Vikat Sankashthi Chaturthi 2024: ವಿಕಟ ಸಂಕಷ್ಟ ಚತುರ್ಥಿಯಂದು ಈ ಕೆಲಸವನ್ನು ತಪ್ಪದೆ ಮಾಡಿ!

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 26, 2024 | 10:27 AM

ಈ ವರ್ಷ ವಿಕಟ ಸಂಕಷ್ಟ ಚತುರ್ಥಿಯನ್ನು ಎ. 27 ರಂದು ಆಚರಣೆ ಮಾಡಲಾಗುತ್ತದೆ. ಈ ದಿನ ಗಣಪನನ್ನು ಕಷ್ಟ ಮತ್ತು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡು ಎಂದು ಬೇಡಿಕೊಳ್ಳಲಾಗುತ್ತದೆ. ಭಕ್ತಿಯಿಂದ ಪೂಜೆ ಮಾಡಿದಲ್ಲಿ ಮಹಾಗಣಪತಿ ಸಂತುಷ್ಟನಾಗಿ ಬೇಡಿದ ವರಗಳನ್ನು ನೀಡುತ್ತಾನೆ.

Vikat Sankashthi Chaturthi 2024: ವಿಕಟ ಸಂಕಷ್ಟ ಚತುರ್ಥಿಯಂದು ಈ ಕೆಲಸವನ್ನು ತಪ್ಪದೆ ಮಾಡಿ!
Follow us on

ವೈಶಾಖ ಮಾಸದ ಕೃಷ್ಣ ಪಕ್ಷದ ಚತುರ್ಥಿ ದಿನದಂದು ವಿಕಟ ಸಂಕಷ್ಟಿ ಚತುರ್ಥಿಯನ್ನು(Vikat Sankashthi Chaturthi ) ಆಚರಿಸಲಾಗುತ್ತದೆ. ಈ ದಿನ, ಎಲ್ಲಾ ದೇವ, ದೇವತೆಗಳಲ್ಲಿ ಪ್ರಥಮ ಪೂಜಿತ ಗಣೇಶನಿಗೆ ವಿಶೇಷ ರೀತಿಯಲ್ಲಿ ಪೂಜಾ ಸೇವೆಗಳನ್ನು ಮಾಡಲಾಗುತ್ತದೆ ಜೊತೆಗೆ ಭಕ್ತಿಯಿಂದ ಉಪವಾಸವನ್ನು ಆಚರಿಸಲಾಗುತ್ತದೆ. ಈ ವರ್ಷ ವಿಕಟ ಸಂಕಷ್ಟ ಚತುರ್ಥಿಯನ್ನು ಎ. 27 ರಂದು ಆಚರಣೆ ಮಾಡಲಾಗುತ್ತದೆ. ಈ ದಿನ ಗಣಪನನ್ನು ಕಷ್ಟ ಮತ್ತು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡು ಎಂದು ಬೇಡಿಕೊಳ್ಳಲಾಗುತ್ತದೆ. ಭಕ್ತಿಯಿಂದ ಪೂಜೆ ಮಾಡಿದಲ್ಲಿ ಮಹಾಗಣಪತಿ ಸಂತುಷ್ಟನಾಗಿ ಬೇಡಿದ ವರಗಳನ್ನು ನೀಡುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಿಕಟ ಸಂಕಷ್ಟ ಚತುರ್ಥಿಯ ದಿನ ಕೆಲವು ವಿಶೇಷ ಕ್ರಮಗಳನ್ನು ಅನುಸರಿಸುವ ಮೂಲಕ, ಗಣೇಶನ ಆಶೀರ್ವಾದ ಪಡೆಯಬಹುದು, ಜೊತೆಗೆ ಜೀವನದಲ್ಲಿ ಆರೋಗ್ಯ, ಸಂತೋಷ, ಸಮೃದ್ಧಿ, ಸಂಪತ್ತು, ಯಶಸ್ಸು ಮತ್ತು ಖ್ಯಾತಿಯನ್ನು ಗಳಿಸಿಕೊಳ್ಳಬಹುದು.

ವಿಕಟ ಸಂಕಷ್ಟ ಚತುರ್ಥಿಯ ದಿನ ಈ ವಿಶೇಷ ನಿಯಮಗಳನ್ನು ಪಾಲನೆ ಮಾಡಿ!

ಗಣೇಶನಿಗೆ ದುರ್ವೆಯನ್ನು ಅರ್ಪಿಸಿ

ಸಂಕಷ್ಟ ಚತುರ್ಥಿಯ ದಿನ ಗಣೇಶನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ ಮತ್ತು ದುರ್ವೆ ಗಣೇಶನಿಗೆ ತುಂಬಾ ಪ್ರಿಯವಾಗಿರುವುದರಿಂದ ಗಣೇಶನ ಪೂಜೆಯಲ್ಲಿ, ಅವನಿಗೆ 11 ಜೋಡಿ ದುರ್ವೆಯನ್ನು ಅರ್ಪಿಸಿ. ಇದನ್ನು ಅರ್ಪಿಸುವಾಗ, “ಇದಂ ದುರ್ವದಲಂ ಓಂ ಗಂ ಗಣಪತಯೇ ನಮಃ” ಎಂಬ ಮಂತ್ರವನ್ನು ಪಠಿಸಿ.

ಇದನ್ನೂ ಓದಿ:  ಸದಾಕಾಲ ಶನಿ ದೇವನ ಆಶೀರ್ವಾದ ಇರುವುದು ಈ 5 ರಾಶಿಯವರಿಗೆ

ಕುಂಕುಮವನ್ನು ಅರ್ಪಿಸಿ

ಗಣೇಶನಿಗೆ ಕುಂಕುಮವನ್ನು ಅರ್ಪಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ, ಆದ್ದರಿಂದ ವಿಕಟ ಗಣೇಶ ಚತುರ್ಥಿಯ ದಿನದಂದು, ಗಣೇಶನಿಗೆ ಕುಂಕುಮವನ್ನು ಅರ್ಪಿಸಿ. ಇದರಿಂದ ಆರೋಗ್ಯ ಸಮಸ್ಯೆಗಳಿದ್ದಲ್ಲಿ ಪರಿಹಾರವಾಗುತ್ತದೆ.

ಶಮಿ ಎಲೆ ಅಥವಾ ಶಮಿ ಪತ್ರೆಯನ್ನು ಅರ್ಪಿಸಿ

ಶಮಿ ಎಲೆ ಗಣೇಶನಿಗೆ ತುಂಬಾ ಪ್ರಿಯವೆಂದು ಹೇಳಲಾಗುತ್ತದೆ, ಆದ್ದರಿಂದ ವಿಕಟ ಸಂಕಷ್ಟ ಚತುರ್ಥಿಯ ದಿನ ಶಮಿ ಎಲೆಗಳನ್ನು ಗಣೇಶನಿಗೆ ಅರ್ಪಿಸಿ. ಶಮಿ ಮರವನ್ನು ಪೂಜಿಸುವುದು ಕೂಡ ಶುಭ ಫಲಗಳನ್ನು ನೀಡುತ್ತದೆ, ಆದ್ದರಿಂದ ನೀವು ಈ ದಿನ ಶಮಿ ಮರಕ್ಕೂ ಸಹ ಪೂಜೆ ಮಾಡಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ