2 ಗ್ರಹಗಳು ಒಂದೇ ರಾಶಿಯಲ್ಲಿ ಭೇಟಿ; ಈ 3 ರಾಶಿಯವರಿಗೆ ಆರ್ಥಿಕ ಯಶಸ್ಸು

ರಾಹು ಮತ್ತು ಬುಧ ಗ್ರಹಗಳ ಸಂಯೋಗಗಳಿಂದ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳಲಿವೆ. ಆದರೆ ಈ ಸಂಯೋಜನೆಯು 3 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಅವಧಿಯಲ್ಲಿ ಈ 3 ರಾಶಿಯವರಿಗೆ ಭವಿಷ್ಯ ಉಜ್ವಲವಾಗಿರುತ್ತದೆ. ಷೇರುಗಳು, ಲಾಟರಿ ಇತ್ಯಾದಿಗಳಿಂದ ಆರ್ಥಿಕ ಲಾಭದ ಸಾಧ್ಯತೆ ಇದೆ.

2 ಗ್ರಹಗಳು ಒಂದೇ ರಾಶಿಯಲ್ಲಿ ಭೇಟಿ; ಈ 3 ರಾಶಿಯವರಿಗೆ  ಆರ್ಥಿಕ ಯಶಸ್ಸು
Image Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on:Jan 31, 2024 | 5:48 PM

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ 7 ರಂದು ರಾಹು ಮತ್ತು ಬುಧ ಗ್ರಹ ಮೀನ ರಾಶಿಯನ್ನು ಪ್ರವೇಶಿಸಲಿದೆ. ಗ್ರಹಗಳ ಸಂಯೋಗದ ಶುಭ ಮತ್ತು ಅಶುಭ ಪರಿಣಾಮಗಳನ್ನು ಎಲ್ಲಾ ರಾಶಿಗಳ ಜನರ ಜೀವನದಲ್ಲಿ ಕಾಣಬಹುದು. ಈ ಎರಡು ಗ್ರಹಗಳ ಸಂಯೋಗವು ಸುಮಾರು 15 ವರ್ಷಗಳ ನಂತರ ರೂಪುಗೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳಲಿವೆ. ಆದರೆ ಈ ಸಂಯೋಜನೆಯು 3 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಅವಧಿಯಲ್ಲಿ ಈ 3 ರಾಶಿಯವರಿಗೆ ಭವಿಷ್ಯ ಉಜ್ವಲವಾಗಿರುತ್ತದೆ. ಷೇರುಗಳು, ಲಾಟರಿ ಇತ್ಯಾದಿಗಳಿಂದ ಆರ್ಥಿಕ ಲಾಭದ ಸಾಧ್ಯತೆ ಇದೆ.

ಈ ಮೂರು ರಾಶಿಯವರಿಗೆ ಸುವರ್ಣ ಅವಧಿ ಬರಲಿದೆ:

ಮಿಥುನ ರಾಶಿ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ರಾಶಿಯವರು ರಾಹು ಮತ್ತು ಬುಧ ಗ್ರಹಗಳ ಸಂಯೋಗದಿಂದ ಶುಭ ಲಾಭಗಳನ್ನು ಪಡೆಯುತ್ತಾರೆ. ವ್ಯಕ್ತಿಯು ವೃತ್ತಿಜೀವನದಲ್ಲಿ ಯಶಸ್ಸನ್ನು ಜೊತೆಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತಾರೆ. ನೀವು ವಿದೇಶದಲ್ಲಿ ಅಧ್ಯಯನ ಮಾಡಲು ಪ್ರಯತ್ನಿಸಿದರೆ, ನಿಮಗೆ ಯಶಸ್ಸು ಸಿಗಲಿದೆ. ಇದರೊಂದಿಗೆ ನೀವು ವ್ಯಾಪಾರ ಮತ್ತು ಹೊಸ ಉದ್ಯೋಗವನ್ನು ಪ್ರಾರಂಭಿಸಬಹುದು. ಈ ಸಮಯದಲ್ಲಿ ವ್ಯಕ್ತಿಯು ನಿರೀಕ್ಷಿತ ಪ್ರಗತಿಯನ್ನು ಪಡೆಯುತ್ತಾನೆ. ತಂದೆಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ಪೂರ್ವಿಕರ ಆಸ್ತಿಯಲ್ಲಿ ಪಾಲು ಪಡೆಯಬಹುದು. ಈ ಸಮಯದಲ್ಲಿ ಆರ್ಥಿಕ ಲಾಭದ ಸಂಪೂರ್ಣ ಸಾಧ್ಯತೆಯಿದೆ.

ಕರ್ಕಾಟಕ ರಾಶಿ:

ಈ ರಾಶಿಯವರಿಗೆ ಒಂಬತ್ತನೇ ಮನೆಯಲ್ಲಿ ರಾಹು ಮತ್ತು ಬುಧ ಗ್ರಹಗಳ ಸಂಯೋಗ ರೂಪುಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಕರ್ಕ ರಾಶಿಯವರಿಗೆ ಅದೃಷ್ಟ ಒಲಿಯಲಿದೆ. ಅದೇ ಸಮಯದಲ್ಲಿ, ಧಾರ್ಮಿಕ ಚಟುವಟಿಕೆಗಳಲ್ಲಿ ವ್ಯಕ್ತಿಯ ಆಸಕ್ತಿಯೂ ಹೆಚ್ಚಾಗುತ್ತದೆ. ವಿದೇಶ ಪ್ರಯಾಣದ ಸಾಧ್ಯತೆ ಇದೆ. ಇದರಿಂದ ಅನುಕೂಲವಾಗಲಿದೆ. ನೀವು ಯಾವುದೇ ಹೊಸ ವ್ಯವಹಾರ ಅಥವಾ ಕೆಲಸವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ನೀವು ಅದರಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಸಂಪತ್ತಿನ ಆಗಮನದಿಂದ ಕುಟುಂಬ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಬಹುದು.

ಇದನ್ನೂ ಓದಿ: ನಿಮ್ಮ ಮನೆಯಲ್ಲಿ ಈ ದಿಕ್ಕಿಗೆ ಕನ್ನಡಿ ಇಟ್ಟರೆ ಅದೃಷ್ಟ ಖುಲಾಯಿಸುತ್ತದೆ

ಕುಂಭ ರಾಶಿ:

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಹು ಮತ್ತು ಬುಧ ಗ್ರಹಗಳ ಸಂಯೋಗ ಕುಂಭ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ.ವ್ಯಾಪಾರದಲ್ಲಿಯೂ ಹೆಚ್ಚಿನ ಲಾಭವಾಗಲಿದೆ. ನೀವು ಉತ್ತಮ ಯೋಜನೆಯನ್ನು ಸಹ ಪಡೆಯಬಹುದು. ಇದರಿಂದ ಆರ್ಥಿಕ ಲಾಭ ಖಚಿತ. ಈ ಅವಧಿಯಲ್ಲಿ, ನಿಮ್ಮ ಮಾತಿನ ಬಲದಿಂದ ನಿಮ್ಮ ಕೆಲಸವು ಪೂರ್ಣಗೊಳ್ಳುತ್ತದೆ. ಉದ್ಯೋಗಸ್ಥರು ಕಚೇರಿಯಲ್ಲಿ ಬಾಸ್‌ನ ಹೃದಯದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ನೀವು ಅದರಿಂದ ಪ್ರಯೋಜನ ಪಡೆಯುತ್ತೀರಿ. ಅಲ್ಲದೆ, ಈ ಅವಧಿಯು ಬ್ಯಾಂಕಿಂಗ್, ಮಾರ್ಕೆಟಿಂಗ್ ಮತ್ತು ಮಾಧ್ಯಮಕ್ಕೆ ಸಂಬಂಧಿಸಿದ ಜನರಿಗೆ ಹೆಚ್ಚು ಲಾಭವಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:42 pm, Wed, 31 January 24