ಅಡುಗೆ ಮನೆಯಲ್ಲಿ ಈ ವಸ್ತು ಖಾಲಿಯಾಗುವುದು ದಾರಿದ್ರ್ಯ ಸಂಕೇತ!

ವಾಸ್ತುಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಅಕ್ಕಿ, ಅರಶಿನ ಮತ್ತು ಉಪ್ಪು ಖಾಲಿಯಾಗದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ. ಇವುಗಳು ಖಾಲಿಯಾಗುವುದು ದಾರಿದ್ರ್ಯದ ಸಂಕೇತ ಎಂದು ಬಸವರಾಜ ಗುರೂಜಿ ಎಚ್ಚರಿಸುತ್ತಾರೆ. ಈ ಮೂರು ವಸ್ತುಗಳ ಲಭ್ಯತೆಯು ಮನೆಯಲ್ಲಿ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ, ಯಾವಾಗಲೂ ಸ್ವಲ್ಪ ಪ್ರಮಾಣದಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು.

ಅಡುಗೆ ಮನೆಯಲ್ಲಿ ಈ ವಸ್ತು ಖಾಲಿಯಾಗುವುದು ದಾರಿದ್ರ್ಯ ಸಂಕೇತ!
Vastu Shastra

Updated on: Feb 22, 2025 | 7:56 AM

ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆಗೆ ವಿಶೇಷ ಮಹತ್ವವಿದೆ. ಯಾಕೆಂದರೆ ಅಡುಗೆ ಮನೆಯಲ್ಲಿ ತಾಯಿ ಅನ್ನಪೂರ್ಣೇಶ್ವರಿ ಸದಾ ನೆಲೆಸಿರುತ್ತಾಳೆ ಎಂಬ ನಂಬಿಕೆಯಿದೆ. ಹಾಗಾಗಿ ಅಡುಗೆ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ. ಇದಲ್ಲದೇ ಅಡುಗೆ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಖಾಲಿಯಾಗದಂತೆ ನೋಡಿಕೊಳ್ಳುವುದು ಅವಶ್ಯಕ. ಅದು ನಿಮ್ಮ ಸ್ವಂತ ಮನೆಯೇ ಆಗಿರಲಿ ಅಥವಾ ಬಾಡಿಗೆ ಮನೆಯೇ ಆಗಿರಲಿ. ಕೆಲವು ವಸ್ತುಗಳು ಖಾಲಿಯಾಗುವುದು ದಾರಿದ್ರ್ಯ ಸಂಕೇತ ಎಂದು ಖ್ಯಾತ ಜ್ಯೋತಿಷಿಗಳಾದ ಬಸವರಾಜ ಗುರೂಜಿಯವರು ಎಚ್ಚರಿಸಿದ್ದಾರೆ.

ಬಸವರಾಜ ಗುರೂಜಿಯವರ ಪ್ರಕಾರ ಅಡುಗೆ ಮನೆಯಲ್ಲಿ ಎಂದಿಗೂ ಖಾಲಿಯಾಗಬಾರದ ವಸ್ತುಗಳೆಂದರೆ ಅಕ್ಕಿ, ಅರಶಿನ ಮತ್ತು ಉಪ್ಪು. ಈ ಮೂರು ವಸ್ತುಗಳು ಎಂದಿಗೂ ಖಾಲಿಯಾಗಿಸಬೇಡಿ. ಈ ವಸ್ತುಗಳು ಖಾಲಿಯಾಗುತ್ತದೆ ಎಂದು ಕಂಡಾಕ್ಷಣ ತಂದಿಟ್ಟುಕೊಳ್ಳಿ.

ಅಕ್ಕಿ:

ಅಕ್ಕಿ ಪ್ರತಿಯೊಂದು ಮನೆಯಲ್ಲಿ ಪ್ರತಿದಿನ ಬಳಸುವ ವಸ್ತು. ಬೆಳಗ್ಗಿನ ತಿಂಡಿಯಿಂದ ಹಿಡಿದು ಮಧ್ಯಾಹ್ನ ಹಾಗೂ ರಾತ್ರಿಯ ಊಟದಲ್ಲೂ ಅಕ್ಕಿಯನ್ನು ಬಳಸಲಾಗುತ್ತದೆ. ಆದ್ದರಿಂದ ಅಕ್ಕಿ ಎಂದಿಗೂ ಖಾಲಿಯಾಗದಂತೆ ನೋಡಿಕೊಳ್ಳಿ. ಅಕ್ಕಿ ಖಾಲಿಯಾಗುವುದು ದಾರಿದ್ರ್ಯದ ಸಂಕೇತ ಎಂದು ನಂಬಲಾಗಿದೆ. ಮೂರು ಹಿಡಿಯಷ್ಟಾದರೂ ಅಕ್ಕಿ ಇರಲೇಬೇಕು.

ಅರಶಿನ:

ಅರಶಿನ ಕೂಡ ಮನೆಯಲ್ಲಿ ಖಾಲಿಯಾಗಬಾರದು. ಇದನ್ನೂ ಕೂಡ ದಾರಿದ್ರ್ಯದ ಸಂಕೇತ ಎಂದು ನಂಬಲಾಗಿದೆ. ಮನೆಯ ಗೃಹಿಣಿ ಈ ವಿಷಯದಲ್ಲಿ ಜಾಗ್ರತೆಯಿಂದಿರಬೇಕು. ಅರಶಿನ ಖಾಲಿಯಾಗುತ್ತಿದೆ ಎಂದು ಅನಿಸಿದಾಕ್ಷಣ ತಂದಿಡುವುದು ಅಗತ್ಯ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಏಕಕಾಲಕ್ಕೆ 2 ರಾಜಯೋಗ, ಈ 3 ರಾಶಿಯವರಿಗೆ ಸುವರ್ಣ ಸಮಯ ಆರಂಭ

ಉಪ್ಪು:

ಉಪ್ಪು ಇಲ್ಲದೇ ಯಾವುದೇ ಅಡುಗೆ ಅಪೂರ್ಣ. ಆದ್ದರಿಂದ ಉಪ್ಪು ಎಂದಿಗೂ ಖಾಲಿಯಾಗದಂತೆ ನೋಡಿಕೊಳ್ಳಿ. ಅಡುಗೆ ಮನೆಯಲ್ಲಿ ಉಪ್ಪು ಯಾವಾಗಲೂ ಕಾಣುವಂತೆ ಇಡಬೇಕು ಎಂದು ಸಲಹೆ ನೀಡಲಾಗಿದೆ.

ಅಕ್ಕಿ, ಅರಶಿನ ಮತ್ತು ಉಪ್ಪು ಈ ಮೂರು ವಸ್ತುಗಳು ಎಂದಿಗೂ ಖಾಲಿಯಾಗಿಸಬೇಡಿ. ಈ ಮೂರು ವಸ್ತುಗಳ ಲಭ್ಯತೆಯು ಮನೆಯಲ್ಲಿ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ. ಈ ವಸ್ತುಗಳು ಖಾಲಿಯಾಗುತ್ತದೆ ಎಂದು ಕಂಡಾಕ್ಷಣ ತಂದಿಟ್ಟುಕೊಳ್ಳಿ ಎಂದು ಬಸವರಾಜ ಗುರೂಜಿಯವರು ಸಲಹೆ ನೀಡುತ್ತಾರೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:52 am, Sat, 22 February 25