‘ಭೈರತಿ ರಣಗಲ್’ನಲ್ಲಿ ಶ್ರೀಮುರಳಿ ಇರ್ತಾರಾ? ಅವರೇ ಕೊಟ್ಟರು ಉತ್ತರ
Sri Murali: ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್ ‘ಭೈರತಿ ರಣಗಲ್’ನಲ್ಲಿ ಶ್ರೀಮುರಳಿ ನಟಿಸ್ತಾರಾ? ಎಂಬ ಅನುಮಾನ ಅಭಿಮಾನಿಗಳಿಗಿದೆ. ಆ ಬಗ್ಗೆ ಸ್ವತಃ ಶ್ರೀಮುರಳಿ ಉತ್ತರಿಸಿದ್ದಾರೆ.
ಶಿವರಾಜ್ ಕುಮಾರ್ (Shiva Rajkumar) ನಟನೆಯ ‘ಭೈರತಿ ರಣಗಲ್’ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು ಸಿನಿಮಾದ ಬಿಡುಗಡೆ ದಿನಾಂಕವೂ ಇತ್ತೀಚೆಗಷ್ಟೆ ಘೋಷಣೆಯಾಗಿದೆ. ಈ ಸಿನಿಮಾ ಶ್ರೀಮುರಳಿ-ಶಿವರಾಜ್ ಕುಮಾರ್ ಒಟ್ಟಿಗೆ ನಟಿಸಿದ್ದ ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್ ಆಗಿದೆ. ‘ಮಫ್ತಿ’ಯಲ್ಲಿ ಶ್ರೀಮುರಳಿ ಇದ್ದಂತೆ ‘ಭೈರತಿ ರಣಗಲ್’ನಲ್ಲಿಯೂ ಶ್ರೀಮುರಳಿ ಇರ್ತಾರಾ? ಎಂಬ ಪ್ರಶ್ನೆ ಅಭಿಮಾನಿಗಳಿಗಿದೆ. ಈ ಪ್ರಶ್ನೆಗೆ ಸ್ವತಃ ನಟ ಶ್ರೀಮುರಳಿ ಉತ್ತರ ನೀಡಿದ್ದಾರೆ. ಅಂದಹಾಗೆ ‘ಮಫ್ತಿ’ ಸಿನಿಮಾ ನಿರ್ದೇಶನ ಮಾಡಿದ್ದ ನರ್ತನ್ ಅವರೇ ‘ಭೈರತಿ ರಣಗಲ್’ ಸಿನಿಮಾವನ್ನು ಸಹ ನಿರ್ದೇಶನ ಮಾಡಿದ್ದಾರೆ. ‘ಭೈರತಿ ರಣಗಲ್’ ಸಿನಿಮಾ ಆಗಸ್ಟ್ 15ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos