AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vinayak Chaturthi 2024: ಈ ತಿಂಗಳ ವಿನಾಯಕ ಚತುರ್ಥಿ ಯಾವಾಗ? ವಿನಾಯಕ ಹಾಗೂ ಸಂಕಷ್ಟ ಚತುರ್ಥಿಗಿರುವ ವ್ಯತ್ಯಾಸವೇನು?

ವಿನಾಯಕ ಚತುರ್ಥಿ ಹಬ್ಬವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ತಿಂಗಳು ಇದನ್ನು ಫೆ. 13 ರಂದು ಆಚರಿಸಲಾಗುವುದು. ಇದು ಹಿಂದೂ ಧರ್ಮದ ಅತ್ಯಂತ ಪ್ರಸಿದ್ಧ ಹಬ್ಬಗಳಲ್ಲಿ ಒಂದಾಗಿದೆ. ಹಾಗಾಗಿ ಈ ದಿನದಂದು ಜನರು ಗಣೇಶನನ್ನು ಮೆಚ್ಚಿಸಲು ಉಪವಾಸ ಮಾಡುತ್ತಾರೆ ಬಳಿಕ ರಾತ್ರಿ ಅದನ್ನು ಮುರಿಯುತ್ತಾರೆ. ಆದರೆ ಇತರ ಉಪವಾಸಗಳಂತೆ ಈ ಉಪವಾಸದಲ್ಲಿ ಚಂದ್ರ ದರ್ಶನ ಮಾಡುವುದಿಲ್ಲ. ಈ ದಿನದ ಮಹತ್ವ, ಪೂಜಾ ವಿಧಾನಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Vinayak Chaturthi 2024: ಈ ತಿಂಗಳ ವಿನಾಯಕ ಚತುರ್ಥಿ ಯಾವಾಗ? ವಿನಾಯಕ ಹಾಗೂ ಸಂಕಷ್ಟ ಚತುರ್ಥಿಗಿರುವ ವ್ಯತ್ಯಾಸವೇನು?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Feb 09, 2024 | 3:42 PM

Share

ಹಿಂದೂ ಕ್ಯಾಲೆಂಡರ್ ಪ್ರಕಾರ, ಮಾಸಿಕ ವಿನಾಯಕ ಚತುರ್ಥಿಯ ಹಬ್ಬವನ್ನು ಪ್ರತಿ ತಿಂಗಳು ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ವಿನಾಯಕ ಚತುರ್ಥಿಯನ್ನು ಗಣೇಶ ಜಯಂತಿ ಎಂದೂ ಕೂಡ ಕರೆಯಲಾಗುತ್ತದೆ. ಇದು ಹಿಂದೂ ಧರ್ಮದ ಅತ್ಯಂತ ಪ್ರಸಿದ್ಧ ಹಬ್ಬಗಳಲ್ಲಿ ಒಂದಾಗಿದೆ. ಹಾಗಾಗಿ ಈ ದಿನದಂದು ಜನರು ಗಣೇಶನನ್ನು ಮೆಚ್ಚಿಸಲು ಉಪವಾಸ ಮಾಡುತ್ತಾರೆ ಬಳಿಕ ರಾತ್ರಿ ಅದನ್ನು ಮುರಿಯುತ್ತಾರೆ. ಆದರೆ ಇತರ ಉಪವಾಸಗಳಂತೆ ಈ ಉಪವಾಸದಲ್ಲಿ ಚಂದ್ರ ದರ್ಶನ ಮಾಡುವುದಿಲ್ಲ. ಗಣೇಶ ಜಯಂತಿಯ ದಿನದಂದು ಚಂದ್ರನ ದರ್ಶನವನ್ನು ನಿಷೇಧಿಸಲಾಗಿದೆ. ಈ ಬಾರಿ ಗಣೇಶ ಜಯಂತಿ ಅಥವಾ ವಿನಾಯಕ ಚತುರ್ಥಿಯನ್ನು ಫೆ. 13 ರಂದು ಮಂಗಳವಾರ ಆಚರಿಸಲಾಗುತ್ತದೆ. ಈ ದಿನದ ಮಹತ್ವ, ಪೂಜಾ ವಿಧಾನಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿನಾಯಕ ಚತುರ್ಥಿಯ ಮಹತ್ವವೇನು?

ಹಿಂದೂ ಧರ್ಮದಲ್ಲಿ ವಿನಾಯಕ ಚತುರ್ಥಿಗೆ ವಿಶೇಷ ಮಹತ್ವವಿದೆ. ಈ ದಿನವನ್ನು ಸಂಪೂರ್ಣವಾಗಿ ಗಣೇಶನ ಆರಾಧನೆಗೆ ಅರ್ಪಿಸಲಾಗಿದೆ. ಗಣಪತಿಯನ್ನು ವಿಘ್ನವಿನಾಶಕ ಎಂದೂ ಕರೆಯುತ್ತಾರೆ, ಅದೇ ರೀತಿಯಾಗಿ ತನ್ನ ನಂಬಿ ಬಂದ ಭಕ್ತರನ್ನು ಎಂದಿಗೂ ನಿರಾಸೆಗೊಳಿಸದೆ ಅವರ ಜೀವನದ ಎಲ್ಲಾ ಕಷ್ಟಗಳನ್ನು ನಿವಾರಣೆ ಮಾಡುತ್ತಾನೆ. ನೀವು ಯಾವುದೋ ಕಷ್ಟದ ಪರಿಸ್ಥಿತಿ ಅಥವಾ ಸಮಸ್ಯೆಯಿಂದ ಬಳಲುತ್ತಿದ್ದರೆ, ಅದರಿಂದ ಹೊರಬರಲು ಯಾವುದೇ ಮಾರ್ಗವಿಲ್ಲ ಎಂದು ನಿಮಗೆ ಅನಿಸಿದರೆ, ನೀವು ವಿನಾಯಕ ಚತುರ್ಥಿ ದಿನವನ್ನು ಆಚರಣೆ ಮಾಡಿ ಗಣೇಶನನ್ನು ಭಕ್ತಿಯಿಂದ ಪೂಜಿಸಿ, ಆಶೀರ್ವಾದವನ್ನು ಪಡೆಯಬೇಕು. ಹೀಗೆ ಮಾಡುವುದರಿಂದ ಲೌಕಿಕ ಸುಖ ಮತ್ತು ಶಾಶ್ವತ ಫಲ ಪ್ರಾಪ್ತಿಯಾಗುತ್ತದೆ.

ಇದನ್ನೂ ಓದಿ: ಮಹಾ ಶಿವರಾತ್ರಿ ಯಾವಾಗ? ಈ ದಿನದ ಮಹತ್ವ ಏನು?

ವಿನಾಯಕ ಚತುರ್ಥಿಯ ಪೂಜಾ ವಿಧಾನಗಳೇನು?

-ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ.

-ಮರದ ಪೀಠದ ಮೇಲೆ ಗಣೇಶನ ವಿಗ್ರಹ ಅಥವಾ ಫೋಟೋವನ್ನು ಕೂರಿಸಿ.

-ಆ ವಿಗ್ರಹ ಅಥವಾ ಫೋಟೋ ಮೇಲೆ ಕುಂಕುಮ ಹಚ್ಚಿ.

-ದುರ್ವೆ, ಹಳದಿ, ಕೆಂಪು ಅಥವಾ ಕೇಸರಿ ಹೂವುಗಳಿಂದ ಅಲಂಕಾರ ಮಾಡಿ.

-ಗಣೇಶನ ವಿಗ್ರಹದ ಮುಂದೆ ತುಪ್ಪದ ದೀಪವನ್ನು ಹಚ್ಚಿ.

-ಮೋದಕ ಅಥವಾ ಲಡ್ಡುಗಳನ್ನು ನೈವೇದ್ಯವಾಗಿ ಅರ್ಪಿಸಿ.

-ಸಾಧ್ಯವಾದಲ್ಲಿ ಈ ದಿನ ವಿನಾಯಕ ಕಥೆ, ಗಣೇಶನ ಮಂತ್ರಗಳನ್ನು ಪಠಿಸಿ.

-ಅಲಂಕಾರ, ನೈವೇದ್ಯ ಮುಗಿದ ಬಳಿಕ ಭಕ್ತಿಯಿಂದ ಆರತಿ ಮಾಡಿ.

-ಸಾತ್ವಿಕ ಆಹಾರದೊಂದಿಗೆ ಉಪವಾಸವನ್ನು ಮುರಿಯಿರಿ.

ವಿನಾಯಕ ಚತುರ್ಥಿ ಮತ್ತು ಸಂಕಷ್ಟ ಚತುರ್ಥಿಗಿರುವ ವ್ಯತ್ಯಾಸವೇನು?

ವಿನಾಯಕ ಚತುರ್ಥಿಯು ಅಮವಾಸ್ಯೆಯ ನಂತರ ಬರುತ್ತದೆ. ಅಂದರೆ ಅಮವಾಸ್ಯೆ ಆಗಿ ನಾಲ್ಕು ದಿನದ ನಂತರ ಆಚರಣೆ ಮಾಡಲಾಗುತ್ತದೆ, ಈ ದಿನವನ್ನು ವಿನಾಯಕನಿಗೆ ಅರ್ಪಿಸಲಾಗಿದೆ. ಇನ್ನು ಸಂಕಷ್ಟ ಚತುರ್ಥಿಯನ್ನು ಕೃಷ್ಣ ಪಕ್ಷದ ಹುಣ್ಣಿಮೆಯ ನಂತರ ಆಚರಿಸಲಾಗುತ್ತದೆ. ಅದರಲ್ಲಿಯೂ, ಈ ದಿನ ಮಂಗಳವಾರದಂದು ಬಂದರೆ ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಹಾಗಾಗಿ ಇದನ್ನು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ಎರಡು ದಿನಗಳನ್ನು ಪ್ರತಿ ತಿಂಗಳು ಕೂಡ ಆಚರಿಸಲಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ