
ಹಿಂದೂ ಧರ್ಮ ಮತ್ತು ವಾಸ್ತು ಶಾಸ್ತ್ರ ಎರಡರಲ್ಲೂ ಅಡುಗೆಮನೆಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಇಡುವ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಇಟ್ಟರೆ ಮಾತ್ರ ಆ ಮನೆಯಲ್ಲಿ ಸಕರಾತ್ಮಕ ಶಕ್ತಿ ಹರಡಲು ಸಾಧ್ಯ ಎಂದು ಹೇಳಲಾಗುತ್ತದೆ. ಅದರಂತೆ ಅಡುಗೆ ಪಾತ್ರೆಗಳನ್ನು ಯಾವ ಸ್ಥಿತಿಯಲ್ಲಿ ಇಡಬೇಕು ಎಂಬುದರ ಕುರಿತು ವಾಸ್ತುವಿನಲ್ಲ ಕಾಲಕಾಲಕ್ಕೆ ಉಲ್ಲೇಖಿಸಲಾಗಿದೆ. ಅವುಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಅಡುಗೆಮನೆಯಲ್ಲಿ ಬಳಸುವ ಪಾತ್ರೆಗಳನ್ನು ತಲೆಕೆಳಗಾಗಿ ಅಂದರೆ ಮುಗುಚಿ ಇಡಬಾರದು. ಪಾತ್ರೆಗಳನ್ನು ತಲೆಕೆಳಗಾಗಿ ಇಡುವುದರಿಂದ ನಕಾರಾತ್ಮಕತೆ ಬರುತ್ತದೆ. ಹೀಗೆ ಮಾಡುವುದು ಮನೆಯಲ್ಲಿ ಆರ್ಥಿಕ ನಷ್ಟ, ದುರದೃಷ್ಟ ಮತ್ತು ವಿವಾದಗಳನ್ನು ಆಹ್ವಾನಿಸಿದಂತೆ ಎಂದು ವಾಸ್ತು ತಜ್ಞರು ಎಚ್ಚರಿಕೆ ನೀಡುತ್ತಾರೆ.
ಇಷ್ಟು ಮಾತ್ರವಲ್ಲದೆ, ಚಪಾತಿ ಮಾಡುವ ಕಾವಲಿ, ತವಾ ಎಂದಿಗೂ ಮಗುಚಿ ಹಾಕಬಾರದು. ಹೀಗೆ ಮಾಡಿದರೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು.ಸಾಲ ಹೆಚ್ಚಾಗಬಹುದು ಜೀವನದಲ್ಲಿ ಬಡತನವನ್ನು ಎದುರಿಸಬೇಕಾಗಬಹುದು. ಅದು ಕೆಲಸದಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು. ಹೀಗೆ ಮಾಡುವುದರಿಂದ, ವೈವಾಹಿಕ ಜೀವನದಲ್ಲಿ ಬಿರುಕು, ದೇಶೀಯ ಜಗಳಗಳು ಮತ್ತು ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ಮತ್ತು ಜಗಳಗಳ ಸಾಧ್ಯತೆಯೂ ಹೆಚ್ಚಾಗುತ್ತದೆ.
ಇದನ್ನೂ ಓದಿ: ವಿವಾಹಿತ ಮಹಿಳೆಯರು ಈ ದಿನ ತಪ್ಪಿಯೂ ತಲೆ ಸ್ನಾನ ಮಾಡಬಾರದು!
ವಾಸ್ತು ತಜ್ಞರ ಪ್ರಕಾರ ಅಡುಗೆ ಮನೆಯಲ್ಲಿರುವ ಪಾತ್ರೆಗಳನ್ನು ಯಾವಾಗಲೂ ಪಶ್ಚಿಮ ದಿಕ್ಕಿನಲ್ಲಿಯೇ ಇಡಬೇಕು. ಈ ದಿಕ್ಕಿನಲ್ಲಿ ಪಾತ್ರೆಗಳನ್ನು ಇಡುವುದು ಉತ್ತಮ. ಇದು ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಪರಿಗಣಿಸಲಾಗಿದೆ. ಜೊತೆಗೆ ರಾತ್ರಿ ಅಡುಗೆ ಮಾಡಿದ ಪಾತ್ರೆಗಳನ್ನು ರಾತ್ರಿಯೇ ತೊಳೆದಿದೆ. ಜೊತೆಗೆ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ