ಭೈರವಾಷ್ಟಮಿ ಆಚರಣೆ ಯಾವಾಗ? ಪೂಜಾ ವಿಧಾನ ಹೇಗಿರಬೇಕು?

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 31, 2024 | 5:09 PM

ಶಿವಪುರಾಣದ ಪ್ರಕಾರ ಕಲಾಭೈರವ ಶಿವನ ಭಾಗದಿಂದ ಹುಟ್ಟಿಕೊಂಡವನು, ಹಾಗಾಗಿ ಈ ದಿನವನ್ನು ಕಾಲಭೈರವಾಷ್ಟಮಿ ಅಥವಾ ಭೈರವಾಷ್ಟಮಿ ಎಂದೂ ಕೂಡ ಕರೆಯಲಾಗುತ್ತದೆ. ಈ ದಿನ, ವ್ರತಾಚರಣೆಯನ್ನು ಕೈಗೊಳ್ಳುವುದರಿಂದ ದೇವ ಶಿವನು, ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ, ಶುಭ ಫಲವನ್ನು ನೀಡುತ್ತಾನೆ ಎನ್ನುವ ನಂಬಿಕೆಯಿದೆ. ಈ ತಿಂಗಳ ಕಲಾಷ್ಟಮಿಯನ್ನು ಫೆಬ್ರವರಿ 2 ರಂದು (ಶುಕ್ರವಾರ) ಆಚರಣೆ ಮಾಡಲಾಗುತ್ತದೆ. ಹಾಗಾದರೆ ಈ ದಿನದ ಮಹತ್ವ ಮತ್ತು ಪೂಜಾ ವಿಧಾನಗಳ ಬಗ್ಗೆ ತಿಳಿದುಕೊಳ್ಳಬೇಕಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಭೈರವಾಷ್ಟಮಿ ಆಚರಣೆ ಯಾವಾಗ? ಪೂಜಾ ವಿಧಾನ ಹೇಗಿರಬೇಕು?
Follow us on

ಪ್ರತಿ ತಿಂಗಳ ಕೃಷ್ಣ ಪಕ್ಷದ ಅಷ್ಟಮಿಯಂದು ಕಲಾಷ್ಟಮಿ ಉಪವಾಸವನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಶುಭ ಎಂದು ಪುರಾಣಗಳಲ್ಲಿಯೂ ಕೂಡ ಉಲ್ಲೇಖಿಸಲಾಗಿದೆ. ಇನ್ನು ಶಿವಪುರಾಣದ ಪ್ರಕಾರ ಕಲಾಭೈರವ ಶಿವನ ಭಾಗದಿಂದ ಹುಟ್ಟಿಕೊಂಡವನು, ಹಾಗಾಗಿ ಈ ದಿನವನ್ನು ಕಾಲಭೈರವಾಷ್ಟಮಿ ಅಥವಾ ಭೈರವಾಷ್ಟಮಿ ಎಂದೂ ಕೂಡ ಕರೆಯಲಾಗುತ್ತದೆ. ಈ ದಿನ, ವ್ರತಾಚರಣೆಯನ್ನು ಕೈಗೊಳ್ಳುವುದರಿಂದ ದೇವ ಶಿವನು, ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ, ಶುಭ ಫಲವನ್ನು ನೀಡುತ್ತಾನೆ ಎನ್ನುವ ನಂಬಿಕೆಯಿದೆ. ಈ ತಿಂಗಳ ಕಲಾಷ್ಟಮಿಯನ್ನು ಫೆಬ್ರವರಿ 2 ರಂದು (ಶುಕ್ರವಾರ) ಆಚರಣೆ ಮಾಡಲಾಗುತ್ತದೆ. ಹಾಗಾದರೆ ಈ ದಿನದ ಮಹತ್ವ ಮತ್ತು ಪೂಜಾ ವಿಧಾನಗಳ ಬಗ್ಗೆ ತಿಳಿದುಕೊಳ್ಳಬೇಕಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಕಾಲಾಷ್ಟಮಿ ದಿನದ ಮಹತ್ವ:

ಹಿಂದೂ ಧರ್ಮದಲ್ಲಿ ಕಾಲಾಷ್ಟಮಿ ದಿನಕ್ಕೆ ತನ್ನದೆ ಆದ ಮಹತ್ವವಿದೆ. ಈ ಶುಭ ದಿನದಂದು ಉಪವಾಸ ಮಾಡಿ ಪ್ರಾರ್ಥನೆ ಸಲ್ಲಿಸುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಮತ್ತು ಶಿವನ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಕಾಲಭೈರವ ಶಿವನ ಉಗ್ರ ರೂಪವಾಗಿದ್ದು ಅವನನ್ನು ಪೂಜಿಸುವ ಮೂಲಕ, ಭಕ್ತರು ಎಲ್ಲಾ ರೀತಿಯ ದುಃಖಗಳಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗಿದೆ. ಅಲ್ಲದೆ ಕಾಲ ಭೈರವನು ತನ್ನ ಭಕ್ತರನ್ನು ಭಯ, ಮಾಟಮಂತ್ರ, ದುಷ್ಟ ಶಕ್ತಿಗಳಿಂದ ರಕ್ಷಿಸುತ್ತಾನೆ.

ಕಾಲಾಷ್ಟಮಿ ದಿನದ ಪೂಜಾ ಆಚರಣೆಗಳೇನು?

1. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆ ತೊಟ್ಟುಕೊಳ್ಳಿ.

2. ಮನೆ ಮತ್ತು ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ.

3. ಮರದ ಹಲಗೆ ಅಥವಾ ಮಣೆಯ ಮೇಲೆ ಶಿವನ ಫೋಟೋ ಇಟ್ಟು, ತುಳಸಿಯನ್ನು ಹೊರತುಪಡಿಸಿ ಬೇರೆ ಹೂವುಗಳಿಂದ ಅಲಂಕರಿಸಿ.

4. ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ ದೀಪ ಬೆಳಗಿಸಿ, ದೇವರಿಗೆ ಪ್ರಾರ್ಥನೆ ಸಲ್ಲಿಸಿ.

5. ಕಾಲ ಭೈರವ ದೇವಸ್ಥಾನ ಹತ್ತಿರದಲ್ಲಿರುವವರು ಸಂಜೆ ಸಮಯದಲ್ಲಿ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಿ ಬನ್ನಿ.

6. ಕೆಲವು ಕಡೆಗಳಲ್ಲಿ ಭಕ್ತರು ಸಾಸಿವೆ ಎಣ್ಣೆಯಿಂದ ದೀಪವನ್ನು ಬೆಳಗಿಸುವ ಮೂಲಕ ಕಾಲ ಭೈರವನನ್ನು ಪೂಜಿಸುತ್ತಾರೆ.

7. ಮನೆಯಲ್ಲಿ ತಯಾರಿಸಿದ ವಿಶೇಷ ಪ್ರಸಾದವನ್ನು ದೇವರಿಗೆ ಅರ್ಪಿಸಿ.

8. ಶಿವನ ಆಶೀರ್ವಾದ ಪಡೆಯಲು ಕಾಲ ಭೈರವ ಅಷ್ಟಕಂ ಪಠಿಸಿ.

ಇದನ್ನೂ ಓದಿ: ಸಂಪತ್ತು, ಸಮೃದ್ಧಿಯ ಒಡೆಯರಾಗಲು ಪರಿಣಾಮಕಾರಿ ಲಕ್ಷ್ಮೀ, ಕುಬೇರ ಮಂತ್ರ ಪಠಿಸಿ

ಈ ದಿನ ಯಾವ ಮಂತ್ರ ಪಠಣ ಮಾಡಬೇಕು?

1. ಓಂ ಕಾಲ ಭೈರವಯ ನಮಃ

2. ಓಂ ಶ್ರೀ ಕಾಲಭೈರವ ಬಸವಯ್ಯ ನಮಃ

3. ಓಂ ಹ್ರೀಂ ಬಟುಕಾಯ ಆಪದುದ್ಧಾರಣಾಯ ಕುರೂ ಕುರೂ ಬಟುಕಾಯ ಹ್ರೀಂ

4. ಓಂ ಭಯಹರಣಂ ಚ ಭೈರವಃ

5. ಓಂ ಭ್ರಾಂ ಕಾಲಭೈರವಾಯ ಫಟ್‌

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ