Rashi Bhavishya: ಇಂದು ನಿಮ್ಮ ಪ್ರೇಮಿಯನ್ನು ವಿವಾಹವಾಗಲು ಕುಟುಂಬದಿಂದ ಒಪ್ಪಿಗೆ ಸಿಗಬಹುದು

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಜನವರಿ 31) ಭವಿಷ್ಯಹೇಗಿದೆ ಎಂಬುದು ಇಲ್ಲಿದೆ.

Rashi Bhavishya: ಇಂದು ನಿಮ್ಮ ಪ್ರೇಮಿಯನ್ನು ವಿವಾಹವಾಗಲು ಕುಟುಂಬದಿಂದ ಒಪ್ಪಿಗೆ ಸಿಗಬಹುದು
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: Jan 31, 2024 | 12:15 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಜನವರಿ​​​​ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಉತ್ತರಾಷಾಢಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಸುಕರ್ಮಾ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 29 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:46 ರಿಂದ 02:012ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:28 ರಿಂದ 09:54ರ ವರೆಗೆ, ಗುಳಿಕ ಕಾಲ 11:20 ರಿಂದ ಮಧ್ಯಾಹ್ನ 12:46ರ ವರೆಗೆ.

ಸಿಂಹ ರಾಶಿ: ಇಂದು ನಿಮ್ಮ ಪ್ರೇಮಿಯನ್ನು ವಿವಾಹವಾಗಲು ಕುಟುಂಬದಿಂದ ಒಪ್ಪಿಗೆ ಸಿಗಬಹುದು. ನಿಮ್ಮ ವಿರೋಧಿಗಳು ನಿಮ್ಮ ಸಾಹಸವನ್ನು ಮೆಚ್ಚಬಹುದು. ನೀವು ಇಂದು ನಿಮ್ಮ ಕುಟುಂಬದ ಜೊತೆ ಸಮಯ ಕಳೆಯಬೇಕು ಎಂದುಕೊಂಡವರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು, ಅವರ ಸಾಧನೆಗಾಗಿ ಸಮ್ಮಾನಿಸಬಹುದು. ಮಾರುಕಟ್ಟೆ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ ಇರುತ್ತದೆ. ಸಿಕ್ಕ ಯಶಸ್ಸನ್ನು ಲಾಭವಾಗಿಸಿಕೊಳ್ಳುವಿರಿ. ಸಂಗಾತಿಯ ಪ್ರೀತಿಯು ನಿಮಗೆ ಅಚ್ಚರಿಯನ್ನು ಉಂಟುಮಾಡೀತು. ತೆಗಳಿಕೆಗಳನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸಿ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ ಕಾರಣ ಸಿಟ್ಟಾಗಬಹುದು. ಆದಾಯದ ಮೂಲಗಳ ಸಂಖ್ಯೆ ಹೆಚ್ಚಾಗುವುದು.‌ ಬಹಳ ದಿನಗಳಿಂದ ಮರೆತುಹೋಗಿದ್ದ ಸಂಗತಿಯನ್ನು ನೆನಪಿಸಿಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿಯನ್ನು ಕೇಳುವ ಒತ್ತಾಯವಿದ್ದರೂ ಧೈರ್ಯ ಸಾಲದು.

ಕನ್ಯಾ ರಾಶಿ: ಈ ದಿನದ ಆರಂಭವು ನಿಮಗೆ ನಕಾರತ್ಮಕ ಮಾತಿನಿಂದ ಅಸರಂಭವಾಗಬಹುದು. ಇಂದು ಯಾವುದಾದರೂ ಪ್ರಮುಖ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಂಡು ನಿಶ್ಚಿಂತರಾಗಿ. ಬೇರೆ ವಿಚಾರಗಳ ಬಗ್ಗೆ ಯಾವುದೇ ಚಿಂತೆ ಬೇಡ. ಪ್ರೇಮ ಸಂಬಂಧಗಳಲ್ಲಿ ಭಾವುಕರಾಗಬಹುದು. ಇತರರ ಬಗ್ಗೆ ಅಸ್ವಾಭಾವಿಕ ಆಲೋಚನೆ ಮಾಡುವುದನ್ನು ಬಿಡಿ. ತಂದೆಯ ಜೊತೆ ಹಣಕಾಸಿನ ವಿಚಾರಕ್ಕೆ ಜಗಳವಾಗಬಹುದು. ಕೋಪದಿಂದ ಶಾಂತವಾಗಲು ಹಲವಾರು ದಾರಿಗಳನ್ನು ಕಂಡುಕೊಳ್ಳುವಿರಿ. ಬಂಧುಗಳ ಜೊತೆ ಆತ್ಮೀಯ ಒಡನಾಟ ಮಾಡುವಿರಿ. ಇನ್ನೊಬ್ಬರ ಅಹಂಕಾರಕ್ಕೆ ಸೊಪ್ಪು ಹಾಕುವುದು ಬೇಡ. ನಿರ್ಲಕ್ಷ್ಯದಿಂದ ಎಲ್ಲವೂ ಸಾಧ್ಯ. ಹೂಡಿಕೆಯ ವಿಚಾರವಾಗಿ ಚರ್ಚಿಸುವಿರಿ. ಮಿತ್ರರನ್ನು ಅನುಮಾನದಿಂದ ಕಾಣಬೇಕಾಗುವುದು. ಸಹಾಯ ಮಾಡಲು ಹೋಗಿ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ನೂತನ ಗೃಹದ ಖರೀದಿಯ ಬಗ್ಗೆ ಸದ್ಯ ಮಾತುಕತೆ ಬೇಡ. ಯಾವ ವಸ್ತುವನ್ನೂ ಒತ್ತಾಯದಿಂದ ಪಡೆಯಬೇಡಿ.

ತುಲಾ ರಾಶಿ: ಇಂದು ಉಂಟಾದ ನಿಮ್ಮ ಹಣಕಾಸಿನ ಸಮಸ್ಯೆಯು ಯಾರಿಂದಲೋ ಬಗೆಹರಿಯುತ್ತವೆ. ನಿಮ್ಮ ಇಚ್ಛೆಯನ್ನು ಪೂರ್ಣ ಮಾಡಿಕೊಳ್ಳುವಿರಿ. ರಂಗಭೂಮಿಗೆ ಸಂಬಂಧಿಸಿದ ಕೆಲವು ಪ್ರಮುಖ ಅವಕಾಶಗಳು ಆಸಕ್ತರಿಗೆ ಸಿಗಬಹುದು. ನೀವು ಅನಿರೀಕ್ಷಿತವಾಗಿ ಕೆಲವು ದೊಡ್ಡ ಯೋಜನೆಗಳನ್ನು ಪಡೆಯಬಹುದು. ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ನಿಮ್ಮ ತಪ್ಪನ್ನು ಎಲ್ಲರೆದು ಒಪ್ಪಿಕೊಳ್ಳಲು ಆಗದು. ಅಧಿಕ ಆಸ್ತಿಯೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ನಿದ್ರೆಯಿಲ್ಲದೇ ಚಿಂತೆ ಆರಂಭವಾಗುವುದು. ಮಾತನ್ನು ಕಡಿಮೆ ಮಾಡಿ ಕಾರ್ಯದಲ್ಲಿ ತೋರಿಸಿ. ಅನಪೇಕ್ಷಿತ ವಿಚಾರದ ಬಗ್ಗೆ ಚರ್ಚೆ ಬೇಡ. ಸುಮ್ಮನೇ ಸಮಯವನ್ನು ಹಾಳು ಮಾಡಿಕೊಳ್ಳುವಿರಿ. ಉದ್ಯಮದಲ್ಲಿ ಕಡಿಮೆ ಲಾಭವು ಸಮಾಧಾನ ತರದು. ಉದ್ಯೋಗದಲ್ಲಿ ಒತ್ತಡವನ್ನು ನಿಭಾಯಿಸಲು ಒದ್ದಾಡುವಿರಿ.

ವೃಶ್ಚಿಕ ರಾಶಿ: ಇಂದು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯವಾಗಿರುವುದು. ನಿಮ್ಮ ಆದಾಯದ ಮೂಲಗಳಿಂದ ಆದಾಯವು ಕಡಿಮೆಯಾಗಬಹುದು. ಆತುರದಲ್ಲಿ ಯಾವುದೇ ದೊಡ್ಡ ಮೊತ್ತದ ಹೂಡಿಕೆಯನ್ನು ಮಾಡುವುದು ಬೇಡ. ಉನ್ನತ ಅಧಿಕಾರಿಗಳು ನಿಮ್ಮ ಕೆಲಸದಲ್ಲಿ ದೋಷಗಳನ್ನು ಪರಿಶೀಲಿಸಬಹುದು. ಅನಗತ್ಯ ಚಟುವಟಿಕೆಗಳಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಮನೆಯವರ ಜೊತೆ ವಾಗ್ವಾದಕ್ಕೆ ನಿಲ್ಲುವಿರಿ. ಸಂತಾನ ಸಂತೋಷವನ್ನು ನೀವು ಇಂದು ಅನುಭವಿಸುವಿರಿ. ಆಪ್ತರ ವಿಯೋಗವು ನಿಮ್ಮನ್ನು ಕುಗ್ಗಿಸಬಹುದು. ಅಧಿಕ ಖರ್ಚಿನಂತೆ ಕಾಣುವ ವ್ಯವಹಾರವನ್ನು ನೀವು ಬಿಡುವಿರಿ. ನೀವು ಕಷ್ಟದಲ್ಲಿ ಸುಖವನ್ನು ಕಾಣುವ ಮಾರ್ಗವನ್ನು ಹುಡುಕಿಕೊಳ್ಳುವಿರಿ. ಅಮೂಲ್ಯ ವಸ್ತುಗಳ ಸಂಪಾದನೆಯಾಗಲಿದೆ. ನಿಮ್ಮ ಸುಳಿವು ಸಿಗದೇ ಮನೆಯಲ್ಲಿ ಆತಂಕವಾಹಬಹುದು.