Holi 2024: ಹೋಳಿ ಹಬ್ಬದ ದಿನ ಈ ರೀತಿ ಮಾಡಿ, ಹಣದ ಕೊರತೆ ಬರುವುದಿಲ್ಲ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 15, 2024 | 5:02 PM

ಈ ಬಾರಿ ಹೋಳಿ ಹಬ್ಬವನ್ನು ಮಾ. 25 ರಂದು ದೇಶಾದ್ಯಂತ ಆಚರಿಸಲಾಗುವುದು. ಈ ದಿನ ಹೋಳಿ ಹಬ್ಬವನ್ನು ಮನೆಗಳಲ್ಲಿ ಮಾತ್ರವಲ್ಲದೆ ದೇವಾಲಯಗಳಲ್ಲಿಯೂ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ಪುರಾಣಗಳಲ್ಲಿ ತಿಳಿಸಿರುವ ಪ್ರಕಾರ ಈ ದಿನ ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಇಡೀ ವರ್ಷ ಸುಖ, ಶಾಂತಿ, ನೆಮ್ಮದಿ, ಸಂಪತ್ತು ಸಿಗುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಹೋಳಿ ಹಬ್ಬದ ದಿನ ಯಾವ ನಿಯಮಗಳನ್ನು ಅನುಸರಿಸಬೇಕು? ತುಳಸಿಗೆ ಸಂಬಂಧಿಸಿದ ಅಂತಹ ಕೆಲವು ಪರಿಹಾರಗಳು ಯಾವವು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Holi 2024: ಹೋಳಿ ಹಬ್ಬದ ದಿನ ಈ ರೀತಿ ಮಾಡಿ, ಹಣದ ಕೊರತೆ ಬರುವುದಿಲ್ಲ
Follow us on

ಹಿಂದೂ ವೈದಿಕ ಪಂಚಾಂಗದ ಪ್ರಕಾರ, ಹೋಳಿ ಹಬ್ಬವನ್ನು ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಹಾಗಾಗಿ ಈ ಬಾರಿ ಹೋಳಿ ಹಬ್ಬವನ್ನು ಮಾ. 25 ರಂದು ದೇಶಾದ್ಯಂತ ಆಚರಿಸಲಾಗುವುದು. ಈ ದಿನ ಹೋಳಿ ಹಬ್ಬವನ್ನು ಮನೆಗಳಲ್ಲಿ ಮಾತ್ರವಲ್ಲದೆ ದೇವಾಲಯಗಳಲ್ಲಿಯೂ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ಪುರಾಣಗಳಲ್ಲಿ ತಿಳಿಸಿರುವ ಪ್ರಕಾರ ಈ ದಿನ ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಇಡೀ ವರ್ಷ ಸುಖ, ಶಾಂತಿ, ನೆಮ್ಮದಿ, ಸಂಪತ್ತು ಸಿಗುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಹೋಳಿ ಹಬ್ಬದ ದಿನ ಯಾವ ನಿಯಮಗಳನ್ನು ಅನುಸರಿಸಬೇಕು? ತುಳಸಿಗೆ ಸಂಬಂಧಿಸಿದ ಅಂತಹ ಕೆಲವು ಪರಿಹಾರಗಳು ಯಾವವು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ಹೀಗೆ ಮಾಡಿ!

ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿದ್ದಲ್ಲಿ, ಹೋಳಿ ಹಬ್ಬದ ದಿನದಂದು ತುಳಸಿ ಎಲೆಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಪೂಜಾ ಸ್ಥಳದಲ್ಲಿ ಇರಿಸಿ. ಬಳಿಕ ಗಂಗಾ ಜಲದಲ್ಲಿ ತುಳಸಿಯನ್ನಿಟ್ಟು ಆ ನೀರನ್ನು ಪೂಜೆಯ ನಂತರ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಂಪಡಿಸಿ. ಹೀಗೆ ಮಾಡುವುದರಿಂದ, ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಸಕಾರಾತ್ಮಕ ಶಕ್ತಿ ತುಂಬಿಕೊಳ್ಳುತ್ತದೆ ಎಂದು ನಂಬಲಾಗಿದೆ.

ಸಮೃದ್ಧಿ ಮತ್ತು ಸಂಪತ್ತಿಗಾಗಿ;

ವರ್ಷವಿಡೀ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಇರಲು, ದೇವರಿಗೆ ಪೂಜೆ ಮಾಡಿದ ನಂತರ, ತುಳಸಿಯ ಮೂರು ಕೊಂಬೆಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮತ್ತು ಅವುಗಳನ್ನು ನಿಮ್ಮ ಕಪಾಟು ಅಥವಾ ನೀವು ಹಣ ಇಡುವ ಸ್ಥಳದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಸರಿಯಾಗುತ್ತದೆ. ಎಂದಿಗೂ ಹಣದ ಕೊರತೆ ಬರುವುದಿಲ್ಲ.

ತಾಯಿ ಲಕ್ಷ್ಮೀಗೆ ತುಳಸಿಯನ್ನು ಅರ್ಪಿಸಿ

ಹೋಳಿ ದಿನದಂದು ತಾಯಿ ಲಕ್ಷ್ಮೀ ದೇವಿಯನ್ನು ಪೂಜಿಸುವಾಗ, ತುಳಸಿಯನ್ನು ಅರ್ಪಿಸಿ. ಹೀಗೆ ಮಾಡುವುದರಿಂದ, ತಾಯಿ ಲಕ್ಷ್ಮೀ ದೇವಿ ಸಂತುಷ್ಟಳಾಗುತ್ತಾಳೆ. ಜೊತೆಗೆ ವ್ಯಕ್ತಿಯ ಜೀವನದಲ್ಲಿ ಬರುವ ಹಣದ ಸಮಸ್ಯೆಗಳನ್ನು ನಿವಾರಿಸುತ್ತಾಳೆ ಎಂದು ನಂಬಲಾಗಿದೆ. ಅದೂ ಅಲ್ಲದೆ ತಾಯಿ ಲಕ್ಷ್ಮೀ ದೇವಿಯ ಕೃಪೆ ಸದಾ ನಿಮ್ಮ ಮನೆಗಿರುತ್ತದೆ.

ಹೋಳಿ ದಿನದಂದು ತುಳಸಿ ಗಿಡವನ್ನು ನೆಡಿ

ಹಿಂದೂ ಪುರಾಣಗಳಲ್ಲಿ ಹೇಳಿರುವ ಪ್ರಕಾರ, ಹೋಳಿ ಹಬ್ಬದ ದಿನ ತುಳಸಿ ಗಿಡವನ್ನು ನೆಡಬೇಕು. ತುಳಸಿಯು ಭಗವಾನ್ ಶ್ರೀ ಹರಿಗೆ ಪ್ರಿಯವಾಗಿದ್ದು, ತುಳಸಿ ಸಸ್ಯವಿರುವ ಮನೆಯಲ್ಲಿ, ಸ್ವತಃ ನಾರಾಯಣ ವಾಸಿಸುತ್ತಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಹೋಳಿ ಹಬ್ಬದ ದಿನದಂದು ತುಳಸಿ ಗಿಡವನ್ನು ನೆಡುವುದು ಮತ್ತು ಅದನ್ನು ನಿಯಮಿತವಾಗಿ ಪೂಜಿಸುವುದು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಜೊತೆಗೆ ಹೆಚ್ಚು ಹೆಚ್ಚು ತುಳಸಿ ಗಿಡ ಬೆಳೆಸಿದಲ್ಲಿ ಆರೋಗ್ಯವೂ ಚೆನ್ನಾಗಿರುತ್ತದೆ. ಜೊತೆಗೆ ಕಾಯಿಲೆಗಳಿಂದ ದೂರವಿರಬಹುದು.

ಇದನ್ನೂ ಓದಿ: ಸ್ಕಂದ ಷಷ್ಠಿ ಉಪವಾಸದ ಮಹತ್ವ ಏನು?

ತುಳಸಿಯ ಎಲೆಗಳನ್ನು ದೇವರಿಗೆ ಅರ್ಪಿಸಿ

ಹೋಳಿ ಹಬ್ಬದ ದಿನ, ದೇವರ ಪೂಜೆ ಮಾಡುವಾಗ, ತುಳಸಿ ಎಲೆಗಳನ್ನು ದೇವರಿಗೆ ಅರ್ಪಿಸಬೇಕು. ವಿಷ್ಣು ದೇವನು ತುಳಸಿಯ ದಳ ಇಲ್ಲದೆ ಮಾಡಿದ ನೈವೇದ್ಯ ಅಥವಾ ಭೋಗವನ್ನು ಸ್ವೀಕರಿಸುವುದಿಲ್ಲ ಎಂದು ನಂಬಲಾಗಿದೆ, ಆದ್ದರಿಂದ ಶ್ರೀಹರಿಯನ್ನು ಮೆಚ್ಚಿಸಲು, ತುಳಸಿ ಎಲೆಗಳನ್ನು ಅರ್ಪಿಸಿ. ಭಕ್ತಿಯಿಂದ ಪೂಜೆ ಮಾಡಿ, ಬಯಸಿದ್ದೆಲ್ಲವೂ ಸಿಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ