತದೆ. ಅದಲ್ಲದೆ ಇಲ್ಲಿ ಪ್ರತಿ ವರ್ಷ ರಾಮನವಮಿಯ ದಿನದ ಅಂಗವಾಗಿ 9 ದಿನಗಳ ಜಾತ್ರೆ ಕೂಡ ನಡೆಯುತ್ತದೆ.

ರಾಮನವಮಿಯಂದು ಈ ಕೆಲಸವನ್ನು ತಪ್ಪದೇ ಮಾಡಿ!

ಈ ದಿನ ಮನೆಯಲ್ಲಿ ರಾಮಾಯಣ ಅಥವಾ ರಾಮ ರಕ್ಷಾ ಸ್ತೋತ್ರವನ್ನು ಪಠಿಸಿ ಇದರಿಂದ ಜೀವನದಲ್ಲಿ ಎಲ್ಲವೂ ಪ್ರಾಪ್ತಿಯಾಗುತ್ತದೆ. ಗ್ರಹಗಳ ದೋಷವಿದ್ದಲ್ಲಿ ಪರಿಹಾರ ಸಿಗುತ್ತದೆ. ರಾಮನವಮಿಯ ದಿನದಂದು, ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡಿ ಬಳಿಕ ರಾಮನಿಗೆ ಹಳದಿ ಬಣ್ಣದ ಬಟ್ಟೆ ಮತ್ತು ಹಳದಿ ಹೂವುಗಳನ್ನು ಅರ್ಪಿಸಿ ಮತ್ತು ಮಧ್ಯಾಹ್ನ 12 ಗಂಟೆಗೆ, ಶಂಖ ಊದುವ ಮೂಲಕ ರಾಮನನ್ನು ಪೂಜಿಸಿ. ಇದಲ್ಲದೆ ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ ಎಂಬ ಮಂತ್ರವನ್ನು 108 ಬಾರಿ ಪಠಿಸಿ. ಇದು ಮನೆಯಲ್ಲಿ ಸಂತೋಷ, ಸಮೃದ್ಧಿ, ಶಾಂತಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್