Vishu 2025: ನಾಳೆ ವಿಷು ಹಬ್ಬ; ಕರಾವಳಿಗರ ಹೊಸವರ್ಷದ ಸಂಭ್ರಮದ ಬಗ್ಗೆ ಇಲ್ಲಿದೆ ಮಾಹಿತಿ

|

Updated on: Apr 13, 2025 | 12:59 PM

ಕೇರಳ ಹಾಗೂ ಕರ್ನಾಟಕದ ಕರಾವಳಿ ಭಾಗಗಳಲ್ಲಿ ವಿಷು ಹಬ್ಬವನ್ನು ಹೊಸ ವರ್ಷದ ಆಚರಣೆಯಾಗಿ ಆಚರಿಸಲಾಗುತ್ತದೆ. ವಿಷುವತ್ ಸಂಕ್ರಾಂತಿಯನ್ನು ಸೂಚಿಸುವ ಈ ಹಬ್ಬದಲ್ಲಿ ವಿಷುಕಣಿ ಪ್ರಮುಖ ಆಚರಣೆಯಾಗಿದೆ. ಶ್ರೀಕೃಷ್ಣನ ವಿಜಯೋತ್ಸವವನ್ನೂ ಇದು ಸೂಚಿಸುತ್ತದೆ. 2025ರಲ್ಲಿ ಏಪ್ರಿಲ್ 14 ರಂದು ವಿಷು ಹಬ್ಬವನ್ನು ಆಚರಿಸಲಾಗುವುದು. ಈ ಲೇಖನವು ವಿಷು ಹಬ್ಬದ ಮಹತ್ವ, ಆಚರಣೆಗಳು ಮತ್ತು ಪೌರಾಣಿಕ ಕಥೆಗಳ ಬಗ್ಗೆ ತಿಳಿಸುತ್ತದೆ.

Vishu 2025: ನಾಳೆ ವಿಷು ಹಬ್ಬ; ಕರಾವಳಿಗರ ಹೊಸವರ್ಷದ ಸಂಭ್ರಮದ ಬಗ್ಗೆ ಇಲ್ಲಿದೆ ಮಾಹಿತಿ
Vishu Festival 2025
Follow us on

ಕೇರಳ ಸೇರಿದಂತೆ ಕರ್ನಾಟಕದ ಕರಾವಳಿ ಭಾಗದಲ್ಲಿ ವಿಷು ಹಬ್ಬವನ್ನು ಪ್ರತೀ ಮನೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹೊಸ ವರ್ಷ ಮತ್ತು ಹೊಸ ಆರಂಭವನ್ನು ಸೂಚಿಸುತ್ತದೆ. ಕೆಲವೆಡೆ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ ಕೆಲವು ಕಡೆ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಈ ಸೌರಮಾನ ಯುಗಾದಿಯನ್ನೇ ಬಿಸು, ವಿಷು ಎಂದು ಕರೆಯಲಾಗುತ್ತದೆ. ವಿಷು ಎಂಬ ಹೆಸರು ವಿಷುವತ್ ಸಂಕ್ರಾಂತಿ ಎಂಬ ಹೆಸರಿನಿಂದ ಬಂದಿದೆ. ಖಗೋಳಶಾಸ್ತ್ರದ ಪ್ರಕಾರ, ವಿಷುವತ್ ಸಂಕ್ರಾಂತಿ ಎಂದರೆ ಸೂರ್ಯನು ಆಕಾಶ ಸಮಭಾಜಕ ವೃತ್ತವನ್ನು ದಾಟುವ ವಿದ್ಯಮಾನ.

ವಿಷು ದಿನಾಂಕ ಮತ್ತು ಸಮಯ:

ಈ ವರ್ಷ ಅಂದರೆ 2025ರಲ್ಲಿ ವಿಷು ಹಬ್ಬವನ್ನು ಏಪ್ರಿಲ್ 14 ರ ಸೋಮವಾರದಂದು ಆಚರಿಸಲಾಗುತ್ತದೆ. ದ್ರಿಕ್ ಪಂಚಾಂಗದ ಪ್ರಕಾರ, ವಿಷು ಕಣಿ ಎಂದು ಕರೆಯಲ್ಪಡುವ ಅತ್ಯಂತ ಪ್ರಮುಖ ಧಾರ್ಮಿಕ ಸಮಯವನ್ನು ಬೆಳಿಗ್ಗೆ 3.30.

ವಿಷು ಎಂದರೇನು?

ವಿಷುವನ್ನು ಮಲಯಾಳಿಗರ ಹೊಸ ವರ್ಷ ಎಂದೂ ಕರೆಯುತ್ತಾರೆ . “ವಿಶು” ಎಂಬ ಪದವು ಸಂಸ್ಕೃತದಿಂದ ಬಂದಿದೆ ಮತ್ತು ಇದರ ಅರ್ಥ ಸಮಾನ, ಏಕೆಂದರೆ ಹಗಲು ಮತ್ತು ರಾತ್ರಿ ಬಹುತೇಕ ಸಮಾನವಾಗಿರುವ ಸಮಯ. ಈ ಹಬ್ಬವು ಜ್ಯೋತಿಷ್ಯದಲ್ಲಿ ಮೇಷ ರಾಶಿಗೆ (ಮೇಷ) ಸೂರ್ಯನ ಚಲನೆಯನ್ನು ಗುರುತಿಸುತ್ತದೆ, ಇದನ್ನು ಹೊಸ ಆರಂಭದ ಸಮಯವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ
ಭಾನುವಾರ ಈ ವಸ್ತು ಖರೀದಿಸುವ ವ್ಯಕ್ತಿ ಶ್ರೀಮಂತನಾಗುತ್ತಾನೆ
ಪತ್ನಿಯನ್ನು ಹಿಂಸಿಸುವ ಪತಿಗೆ ಏನು ಶಿಕ್ಷೆ? ಗರುಡ ಪುರಾಣದ ಹೇಳುವುದೇನು?
ಮದುವೆಗೂ ಮುನ್ನ ಗ್ರಹ ಶಾಂತಿ ಪೂಜೆ ಮಾಡಿಸುವುದೇಕೆ? ಏನಿದರ ಮಹತ್ವ?
ಊಟ ಮಾಡಿದ ನಂತರ ಬಾಳೆ ಎಲೆಯನ್ನು ಒಳಮುಖವಾಗಿ ಮಡಚುವುದೇಕೆ?

ಇದನ್ನೂ ಓದಿ: ಚಿನ್ನದ ಉಂಗುರವನ್ನು ಯಾವ ಬೆರಳಿಗೆ ಧರಿಸಲೇ ಬಾರದು?

ವಿಷು ಹಬ್ಬದ ಹಿಂದಿನ ಪೌರಾಣಿಕ ಕಥೆ:

ಹಿಂದೂ ಪುರಾಣದ ಪ್ರಕಾರ, ಶ್ರೀಕೃಷ್ಣನು ಈ ದಿನದಂದು ನರಕಾಸುರನೆಂಬ ರಾಕ್ಷಸನನ್ನು ಕೊಂದನು. ಈ ಕಥೆಯು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ತೋರಿಸುತ್ತದೆ ಮತ್ತು ಇದು ಹಬ್ಬದ ಸಂದೇಶದ ಪ್ರಮುಖ ಭಾಗವಾಗಿದೆ.

ವಿಷು ಕಣಿ, ಅತ್ಯಂತ ಮಹತ್ವದ ಆಚರಣೆ:

ವಿಷುವಿನ ಪ್ರಮುಖ ಭಾಗಗಳಲ್ಲಿ ಒಂದು ವಿಷು ಕಣಿ. ಅಂದರೆ ಶ್ರೀಕೃಷ್ಣನ ವಿಗ್ರಹವನ್ನು ಇಟ್ಟು ಅದರ ಮುಂದೆ ಕೊನ್ನಾ ಹೂವು (ಹಳದಿ ಬಣ್ಣದ ವಿಶೇಷ ಹೂವುಗಳು), ಹಣ್ಣು, ತರಕಾರಿ, ಒಂದು ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ,ಸಾಂಪ್ರದಾಯಿಕ ಲೋಹದ ಕನ್ನಡಿ, ಪವಿತ್ರ ಗ್ರಂಥ (ಭಗವದ್ಗೀತೆಯಂತೆ)ಗಳನ್ನಿಟ್ಟು ಪೂಜಿಸುದು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:57 pm, Sun, 13 April 25