Daily Devotional: ಮನೆಯಲ್ಲಿರುವ ಪೂಜೆ ಮನೆ ಹೇಗಿರಬೇಕು? ಇಲ್ಲಿದೆ ಉತ್ತರ

Daily Devotional: ಮನೆಯಲ್ಲಿರುವ ಪೂಜೆ ಮನೆ ಹೇಗಿರಬೇಕು? ಇಲ್ಲಿದೆ ಉತ್ತರ

ವಿವೇಕ ಬಿರಾದಾರ
|

Updated on: Mar 13, 2024 | 7:23 AM

ನೀವು ಮನೆಯಲ್ಲಿ ದೇವರನ್ನು ಪೂಜೆ ಮಾಡಿ, ಆದರೆ ಪೂಜಾ ಸ್ಥಳ ಹೇಗಿರಬೇಕು, ವಾಸ್ತು ಪ್ರಕಾರ ದೇವರ ಕೋಣೆಯನ್ನು ನಿರ್ಮಿಸುವುದು ಹೇಗೆ? ಪೂಜಾ ಮನೆಯಲ್ಲಿ ಯಾವ ಬಣ್ಣ ಹಚ್ಚಬೇಕು? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ

ದಿನ ಬೆಳಗ್ಗೆ ಎದ್ದರೆ ನಾವು ಮೊದಲು ನೋಡುವುದು ದೇವರ ಫೋಟೋ. ದೇವರ ಮನೆ ಮುಂದೆ ನಿಂತು ಕೈ ಮುಗಿದು ಈ ದಿನ ಚೆನ್ನಾಗಿ ಇರಲಿ ಎಂದು ಪ್ರಾರ್ಥಿಸುತ್ತೇವೆ. ದೇವರ ಮುಂದೆ ನಿಂತು ಹೀಗೆ ಪ್ರಾರ್ಥಿಸಿದರೆ ಮನಸ್ಸಿಗೆ ಒಂದು ರೀತಿಯ ಖುಷಿ, ಮನಸ್ಸಿಗೆ ಶಾಂತಿ ದೊರೆಯುತ್ತದೆ. ಪಾಸಿಟಿವ್‌ ವೈಬ್ಸ್‌ ಉಂಟಾಗುತ್ತದೆ. ಪ್ರತಿ ಹಿಂದೂಗಳ ಮನೆಯಲ್ಲಿಯೂ ಪೂಜಾ ಕೊಠಡಿ ಇರುತ್ತದೆ. ಕೆಲವರ ಮನೆಯಲ್ಲಿ ಪುಟ್ಟ, ಕೆಲವರ ಮನೆಯಲ್ಲಿ ದೊಡ್ಡ ದೇವರ ಮನೆ ಇರುತ್ತದೆ. ಪ್ರತಿನಿತ್ಯ ಮನೆಯಲ್ಲಿ ಪೂಜೆ ಮಾಡುವುದರಿಂದ ನಿತ್ಯ ಕಾರ್ಯಗಳು ಸುಗಮವಾಗಿ ಸಾಗುತ್ತವೆ. ನೀವು ಮನೆಯಲ್ಲಿ ದೇವರನ್ನು ಪೂಜೆ ಮಾಡಿ, ಆದರೆ ಪೂಜಾ ಸ್ಥಳ ಹೇಗಿರಬೇಕು, ವಾಸ್ತು ಪ್ರಕಾರ ದೇವರ ಕೋಣೆಯನ್ನು ನಿರ್ಮಿಸುವುದು ಹೇಗೆ? ಪೂಜಾ ಮನೆಯಲ್ಲಿ ಯಾವ ಬಣ್ಣ ಹಚ್ಚಬೇಕು? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ