ಸಂಪತ್ತು, ಸಮೃದ್ಧಿಯ ಒಡೆಯರಾಗಲು ಪರಿಣಾಮಕಾರಿ ಲಕ್ಷ್ಮೀ, ಕುಬೇರ ಮಂತ್ರ ಪಠಿಸಿ
ಹಿಂದೂ ಧರ್ಮದಲ್ಲಿ ತಾಯಿ ಲಕ್ಷ್ಮೀ ದೇವಿ ಮತ್ತು ದೇವ ಕುಬೇರನನ್ನು ಸಂಪತ್ತಿನ ಅಧಿಪತಿಗಳು ಎಂದು ಕರೆಯಲಾಗುತ್ತದೆ. ಜೀವನದಲ್ಲಿ ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ಪಡೆದುಕೊಳ್ಳಲು ಲಕ್ಷ್ಮೀ, ಕುಬೇರ ಮಂತ್ರಗಳನ್ನು ಪಠಿಸುವುದು ಉತ್ತಮ ಎನ್ನಲಾಗುತ್ತದೆ. ಈ ಪ್ರತಿಯೊಂದು ಮಂತ್ರಗಳು ಕೂಡ ವಿಭಿನ್ನ ಉದ್ದೇಶವನ್ನು ಹೊಂದಿವೆ ಆದರೆ ಒಂದೇ ರೀತಿಯ ಫಲಿತಾಂಶಗಳನ್ನು ನೀಡುತ್ತದೆ. ಹಾಗಾಗಿ ಇಲ್ಲಿ ಕೆಲವು ಮಂತ್ರಗಳನ್ನು ನೀಡಲಾಗಿದ್ದು ಇವುಗಳನ್ನು ನಿತ್ಯವೂ ಪಠಣ ಮಾಡುವುದರಿಂದ ನಿಮಗೆ ಸಿಗುವ ಲಾಭಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ಲಕ್ಷ್ಮೀ ಮತ್ತು ಕುಬೇರ ಮಂತ್ರ;
-ಓಂ ಶ್ರೀ ಮಹಾಲಕ್ಷ್ಮಯೈ ಚ ವಿದ್ಮಹೇ ವಿಷ್ಣು ಪತ್ನ್ಯೈ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್ ಓಂ
-ಪದ್ಮಾನನೇ ಪದ್ಮ ಪದ್ಮಾಕ್ಷ್ಮೀ ಪದ್ಮ ಸಂಭವೇ ತಮ್ನೇ ಭಜಸಿ ಪದ್ಮಾಕ್ಷಿ ಯೇನ ಸೌಖ್ಯಂ ಲಭಾಮ್ಯಹಂ
-ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ ಅಷ್ಟ -ಲಕ್ಷ್ಮೀ ಮಮ ಗೃಹೇ ಧನಂ ಪುರಯ ಪುರಯ ನಮಃ
-ಓಂ ಅಕ್ಷಯ ಕುಬೇರಾಯ ವೈಶ್ರವಣಾಯ ಧನಧಾನ್ಯಾಧಿಪತಯೇ, ಧನಧಾನ್ಯಸಮೃದ್ಧಿ ಮೇ ದೇಹಿ ದಾಪಯ ಸ್ವಾಹಾ
-ಓಂ ಶ್ರೀಂ ಶ್ರೀಂ ಕ್ರೀಂ ಕ್ಲೀಂ ಶ್ರೀ ಲಕ್ಷ್ಮಿ ಮಮ ಗೃಹೇ ಧನ ಪೂರಯೇ, ಧನ ಪೂರಯೇ, ಚಿಂತಾಯೇಂ ದೂರಯೇ – ದೂರಯೇ ಸ್ವಾಹಾಃ
ಇದನ್ನೂ ಓದಿ: ಫೆಬ್ರವರಿಯಲ್ಲಿ ಯಾವ ಯಾವ ಹಬ್ಬಗಳ ಆಚರಣೆ ಮಾಡಲಾಗುತ್ತೆ, ಇಲ್ಲಿದೆ ಮಾಹಿತಿ
ಮೇಲೆ ನೀಡಿರುವ ಮಂತ್ರಗಳು ಲಕ್ಷ್ಮೀ ಮತ್ತು ಕುಬೇರ ಮಂತ್ರಗಳಾಗಿದ್ದು ಇವುಗಳನ್ನು ಪ್ರತಿನಿತ್ಯ ಪಠಣ ಮಾಡುವುದರಿಂದ ಆರ್ಥಿಕ ಸಮಸ್ಯೆ ದೂರವಾಗಿ ಸಂಪತ್ತು, ಸಮೃದ್ಧಿ ದೊರೆಯುತ್ತದೆ. ಯಾವ ರೀತಿಯಲ್ಲಿ ಮತ್ತು ಎಷ್ಟು ಬಾರಿ ಪಠಣ ಮಾಡಬೇಕು? ಇಲ್ಲಿದೆ ಮಾಹಿತಿ.
– ಸಂಪತ್ತನ್ನು ಗಳಿಸಲು ಶ್ರಮದ ಜೊತೆಗೆ ದೇವರ ಆಶೀರ್ವಾದವೂ ಕೂಡ ಮುಖ್ಯವಾಗುತ್ತದೆ. ಹಾಗಾಗಿ ಲಕ್ಷ್ಮೀ ದೇವಿ ಮತ್ತು ಕುಬೇರ ದೇವನನ್ನು ಪ್ರತಿನಿತ್ಯವೂ ನೆನೆಯಬೇಕು ಮತ್ತು ಅವರಿಗೆ ಪ್ರೀಯವಾದ ಮಂತ್ರ ಪಠಿಸುವ ಮೂಲಕ ಅವರ ಆಶೀರ್ವಾದ ಪಡೆಯಬೇಕು.
-ಸಾಮಾನ್ಯವಾಗಿ ಕುಬೇರ ದೇವನ ಮಂತ್ರಗಳನ್ನು ಪಠಣ ಮಾಡುವಾಗ ದಕ್ಷಿಣಾಭಿಮುಖವಾಗಿ ಕುಳಿತುಕೊಳ್ಳಿ.
-ಲಕ್ಷ್ಮೀ ದೇವಿ ಮತ್ತು ಕುಬೇರ ದೇವನ ಮಂತ್ರಗಳನ್ನು 3 ತಿಂಗಳ ಕಾಲ ನಿಯಮಿತವಾಗಿ ಜಪಿಸುವುದರಿಂದ ಯಾವುದೇ ರೀತಿಯ ಧನ- ಧಾನ್ಯಗಳ ಕೊರತೆಯಾಗುವುದಿಲ್ಲ.
-ಈ ಮಂತ್ರಗಳನ್ನು ಪ್ರತಿನಿತ್ಯವೂ ಪಠಿಸಬೇಕು. ಯಾವುದೇ ಭಂಗ ಬಾರದ ಹಾಗೆ ಈ ಮಂತ್ರಗಳನ್ನು ಪಠಿಸಿ. ಇಲ್ಲವಾದಲ್ಲಿ ಇದರಿಂದ ಹಾನಿಯಾಗಬಹುದು.
-ಪ್ರತಿನಿತ್ಯ ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸಿ. ಆ ಮೊದಲು ನೀವು ಶುದ್ದವಾಗಿ, ಸ್ವಚ್ಛ ಬಟ್ಟೆ ಧರಿಸುವುದನ್ನು ಮರೆಯಬೇಡಿ.
-ಪ್ರತಿನಿತ್ಯ ಪಠಣ ಮಾಡಲು ಸಾಧ್ಯವಿಲ್ಲದವರು ಶುಕ್ರವಾರವಾದರೂ ಭಕ್ತಿಯಿಂದ ಈ ಮಂತ್ರಗಳನ್ನು ಜಪಿಸಬೇಕು.
-ಈ ಮಂತ್ರಗಳನ್ನು ಪಠಿಸುವುದರಿಂದ ನಾವು ಜೀವನದಲ್ಲಿ ಯಾವುದೇ ರೀತಿಯ ಹಣದ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ.
-ಲಕ್ಷ್ಮೀ ದೇವಿ ಮತ್ತು ಕುಬೇರ ಮಂತ್ರಗಳು ವ್ಯಕ್ತಿಯ ಜೀವನದಲ್ಲಿ ಐಶ್ವರ್ಯ, ಸ್ಥಾನ, ಪ್ರತಿಷ್ಠೆ, ಸೌಭಾಗ್ಯ ಲಭಿಸುವಂತೆ ಮಾಡುತ್ತದೆ ಎನ್ನುವ ನಂಬಿಕೆ ಇದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ