ಬೆಳಗಾವಿಯಲ್ಲಿ ಅಪ್ಪಾಜಿಯನ್ನು ನೆನಪಿಸಿಕೊಂಡ ಶಿವರಾಜ್ ಕುಮಾರ್

ಬೆಳಗಾವಿಯಲ್ಲಿ ಅಪ್ಪಾಜಿಯನ್ನು ನೆನಪಿಸಿಕೊಂಡ ಶಿವರಾಜ್ ಕುಮಾರ್

ಮಂಜುನಾಥ ಸಿ.
|

Updated on: Mar 12, 2024 | 7:42 PM

Shiva Rajkumar: ‘ಕರಟಕ ದಮನಕ’ ಸಿನಿಮಾದ ಪ್ರಚಾರಕ್ಕೆ ಬೆಳಗಾವಿಗೆ ತೆರಳಿದ್ದ ಶಿವರಾಜ್ ಕುಮಾರ್ ಅಲ್ಲಿ ಅಪ್ಪಾಜಿಯನ್ನು ನೆನಪು ಮಾಡಿಕೊಂಡಿದ್ದಾರೆ.

ಶಿವರಾಜ್ ಕುಮಾರ್ (Shiva Rajkumar) ನಟನೆಯ ‘ಕರಟಕ ದಮನಕ’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದ್ದು, ಚಿತ್ರಮಂದಿರಗಳು ಹೌಸ್ ಫುಲ್ ಆಗುತ್ತಿವೆ. ಶಿವರಾಜ್ ಕುಮಾರ್-ಪ್ರಭುದೇವ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದು, ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಪ್ರಚಾರಕ್ಕಾಗಿ ಶಿವರಾಜ್ ಕುಮಾರ್ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಸಿನಿಮಾದ ಪ್ರಚಾರಕ್ಕಾಗಿ ಬೆಳಗಾವಿಗೆ ಹೋಗಿದ್ದ ಶಿವಣ್ಣ, ಅಲ್ಲಿ ತಮ್ಮ ಹಾಗೂ ಬೆಳಗಾವಿಯ ನಂಟಿನ ಬಗ್ಗೆ ಮಾತನಾಡಿದರು. ನಾನು ಹುಬ್ಬಳ್ಳಿ ಕಡೆಗೆ ಬಂದಾಗಲೆಲ್ಲ ಬೆಳಗಾವಿಗೆ ಬಂದೇ ಹೋಗುತ್ತೇನೆ. ನನಗೆ ಇಲ್ಲಿ ಸಿಗುವ ಕುಂದಾ ಬಹಳ ಇಷ್ಟ. ಅಪ್ಪಾಜಿಯವರಿಗೂ ಅದು ಬಹಳ ಇಷ್ಟ ಸಿಹಿ ಪದಾರ್ಥವಾಗಿತ್ತು. ಕುಂದ ರೀತಿಯಲ್ಲಿಯೇ ಇಲ್ಲಿನ ಜನರ ಮನಸ್ಸು ಸಹ ಬಹಳ ಸಿಹಿ’ ಎಂದರು ಶಿವಣ್ಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ