Loksabha Elections 2024 Guru bala: ಲೋಕಸಭಾ ಚುನಾವಣೆ ಯಾವ ರಾಶಿ, ಲಗ್ನದವರಿಗೆ ಸಂಪೂರ್ಣ ಗುರು ಬಲ?

ಧನುಸ್ಸು ಹಾಗೂ ಮೀನ ರಾಶಿಯವರಿಗೆ ಗುರು ಅಧಿಪತಿ. ಇನ್ನು ಕರ್ಕಾಟಕ ರಾಶಿಯಲ್ಲಿನ ಗುರು ಇದ್ದಲ್ಲಿ ಅದು ಉಚ್ಚ ಸ್ಥಿತಿ. ಅದೇ ಗುರು ಗ್ರಹ ಮಕರದಲ್ಲಿ ಇದ್ದಲ್ಲಿ ಅದು ನೀಚ ಸ್ಥಿತಿ. ಗುರು ಗ್ರಹವು ತಾನು ಇರುವ ರಾಶಿಯಿಂದ ಐದು, ಏಳು ಹಾಗೂ ಒಂಬತ್ತನೇ ಸ್ಥಾನದ ವೀಕ್ಷಣೆ ಮಾಡುತ್ತದೆ. ಯಾವುದೇ ರಾಶಿಗೆ ಎರಡು, ಐದು, ಏಳು, ಒಂಬತ್ತು ಹಾಗೂ ಹನ್ನೊಂದನೇ ಮನೆಯಲ್ಲಿ ಗುರು ಸಂಚರಿಸುತ್ತಿದೆ ಅಂದರೆ ಅದು ಉತ್ತಮ ಫಲಗಳನ್ನು ನೀಡುತ್ತದೆ.

Loksabha Elections 2024 Guru bala: ಲೋಕಸಭಾ ಚುನಾವಣೆ ಯಾವ ರಾಶಿ, ಲಗ್ನದವರಿಗೆ ಸಂಪೂರ್ಣ ಗುರು ಬಲ?
ಸಾಂದರ್ಭಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: Digi Tech Desk

Updated on:Mar 14, 2024 | 10:52 AM

ನಾವೀಗ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಇದ್ದೇವೆ. ಈ ಹಿನ್ನೆಲೆಯಲ್ಲಿ ಗುರು ಬಲ ಎಂಬ ವಿಷಯದ ಬಗ್ಗೆ ನಿಮ್ಮೆಲ್ಲರ ಗಮನಕ್ಕೆ ಬರುವಂತೆ ಒಂದು ಲೇಖನ ಬರೆಯಬೇಕು ಎಂಬುದು ನನ್ನ ಉದ್ದೇಶ. ಯಾವ ರಾಶಿಯವರಿಗೆ ಗುರು ಬಲ ಇದೆ ಹಾಗೂ ಯಾವ ಲಗ್ನಕ್ಕೆ ಗುರುವಿನ ಶಕ್ತಿ ಅಮೋಘವಾಗಿದೆ ಎಂಬುದು ನಿಮಗೆ ತಿಳಿಸಲಾಗುತ್ತದೆ. ಅದಕ್ಕೂ ಮುನ್ನ ಗುರು ಗ್ರಹದ ಬಗ್ಗೆ ಕೆಲವು ಮೂಲಭೂತ ಅಂಶಗಳ ಬಗ್ಗೆ ಮಾಹಿತಿ ನೀಡುತ್ತೇನೆ.

ಧನುಸ್ಸು ಹಾಗೂ ಮೀನ ರಾಶಿಯವರಿಗೆ ಗುರು ಅಧಿಪತಿ. ಇನ್ನು ಕರ್ಕಾಟಕ ರಾಶಿಯಲ್ಲಿನ ಗುರು ಇದ್ದಲ್ಲಿ ಅದು ಉಚ್ಚ ಸ್ಥಿತಿ. ಅದೇ ಗುರು ಗ್ರಹ ಮಕರದಲ್ಲಿ ಇದ್ದಲ್ಲಿ ಅದು ನೀಚ ಸ್ಥಿತಿ. ಗುರು ಗ್ರಹವು ತಾನು ಇರುವ ರಾಶಿಯಿಂದ ಐದು, ಏಳು ಹಾಗೂ ಒಂಬತ್ತನೇ ಸ್ಥಾನದ ವೀಕ್ಷಣೆ ಮಾಡುತ್ತದೆ. ಯಾವುದೇ ರಾಶಿಗೆ ಎರಡು, ಐದು, ಏಳು, ಒಂಬತ್ತು ಹಾಗೂ ಹನ್ನೊಂದನೇ ಮನೆಯಲ್ಲಿ ಗುರು ಸಂಚರಿಸುತ್ತಿದೆ ಅಂದರೆ ಅದು ಉತ್ತಮ ಫಲಗಳನ್ನು ನೀಡುತ್ತದೆ.

ಮುಂಬರುವ ಮೇ ತಿಂಗಳಿಂದ ಗುರು ಗ್ರಹ ವೃಷಭ ರಾಶಿಯನ್ನು ಪ್ರವೇಶಿಸುತ್ತದೆ. ಈ ವೇಳೆ ಮೇಷಕ್ಕೆ ಎರಡನೇ ಮನೆ ಗುರು, ಕರ್ಕಾಟಕಕ್ಕೆ ಹನ್ನೊಂದನೇ ಮನೆ, ಕನ್ಯಾ ರಾಶಿಗೆ ಒಂಬತ್ತು, ವೃಶ್ಚಿಕಕ್ಕೆ ಏಳು, ಮಕರ ರಾಶಿಗೆ ಐದನೇ ಮನೆಯಲ್ಲಿ ಗುರು ಸಂಚಾರ ಮಾಡುವುದರಿಂದ ಶುಭ ಫಲವನ್ನು ಹೇಳಬಹುದು. ಆದರೆ ಸಂಪೂರ್ಣವಾಗಿ ಇವರಿಗೆ ಒಳ್ಳೆ ಫಲವನ್ನೇ ಹೇಳುವುದಕ್ಕೆ ಸಾಧ್ಯವಾ ಅಂದರೆ, ಇಲ್ಲ ಎಂಬ ಉತ್ತರ ನೀಡಬೇಕಾಗುತ್ತದೆ.

ಆರಂಭದಲ್ಲೇ ಹೇಳಿದಂತೆ ಗುರುವಿಗೆ ಐದು, ಏಳು, ಒಂಬತ್ತನೇ ಮನೆಯ ದೃಷ್ಟಿ ಇರುತ್ತದೆ. ವೃಷಭದಲ್ಲಿನ ಇರುವ ಗುರುವು ಕನ್ಯಾ ರಾಶಿ, ವೃಶ್ಚಿಕ ರಾಶಿ ಮತ್ತು ಮಕರ ರಾಶಿಯನ್ನು ವೀಕ್ಷಣೆ ಮಾಡುತ್ತದೆ. ವೃಶ್ಚಿಕ, ಮಕರ ಹಾಗೂ ಮೀನ ಲಗ್ನದಲ್ಲಿ ಯಾರು ಜನಿಸಿರುತ್ತಾರೋ ಅವರಿಗೆ ಲಗ್ನದ ಹನ್ನೊಂದನೇ ಮನೆಯ ಗುರು ವೀಕ್ಷಣೆಯು ಹೆಚ್ಚಿನ ಫಲ ನೀಡುತ್ತದೆ.

ಇದನ್ನೂ ಓದಿ: ಈ ಏಕಾದಶಿಯಂದು ನೆಲ್ಲಿಕಾಯಿ ದಾನ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ಸರಿ, ರಾಶಿಗೇನೋ ಉತ್ತಮ ಗೋಚಾರದ ಫಲ ಇದೆ. ಆದರೆ ಲಗ್ನಕ್ಕೆ ಅಷ್ಟೇನೂ ಉತ್ತಮ ಸ್ಥಿತಿಯಲ್ಲ ಅಂತಾದರೆ ಸಂಪೂರ್ಣ ಶುಭ ಫಲ ನೀಡುವುದಿಲ್ಲ. ಮೊದಲನೆಯ ಉದಾಹರಣೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜಾತಕ ನೋಡಬಹುದು. ಅವರದು ಮಿಥುನ ರಾಶಿ ಹಾಗೂ ವೃಷಭ ಲಗ್ನ. ಕಳೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಮೇಷದಲ್ಲಿ ಗುರು ಸಂಚರಿಸಿತ್ತು. ಆಗ ಮಿಥುನ ರಾಶಿಗೆ ಹನ್ನೊಂದನೇ ಮನೆಯಲ್ಲಿನ ಗುರುವಿನಿಂದಾಗಿ ಎಂಥ ಸವಾಲಿನ ಸನ್ನಿವೇಶದಲ್ಲೂ ಅವರು ಗೆದ್ದುಬಿಟ್ಟರು. ಆದರೆ ಗುರುವಿನ ದೃಷ್ಟಿ ವೃಷಭ ಲಗ್ನಕ್ಕೆ ಚತುರ್ಥ ಸ್ಥಾನವಾದ ಸಿಂಹಕ್ಕೆ, ಐದನೇ ಮನೆಯಾದ ತುಲಾ ಹಾಗೂ ಏಳನೇ ಮನೆಯಾದ ಧನುಸ್ಸು ರಾಶಿ ಮೇಲೆ ಇತ್ತು ಮತ್ತು ಈಗಲೂ ಇದೆ.

ಆ ಕಾರಣದಿಂದಾಗಿ ಗುರು ಗ್ರಹವು ಅವರಿಗೆ ರಾಜಕೀಯವಾಗಿ ಉತ್ತಮ ಭವಿಷ್ಯ ಆಗಬಲ್ಲಂಥ ಮೈತ್ರಿಯೊಂದನ್ನು ನೀಡಿತು. ಆದರೆ ಸ್ವಂತವಾಗಿ ನೋಡಿದರೆ ಅವರಿಗೆ ಇದರಿಂದ ಸಂಪೂರ್ಣ ಲಾಭ ಅಂತಲೂ ಇಲ್ಲ, ಹಾಗೇ ಭಾರೀ ನಷ್ಟ ಅಂತಲೂ ಇಲ್ಲ.

ಇನ್ನು ಲೋಕಸಭಾ ಚುನಾವಣೆ ಹೊತ್ತಿಗೆ ರಾಜ್ಯ ಹಾಗೂ ರಾಷ್ಟ್ರದ ಮಟ್ಟಿಗೆ ಪ್ರಮುಖರಾದ ಇಬ್ಬರು ನಾಯಕರ ಜಾತಕ ವಿಶ್ಲೇಷಣೆ ಮಾಡುವುದಾದರೆ, ನರೇಂದ್ರ ಮೋದಿ ಅವರದು ವೃಶ್ಚಿಕ ರಾಶಿ ಹಾಗೂ ವೃಶ್ಚಿಕ ಲಗ್ನ. ಲೋಕಸಭೆ ಚುನಾವಣೆ ಫಲಿತಾಂಶ ಬರುವ ಹೊತ್ತಿಗೆ ಈ ರಾಶಿಯವರಿಗೆ ಏಳನೇ ಮನೆಯಲ್ಲಿ ಗುರುವಿನ ಸಂಚಾರ, ಜತೆಗೆ ಲಗ್ನದ ಹನ್ನೊಂದನೇ ಮನೆಗೆ ಗುರುವಿನ ದೃಷ್ಟಿ ಇರುತ್ತದೆ. ಇದು ಸಂಪೂರ್ಣ ಶುಭ ಫಲವನ್ನು ನೀಡುತ್ತದೆ.

ಅದೇ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು ವೃಶ್ಚಿಕ ರಾಶಿ. ಅವರಿಗೆ ಏಳನೇ ಮನೆಯಲ್ಲಿ ಗುರುವಿನ ಸಂಚಾರ ಹಾಗೂ ಅವರ ಜನ್ಮ ಲಗ್ನವಾದ ಕನ್ಯಾಗೆ ದೃಷ್ಟಿ ಮತ್ತು ತೃತೀಯ ಮತ್ತು ಪಂಚಮ ಸ್ಥಾನದ ಮೇಲೆ ದೃಷ್ಟಿ ಇರುತ್ತದೆ. ಆದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪ್ರದರ್ಶನ ತೆಗೆದು ಹಾಕುವಂತೇನೂ ಇರುವುದಿಲ್ಲ. ಆದರೆ ಸಿದ್ದರಾಮಯ್ಯ ಅವರ ಸಾಧನೆಗೆ ಫಲಿತಾಂಶ ಸಂಪೂರ್ಣ ತೃಪ್ತಿದಾಯಕವಾಗಿ ಇರುವುದಿಲ್ಲ.

ಜನ್ಮ ಜಾತಕ ವಿಶ್ಲೇಷಣೆ ಮಾಡಿದಾಗ ನರೇಂದ್ರ ಮೋದಿ ಅವರ ರಾಜಕೀಯ ಸಂನ್ಯಾಸ ಸಮಯ ಇನ್ನು ಒಂದೆರಡು ವರ್ಷದ ಅವಧಿಯೊಳಗೆ ಕಾಣುತ್ತಿದ್ದರೆ, ಸಿದ್ದರಾಮಯ್ಯ ಅವರದು ಇದೇ ವರ್ಷ ಕಾಣುತ್ತಿದೆ.

ಆರಂಭದಲ್ಲೇ ಹೇಳಿದಂತೆ ಮೇಷ, ಕರ್ಕಾಟಕ, ಕನ್ಯಾ, ವೃಶ್ಚಿಕ ಹಾಗೂ ಮಕರ ರಾಶಿಗೆ ಗುರುವಿನ ಬಲ ಇರುತ್ತದೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಈ ರಾಶಿಯವರು ಇದ್ದರಷ್ಟೇ ಸಾಲದು, ಜತೆಗೆ ಕರ್ಕಾಟಕ ಲಗ್ನ, ವೃಶ್ಚಿಕ ಲಗ್ನ, ಮಕರ ಲಗ್ನ ಅಥವಾ ಮೀನ ಲಗ್ನವಾಗಿರಬೇಕು. ಇದರ ಜತೆಗೆ ಜನ್ಮ ಜಾತಕದಲ್ಲಿ ಗುರುವು ಉತ್ತಮ ಸ್ಥಾನದಲ್ಲಿದ್ದು, ಬಲಯುಕ್ತನಾಗಿರಬೇಕು.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ (ಕಾಪು, ಉಡುಪಿ ಜಿಲ್ಲೆ)

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:37 pm, Wed, 13 March 24

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು