
Horseshoe Vastu: ಅದೃಷ್ಟದ ಸಂಕೇತವಾಗಿರುವ ಕುದುರೆ ಶೂ (ಲಕಿ ಹಾರ್ಸ್ ಶೂ) ಬಳಕೆ ಪ್ರವೃತ್ತಿಯು ಹೊಸದೇನಲ್ಲ. ವಾಸ್ತವವಾಗಿ ಇದು ಭಾರತ, ಚೀನಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ನೂರಾರು ವರ್ಷಗಳಿಂದ ಜನಪ್ರಿಯವಾಗಿದೆ (Vastu Shastra, Feng Shui energy). ಕುದುರೆ ಶೂ/ ಬೂಟು, ಕುದುರೆ ಲಾಳ, ಘೋಡಾ ಕಾ ನಾಲ್ ಎಂದೆಲ್ಲಾ ಜನಪ್ರಿಯವಾಗಿರುವ ಹಾರ್ಸ್ ಶೂ ಅನಾದಿ ಕಾಲದಿಂದಲೂ ಮನೆಯ ಬಾಗಿಲುಗಳ ಮೇಲೆ ನೇತುಹಾಕುವುದು ಜನಪ್ರಿಯವಾಗಿದೆ. ನಾವೀಗ ಹಾರ್ಸ್ ಶೂ ವಾಸ್ತು ಬಗ್ಗೆ ಸ್ವಲ್ಪ ಹೆಚ್ಚು ಅನ್ವೇಷಿಸೋಣ. ಹಾರ್ಸ್ ಶೂ ಲಕ್ಕಿ ಚಾರ್ಮ್ ಇತಿಹಾಸವನ್ನು ಸ್ವಲ್ಪ ಕೆದುಕೋಣ. ಹಾರ್ಸ್ ಶೂ – ಘೋಡಾ ಕಾ ನಾಲ್ ವಿಶ್ವದಾದ್ಯಂತ ಅತ್ಯಂತ ಸಾಮಾನ್ಯ ಅದೃಷ್ಟದ ಮೋಡಿಗಳಲ್ಲಿ ಒಂದಾಗಿದೆ. ಇದು ನಿಮ್ಮ ಕುಟುಂಬಕ್ಕೆ ಅದೃಷ್ಟವನ್ನು ತಂದುಕೊಡುತ್ತದೆ ಮತ್ತು ದುರದೃಷ್ಟದಿಂದ ರಕ್ಷಣೆ ನೀಡುತ್ತದೆ. ಆಧ್ಯಾತ್ಮಿಕ ಶಕ್ತಿಯನ್ನು ಮನೆಯ ದಿಕ್ಕಿಗೆ ಆಕರ್ಷಿಸುತ್ತದೆ. ಹಾರ್ಸ್ ಶೂ ಎಂದರೇನು?: ಹಾರ್ಸ್ ಶೂ ಎಂದರೆ U ಅಥವಾ ವಿಸ್ತೃತ ವೃತ್ತಾಕಾರದ ಎರಕಹೊಯ್ದ ಕಬ್ಬಿಣದ ತುಂಡು. ಕುದುರೆಯ ಗೊರಸುಗಳನ್ನು (ಪಾದ ಭಾಗ) ಗಾಯಗಳಿಂದ ರಕ್ಷಿಸಲು ಇದನ್ನು ಗೊರಸುಗಳಿಗೆ (hooves) ಜೋಡಿಸಲಾಗುತ್ತದೆ. ಕುದುರೆಗಳ ಗೊರಸುಗಳು ಸ್ವಾಭಾವಿಕವಾಗಿ ಕಠಿಣವಾಗಿರುವುದಿಲ್ಲ, ಬದಲಿಗೆ ಮೃದುವಾಗಿರುತ್ತದೆ; ಅದು ಕುದುರೆಯ ಸೂಕ್ಷ್ಮ ಭಾಗವಾಗಿರುತ್ತದೆ. ಆದ್ದರಿಂದ, ಕುದುರೆಗಳಿಗೆ ಕಡ್ಡಾಯವಾಗಿ ಹಾರ್ಸ್ ಶೂಗಳನ್ನು ಅಳವಡಿಸಲಾಗುತ್ತದೆ. ಇದರಿಂದ ಅವುಗಳಿಗೆ ನೋವು ಕಡಿಮೆಯಾಗುತ್ತದೆ. ಕುದುರೆಗಳಿಗೆ ಕಬ್ಬಿಣದ ಹಾರ್ಸ್ ಶೂಗಳನ್ನು ಹಾಕುವುದಕ್ಕೆ ವಿಶೇಷ ಪರಿಣಿತ ಬೇಕಾಗುತ್ತದೆ; ಅದನ್ನು ಕಮ್ಮಾರರು ಅಳವಡಿಸುತ್ತಾರೆ. ಇನ್ನು ಈ ಹಿಂದೆ ಹಾರ್ಸ್ ಶೂಗಳ ಹೊರತಾಗಿ, ಏಷ್ಯಾ ಖಂಡದಲ್ಲಿ ಕಚ್ಚಾ ಚರ್ಮಗಳು, ರೋಮನ್...