Vishnu Puran: ಕಲಿಯುಗ ಅತ್ಯುತ್ತಮ ಯುಗ, ಇದಕ್ಕೆ ಈ ವರವೇ ಕಾರಣ

ವೇದಗಳು ಮತ್ತು ಪುರಾಣಗಳು 4 ಯುಗಗಳ ಬಗ್ಗೆ ಹೇಳುತ್ತವೆ, ಇದರಲ್ಲಿ ಕಲಿಯುಗವು ಕೊನೆಯ ಯುಗವಾಗಿದೆ. ಈ ಯುಗಕ್ಕೆ ಸಂಬಂಧಿಸಿದಂತೆ, ಧಾರ್ಮಿಕ ಗ್ರಂಥಗಳು ಮತ್ತು ಪುರಾಣಗಳಲ್ಲಿ ತಿಳಿಸಿರುವ ಪ್ರಕಾರ, ಪಾಪವು ಉತ್ತುಂಗದಲ್ಲಿದ್ದು ಬ್ರಹ್ಮಾಂಡದ ಸಮತೋಲನವೇ ಅಲ್ಲೋಲ ಕಲ್ಲೋಲ ವಾಗುತ್ತದೆ ಎಂದು ಹೇಳಲಾಗಿದೆ. ಆದರೆ ಇದರ ಹೊರತಾಗಿಯೂ, ವಿಷ್ಣು ಪುರಾಣದಲ್ಲಿ, ಕಲಿಯುಗವನ್ನು ಎಲ್ಲಾ ಯುಗಗಳಿಗಿಂತಲೂ ಅತ್ಯುತ್ತಮ ಎಂದು ವಿವರಿಸಲಾಗಿದೆ. ಏಕೆ ಗೊತ್ತಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Vishnu Puran: ಕಲಿಯುಗ ಅತ್ಯುತ್ತಮ ಯುಗ, ಇದಕ್ಕೆ ಈ ವರವೇ ಕಾರಣ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 13, 2024 | 11:54 AM

ಹಿಂದೂ ಧರ್ಮದಲ್ಲಿ ಒಟ್ಟು ನಾಲ್ಕು ಯುಗಗಳನ್ನು (ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ) ವಿವರಿಸಲಾಗಿದೆ. ಇದರಲ್ಲಿ ಕಲಿಯುಗವು ಕೊನೆಯ ಯುಗವಾಗಿದೆ. ಭಗವಾನ್ ವಿಷ್ಣು ಪ್ರತಿಯೊಂದು ಯುಗದಲ್ಲೂ ವಿವಿಧ ಅವತಾರಗಳಲ್ಲಿ ಜನಿಸುತ್ತಾನೆ ಎಂಬ ನಂಬಿಕೆ ಇದೆ. ಜೊತೆಗೆ ಕಲಿಯುಗಕ್ಕೆ ಅತ್ಯಂತ ಕಡಿಮೆ ಅವಧಿ ಎಂದು ಹೇಳಲಾಗುತ್ತದೆ. ಈ ಯುಗಕ್ಕೆ ಸಂಬಂಧಿಸಿದಂತೆ, ಧಾರ್ಮಿಕ ಗ್ರಂಥಗಳು ಮತ್ತು ಪುರಾಣಗಳಲ್ಲಿ ತಿಳಿಸಿರುವ ಪ್ರಕಾರ, ಪಾಪವು ಉತ್ತುಂಗದಲ್ಲಿದ್ದು ಬ್ರಹ್ಮಾಂಡದ ಸಮತೋಲನವೇ ಅಲ್ಲೋಲ ಕಲ್ಲೋಲ ವಾಗುತ್ತದೆ ಎಂದು ಹೇಳಲಾಗಿದೆ. ಆದರೆ ಇದರ ಹೊರತಾಗಿಯೂ, ವಿಷ್ಣು ಪುರಾಣದಲ್ಲಿ, ಕಲಿಯುಗವನ್ನು ಎಲ್ಲಾ ಯುಗಗಳಿಗಿಂತಲೂ ಅತ್ಯುತ್ತಮ ಎಂದು ವಿವರಿಸಲಾಗಿದೆ. ಏಕೆ ಗೊತ್ತಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಿಂದೂ ಧರ್ಮದಲ್ಲಿ ಒಟ್ಟು 18 ಪುರಾಣಗಳಿವೆ, ಅವುಗಳಲ್ಲಿ ವಿಷ್ಣು ಪುರಾಣವೂ ಒಂದು. ಆದರೆ, ಇತರ ಪುರಾಣಗಳಿಗಿಂತ ವಿಷ್ಣು ಪುರಾಣವು ಚಿಕ್ಕದಾಗಿದೆ ಕೇವಲ 6 ಅಧ್ಯಾಯಗಳ 7 ಸಾವಿರ ಶ್ಲೋಕಗಳನ್ನು ಮಾತ್ರ ಒಳಗೊಂಡಿದೆ. ವಿಷ್ಣು ಪುರಾಣವನ್ನು ಮಹರ್ಷಿ ವೇದವ್ಯಾಸರ ತಂದೆ ಪರಾಶರ ಋಷಿ ಬರೆದಿದ್ದಾರೆ ಎನ್ನಲಾಗುತ್ತದೆ. ಒಮ್ಮೆ ದೇವತೆಗಳು ಪರಾಶರ ಋಷಿಯನ್ನು ಎಲ್ಲಾ ಯುಗಗಳಲ್ಲಿ ಅತ್ಯುತ್ತಮ ಮತ್ತು ಶ್ರೇಷ್ಠ ಯುಗ ಯಾವುದು ಎಂದು ಕೇಳಿದರು. ಆಗ ಋಷಿಯು ಎಲ್ಲಾ ಯುಗಗಳಲ್ಲಿ ಕಲಿಯುಗವು ಅತ್ಯುತ್ತಮವಾಗಿದೆ ಎಂದು ಹೇಳಿದರು. ಕಲಿಯುಗದಲ್ಲಿ ಗರಿಷ್ಠ ಪಾಪ ಮತ್ತು ದೌರ್ಜನ್ಯಗಳು ನಡೆಯುತ್ತದೆ ಎಂದ ಮೇಲೆ ಈ ಯುಗ ಹೇಗೆ ಉತ್ತಮ ಎನಿಸಿಕೊಳ್ಳುತ್ತದೆ ಎಂಬ ಪ್ರಶ್ನೆ ಉದ್ಭವ ಆಗಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಇದನ್ನೂ ಓದಿ: ಹಣ ಹೂಡಿಕೆ, ಶುಭ ಕಾರ್ಯಕ್ಕೆ ಪುಷ್ಯ ನಕ್ಷತ್ರ ಬರಬೇಕು ಯಾಕೆ?

ಯಾವ ಕಾರಣಕ್ಕಾಗಿ ಕಲಿಯುಗ ಉತ್ತಮ!

ವಿಷ್ಣು ಪುರಾಣದಲ್ಲಿ ವಿವರಿಸಿದ ಒಂದು ಘಟನೆಯ ಪ್ರಕಾರ, ವೇದವ್ಯಾಸರು ಋಷಿಮುನಿಗಳೊಂದಿಗೆ ಚರ್ಚಿಸುವಾಗ, ಕಲಿಯುಗವು ಅತ್ಯುತ್ತಮವಾಗಿದೆ ಎಂದು ಹೇಳುತ್ತಾರೆ. ಇದಕ್ಕೆ ಕಾರಣವೆಂದರೆ ಜಪ, ತಪಸ್ಸು, ಯಜ್ಞ, ಹೋಮ ಮತ್ತು ಉಪವಾಸ ಇತ್ಯಾದಿಗಳನ್ನು ನಿಸ್ವಾರ್ಥವಾಗಿ ಮಾಡುವ ಮೂಲಕ, ಸತ್ಯಯುಗದಲ್ಲಿ ಹತ್ತು ವರ್ಷಗಳಲ್ಲಿ ಪಡೆದ ಅದೇ ಸದ್ಗುಣ ಫಲಿತಾಂಶಗಳನ್ನು ತ್ರೇತಾಯುಗದಲ್ಲಿ ಒಂದು ವರ್ಷದಲ್ಲಿ, ದ್ವಾಪರದಲ್ಲಿ ಒಂದು ತಿಂಗಳಲ್ಲಿ ಮತ್ತು ಕಲಿಯುಗದಲ್ಲಿ ಕೇವಲ ಒಂದು ದಿನದಲ್ಲಿ ಸಾಧಿಸಬಹುದಾಗಿದೆ. ಏಕೆಂದರೆ ಕಲಿಯುಗಕ್ಕೆ ಈ ವರ ದೊರೆತಿದೆ, ಈ ಯುಗದಲ್ಲಿ, ಶ್ರೀಹರಿ ಮತ್ತು ಶಿವನ ಹೆಸರನ್ನು ಜಪಿಸುವುದರಿಂದ, ಲೋಕ ಕಲ್ಯಾಣವಾಗುತ್ತದೆ. ಜೊತೆಗೆ ಇದರ ಹೊರತಾಗಿ ಮುಕ್ತಿಯನ್ನು ಪಡೆಯಲು ಬೇರೆ ಯಾವುದೇ ಮಾರ್ಗಗಳ ಅಗತ್ಯವಿರುವುದಿಲ್ಲ. ಆದ್ದರಿಂದ ಕಲಿಯುಗವು ಅತ್ಯುತ್ತಮವಾಗಿದೆ. ಈ ರೀತಿಯಾಗಿ ಮಹರ್ಷಿ ವೇದವ್ಯಾಸರು ಋಷಿಮುನಿಗಳಲ್ಲಿ ಕಲಿಯುಗದ ಶ್ರೇಷ್ಠತೆಯನ್ನು ಸಾಬೀತುಪಡಿಸಿದ್ದಾರೆ. ಹಾಗಾಗಿ ಕಲಿಯುಗವನ್ನು ಎಲ್ಲಾ ಯುಗಕ್ಕಿಂತಲೂ ಶ್ರೇಷ್ಠ ಯುಗ ಎನ್ನಲಾಗುತ್ತದೆ. ಆದರೆ ಜನರು ಅಧ್ಯಾತ್ಮದ ಕಡೆಗೆ ಒಲವು ತೋರಬೇಕು ಅಷ್ಟೇ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ