Personality Test: ನಿಮ್ಮ ಕೈ ಬೆರಳಲ್ಲಿರುವ ಶಂಖಗಳ ಸಂಖ್ಯೆಯಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ
ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವು ಭಿನ್ನ ಭಿನ್ನವಾಗಿರುತ್ತದೆ. ವ್ಯಕ್ತಿತ್ವವೇ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿಯೂ ಹೇಗೆ ಎಂದು ತಿಳಿಯಲು ಆತನೊಂದಿಗೆ ಬೆರೆಯಬೇಕು. ಆದರೆ ಒಬ್ಬ ವ್ಯಕ್ತಿಯ ಕೈಬೆರಳಲ್ಲಿ ಶಂಖಗಳ ಗುರುತು ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಶಂಖಗಳ ಸಂಖ್ಯೆ ಎಷ್ಟಿದೆ? ಎನ್ನುವುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹಾಗೂ ಗುಣಸ್ವಭಾವವನ್ನು ತಿಳಿದುಕೊಳ್ಳಬಹುದಾಗಿದ್ದು, ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ದೇಹದ ಪ್ರತಿಯೊಂದು ಅಂಗಗಳು ಕೂಡ ವ್ಯಕ್ತಿತ್ವವನ್ನು ತಿಳಿಸುತ್ತದೆಯಂತೆ. ಕಣ್ಣು, ಕಿವಿ, ಮೂಗು, ನಾಲಿಗೆ, ಹಣೆಯ ಆಕಾರದ ಆಧಾರದ ಮೇಲೆ ಗುಣಸ್ವಭಾವವನ್ನು ತಿಳಿದುಕೊಳ್ಳಬಹುದು. ಆದರೆ ಪೆನ್ನು ಹಿಡಿಯುವ ರೀತಿಯೂ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಸಮುದ್ರಿಕಾ ಶಾಸ್ತ್ರದ ದೇಹದ ಮೇಲಿರುವ ಕೆಲವು ಗುರುತುಗಳು ವ್ಯಕ್ತಿಯ ವ್ಯಕ್ತಿತ್ವ, ಯಶಸ್ಸನ್ನು ತಿಳಿಸುತ್ತದೆ. ಹೀಗಾಗಿ ನಿಮ್ಮ ಕೈ ಬೆರಳ ತುದಿಯಲ್ಲಿರುವ ಶಂಖದ ಗುರುತುಗಳು ನೀವು ಹೇಗೆ ಎನ್ನುವುದು ಅರಿತುಕೊಳ್ಳಲು ಸಹಾಯ ಮಾಡುತ್ತದೆ.
- ಒಂದು ಬೆರಳಲ್ಲಿ ಶಂಖದ ಗುರುತು : ಕೆಲವರಿಗೆ ಒಂದೇ ಬೆರಳಲ್ಲಿ ಶಂಖದ ಗುರುತು ಇರುತ್ತದೆ. ಈ ರೀತಿಯಿದ್ದರೆ ಆ ವ್ಯಕ್ತಿಗಳು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಸ್ಥಾನವನ್ನು ಅಲಂಕರಿಸುತ್ತಾರೆ. ಸಮಾಜಮುಖಿ ಕಾರ್ಯಗಳಲ್ಲಿ ಹೆಚ್ಚು ತೊಡಗಿಕೊಳ್ಳುವ ಮೂಲಕ ಗೌರವಕ್ಕೆ ಪಾತ್ರರಾಗುತ್ತಾರೆ. ಈ ಜನರ ಜೀವನದಲ್ಲಿ ಸಮಸ್ಯೆಗಳಿಗೆ ಜಾಗವೇ ಇರುವುದಿಲ್ಲ. ಯಾವುದೇ ಕಷ್ಟಗಳಿಲ್ಲದೇ ಆರಾಮಾದಾಯಕ ಜೀವನ ನಡೆಸುತ್ತಾರೆ.
- ಎರಡು ಶಂಖದ ಗುರುತು : ಎರಡು ಕೈಬೆರಳಲ್ಲಿ ಶಂಖದ ಗುರುತನ್ನು ಹೊಂದಿದ್ದರೆ, ಈ ವ್ಯಕ್ತಿಗಳ ಜೀವನವು ಹೋರಾಟದಿಂದ ಕೂಡಿರುತ್ತದೆ. ಈ ವ್ಯಕ್ತಿಗಳು ಯಶಸ್ವಿಯಾಗಲು ದೀರ್ಘ ಕಾಲ ಶ್ರಮ ಪಡಬೇಕು. ಯಾವುದೇ ಕೆಲಸವನ್ನು ಮಾಡಲು ಹೋದರೂ ಇತರರ ಸಹಾಯ ಪಡೆಯದೇ ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ತನ್ನ ಸುತ್ತಮುತ್ತಲಿನ ವ್ಯಕ್ತಿಗಳನ್ನು ಅವಲಂಬಿಸಿಯೇ ಜೀವನ ನಡೆಸುತ್ತಾರೆ.
- ಮೂರು ಶಂಖದ ಗುರುತು : ವ್ಯಕ್ತಿಯೂ ಮೂರು ಬೆರಳಲ್ಲಿ ಶಂಖದ ಗುರುತನ್ನು ಹೊಂದಿದ್ದರೆ ಅಂತಹ ವ್ಯಕ್ತಿಗಳು ತನ್ನತನವನ್ನು ಕಾಪಾಡಿಕೊಳ್ಳುತ್ತಾರೆ. ವಿಶೇಷವಾಗಿ ಮಹಿಳೆಯರ ಮೇಲೆ ಅಪಾರ ಕಾಳಜಿ,ಪ್ರೀತಿ ತೋರುತ್ತಾರೆ. ತನ್ನ ದುಡಿದ ಹಣವನ್ನು ಸಾಮಗ್ರಿಗಳನ್ನು ಖರೀದಿಸಲು ವಿನಿಯೋಗಿಸುವುದೇ ಹೆಚ್ಚು. ಸಾಮಾನ್ಯ ಜೀವನ ನಡೆಸಿದರೂ ಕೆಲವೊಮ್ಮೆ ಜೀವನದಲ್ಲಿ ಸಾಕಷ್ಟು ಏರುಪೇರುಗಳು ಉಂಟಾಗಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ಈ ವ್ಯಕ್ತಿಗಳು ಕುಟುಂಬಕ್ಕೆ ಮೊದಲು ಆದ್ಯತೆ ನೀಡುತ್ತಾರೆ.
- ಕೈ ಬೆರಳಲ್ಲಿ ನಾಲ್ಕು ಶಂಖದ ಗುರುತು : ಕೆಲವರು ನಾಲ್ಕು ಕೈ ಬೆರಳಲ್ಲಿ ನಾಲ್ಕು ಶಂಖದ ಗುರುತನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ರಾಜನಂತೆ ಬದುಕುತ್ತಾರೆ. ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ. ಕುಟುಂಬದ ಗೌರವ ಹೆಚ್ಚಿಸುತ್ತಾರೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಕಾಣುತ್ತಾರೆ. ಈ ಜನರು ರಾಜತಾಂತ್ರಿಕ ಕಾರ್ಯಗಳಲ್ಲಿ ಹೆಚ್ಚು ಸಂಬಂಧ ಹೊಂದಿರುತ್ತಾರೆ.
- ಐದು ಶಂಖದ ಗುರುತು : ಐದು ಬೆರಳಲ್ಲಿ ಶಂಖದ ಗುರುತು ಹೊಂದಿರುವವರು ನಿಜಕ್ಕೂ ಅದೃಷ್ಟವಂತರು. ಎಲ್ಲರೂ ಮೆಚ್ಚಿಕೊಳ್ಳುವಂತೆ ಬದುಕುವ ವ್ಯಕ್ತಿಗಳಾಗಿದ್ದು, ಈ ವ್ಯಕ್ತಿಗಳ ಮುಖದಲ್ಲಿ ಆಕರ್ಷಿಣಿಯ ಗುಣವಿರುತ್ತದೆ. ಮೊದಲ ಭೇಟಿಯಲ್ಲೇ ಎಲ್ಲರಿಗೂ ಇಷ್ಟವಾಗುತ್ತಾರೆ. ಆತ್ಮವಿಶ್ವಾಸವುಳ್ಳ, ಸಾಹಸಮಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಜೀವನದಲ್ಲಿ ಸುಲಭವಾಗಿ ಯಶಸ್ಸು ಗಳಿಸುತ್ತಾರೆ.
- ಆರು ಶಂಖದ ಗುರುತು: ಆರು ಬೆರಳಲ್ಲಿ ಶಂಖದ ಗುರುತನ್ನು ಹೊಂದಿರುವ ವ್ಯಕ್ತಿಗಳು ಬುದ್ಧಿವಂತರು, ವಿದ್ವಾಂಸರು ಹಾಗೂ ಸಾಮಾಜಿಕ ಚಿಂತಕರಾಗಿರುತ್ತಾರೆ. ಇವರ ಮಾತು ಹಾಗೂ ಸಲಹೆಗಳನ್ನು ಸುತ್ತಮುತ್ತಲಿನ ಜನರು ತಪ್ಪದೇ ಪಾಲಿಸುತ್ತಾರೆ. ಈ ಗುಣದಿಂದಲೇ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ.
- ಏಳು ಶಂಖದ ಗುರುತು ಹೊಂದಿರುವವರು : ಕೈಯ ಬೆರಳಲ್ಲಿ ಏಳು ಶಂಖದ ಗುರುತನ್ನು ಹೊಂದಿರುವ ಜನರಿಗೆ ಆರ್ಥಿಕ ಸಮಸ್ಯೆ ಎದುರಿಸುವುದೇ ಹೆಚ್ಚು. ಮಹಿಳೆಯರು ತಮ್ಮ ಜೀವನದಲ್ಲಿ ಹೆಚ್ಚು ಕಷ್ಟ ಪಡಬೇಕಾಗುತ್ತದೆ. ಆದರೆ ಇವರಿಗೆ ಸಂಗಾತಿಯ ಬೆಂಬಲ ಸಹಕಾರವಿರುವ ಕಾರಣ ಎಲ್ಲವನ್ನು ಜಯಿಸುತ್ತಾರೆ.
- ಎಂಟು ಬೆರಳಲ್ಲಿ ಶಂಖದ ಗುರುತು : ಒಬ್ಬ ವ್ಯಕ್ತಿಯ ಕೈ ಬೆರಳಲ್ಲಿ ಎಂಟು ಶಂಖದ ಗುರುತು ಇದ್ದರೆ ಈ ವ್ಯಕ್ತಿಗಳ ಜೀವನವು ಕಷ್ಟದಿಂದಲೇ ಕೂಡಿರುತ್ತದೆ. ಸಣ್ಣ ಪುಟ್ಟ ವಿಷಯಕ್ಕೂ ತೊಂದರೆ ಅಡೆತಡೆಗಳು ಎದುರಾಗುತ್ತದೆ. ತನ್ನ ಸುತ್ತಮುತ್ತಲಿನ ಉನ್ನತ ವ್ಯಕ್ತಿಗಳ ಸಹವಾಸವೇ ಜೀವನದಲ್ಲಿ ಸಾಧನೆ ಮಾಡಲು ಉನ್ನತ ಸ್ಥಾನಕ್ಕೆ ಏರಲು ಸಹಾಯ ಮಾಡುತ್ತದೆ.
- ಒಂಬತ್ತು ಬೆರಳಲ್ಲಿ ಶಂಖದ ಗುರುತು : ಕೆಲವು ವ್ಯಕ್ತಿಗಳ ಕೈ ಬೆರಳಲ್ಲಿ ಒಂಬತ್ತು ಶಂಖದ ಗುರುತುಗಳಿರುತ್ತದೆ. ಈ ವ್ಯಕ್ತಿಗಳು ಸಹಜವಾಗಿಯೇ ವಿರುದ್ಧ ಲಿಂಗದವರತ್ತ ಆಕರ್ಷಣೆಗೊಳಗಾಗುತ್ತಾರೆ. ಹೀಗಾಗಿ ಈ ವ್ಯಕ್ತಿಗಳ ಮನಸ್ಸು ಸ್ಥಿರವಾಗಿರುವುದಿಲ್ಲ. ಚಂಚಲ ಸ್ವಭಾವ, ಚಡಪಡಿಕೆಗಳೇ ಹೆಚ್ಚಾಗಿರುತ್ತದೆ. ಇದರಿಂದ ಜೀವನದಲ್ಲಿ ಸ್ಥಿರವಾಗಿ ಬದುಕು ಕಟ್ಟಿಕೊಳ್ಳಲು ಒದ್ದಾಡುತ್ತಾರೆ.
- ಹತ್ತು ಬೆರಳಲ್ಲೂ ಶಂಖದ ಗುರುತು : ಹತ್ತು ಬೆರಳಲ್ಲಿಯೂ ಶಂಖದ ಗುರುತು ಹೊಂದಿರುವ ಜನರು ಅದೃಷ್ಟವಂತರು. ಯಾವುದೇ ಕ್ಷೇತ್ರದಲ್ಲಿದರೂ ಬಹುಬೇಗನೇ ಯಶಸ್ಸು ಗಳಿಸುತ್ತಾರೆ. ಶಾಂತ ಸ್ವಭಾವ, ಹಿತವಾದ ಮಾತು, ಉತ್ತಮ ನಡವಳಿಕೆಯಿಂದ ಸಮಾಜದಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗುತ್ತಾರೆ. ವೈವಾಹಿಕ ಜೀವನವು ಉತ್ತಮದಾಯಕವಾಗಿದ್ದು, ತಾವು ಅಂದುಕೊಂಡಂತೆ ಬದುಕುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




