AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shakuna Shastra : ರಸ್ತೆಯಲ್ಲಿ ಹಣ ಬಿದ್ದು ಸಿಕ್ಕರೆ ಶುಭವೋ? ಅಶುಭವೋ?

ಮೂರು ರಸ್ತೆಗಳು ಸಂಧಿಸುವಂತಹ ಜಾಗದಲ್ಲಿ ಹಣ ಬಿದ್ದು ಸಿಕ್ಕಿದರೆ ಅದನ್ನು ನೀವು ತೆಗೆದುಕೊಂಡರೆ ಕಷ್ಟಗಳು ಮತ್ತು ಬಡತನವು ನಿಮ್ಮನ್ನು ಬೆನ್ನಟ್ಟುತ್ತದೆ ಎಂದು ನಂಬಲಾಗಿದೆ.

Shakuna Shastra : ರಸ್ತೆಯಲ್ಲಿ ಹಣ ಬಿದ್ದು ಸಿಕ್ಕರೆ ಶುಭವೋ? ಅಶುಭವೋ?
Money Found On Road
ಅಕ್ಷತಾ ವರ್ಕಾಡಿ
|

Updated on: Mar 14, 2024 | 6:47 PM

Share

ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನಾಣ್ಯ, ನೋಟುಗಳು ಕಂಡುಬರುವುದು ಸಹಜ. ರಸ್ತೆಯಲ್ಲಿ ಹಣ ಸಿಗುವುದು ಅದೃಷ್ಟದ ಸಂಕೇತ ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಲಕ್ಷ್ಮಿ ದೇವಿಯು ಕಟಾಕ್ಷದ ಸಂಕೇತ ಎಂದು ನಂಬುತ್ತಾರೆ. ಆದರೆ ಮೂರು ರಸ್ತೆಗಳು ಸಂಧಿಸುವಂತಹ ಜಾಗದಲ್ಲಿ ಹಣ ಬಿದ್ದು ಸಿಕ್ಕಿದರೆ ಅದನ್ನು ನೀವು ತೆಗೆದುಕೊಂಡರೆ ಕಷ್ಟಗಳು ಮತ್ತು ಬಡತನವು ನಿಮ್ಮನ್ನು ಬೆನ್ನಟ್ಟುತ್ತದೆ ಎಂದು ನಂಬಲಾಗಿದೆ. ಅನೇಕರು ರಸ್ತೆಯಲ್ಲಿ ನಡೆಯುವಾಗ ಈ ರೀತಿ ಹಣ ಸಿಕ್ಕರೆ ಅದೃಷ್ಟ ಖುಲಾಯಿಸುತ್ತದೆ ಎನ್ನುತ್ತಾರೆ. ಆದರೆ ರಸ್ತೆಯಲ್ಲಿ ಸಿಕ್ಕ ಹಣವನ್ನು ತಂದು ಮನೆಯಲ್ಲಿ ಇಡುವಂತಿಲ್ಲ. ಅಲ್ಲದೆ, ಆ ಹಣವನ್ನು ಖರ್ಚು ಮಾಡಬಾರದು ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ ದಾರಿಯಲ್ಲಿ ಸಿಕ್ಕ ಹಣವನ್ನು ಏನು ಮಾಡುವುದು?

ವಾಸ್ತು ಮತ್ತು ಜ್ಯೋತಿಷ್ಯದ ತಜ್ಞರ ಪ್ರಕಾರ, ರಸ್ತೆಯಲ್ಲಿ ಸಿಕ್ಕ ನಾಣ್ಯವನ್ನು ಮನೆಗೆ ತಂದು ಅರಿಶಿನ ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಬೇಕು. ನಂತರ ಪೂಜಾ ಕೋಣೆಯಲ್ಲಿ ಒಂದು ಸಣ್ಣ ಬಟ್ಟಲಿನಲ್ಲಿ ಅಕ್ಕಿಯನ್ನು ಸುರಿಯಿರಿ ಮತ್ತು ಅದರ ಮೇಲೆ ಈ ನಾಣ್ಯವನ್ನು ಇರಿಸಿ. ನಂತರ ಅದಕ್ಕೆ ಅರಿಶಿನ-ಕುಂಕುಮ ಹಾಕಿ. ಈ ರೀತಿ ಮಾಡುವುದರಿಂದ ಅದೃಷ್ಟ ನಿಮ್ಮದಾಗುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ರಾಮನವಮಿಯ ದಿನ ಈ ಕೆಲಸವನ್ನು ತಪ್ಪದೇ ಮಾಡಿ

ಆದರೆ, ಕೆಲವರು ನಾಣ್ಯ, ನೋಟುಗಳ ಜೊತೆಗೆ ನಿಂಬೆಹಣ್ಣು, ಅರಿಶಿನ-ಕುಂಕುಮ ಇತ್ಯಾದಿಗಳನ್ನು ಬಳಸಿ ಮಂತ್ರಗಳನ್ನು ಮಾಡಿ ಕ್ಷುದ್ರ ಪೂಜೆಗಳಿಗೆ ಬಳಸುತ್ತಾರೆ. ಆದ್ದರಿಂದ ಅಂತಹ ಹಣ ಸಿಕ್ಕಿದರೆ ಮನೆಗೆ ತರಬಾರದು. ಆದರೆ ದಾರಿಯಲ್ಲಿ ನಾಣ್ಯ ಸಿಕ್ಕರೆ ಮನೆಗೆ ತರಬಹುದು. ಹೀಗೆ ತಂದ ನಾಣ್ಯವನ್ನು ಪ್ರತಿ ಶುಕ್ರವಾರ ಭಕ್ತಿಯಿಂದ ಪೂಜಿಸಬೇಕು. ಅಲ್ಲದೆ ಕೆಲವರಿಗೆ ನಾಣ್ಯದ ಬದಲು ನೋಟು ಸಿಕ್ಕರೆ ಅದೊಂದು ಶುಭ ಶಕುನ ಎಂದೂ ಹೇಳಲಾಗುತ್ತದೆ. ಇದು ನಿಮ್ಮ ಮನೆಗೆ ಲಕ್ಷ್ಮಿ ದೇವಿಯ ಆಗಮನವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಆದುದರಿಂದ ರಸ್ತೆಯಲ್ಲಿ ನೋಟು ಬಿದ್ದು ಸಿಕ್ಕರೆ ಮನೆಗೆ ತಂದು ಅದಕ್ಕೆ ಸ್ವಲ್ಪ ನೀರು ಚಿಮುಕಿಸಿ ದೇವರ ಕೋಣೆಯಲ್ಲಿಟ್ಟು ಪೂಜೆ ಸಲ್ಲಿಸಬೇಕು. ಇದು ಕೆಲವೇ ದಿನಗಳಲ್ಲಿ ನಿಮಗೆ ಅದೃಷ್ಟವನ್ನು ನೀಡುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ