ಕ್ವಾರಂಟೀನ್ ನಿಯಮಗಳನ್ನು ಬದಲಿಸದಿದ್ದರೆ ಇಂಗ್ಲೆಂಡ್​ನಲ್ಲಿ ಕ್ರಿಕೆಟ್​ ಪಂದ್ಯಗಳು ನಡೆಯುವುದು ಕಷ್ಟವಾಗುತ್ತದೆ: ಮೈಕೆಲ್ ವಾನ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 16, 2021 | 1:36 AM

ಆಟಗಾರರು ಹೀಗೆ ಕೋವಿಡ್ ಸೋಂಕಿಗೊಳಗಾಗುತ್ತಿದ್ದರೆ, ಅದು ಮುಂಬರಲಿರುವ ಆಶಸ್ ಸರಣಿ ಮೇಲೂ ಪರಿಣಾಮ ಬೀರಲಿದೆ ಅಂತ ತಮ್ಮ ಟ್ವೀಟ್​ನಲ್ಲಿ ವಾನ್ ಹೇಳಿದ್ದಾರೆ.

ಕ್ವಾರಂಟೀನ್ ನಿಯಮಗಳನ್ನು ಬದಲಿಸದಿದ್ದರೆ ಇಂಗ್ಲೆಂಡ್​ನಲ್ಲಿ ಕ್ರಿಕೆಟ್​ ಪಂದ್ಯಗಳು ನಡೆಯುವುದು ಕಷ್ಟವಾಗುತ್ತದೆ: ಮೈಕೆಲ್ ವಾನ್
ಮೈಕೆಲ್ ವಾನ್
Follow us on

ಇಂಗ್ಲೆಂಡ್​ನಲ್ಲಿ ನಡೆಯುವ ಕ್ರಿಕೆಟ್​ ಸರಣಿ ಮತ್ತು ಪಂದ್ಯಗಳಿಗೆ ಸಂಬಂಧಿಸಿದಂತೆ ಕ್ವಾರಂಟೀನ್ ನಿಯಮಗಳಲ್ಲಿ ಬದಲಾವಣೆಗಳನ್ನು ತರುವ ಅಗತ್ಯವಿದೆಯೆಂದು ಇಂಗ್ಲೆಂಡ್​ ಮಾಜಿ ನಾಯಕ ಮೈಕೆಲ್ ವಾನ್ ಹೇಳಿದ್ದಾರೆ. ಭಾರತದ ವಿಕೆಟ್​ಕೀಪರ್-ಬ್ಯಾಟ್ಸ್​ಮನ್ ರಿಷಭ್ ಪಂತ್ ಮತ್ತ ಥ್ರೋ-ಇನ್ ಸ್ಪೆಷಲಿಸ್ಟ್ ದಯಾನಂದ್ ಗರಾನಿ ಇಂಗ್ಲೆಂಡ್​ನಲ್ಲಿ ಕೋವಿಡ್-19 ಸೋಂಕಿಗೊಳಗಾಗಿರುವುದು ವರದಿಯಾದ ನಂತರ ವಾನ್ ಅವರಿಂದ ಈ ಕಾಮೆಂಟ್ ಬಂದಿದೆ. ಪಂತ್ ಅವರು ಟೀಮ್ ಇಂಡಿಯಾ ಜೊತೆ ಗುರುವಾರದಂದು ಡುರ್ಹಮ್​ಗೆ ಪ್ರಯಾಣ ಬೆಳಸಲಿಲ್ಲ. ಡುರ್ಹಮ್​ನಲ್ಲಿ ವಿರಾಟ್​​ ಕೊಹ್ಲಿ ನೇತೃತ್ವದ ಭಾರತ ತಂಡ, ಸಂಯುಕ್ತ ಕೌಂಟಿ ಇಲೆವೆನ್ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ.

ಆಟಗಾರರು ಹೀಗೆ ಕೋವಿಡ್ ಸೋಂಕಿಗೊಳಗಾಗುತ್ತಿದ್ದರೆ, ಅದು ಮುಂಬರಲಿರುವ ಆಶಸ್ ಸರಣಿ ಮೇಲೂ ಪರಿಣಾಮ ಬೀರಲಿದೆ ಅಂತ ತಮ್ಮ ಟ್ವೀಟ್​ನಲ್ಲಿ ವಾನ್ ಹೇಳಿದ್ದಾರೆ.

‘ಐಸೋಲೇಷನ್ ನಿಯಮಗಳು ಬದಲಾಗದಿದ್ದರೆ ಈಗ ಜಾರಿಯಲ್ಲಿರುವ 100 ಟೂರ್ನಿ ಮತ್ತು ಭಾರತ ಟೆಸ್ಟ್ ಸರಣಿ ಬಗ್ಗೆ ನನ್ನಲ್ಲಿ ಅತಂಕ ಉಂಟಾಗಿದೆ. @RishabhPant17 ಅವರ ಪ್ರಕರಣ ನಮ್ಮ ಕಣ್ಣ ಮುಂದಿದೆ. ಹಾಗೆಯೇ ಇನ್ನೂ ಸ್ವಲ್ಪ ಮುಂದಕ್ಕೆ ನಮ್ಮ ಯೋಚನೆಯನ್ನು ಹರಿಬಿಟ್ಟರೆ, ಆಶಸ್ ಸರಣಿ ತೀವ್ರ ಪ್ರಭಾವಕ್ಕೊಳಗಾಗಬಹದೆಂದು ನಾನು ಬಾವಿಸುತ್ತೇನೆ| ಕ್ವಾರಂಟೀನ್ ನಿಯಮಗಳನ್ನು ಬದಲಾಯಿಸುವ ಅವಶ್ಯಕತೆಯಿದೆ,’ ಎಂದು ವಾನ್ ಹೇಳಿದ್ದಾರೆ.

ಏತನ್ಮಧ್ಯೆ, ಭಾರತದ ಮಾಜಿ ಆಟಗಾರರಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರು ಪಂತ್ ಅವರಿಗೆ ಸೋಂಕು ತಗುಲಿದ ನಂತರ ಪ್ರತಿಕ್ರಿಯಿಸಿದ್ದು ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಭಜ್ಜಿ ತಮ್ಮ ಟ್ವೀಟ್​ನಲ್ಲಿ, ‘ಗೆಟ್ ವೆಲ್ ಸೂನ್ ಚಾಂಪಿಯನ್ @RishabhPant17,’ ಅಂತ ಹೇಳಿದ್ದಾರೆ

ರೈನಾ ಸಹ ತಮ್ಮ ಟ್ವಿಟ್ಟರ್​ನಲ್ಲಿ ಗೆಟ್ ವೆಲ್ ಸೂನ್ ಎಂದು ಹೇಳಿ ತಮ್ಮ ಮತ್ತು ಪಂತ್ ಅವರ ಫೋಟೋ ಹಾಕಿದ್ದಾರೆ.

ಇದನ್ನೂ ಓದಿ: Rishabh Pant: ಇಂಗ್ಲೆಂಡ್​ನಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್​ಮನ್​ಗೆ ಕೊರೋನಾ: ಭೀತಿಯಲ್ಲಿ ವಿರಾಟ್ ಕೊಹ್ಲಿ ಪಡೆ