ಜೀವನದಲ್ಲಿ ಕೆಲವೊಮ್ಮೆ ನಾವು ಕಂಡ ಕನಸುಗಳು ನನಸಾಗಬಹುದು ಅಥವಾ ಆಗದಿರಬಹುದು ಆದರೆ ಅದರ ಹಿಂದಿನ ಅರ್ಥ ಮತ್ತು ಅದು ಯಾವುದರ ಮುನ್ಸೂಚನೆ ಎಂಬುದನ್ನು ತಿಳಿಯಬಯಸುವುದು ಸಹಜ. ಏಕೆಂದರೆ ಕನಸಿನ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಕನಸಿಗೂ ಅರ್ಥವಿರುತ್ತವೆ. ಇದಕ್ಕೆ ಅನುಗುಣವಾಗಿ ಎಂದಾದರೂ ನಿಮ್ಮ ಕನಸಿನಲ್ಲಿ ನೀವೇ ಮದುವೆಯಾಗುತ್ತಿರುವುದನ್ನು ನೋಡಿದರೆ, ಅಥವಾ ಮದುವೆಗೆ ಸಂಬಂಧಿಸಿದ ಯಾವುದೇ ರೀತಿಯ ಕನಸು ಬಿದ್ದರೆ ಅದು ನಿಜ ಜೀವನಕ್ಕೆ ಹೇಗೆ ಸಂಬಂಧಿಸಿರುತ್ತದೆ? ಅದರ ಅರ್ಥವೇನು? ತಿಳಿದುಕೊಳ್ಳಬೇಕಾ! ಈ ಲೇಖನ ಓದಿ.
ಕನಸಿನಲ್ಲಿ ನೀವು ಯಾರದ್ದಾದರೂ ವಿವಾಹ ಮೆರವಣಿಗೆಯನ್ನು ನೋಡಿದಲ್ಲಿ, ಈ ಕನಸು ನಿಮಗೆ ಶುಭ ಸೂಚಕವಾಗಿದೆ. ಇದರರ್ಥ ನಿಮ್ಮ ಯೋಚನೆಯಲ್ಲಿ ಯಾವುದೇ ರೀತಿಯ ಕೆಡುಕಿಲ್ಲ. ನಿಮ್ಮಲ್ಲಿ ಒಳ್ಳೆಯ ಯೋಚನೆಗಳು ತುಂಬಿಕೊಂಡಿದೆ ಎನ್ನುವುದಾಗಿದೆ. ಇದರಿಂದ ನಿಮಗೆ ಸಮಾಜದಲ್ಲಿ ಗೌರವವು ಪ್ರಾಪ್ತವಾಗುತ್ತದೆ.
ನಿಮ್ಮ ಕನಸಿನಲ್ಲಿ ಮದುವೆಯ ಉಡುಪಿನಲ್ಲಿರುವ ಮಹಿಳೆಯನ್ನು ನೋಡಿದರೆ, ಅದು ನಿಮ್ಮ ಜೀವನದಲ್ಲಿ ಏನಾದರೂ ಒಳ್ಳೆಯ ಘಟನೆಗಳು ನಡೆಯಲಿದೆ ಎಂಬರ್ಥವನ್ನು ನೀಡುತ್ತದೆ. ನಿಮ್ಮ ಜೀವನದಲ್ಲಿ ಯಾವುದಾದರೂ ತೊಂದರೆಗಳಿದ್ದು ಅದರ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಆ ಸಮಸ್ಯೆ ದೂರವಾಗುತ್ತದೆ.
ಕನಸಿನ ಶಾಸ್ತ್ರದ ಪ್ರಕಾರ, ರಾತ್ರಿ ಕನಸಿನಲ್ಲಿ ನಿಮ್ಮ ಮದುವೆಯಾದಂತೆ ಕಾಣುವುದು ಒಳ್ಳೆಯದಲ್ಲ. ಈ ರೀತಿ ಕಂಡಲ್ಲಿ ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಬಹುದು. ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ಗೌರವ ಕಡಿಮೆಯಾಗಬಹುದು. ನೀವು ವಿವಾಹಿತರಾಗಿದ್ದರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಇದನ್ನೂ ಓದಿ: ಮದುವೆ ಸಮಯದಲ್ಲಿ ವಧು ವರರಿಗೆ ಅರಶಿನ ಹಚ್ಚುವುದರ ಹಿಂದಿನ ಕಾರಣಗಳು
ಕನಸಿನಲ್ಲಿ ಯಾರದೋ ಅಥವಾ ನಿಮ್ಮ ಮದುವೆ ಮುರಿದು ಬೀಳುವುದನ್ನು ನೀವು ನೋಡಿದರೆ, ಈ ಕನಸು ನಿಮಗೆ ಒಳ್ಳೆಯದಲ್ಲ. ಇದು ಜೀವನದಲ್ಲಿ ಬರುವ ಕೆಲವು ಅಡೆತಡೆಗಳ ಮುನ್ಸೂಚನೆಯಾಗಿರಬಹುದು ಎಚ್ಚರವಾಗಿರಿ.
ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ಟಿವಿ9 ಕನ್ನಡ ಖಚಿತಪಡಿಸುವುದಿಲ್ಲ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ