Pushya Nakshatra 2024: ಹಣ ಹೂಡಿಕೆ, ಶುಭ ಕಾರ್ಯಕ್ಕೆ ಪುಷ್ಯ ನಕ್ಷತ್ರ ಬರಬೇಕು ಯಾಕೆ?

ಈ ದಿನ ಒಳ್ಳೆಯ ಕೆಲಸಕ್ಕೆ ಶುಭಾರಂಭ ಮಾಡುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಸದಾಕಾಲ ಇರುತ್ತದೆ ಎಂದು ನಂಬಲಾಗಿದೆ. ಕೆಲವು ಪುರಾಣಗಳಲ್ಲಿ ತಿಳಿಸಿರುವ ಪ್ರಕಾರ ಪುಷ್ಯ ನಕ್ಷತ್ರದಲ್ಲಿ ಪ್ರಾರಂಭವಾದ ಎಲ್ಲಾ ಕೆಲಸಗಳು ಖಚಿತ ಮತ್ತು ಫಲಪ್ರದವಾಗಿರುತ್ತವೆ. ಹಾಗಾದರೆ ಮಾರ್ಚ್ ನಲ್ಲಿ ಪುಷ್ಯ ನಕ್ಷತ್ರ ಯಾವಾಗ ಬರುತ್ತದೆ? ಈ ನಕ್ಷತ್ರದಲ್ಲಿ ಯಾವ ಕೆಲಸ ಮಾಡಬೇಕು? ಎಂಬುದನ್ನು ತಿಳಿದುಕೊಳ್ಳಿ.

Pushya Nakshatra 2024: ಹಣ ಹೂಡಿಕೆ, ಶುಭ ಕಾರ್ಯಕ್ಕೆ ಪುಷ್ಯ ನಕ್ಷತ್ರ ಬರಬೇಕು ಯಾಕೆ?
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 13, 2024 | 10:23 AM

ಹಿಂದೂ ಪುರಾಣಗಳಲ್ಲಿ ತಿಳಿಸಿರುವ ಪ್ರಕಾರ, ಪುಷ್ಯ ನಕ್ಷತ್ರವನ್ನು ಬಹಳ ಮಂಗಳಕರವೆಂದು ಮತ್ತು ಒಳ್ಳೆಯ ಕೆಲಸ ಮಾಡಿದಲ್ಲಿ ಅದು ಫಲಪ್ರದವೆಂದು ಪರಿಗಣಿಸಲಾಗಿದೆ. ಈ ನಕ್ಷತ್ರವು ಪ್ರತಿ ತಿಂಗಳು ಬರುತ್ತದೆ. ಹಾಗಾಗಿ ಜನರು ಈ ದಿನ ಹೂಡಿಕೆ ಮಾಡಲು, ಶುಭ ಕಾರ್ಯಗಳನ್ನು ನಡೆಸಲು ಮತ್ತು ಚಿನ್ನ- ಬೆಳ್ಳಿ, ವಾಹನ, ಆಸ್ತಿ ಇತ್ಯಾದಿಗಳನ್ನು ಖರೀದಿಸಲು ಪುಷ್ಯ ನಕ್ಷತ್ರ ಬರುವುದಕ್ಕೆ ಕಾಯುತ್ತಾರೆ. ಈ ದಿನ ಒಳ್ಳೆಯ ಕೆಲಸಕ್ಕೆ ಶುಭಾರಂಭ ಮಾಡುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಸದಾಕಾಲ ಇರುತ್ತದೆ ಎಂದು ನಂಬಲಾಗಿದೆ. ಕೆಲವು ಪುರಾಣಗಳಲ್ಲಿ ತಿಳಿಸಿರುವ ಪ್ರಕಾರ ಪುಷ್ಯ ನಕ್ಷತ್ರದಲ್ಲಿ ಪ್ರಾರಂಭವಾದ ಎಲ್ಲಾ ಕೆಲಸಗಳು ಖಚಿತ ಮತ್ತು ಫಲಪ್ರದವಾಗಿರುತ್ತವೆ. ಹಾಗಾದರೆ ಮಾರ್ಚ್ ನಲ್ಲಿ ಪುಷ್ಯ ನಕ್ಷತ್ರ ಯಾವಾಗ ಬರುತ್ತದೆ? ಈ ನಕ್ಷತ್ರದಲ್ಲಿ ಯಾವ ಕೆಲಸ ಮಾಡಬೇಕು? ಎಂಬುದನ್ನು ತಿಳಿದುಕೊಳ್ಳಿ.

ಮಾರ್ಚ್ ನಲ್ಲಿ ಪುಷ್ಯ ನಕ್ಷತ್ರ ಯಾವಾಗ? ಈ ದಿನದ ಶುಭ ಸಮಯ ತಿಳಿದುಕೊಳ್ಳಿ!

ಈ ತಿಂಗಳ ಪುಷ್ಯ ನಕ್ಷತ್ರವು ಮಾ. 19 ಮತ್ತು 20 ರಂದು ಬರುತ್ತದೆ. ಆದರೆ ಮಾ. 20ರಂದು ಪುಷ್ಯ ನಕ್ಷತ್ರದ ಶುಭ ಗಳಿಗೆ ಇರುವುದರಿಂದ ಗೃಹಪ್ರವೇಶ, ನಿಶ್ಚಿತಾರ್ಥ, ಮುಂಡನ, ಹೊಸ ವ್ಯವಹಾರದ ಪ್ರಾರಂಭ ಮಾಡಬಹುದು. ಅಥವಾ ಏನಾದರೂ ಖರೀದಿ ಮಾಡುವುದಕ್ಕೂ ಕೂಡ ಇದು ಪ್ರಶಸ್ತ ದಿನವಾಗಿದೆ. ಈ ದಿನ ಅಮಲಕಿ ಏಕಾದಶಿಯನ್ನು ಕೂಡ ಆಚರಿಸಲಾಗುತ್ತದೆ. ಹಾಗಾಗಿ ನೀವು ಯಾವುದೇ ರೀತಿಯ ಒಳ್ಳೆಯ ಕೆಲಸಗಳನ್ನು ಮಾಡಿದರೂ ಕೂಡ ಅದು ನಿಮಗೆ ಅನೇಕ ಪಟ್ಟು ಯಶಸ್ಸನ್ನು ನೀಡುತ್ತದೆ ಎನ್ನುವ ನಂಬಿಕೆ ಇದೆ.

ಮಾರ್ಚ್ ನಲ್ಲಿ ಪುಷ್ಯ ನಕ್ಷತ್ರದ ಶುಭ ಮುಹೂರ್ತ;

ಪಂಚಾಂಗದ ಪ್ರಕಾರ, ಮಾರ್ಚ್ ನಲ್ಲಿ ಪುಷ್ಯ ನಕ್ಷತ್ರವು ಮಾ.19 ರಂದು ರಾತ್ರಿ 08.10 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಾ. 20 ರಂದು ರಾತ್ರಿ 10.38 ಕ್ಕೆ ಕೊನೆಗೊಳ್ಳುತ್ತದೆ.

ಇದನ್ನೂ ಓದಿ: ಹಣಕಾಸಿನ ಸಮಸ್ಯೆ ಇದ್ದಲ್ಲಿ ವಿನಾಯಕ ಚತುರ್ಥಿ ದಿನ ಈ ವಸ್ತು ದಾನ ಮಾಡಿ

ಪುಷ್ಯ ನಕ್ಷತ್ರದಲ್ಲಿ ಯಾವ ಕೆಲಸ ಮಾಡಬೇಕು?

ಈ ನಕ್ಷತ್ರದಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸುವುದು ಶುಭವೆಂದು ಪರಿಗಣಿಸಲಾಗಿದೆ. ಧರ್ಮ ಗ್ರಂಥಗಳ ಪ್ರಕಾರ ಪುಷ್ಯ ನಕ್ಷತ್ರದಲ್ಲಿ ಖರೀದಿಸಿದ ಯಾವುದೇ ವಸ್ತುವಾಗಿರಲಿ ಅದು ಶಾಶ್ವತವಾಗಿ ಉಳಿಯುತ್ತದೆ ಮತ್ತು ಸದಾಕಾಲ ಸಂತೋಷ, ಸಮೃದ್ಧಿಯನ್ನು ನೀಡುತ್ತದೆ. ಈ ನಕ್ಷತ್ರವನ್ನು ಧಾರ್ಮಿಕ ಆಚರಣೆಗಳಿಗೂ ಉತ್ತಮವೆಂದು ಪರಿಗಣಿಸಲಾಗಿದೆ. ಆದರೆ ಈ ಪುಷ್ಯ ನಕ್ಷತ್ರದಲ್ಲಿ ಮದುವೆ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ಮದುವೆ ಅಥವಾ ಯಾವುದೇ ಶುಭ ಕಾರ್ಯಕ್ಕಾಗಿ ಚಿನ್ನ- ಬೆಳ್ಳಿ, ವಾಹನಗಳು, ಭೂಮಿ ಮುಂತಾದವುಗಳನ್ನು ಖರೀದಿಸುವುದು ತುಂಬಾ ಮಂಗಳಕರವಾಗಿದೆ. ಈ ದಿನ ಮಗುವಿನ ಶಿಕ್ಷಣವನ್ನು ಪ್ರಾರಂಭಿಸುವುದು ಕೂಡ ಶುಭ ಎನ್ನಲಾಗುತ್ತದೆ ಇದರಿಂದ ಮಗುವಿನ ಬುದ್ಧಿವಂತಿಕೆ ಮತ್ತು ವೃತ್ತಿ ಜೀವನ ತುಂಬಾ ಚೆನ್ನಾಗಿರುತ್ತದೆ. ಹಾಗಾಗಿ ಈ ದಿನ ಎಲ್ಲಾ ರೀತಿಯಿಂದಲೂ ಶುಭಕರವಾಗಿರುವುದರಿಂದ ನೀವು ಕೂಡ ಒಳ್ಳೆಯ ಕೆಲಸ ಪ್ರಾರಂಭಿಸಲು ದಿನ ನಿಗದಿ ಮಾಡಬೇಕು ಎಂದುಕೊಂಡಿದ್ದಲ್ಲಿ ಈ ದಿನವನ್ನೇ ಆಯ್ದುಕೊಳ್ಳಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ