Vinayak Chaturthi 2024: ಹಣಕಾಸಿನ ಸಮಸ್ಯೆ ಇದ್ದಲ್ಲಿ ವಿನಾಯಕ ಚತುರ್ಥಿ ದಿನ ಈ ವಸ್ತು ದಾನ ಮಾಡಿ
ಫಾಲ್ಗುಣ ಮಾಸದ ವಿನಾಯಕ ಚತುರ್ಥಿಯನ್ನು ಮಾರ್ಚ್ 13ರಂದು ಆಚರಣೆ ಮಾಡಲಾಗುತ್ತದೆ. ಬುಧವಾರವನ್ನು ಭಗವಾನ್ ಗಣೇಶನ ದಿನವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ವಿನಾಯಕ ಚತುರ್ಥಿ ಬುಧವಾರ ಬಂದಿರುವುದು ವಿಶೇಷವಾಗಿದೆ. ಈ ದಿನ, ಗಣಪತಿಯನ್ನು ಕೆಲವು ನಿಯಮಗಳನ್ನು ಅನುಸರಿಸುವ ಮೂಲಕ ಪೂಜಿಸುವುದರಿಂದ ಶುಭ ಫಲವು ನೂರು ಪಟ್ಟು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಮಾಸಿಕ ವಿನಾಯಕ ಚತುರ್ಥಿಯ ಹಬ್ಬವನ್ನು ಪ್ರತಿ ತಿಂಗಳು ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ಫಾಲ್ಗುಣ ಮಾಸದ ವಿನಾಯಕ ಚತುರ್ಥಿಯನ್ನು ಮಾರ್ಚ್ 13ರಂದು ಆಚರಣೆ ಮಾಡಲಾಗುತ್ತದೆ. ಬುಧವಾರವನ್ನು ಗಣೇಶನ ದಿನವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ವಿನಾಯಕ ಚತುರ್ಥಿ ಬುಧವಾರ ಬಂದಿರುವುದು ವಿಶೇಷವಾಗಿದೆ. ಈ ದಿನ, ಗಣಪತಿಯನ್ನು ಕೆಲವು ನಿಯಮಗಳನ್ನು ಅನುಸರಿಸುವ ಮೂಲಕ ಪೂಜಿಸುವುದರಿಂದ ಶುಭ ಫಲವು ನೂರು ಪಟ್ಟು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.
ಅಮಾವಾಸ್ಯೆಯ ನಂತರ ಬರುವ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ದಿನವನ್ನು ಅನೇಕ ಸ್ಥಳಗಳಲ್ಲಿ ವರದ ವಿನಾಯಕ ಚತುರ್ಥಿ ಅಥವಾ ಗಣೇಶ ಜಯಂತಿ ಎಂದೂ ಕರೆಯಲಾಗುತ್ತದೆ. ಫಾಲ್ಗುಣ ಮಾಸದ ವಿನಾಯಕ ಚತುರ್ಥಿಯನ್ನು ಮಾ. 13 ರಂದು ಬೆಳಿಗ್ಗೆ 04:03 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಮಾ. 14 ರಂದು ಬೆಳಿಗ್ಗೆ 01:25 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಈ ದಿನವನ್ನು ಮಾ. 13 ರಂದು ಬುಧವಾರ ಆಚರಿಸಲಾಗುತ್ತದೆ. ಪೂಜಾ ಮುಹೂರ್ತ ಬೆಳಿಗ್ಗೆ 11.19 ರಿಂದ ಆರಂಭವಾಗಿ ಮಧ್ಯಾಹ್ನ 01.52 ರ ವರೆಗೆ ಇರುತ್ತದೆ.
ವಿನಾಯಕ ಚತುರ್ಥಿಯ ದಿನ ಏಕೆ ಉಪವಾಸ ಮಾಡಬೇಕು?
ಯಾವುದೇ ರೀತಿಯ ಜಾತಕ ದೋಷ ಅಥವಾ ದುಷ್ಟ ಶಕ್ತಿಗಳ ತೊಂದರೆ ಇದ್ದಲ್ಲಿ ಈ ದಿನ ಉಪವಾಸ ಮಾಡಬೇಕು. ನೀವು ಕಷ್ಟದಲ್ಲಿದ್ದರೆ ವಿನಾಯಕ ಚತುರ್ಥಿ ದಿನವನ್ನು ಆಚರಣೆ ಮಾಡಿ ಗಣೇಶನನ್ನು ಭಕ್ತಿಯಿಂದ ಪೂಜಿಸಿ, ಆಶೀರ್ವಾದವನ್ನು ಪಡೆಯಬೇಕು. ಹೀಗೆ ಮಾಡುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಎಲ್ಲವೂ ಪ್ರಾಪ್ತಿಯಾಗುತ್ತದೆ.
ಫಾಲ್ಗುಣ ವಿನಾಯಕ ಚತುರ್ಥಿಯಂದು ಏನು ಮಾಡಬೇಕು?
ಫಾಲ್ಗುಣ ವಿನಾಯಕ ಚತುರ್ಥಿಯ ದಿನದಂದು, ಪೂಜೆಯ ಸಮಯದಲ್ಲಿ ಗಣೇಶನಿಗೆ 5 ಕೆಂಪು ಗುಲಾಬಿಗಳು, 5 ಹಸಿರು ದುರ್ವೆ ಅಥವಾ ದುರ್ಬೆಯನ್ನು ಅರ್ಪಿಸಿ. ತುಪ್ಪದ ದೀಪವನ್ನು ಬೆಳಗಿಸಿ ಬಳಿಕ ‘ಓಂ ಬುದ್ಧಿ ಪ್ರದಾಯ ನಮಃ’ ಮಂತ್ರವನ್ನು 108 ಬಾರಿ ಪಠಿಸಿ. ಗಣಪನಿಗೆ ಮೋದಕಗಳನ್ನು ನೈವೇದ್ಯವಾಗಿ ಅರ್ಪಿಸಿ ಬಳಿಕ ಮೋದಕಗಳನ್ನು ನಿಮ್ಮ ಮಗುವಿಗೆ ಕುಟುಂಬದವರಿಗೆ ನೀಡಿ. ಈ ವಿಧಾನದಿಂದ ಗಣಪತಿಯನ್ನು ಪೂಜಿಸುವುದರಿಂದ, ನಿಮ್ಮ ಮಗುವಿನ ಜ್ಞಾಪಕ ಶಕ್ತಿ ತೀಕ್ಷ್ಣವಾಗುತ್ತದೆ ಮತ್ತು ಮನೆಯಲ್ಲಿ ಸುಖ, ಶಾಂತಿ ಎಲ್ಲವೂ ನೆಲೆಸಿರುತ್ತದೆ. ಜೊತೆಗೆ ಮನೆಯಲ್ಲಿರುವವರ ವೃತ್ತಿ ಜೀವನದಲ್ಲಿಯೂ ಉತ್ತಮ ಯಶಸ್ಸು ಕಾಣುತ್ತದೆ.
ಇದನ್ನೂ ಓದಿ: ಹೋಳಿ ಹಬ್ಬದಂದು ಈ 5 ವಸ್ತುಗಳನ್ನು ಮನೆಗೆ ತನ್ನಿ, ಅದೃಷ್ಟವೇ ಬದಲಾಗುತ್ತೆ!
ವಿನಾಯಕ ಚತುರ್ಥಿಯ ದಿನ ಚಂದ್ರನನ್ನು ಏಕೆ ನೋಡಬಾರದು?
ಪೌರಾಣಿಕ ನಂಬಿಕೆಗಳ ಪ್ರಕಾರ, ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡಬಾರದು ಎಂದು ಹೇಳಲಾಗುತ್ತದೆ. ಈ ದಿನ ಚಂದ್ರನನ್ನು ನೋಡುವುದರಿಂದ ಕಳ್ಳತನದ ಆರೋಪ ಅಥವಾ ಕಳಂಕ ಬರುತ್ತದೆ, ಗೌರವಕ್ಕೆ ಹಾನಿಯಾಗುತ್ತದೆ ಎನ್ನಲಾಗುತ್ತದೆ. ಇನ್ನು ಕೆಲವರು ಭಾದ್ರಪದ ಮಾಸದ ಚತುರ್ಥಿಯಂದು ಮಾತ್ರ ಚಂದ್ರನನ್ನು ನೋಡಬಾರದು. ಬೇರೆ ತಿಂಗಳ ಚತುರ್ಥಿಯಂದು ನೋಡಬಹುದು ಎನ್ನುತ್ತಾರೆ. ಹಾಗಾಗಿ ಅವರ ನಂಬಿಕೆಗೆ ತಕ್ಕಂತೆ ಚಂದ್ರ ದರ್ಶನ ಮಾಡಬಹುದು ಅಥವಾ ಮಾಡದಿರಬಹುದು.
ಬುಧವಾರ ಯಾವ ವಸ್ತುಗಳನ್ನು ದಾನ ಮಾಡಬೇಕು?
ಗಣೇಶನನ್ನು ಬುಧವಾರ ಪೂಜಿಸಲಾಗುತ್ತದೆ. ಹಾಗಾಗಿ ಹಸಿರು ಬಣ್ಣದ ವಸ್ತುಗಳನ್ನು ಬುಧವಾರ ದಾನ ಮಾಡಬೇಕು. ಅಂದರೆ ಹೆಸರು ಬೇಳೆ, ಹಸಿರು ತರಕಾರಿಗಳು, ಹಸಿರು ಬಳೆಗಳು ಅಥವಾ ಹಸಿರು ಬಣ್ಣದ ಬಟ್ಟೆ ಇತ್ಯಾದಿಗಳನ್ನು ಬಡವರು ಮತ್ತು ಅಗತ್ಯವಿರುವವರಿಗೆ ದಾನ ಮಾಡಿ. ಇದರಿಂದ ಹಣಕಾಸಿನ ಸಮಸ್ಯೆ ಇದ್ದಲ್ಲಿ ಅಥವಾ ವೃತ್ತಿ ಜೀವನದಲ್ಲಿ ಸಮಸ್ಯೆ ಇದ್ದಲ್ಲಿ ಪರಿಹಾರವಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ