Amalaki Ekadashi 2024: ಈ ಏಕಾದಶಿಯಂದು ನೆಲ್ಲಿಕಾಯಿ ದಾನ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?
ಅಮಲಕಿ ಏಕಾದಶಿ ಉಪವಾಸ ಮಾಡುವುದರಿಂದ ವಿಷ್ಣುವಿನ ವಿಶೇಷ ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ ಜೊತೆಗೆ ಕುಟುಂಬದಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಯಾವಾಗಲೂ ಇರುತ್ತದೆ. ಈ ದಿನ ನೆಲ್ಲಿಕಾಯಿಯನ್ನು ಮನೆಗೆ ತಂದು ದೇವರ ಮನೆಯಲ್ಲಿ ಇಟ್ಟು ಪೂಜಿಸಲಾಗುತ್ತದೆ. ಹಾಗಾದರೆ ಈ ಬಾರಿ ಅಮಲಕಿ ಏಕಾದಶಿಯನ್ನು ಯಾವಾಗ ಆಚರಿಸಲಾಗುತ್ತದೆ? ಪೂಜಾ ವಿಧಾನ ಹೇಗಿರಬೇಕು ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಸನಾತನ ಧರ್ಮದಲ್ಲಿ ಏಕಾದಶಿ ಉಪವಾಸವನ್ನು ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ. ನಿಮಗೆ ತಿಳಿದಿರುವಂತೆ ಏಕಾದಶಿ ವರ್ಷದಲ್ಲಿ 24 ಬಾರಿ ಮತ್ತು ತಿಂಗಳಲ್ಲಿ ಎರಡು ಬಾರಿ ಬರುತ್ತದೆ. ಫಾಲ್ಗುಣ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಅಮಲಕಿ ಏಕಾದಶಿ ಅಥವಾ ಆಮ್ಲಾ ಏಕಾದಶಿ ಎಂದು ಕರೆಯಲಾಗುತ್ತದೆ. ಅಮಲಕಿ ಏಕಾದಶಿ ಉಪವಾಸ ಮಾಡುವುದರಿಂದ ವಿಷ್ಣುವಿನ ವಿಶೇಷ ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ ಜೊತೆಗೆ ಕುಟುಂಬದಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಯಾವಾಗಲೂ ಇರುತ್ತದೆ. ಈ ದಿನ ನೆಲ್ಲಿಕಾಯಿಯನ್ನು ಮನೆಗೆ ತಂದು ದೇವರ ಮನೆಯಲ್ಲಿ ಇಟ್ಟು ಪೂಜಿಸಲಾಗುತ್ತದೆ. ಹಾಗಾದರೆ ಈ ಬಾರಿ ಅಮಲಕಿ ಏಕಾದಶಿಯನ್ನು ಯಾವಾಗ ಆಚರಿಸಲಾಗುತ್ತದೆ? ಪೂಜಾ ವಿಧಾನ ಹೇಗಿರಬೇಕು ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಮಲಕಿ ಏಕಾದಶಿ ಮಾರ್ಚ್ 20 ಅಥವಾ 21?
ಫಾಲ್ಗುಣ ಮಾಸದ ಶುಕ್ಲ ಪಕ್ಷದ ಏಕಾದಶಿಯು ಮಾ. 20 ರಂದು ಬೆಳಿಗ್ಗೆ 12:21 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಮಾ. 21 ರಂದು ಬೆಳಿಗ್ಗೆ 02:22 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಅಮಲಕಿ ಏಕಾದಶಿ ಉಪವಾಸವನ್ನು ಮಾರ್ಚ್ 20 ರಂದು ಆಚರಿಸಲಾಗುತ್ತದೆ. ಈ ದಿನದ ಪೂಜಾ ಮುಹೂರ್ತವು ಬೆಳಿಗ್ಗೆ 06.25 ರಿಂದ ಬೆಳಿಗ್ಗೆ 09.27ರ ತನಕ ಇರುತ್ತದೆ.
ಅಮಲಕಿ ಏಕಾದಶಿಯ ದಿನ ನೆಲ್ಲಿಕಾಯಿಯನ್ನು ಯಾಕೆ ಪೂಜಿಸಲಾಗುತ್ತದೆ?
ನೆಲ್ಲಿಕಾಯಿಯನ್ನು ಪೂಜಾ ಆಚರಣೆಗಳಲ್ಲಿ ಮಾತ್ರವಲ್ಲದೆ ಆಯುರ್ವೇದದಲ್ಲಿಯೂ ಮುಖ್ಯವೆಂದು ಪರಿಗಣಿಸಲಾಗಿದೆ. ನೆಲ್ಲಿಕಾಯಿ ವಿಷ್ಣುವಿನಿಂದಲೇ ಹುಟ್ಟಿಕೊಂಡಿದ್ದರಿಂದ ಇದನ್ನು ಶ್ರೀಹರಿಯ ರೂಪ ಎಂದು ನಂಬಲಾಗಿದೆ. ಈ ಮರವನ್ನು ಪೂಜಿಸುವುದರಿಂದ ವಿಷ್ಣು ಮತ್ತು ಲಕ್ಷ್ಮೀ ದೇವಿ ಇಬ್ಬರೂ ಸಂತುಷ್ಟರಾಗುತ್ತಾರೆ ಎಂದು ಹೇಳಲಾಗುತ್ತದೆ. ಆಯುರ್ವೇದದ ಪ್ರಕಾರ, ಆಮ್ಲಾ ಔಷಧೀಯ ಗುಣಗಳನ್ನು ಹೊಂದಿದೆ. ಇದರ ನಿಯಮಿತ ಸೇವನೆಯಿಂದ, ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತವೆ.
ಇದನ್ನೂ ಓದಿ: ರೋಗ ದೂರ ಮಾಡುವಲ್ಲಿ ದೊಡ್ಡ ಪತ್ರೆಯ ಗುಣ ಬಹುದೊಡ್ಡದು
ಅಮಲಕಿ ಏಕಾದಶಿ ಪೂಜಾ ವಿಧಾನ:
- ಈ ದಿನ, ಬೆಳಿಗ್ಗೆ ಬೇಗ ಸ್ನಾನ ಮಾಡಿದ ನಂತರ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ.
- ಮನೆಯ ಸುತ್ತಮುತ್ತಲಲ್ಲಿ ನೆಲ್ಲಿಕಾಯಿಯ ಮರವಿದ್ದಲ್ಲಿ, ಅಮಲಕಿ ಏಕಾದಶಿಯಂದು ಆ ಸ್ಥಳವನ್ನು ಸ್ವಚ್ಛಗೊಳಿಸಿ ಪೂಜೆಗೆ ವ್ಯವಸ್ಥೆ ಮಾಡಿ.
- “ಓಂ ಭಗವತೇ ವಾಸುದೇವಾಯ ನಮಃ” ಎಂಬ ಮಂತ್ರವನ್ನು ಪಠಿಸುತ್ತಾ ನೆಲ್ಲಿಕಾಯಿ ಮರ ಅಥವಾ ಗಿಡಕ್ಕೆ ನೀರು, ಅರಿಶಿನ, ಕುಂಕುಮ, ಶ್ರೀಗಂಧ, ಅಕ್ಷತೆ, ಹೂವು, ವೀಳ್ಯದೆಲೆ, ಅಡಿಕೆ ಇತ್ಯಾದಿಗಳನ್ನು ಅರ್ಪಿಸಿ.
- ಮಣ್ಣಿನ ಹಣತೆಯಲ್ಲಿ ತುಪ್ಪದ ದೀಪವನ್ನು ಹಚ್ಚಿ.
- ಬಳಿಕ ನಿಮ್ಮ ಮನಸ್ಸಿನಲ್ಲಿರುವುದನ್ನು ದೇವರ ಬಳಿ ಬೇಡಿಕೊಂಡು ಆರತಿ ಮಾಡಿ.
- ಈ ದಿನ ನೆಲ್ಲಿಕಾಯಿಯನ್ನು ದಾನ ಮಾಡುವುದರಿಂದ ಲಕ್ಷ್ಮೀ ದೇವಿಯು ಮನೆಯಲ್ಲಿ ಸದಾ ನೆಲೆಸಿರುತ್ತಾಳೆ. ಅಲ್ಲದೆ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಹಣಕಾಸಿನ ವಿಷಯದಲ್ಲಿ ಮನ ಹಾನಿಯಾಗುವುದು ತಪ್ಪುತ್ತದೆ ಎಂಬ ನಂಬಿಕೆ ಇದೆ.
- ಈ ದಿನ ಉಪವಾಸ ಮಾಡುವವರು ಮಾಂಸಾಹಾರ ಸೇವನೆ ಮಾಡಬಾರದು. ಅಲ್ಲದೆ ಅಕ್ಕಿಯಿಂದ ಮಾಡಿದ ಯಾವುದೇ ಪದಾರ್ಥಗಳನ್ನು ಕೂಡ ಸೇವನೆ ಮಾಡಬಾರದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:16 pm, Wed, 13 March 24