Copper Sun Vastu: ಮನೆಯ ಈ ದಿಕ್ಕಿನಲ್ಲಿ ತಾಮ್ರದ ಸೂರ್ಯ ಫಲಕ ಇಟ್ಟರೆ ಹಣಕ್ಕೆಂದೂ ಕೊರತೆಯಾಗದು!

ವಾಸ್ತು ಶಾಸ್ತ್ರದ ಪ್ರಕಾರ, ಮನೆ ಅಥವಾ ಕಚೇರಿಯಲ್ಲಿ ತಾಮ್ರದ ಸೂರ್ಯನ ಫಲಕವನ್ನು ಸರಿಯಾಗಿ ಇರಿಸುವುದರಿಂದ ಸಮೃದ್ಧಿ, ಒಳ್ಳೆಯ ಅದೃಷ್ಟ ಮತ್ತು ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಪೂರ್ವ ದಿಕ್ಕಿನಲ್ಲಿ ಅಥವಾ ಮುಖ್ಯ ದ್ವಾರದ ಬಳಿ ಇಡುವುದು ಶುಭ. ಇದು ಕುಟುಂಬದ ಸದಸ್ಯರ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಆದರೆ ಕೆಲವು ನಿಯಮಗಳನ್ನು ಪಾಲಿಸುವುದು ಮುಖ್ಯ.

Copper Sun Vastu: ಮನೆಯ ಈ ದಿಕ್ಕಿನಲ್ಲಿ ತಾಮ್ರದ ಸೂರ್ಯ ಫಲಕ ಇಟ್ಟರೆ ಹಣಕ್ಕೆಂದೂ ಕೊರತೆಯಾಗದು!
Copper Sun Plate

Updated on: Feb 01, 2025 | 7:44 AM

ನಿಮ್ಮ ಮನೆ ಅಥವಾ ಕಛೇರಿಯಲ್ಲಿ ತಾಮ್ರದ ಸೂರ್ಯನ ಫಲಕವನ್ನು ಇರಿಸುವುದರಿಂದ ನೀವು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ವಾಸ್ತು ಪ್ರಕಾರ ನಿವಾರಿಸಬಹುದು ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ತಾಮ್ರದ ಸೂರ್ಯ ದುಷ್ಟ ಶಕ್ತಿಗಳು ಮನೆಗೆ ಪ್ರವೇಶಿಸದಂತೆ ತಡೆಯುತ್ತದೆ. ಹಾಗಾಗಿ ತಾಮ್ರದಿಂದ ಮಾಡಿದ ಸೂರ್ಯನನ್ನು ಮನೆಯ ಮುಂದೆ ಇಡುವುದರಿಂದ ಅದೃಷ್ಟವೂ ಬರುತ್ತದೆ ಎಂದು ನಂಬಲಾಗಿದೆ.

ವಾಸ್ತು ಪ್ರಕಾರ, ಮುಖ್ಯದ್ವಾರದಲ್ಲಿ ಅಥವಾ ಪೂರ್ವ ಗೋಡೆಯ ಮೇಲೆ ಇಡುವುದರಿಂದ ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ. ಕುಟುಂಬದ ಸದಸ್ಯರ ನಡುವಿನ ಸಂಬಂಧಗಳು ಗಟ್ಟಿಯಾಗುತ್ತವೆ. ಇದು ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ. ವಿಶೇಷವಾಗಿ ಉದ್ಯಮಿಗಳು, ಕಲಾವಿದರು, ಸರ್ಕಾರಿ ನೌಕರರು ತಮ್ಮ ಕಚೇರಿಗಳು ಅಥವಾ ಮನೆಗಳಲ್ಲಿ ತಾಮ್ರದ ಸೂರ್ಯನನ್ನು ಸ್ಥಾಪಿಸುವ ಮೂಲಕ ಉತ್ತಮ ಯಶಸ್ಸನ್ನು ಸಾಧಿಸಬಹುದು.

ಇದನ್ನೂ ಓದಿ: ಫೆ.02 ರಂದು ವಸಂತ ಪಂಚಮಿ; ವಿದ್ಯಾರ್ಥಿಗಳಿಗೆ ಈ ದಿನ ಏಕೆ ವಿಶೇಷ..?

ಮನೆಯ ಮುಖ್ಯ ಬಾಗಿಲು ಪೂರ್ವಕ್ಕೆ ಮುಖ ಮಾಡಿದರೆ ಈ ತಾಮ್ರದ ಸೂರ್ಯನನ್ನು ಬಾಗಿಲಿನ ಹೊರಗೆ ಇಡಬಹುದು. ಮನೆ ಅಥವಾ ಕಛೇರಿಯನ್ನು ಪ್ರವೇಶಿಸುವಾಗ ನೀವು ಈ ಸೂರ್ಯನನ್ನು ನೋಡಬೇಕು. ತಾಮ್ರದ ಸೂರ್ಯನಿಂದ ನಾವು ಪಡೆಯುವ ಶಕ್ತಿಯು ನಮ್ಮ ವೃತ್ತಿಜೀವನದಲ್ಲಿ ಮುಂದುವರಿಯಲು ಸಹಾಯ ಮಾಡುತ್ತದೆ. ಮನೆಯ ಪೂರ್ವ ದಿಕ್ಕಿನಲ್ಲಿ ನೀವು ತಾಮ್ರದ ಸೂರ್ಯನ ಫಲಕವನ್ನು ಇಡಬೇಕು. ಆದರೆ ಪೂರ್ವ ದಿಕ್ಕಿನ ಗೋಡೆಗೆ ಕಿಟಕಿ ಅಥವಾ ಬಾಗಿಲು ಇದ್ದರೆ ಆ ಜಾಗದಲ್ಲಿ ನೀವು ಸೂರ್ಯನ ಮೂರ್ತಿಯನ್ನು ಇಡಬೇಡಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ