AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಪ್ಪು ಇರುವೆಗೆ ಪ್ರತಿದಿನ ಈ ಆಹಾರವನ್ನು ನೀಡಿ, ಇದು ನಿಮಗಾಗಿ ಶನಿ ದೇವರಲ್ಲಿ ಪ್ರಾರ್ಥಿಸುತ್ತದೆ

ವಾಸ್ತು ಶಾಸ್ತ್ರದಲ್ಲಿ, ಕಪ್ಪು ಇರುವೆಗಳು ಶನಿ ದೇವರಿಂದ ಆಶೀರ್ವದಿಸಲ್ಪಟ್ಟಿವೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಇರುವೆಗಳಿಗೆ ಹಿಟ್ಟು ಅಥವಾ ಆಹಾರ ನೀಡುವುದರಿಂದ ಪುಣ್ಯ ಬರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಇರುವೆಗಳು ತಮ್ಮ ಆಹಾರವನ್ನು ಸಂಗ್ರಹಿಸಲು ಎಷ್ಟು ಶ್ರಮಿಸುತ್ತವೆ ಎಂಬುದು ನಮಗೆ ತಿಳಿದಿರುವ ವಿಚಾರ. ನೀವು ಪ್ರತಿದಿನ ಇರುವೆಗಳಿಗೆ ಆಹಾರ ನೀಡಿದಾಗ, ಇರುವೆಗಳು ನಿಮ್ಮನ್ನು ಗಮನಿಸುತ್ತದೆ. ಹಾಗೂ ಅದು ನಿಮಗಾಗಿ ಶನಿ ದೇವರಲ್ಲಿ ಪ್ರಾರ್ಥನೆ ಮಾಡುತ್ತದೆ.

ಕಪ್ಪು ಇರುವೆಗೆ ಪ್ರತಿದಿನ ಈ ಆಹಾರವನ್ನು ನೀಡಿ, ಇದು ನಿಮಗಾಗಿ ಶನಿ ದೇವರಲ್ಲಿ ಪ್ರಾರ್ಥಿಸುತ್ತದೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on:Feb 21, 2025 | 3:58 PM

Share

ಇರುವೆಗಳು ಶ್ರಮಶೀಲ ಜೀವಿ, ಹಿಂದೂ ಧರ್ಮದಲ್ಲಿ ಅವುಗಳನ್ನು ವಿಷ್ಣುವಿನ ಪ್ರೀಯವಾದ ಪ್ರಾಣಿ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ಪ್ರಾಣಿಗಳನ್ನು ದೇವರ ರೂಪ ಅಥವಾ ಪ್ರಿಯ ಎಂದು ಹೇಳಲಾಗುತ್ತದೆ. ಎಲ್ಲಾ ಜೀವಿಗಳನ್ನು ದೇವರು ಮತ್ತು ದೇವತೆಗಳ ಭಾಗವೆಂದು ಹೇಳುವುದುಂಟು. ಆದ್ದರಿಂದ ಪ್ರಾಣಿಗೆ ಸೇವೆ ಮಾಡುವುದು ಅಥವಾ ಆಹಾರ ನೀಡುವುದರಿಂದ ನಮ್ಮ ಅದೃಷ್ಟ ಹಾಗೂ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇದೆ. ಇರುವೆಗಳಲ್ಲಿ ಎರಡು ವಿಧ ಒಂದು ಕೆಂಪು ಇನ್ನೊಂದು ಕಪ್ಪು. ಜ್ಯೋತಿಷ್ಯದ ಪ್ರಕಾರ, ಕಪ್ಪು ಇರುವೆಗಳನ್ನು ಶುಭ ಎಂದು ಹೇಳುತ್ತಾರೆ. ಕೆಂಪು ಇರುವೆಗಳನ್ನು ಅಶುಭ. ಆದರೆ ಕೆಂಪು ಇರುವೆಗಳು ತಮ್ಮ ಗುಂಪಿನೊಂದಿಗೆ ಸಾಲಿನಲ್ಲಿ ನಡೆಯುವುದನ್ನು ನೀವು ನೋಡಿದರೆ, ಅದನ್ನು ಶುಭ ಎಂದು ಹೇಳಲಾಗುತ್ತದೆ.

ವಾಸ್ತು ಶಾಸ್ತ್ರದಲ್ಲಿ, ಕಪ್ಪು ಇರುವೆಗಳು ಶನಿ ದೇವರಿಂದ ಆಶೀರ್ವದಿಸಲ್ಪಟ್ಟಿವೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಇರುವೆಗಳಿಗೆ ಹಿಟ್ಟು ಅಥವಾ ಆಹಾರ ನೀಡುವುದರಿಂದ ಪುಣ್ಯ ಬರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಇರುವೆಗಳು ತಮ್ಮ ಆಹಾರವನ್ನು ಸಂಗ್ರಹಿಸಲು ಎಷ್ಟು ಶ್ರಮಿಸುತ್ತವೆ ಎಂಬುದು ನಮಗೆ ತಿಳಿದಿರುವ ವಿಚಾರ. ನೀವು ಪ್ರತಿದಿನ ಇರುವೆಗಳಿಗೆ ಆಹಾರ ನೀಡಿದಾಗ, ಇರುವೆಗಳು ನಿಮ್ಮನ್ನು ಗಮನಿಸುತ್ತದೆ. ಹಾಗೂ ಅದು ನಿಮಗಾಗಿ ಶನಿ ದೇವರಲ್ಲಿ ಪ್ರಾರ್ಥನೆ ಮಾಡುತ್ತದೆ.

ಇರುವೆಗಳ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಬಂದಿರುವ ಸಂಕಷ್ಟಗಳನ್ನು ದೂರು ಮಾಡುತ್ತದೆ. ಇನ್ನು ಸಕ್ಕರೆಯನ್ನು ಹಿಟ್ಟಿನೊಂದಿಗೆ ಬೆರೆಸಿ ಇರುವೆಗಳಿಗೆ ತಿನ್ನಿಸುವುದರಿಂದ ನಿಮ್ಮ ಕಷ್ಟಗಳು ಬೇಗೆನೇ ದೂರುವಾಗುತ್ತದೆ. ಯಾರ ಜಾತಕದಲ್ಲಿ ಶನಿಯ ಪ್ರಭಾವ ಹೆಚ್ಚು ಇರುತ್ತದೆಯೋ ಅಂತಹ ಜನರಿಗೆ, ಇರುವೆಗಳಿಗೆ ಹಿಟ್ಟು ಅಥವಾ ಆಹಾರವನ್ನು ನೀಡುವುದು ಶುಭವೆಂದು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ, ಶನಿವಾರ ಇರುವೆಗಳಿಗೆ ಹಿಟ್ಟು ಅಥವಾ ಬೆಲ್ಲವನ್ನು ತಿನ್ನಿಸುವುದರಿಂದ ಶನಿಯ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ ಮತ್ತು ಶನಿಯ ಸಾಡೇ ಸಾತಿ ಮತ್ತು ಧೈಯಾದ ಪ್ರಭಾವ ಬೀರುತ್ತದೆ.

ಇರುವೆಗಳು ರಾಹು ಮತ್ತು ಕೇತುಗಳಿಗೂ ಸಂಬಂಧಿಸಿವೆ. ಇರುವೆಗಳಿಗೆ ಹಿಟ್ಟು ತಿನ್ನಿಸುವುದರಿಂದ ಈ ಗ್ರಹಗಳ ಅಶುಭ ಪ್ರಭಾವಗಳನ್ನು ಶಾಂತಗೊಳಿಸಬಹುದು ಮತ್ತು ಜೀವನದಲ್ಲಿನ ಅಡೆತಡೆಗಳನ್ನು ಸಹ ತೆಗೆದುಹಾಕಬಹುದು. ಪೂರ್ವಜರ ಶಾಪ ಅಥವಾ ಅವರ ಕಾರ್ಯದಿಂದ ದೋಷ ಇದ್ದರೆ, ಇರುವೆಗಳಿಗೆ ಆಹಾರ ನೀಡುವ ಮೂಲಕ ಕಳೆಯಬಹುದು. ಹಾಗೂ ಪೂರ್ವಜರ ಆತ್ಮಗಳಿಗೆ ಶಾಂತಿ ದೊರೆಯುತ್ತದೆ. ಪ್ರತಿದಿನ ಇರುವೆಗಳಿಗೆ ಹಿಟ್ಟು ಅಥವಾ ಆಹಾರವನ್ನು ನೀಡುವುದರಿಂದ ನಿಮ್ಮ ಅದೃಷ್ಟ ಕೂಡ ಬದಲಾಗುತ್ತದೆ.

ಇದನ್ನೂ ಓದಿ: ನಿಮ್ಮ ಕೈ ಬೆರಳಲ್ಲಿರುವ ಶಂಖಗಳ ಸಂಖ್ಯೆಯಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ

ಶನಿವಾರ ಅಥವಾ ಮಂಗಳವಾರ ಇರುವೆಗಳಿಗೆ ಹಿಟ್ಟು ತಿನ್ನಿಸುವುದು ತುಂಬಾ ಶುಭ. ಹಿಟ್ಟಿನಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಬೆರೆಸಿ ತಿನ್ನಿಸುವುದು ಕೂಡ ಶುಭ. ಇನ್ನು ನೀವು ಇರುವೆಗಳಿಗೆ ಆಹಾರ ನೀಡುವಾಗ, ಸ್ವಚ್ಛವಾದ ಸ್ಥಳವನ್ನು ಆಯ್ಕೆ ಮಾಡಿ. ನೀವು ಇರುವೆಗಳಿಗೆ ಹಿಟ್ಟು ಅಥವಾ ಆಹಾರವನ್ನು ನೀಡಿದಾಗಲೆಲ್ಲಾ, ನಿಮ್ಮ ಮನಸ್ಸಿನಲ್ಲಿ ಯಾವುದೇ ಸ್ವಾರ್ಥ ಭಾವನೆಗಳು ಇರಬಾರದು. ಹೀಗೆ ಮಾಡುವುದರಿಂದ ಮಾತ್ರ ಪ್ರಯೋಜನಗಳನ್ನು ಪಡೆಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Fri, 21 February 25

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್